Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ವಾನರಗಳಿಗೆ ಭೋಜನ ಏರ್ಪಡಿಸಿದೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.



ವಾಟ್ಸಾಪ್ ಮತ್ತು ಫೇಸ್ಬುಕ್ ಪೋಸ್ಟ್ ಗಳಲ್ಲಿ ಕಂಡುಬಂದ ಈ ವೀಡಿಯೋದಲ್ಲಿ ಹೇಳಿಕೆಯೂ ಇದ್ದು, ಅದರಲ್ಲಿ “ಬಹಳ ಅದ್ಬುತವಾದ ದೃಶ್ಯ ವಾರಣಾಸಿಯ ಗಂಗಾತಟದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಾನರ ಸೇನೆಗೆ ಸಕಲ ಸರಕಾರಿ ಗೌರವಗಳೊಂದಿಗೆ ಯೋಗಿಜೀ ಸರಕಾರದಿಂದ ವಿಶೇಷವಾದ ಭೋಜನ ಕೂಟ. ಇದಲ್ಲವೇ ಸನಾತನ ಸಂಸ್ಕೃತಿಯ ಅನಾವರಣ” ಎಂದಿದೆ. ಈ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಈ ವೀಡಿಯೋ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಕೃತಕ ಬುದ್ಧಿಮತ್ತೆ (ಎಐ-ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ನಿಂದ ಮಾಡಲಾದ ವೀಡಿಯೋವಾಗಿದ್ದು ವಾನರ ಭೋಜನ ನೀಡಲಾಗಿದೆ ಎನ್ನುವುದು ಸುಳ್ಳು ಎಂದು ಗೊತ್ತಾಗಿದೆ.
ಸತ್ಯಶೋಧನೆಗಾಗಿ ನಾವು ಮೊದಲು ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಈ ವೇಳೆ ವೀಡಿಯೋದಲ್ಲಿ ಕೆಲವು ಅಸಹಜತೆಗಳಿರುವುದು ಕಂಡುಬಂದಿದೆ.


ಇದು ವೀಡಿಯೋವನ್ನು ಎಐನಿಂದ ರಚಿಸಿದ್ದಿರಬಹುದು ಎಂಬ ಸಂಶಯಕ್ಕೆ ಕಾರಣವಾಗಿದೆ. ಅದರಂತೆ ನಾವು ವೀಡಿಯೋವನ್ನು ಎಐ-ಪತ್ತೆ ಪರಿಕರಗಳನ್ನು ಬಳಸಿ ಪರಿಶೀಲಿಸಿದ್ದೇವೆ ಮತ್ತು ಅದು ಎಐನಿಂದ ರಚಿಸಿರುವುದು ಹೌದು ಎಂಬುದನ್ನು ಕಂಡುಕೊಂಡಿದ್ದೇವೆ.
ವಾಸ್ ಇಟ್ ಎಐ ಮೂಲಕ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಸರ್ಚ್ ಮಾಡಿದಾಗ, ಅದು ಈ ಫೋಟೋ ಅಥವಾ ಅದರ ಗಮನಾರ್ಹ ಭಾಗವು ಎಐನಿಂದ ರಚಿಸಿದ್ದಾಗಿದೆ ಎಂದು ಹೇಳಿದೆ.

ನಾವು ಇನ್ನೊಂದು ಎಐ- ಪತ್ತೆ ಸಾಧನವಾದ ಸೈಟ್ ಎಂಜಿನ್ ಅನ್ನು ಬಳಸಿಕೊಂಡು ಚಿತ್ರವನ್ನು ಪರಿಶೀಲಿಸಿದ್ದೇವೆ , ಇದು 92% ರಷ್ಟು ಎಐ-ರಚಿತವಾಗಿರುವ ಸಾಧ್ಯತೆಯನ್ನು ಕಂಡುಹಿಡಿದಿದೆ.

ಮತ್ತೊಂದು AI-ಪತ್ತೆ ಸಾಧನ, ಹೈವ್ ಮಾಡರೇಶನ್, ಎಐ-ರಚಿತ ಅಥವಾ ಡೀಪ್ಫೇಕ್ ವಿಷಯವನ್ನು ವನ್ನು ಇದರಲ್ಲಿ ಪತ್ತೆ ಮಾಡಿದ್ದು ಶೇ. 94.8ರಷ್ಟು ಸಾಧ್ಯತೆಯನ್ನು ಕಂಡುಹಿಡಿದಿದೆ.

ಆದ್ದರಿಂದ ಈ ಶೋಧನೆಯ ಪ್ರಕಾರ, ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ವಾನರಗಳಿಗೆ ಭೋಜನ ಏರ್ಪಡಿಸಿದೆ ಎನ್ನುವ ಹೇಳಿಕೆ ಸುಳ್ಳಾಗಿದ್ದು ಈ ವೀಡಿಯೋ ಎಐನಿಂದ ರಚಿಸಿದ್ದಾಗಿದೆ ಎಂದು ತಿಳಿದುಬಂದಿದೆ.
Our Sources
Hive Moderation Website
WasitAI Website
Sightengine Website
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಮಲಯಾಳದಲ್ಲಿ ಪ್ರಕಟಿಸಲಾಗಿದ್ದು, ಇದು ಇಲ್ಲಿದೆ)
Ishwarachandra B G
August 23, 2025
Ishwarachandra B G
July 17, 2025
Runjay Kumar
April 10, 2025