Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಥಾಣೆಯಲ್ಲಿ ಕುಸಿದು ಬಿದ್ದ ಕಾಂಕ್ರೀಟ್ ತೊಲೆ ಎಂದು ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಾಟ್ಸಾಪಿನಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೋದ ಕ್ಲೇಮಿನಲ್ಲಿ “ಥಾಣೆಯಲ್ಲಿ ನಡೆದ” ಎಂದು ಹೇಳಲಾಗಿದ್ದು, ಸಿಮೆಂಟ್‌ನ ದೊಡ್ಡ ತೊಲೆಯೊಂದು ಹಲವು ಕಾರುಗಳ ಮೇಲೆ ಕುಸಿದು ಬಿದ್ದ ದೃಶ್ಯ ಇದೆ.
ಕಾರುಗಳಲ್ಲಿ ಪ್ರಯಾಣಿಕರು ಇನ್ನೂ ಇರುವ ದಾರುಣ ದೃಶ್ಯ ಕಾಣುತ್ತದೆ ಮತ್ತು ಜನರು ಗಾಬರಿಯಿಂದ ರಕ್ಷಣೆಗೆ ಓಡಾಡುತ್ತಿರುವುದು, ಭಾರೀ ಗಾತ್ರದ ಸಿಮೆಂಟ್ ತೊಲೆಯನ್ನು ಎತ್ತಲು ನಡೆಸುತ್ತಿರುವ ಪ್ರಯತ್ನಗಳೂ ವೀಡಿಯೋದಲ್ಲಿ ಕಾಣಿಸುತ್ತದೆ.
ಈ ಕ್ಲೇಮ್ ಬಗ್ಗೆ ಸತ್ಯಶೋಧನೆಗೆ, ವಾಟ್ಸಾಪ್ ಬಳಕೆದಾರರೊಬ್ಬರು ನ್ಯೂಸ್‌ಚೆಕರ್ ಟಿಪ್ ಲೈನ್ (ಸಂಖ್ಯೆ: 1837765) ಮೂಲಕ ಕಳುಹಿಸಿದ್ದು, ಅದರಂತೆ ನ್ಯೂಸ್‌ಚೆಕರ್ ಸತ್ಯ ಶೋಧನೆ ನಡೆಸಿದೆ. ಈ ವೇಳೆ ಈ ಘಟನೆ ಥಾಣೆಯಲ್ಲಿ ನಡೆದಿದ್ದಲ್ಲ ಎಂದು ತಿಳಿದುಬಂದಿದೆ.
ವೈರಲ್ ವೀಡಿಯೋದ ಕೀ ಫ್ರೇಂಗಳನ್ನು ತೆಗೆದು ಸರ್ಚ್ ಮಾಡಲಾಗಿದ್ದು ಈ ವೇಳೆ ಕೆಲವು ಟ್ವಿಟರ್ ಬಳಕೆದಾರರು ಇದನ್ನು ಹಂಚಿಕೊಂಡಿರುವುದು ತಿಳಿದುಬಂದಿದೆ.
ಆದರೆ ಟ್ವಿಟರ್‌ನಲ್ಲಿ @deshkar_ankita ಎಂಬ ಬಳಕೆದಾರರೊಬ್ಬರು ಇದು ಥಾಣೆ ಅಲ್ಲ, ವಾರಣಾಸಿ ಎಂದು ಬರೆದುಕೊಂಡಿದ್ದಾರೆ.
ಇದನ್ನು ಒಂದು ಸಾಕ್ಷ್ಯವನ್ನಾಗಿರಿಸಿ, ಗೂಗಲ್‌ನಲ್ಲಿ, “Varanasi pillar collapse” ಎಂದು ಸರ್ಚ್ ನಡೆಸಲಾಗಿದೆ. ಈ ವೇಳೆ ಇದು ಪಿಲ್ಲರ್ ಬಿದ್ದ ಘಟನೆಯಲ್ಲ, ಬದಲಾಗಿ ವಾರಾಣಸಿಯಲ್ಲಿ ಫ್ಲೈಓವರ್ ಬಿದ್ದ ಘಟನೆ ಎಂದು ತಿಳಿದುಬಂದಿದೆ.
Also Read: ಇಂದಿರಾ ಗಾಂಧಿ, ರಾಜ್ ಕುಮಾರ್ ಜೊತೆಗೆ ಫೋಟೋದಲ್ಲಿ ಮೋದಿಯೂ ಇದ್ದರೇ?
ಈ ಕುರಿತು ಮೇ 16, 2018ರ ಎನ್‌ಡಿಟಿವಿ ವರದಿ ಲಭ್ಯವಾಗಿದ್ದು, ಆ ವರ್ಷ ಮೇ 15ರಂದು ನಡೆದ ಘಟನೆಯಲ್ಲಿ 18 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದೆ. ವಾರಾಣಸಿಯಲ್ಲಿ ಇನ್ನೂ ನಿರ್ಮಾಣವಾಗದ ಫ್ಲೈ ಓವರ್‌ನ ಕಾಂಕ್ರೀಟ್ ತೊಲೆಯೊಂದು ಬಿದ್ದುಅದರಡಿಗೆ ವಾಹನಗಳು ಸಿಲುಕಿ ಅಪ್ಪಚ್ಚಿಯಾಗಿತ್ತು. ಈ ದುರ್ಘಟನೆ ವೇಳೆ ವಾಹನದಲ್ಲಿದ್ದವರು ಅಲ್ಲೇ ಮೃತಪಟ್ಟಿರುವುದಾಗಿ ಹೇಳಲಾಗಿದೆ. ನಗರ ಕಂಟೋನ್ಮೆಂಟ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟವರಲ್ಲಿ ಹಲವರು ಫ್ಲೈ ಓವರ್ ಕೆಲಸಗಾರರು ಕೂಡ ಸೇರಿದ್ದಾರೆ ಎಂದು ಹೇಳಲಾಗಿದೆ. ನಾಲ್ಕು ಕಾರುಗಳು, ಒಂದು ಆಟೋ, ಒಂದು ಮಿನಿ ಬಸ್ ಕಾಂಕ್ರೀಟ್ ತೊಲೆಯ ಕೆಳಗೆ ಸಿಲುಕಿ ಅಪ್ಪಚ್ಚಿಯಾಗಿವೆ ಎಂದು ವರದಿ ಹೇಳಿದೆ.
ಮೇ 15, 2018ರ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಕೂಡ ಲಭ್ಯವಾಗಿದ್ದು, ಇಲ್ಲೂ 18 ಮಂದಿ ಮೃತಪಟ್ಟ ಬಗ್ಗೆ ವರದಿ ಮಾಡಲಾಗಿದೆ. ಘಟನೆಯಲ್ಲಿ ಮೂವರನ್ನು ರಕ್ಷಿಸಲಾಗಿದೆ. ಉಳಿದವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಮಧ್ಯಾಹ್ನ ನಂತರ ನಡೆದ ಈ ಘಟನೆಯಲ್ಲಿ ನೋಡ ನೋಡುತ್ತಿದ್ದಂತೆ ಕಾಂಕ್ರೀಟ್ ತೊಲೆ ಬಿದ್ದಿದೆ. ಈ ಘಟನೆ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು 48 ಗಂಟೆಗಳ ಒಳಗೆ ಈ ಬಗ್ಗೆ ವರದಿ ಕೇಳಿದ್ದಾರೆ ಎಂದು ಹೇಳಿದೆ.
ಈ ಘಟನೆಗೆ ಸಂಬಂಧಿಸಿದಂತೆ, ವಾರಾಣಸಿಯ ಸಂಸದರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೇ 15, 2018ರಂದು ಮಾಡಿದ ಟ್ವೀಟ್ ಅನ್ನು ನೀವು ಇಲ್ಲಿ ನೋಡಬಹುದು.
ಇದೇ ರೀತಿಯ ಮಾಧ್ಯಮ ವರದಿಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈ ಸತ್ಯಶೋಧನೆಯ ಪ್ರಕಾರ, ಇದು ಥಾಣೆಯಲ್ಲಿ ನಡೆದ ಘಟನೆಯಲ್ಲ ಮೇ 15 2018ರಂದು ವಾರಾಣಸಿಯಲ್ಲಿ ನಡೆದ ಘಟನೆಯಾಗಿದೆ. ಆದ್ದರಿಂದ ಕ್ಲೇಮ್ ತಪ್ಪಾಗಿದೆ.
Sources
Report by NDTV, Dated: May 16, 2018
Report by Indian Express, Dated: May 15, 2018
Tweet by PM Narendra Modi, Dated May 15, 2015
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
December 2, 2022
Sabloo Thomas
January 8, 2024
Ishwarachandra B G
December 27, 2023