Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಮೈಸೂರು ಬಿ.ಎಂ. ಹ್ಯಾಬಿಟೇಟ್ ಮಾಲ್ ನಲ್ಲಿ ಎಸ್ಕಲೇಟರ್ ಕುಸಿತ
ಮೈಸೂರು ಬಿ.ಎಂ. ಹ್ಯಾಬಿಟೇಟ್ ಮಾಲ್ ನಲ್ಲಿ ಎಸ್ಕಲೇಟರ್ ಕುಸಿತ ಎನ್ನುವುದು ನಿಜವಲ್ಲ, ಇದು ಎಐನಿಂದ ಮಾಡಿದ್ದಾಗಿದೆ
ಮೈಸೂರು ಬಿ.ಎಂ. ಹ್ಯಾಬಿಟೇಟ್ ಮಾಲ್ ನಲ್ಲಿ ಎಸ್ಕಲೇಟರ್ ಕುಸಿತ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಈ ವೀಡಿಯೋ ಜೊತೆಗಿನ ಹೇಳಿಕೆಯಲ್ಲಿ, “ಮೈಸೂರು ಬಿ.ಎಂ. ಹ್ಯಾಬಿಟೇಟ್ ಮಾಲ್ ನಲ್ಲಿ ಎಸ್ಕಲೇಟರ್ ಕುಸಿತ” ಎಂದಿದೆ. ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ನಿಜವಲ್ಲ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್-ಎಐ (ಕೃತಕ ಬುದ್ಧಿಮತ್ತೆ) ಎಂದು ಕಂಡುಬಂದಿದೆ.



ಇದೇ ರೀತಿಯ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
Also Read: ನೇಪಾಳದವರೂ ಪ್ರಧಾನಿ ಮೋದಿಯವರನ್ನು ನಾಯಕರಾಗಿ ಬಯಸುತ್ತಿದ್ದಾರೆ ಎಂದು ಹಂಚಿಕೊಂಡ ವೀಡಿಯೋ ಸಿಕ್ಕಿಂನದ್ದು!
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ಮೈಸೂರು ಬಿ.ಎಂ.ಹ್ಯಾಬಿಟೇಟ್ ಮಾಲ್ ನಲ್ಲಿ ಎಸ್ಕಲೇಟರ್ ಕುಸಿತವಾದ ಯಾವುದೇ ಸುದ್ದಿಗಳು ಕಂಡುಬಂದಿಲ್ಲ. ಆದರೆ ಇದೇ ಮಾಲ್ ನಲ್ಲಿ ಬ್ಯಾನರ್ ತೆರವು ಗೊಳಿಸುವ ವೇಳೆ ಟೆಕ್ನೀಷಿಯನ್ ಒಬ್ಬರು ಮೃತಪಟ್ಟು ಮತ್ತೊಬ್ಬರು ಗಾಯಗೊಂಡ ಘಟನೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸೆಪ್ಟೆಂಬರ್ 8, 2025ರ ಪ್ರಜಾವಾಣಿ ವರದಿಯಲ್ಲಿ ಘಟನೆಯ ವಿವರ ಇದೆ. ಮಾಲ್ನಲ್ಲಿ ಟೆಕ್ನೀಷಿಯನ್ ಆಗಿದ್ದ ಸುನೀಲ್ ಸಂಜೆ 5 ಗಂಟೆ ಸಮಯದಲ್ಲಿ ಮಾಲ್ ಒಳ ಆವರಣದಲ್ಲಿ 60 ಅಡಿ ಎತ್ತರದಲ್ಲಿ ಅಳವಡಿಕೆಯಾಗಿದ್ದ ಬ್ಯಾನರ್ ತೆರವುಗೊಳಿಸುವ ಕಾರ್ಯದಲ್ಲಿದ್ದರು. ಈ ವೇಳೆ ಪಿಒಪಿ ಬಾರ್ ಮೇಲೆ ಕಾಲಿಟ್ಟಿದ್ದಾರೆ. ತಕ್ಷಣವೇ ಬಾರ್ ಕುಸಿದು ಸುನೀಲ್ ಕೆಳಗೆಬಿದ್ದಿದ್ದಾರೆ. ಈ ವೇಳೆ ಚಲನಚಿತ್ರ ವೀಕ್ಷಣೆಗೆ ಆಗಮಿಸಿದ್ದ ಚಂದ್ರು ಕೂಡ ಸ್ಥಳದಲ್ಲಿಯೇ ಇದ್ದು ರಕ್ಷಣೆಗೆ ಮುಂದಾಗಿ ಕೆಳಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದಿದೆ. ಇದೇ ವರದಿಯಲ್ಲಿ ಹುಣಸೂರು ತಾಲ್ಲೂಕಿನ ನೇರಳಕುಪ್ಪೆ ಗ್ರಾಮದ ಸುನೀಲ್ (35) ಮೃತಪಟ್ಟವರು. ಅವರನ್ನು ರಕ್ಷಿಸಲು ಮುಂದಾದ ಗೋಕುಲಂ ನಿವಾಸಿ ಚಂದ್ರು (22) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದೆ.

ಸೆಪ್ಟೆಂಬರ್ 9, 2025ರ ಉದಯಕಾಲ ವರದಿಯಲ್ಲಿ, ಮೈಸೂರಿನ ಬಿ.ಎಂ. ಹ್ಯಾಬಿಟೇಟ್ ಮಾಲ್ನಲ್ಲಿ ಕೆಲಸ ಮಾಡುತ್ತಿರುವಾಗ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹುಣಸೂರು ತಾಲೂಕಿನ ಎಲೆಕ್ಟ್ರಿಷಿಯನ್ ಸುನೀಲ್ (35) ಸ್ಥಳದಲ್ಲೇ ಮೃತಪಟ್ಟವರು. ಅವರನ್ನು ರಕ್ಷಿಸಲು ಮುಂದಾದ ಗೋಕುಲಂನ ಚಂದ್ರು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡವರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಜಯಲಕ್ಷ್ಮಿಪುರಂ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದಿದೆ.

ಈ ವರದಿಯಲ್ಲಿ ಎಲ್ಲಿಯೂ ಮಾಲ್ ನಲ್ಲಿ ಎಸ್ಕಲೇಟರ್ ಕುಸಿತ
ಈ ಘಟನೆಯ ವೀಡಿಯೋವನ್ನೂ ನಾವು ಗಮನಿಸಿದ್ದೇವೆ. ಇದನ್ನೂ ಮಾಧ್ಯಮಗಳು ವರದಿ ಮಾಡಿವೆ. ಅದನ್ನು ಇಲ್ಲಿ ನೋಡಬಹುದು.
ಹೆಚ್ಚಿನ ತನಿಖೆಗಾಗಿ ನಾವು ವೈರಲ್ ವೀಡಿಯೋವನ್ನು ಕೂಲಂಕಷವಾಗಿ ಗಮನಿಸಿದ್ದು, ಅದರಲ್ಲಿ ಎಸ್ಕಲೇಟರ್ ಬೀಳುವ ದೃಶ್ಯಗಳು ಅಸಹಜತೆಯಿಂದ ಕೂಡಿರುವುದು ಕಂಡುಬಂದಿದೆ. ಜೊತೆಗೆ ಇದು ಕೃತಕವಾಗಿ ಸೃಷ್ಟಿಮಾಡಲಾಗಿದೆಯೇ ಎಂಬ ಸಂಶಯವನ್ನು ಹುಟ್ಟುಹಾಕಿದೆ.
ಆದ್ದರಿಂದ ನಾವು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ಅದನ್ನು ಎಐ ಪತ್ತೆ ಸಾಧನಗಳಲ್ಲಿ ಪರಿಶೀಲಿಸಿದ್ದೇವೆ. ವಾಸ್ ಇಟ್ ಎಐ ಮೂಲಕ ಕೀಫ್ರೇಮ್ ಪರಿಶೀಲಿಸಿದಾಗ, ಇದನ್ನು ಎಐ ಮೂಲಕ ಮಾಡಲಾಗಿದೆ ಎಂದು ಹೇಳಿದೆ.

ಹೆಚ್ಚಿನ ಮಾಹಿತಿಗಾಗಿ ನಾವು ನ್ಯೂಸ್ಚೆಕರ್ ಭಾಗವಾಗಿರುವ ಡೀಪ್ ಫೇಕ್ಸ್ ಅನಾಲಿಸಿಸ್ ಯುನಿಟ್ (DAU) ವನ್ನು ಸಂಪರ್ಕಿಸಿದ್ದೇವೆ. ಅವರು ಈ ವೀಡಿಯೋ ವನ್ನು ಎಐ ಆರ್ ನಾಟ್ ಮೂಲಕ ಪರಿಶೀಲಿಸಿದ್ದು, ಅದು ವಿವಿಧ ಕೀಫ್ರೇಮ್ ಗಳ ಆಧಾರದ ಮೇಲೆ ಶೇ.81%ರಷ್ಟು ಮತ್ತು ಶೇ.92%ರಷ್ಟು ಎಐನಿಂದ ಮಾಡಲಾಗಿದೆ ಎಂದು ಹೇಳಿದೆ.


ಇದೇ ವೇಳೆ ಡಿಎಯು ವಿಶ್ಲೇಷಣೆಯ ಪ್ರಕಾರ “ ಹಲವು ಎಐ ಪತ್ತೆ ಸಾಧನಗಳು ವೀಡಿಯೋ ಎಐ ಮೂಲಕ ಮಾಡಲಾಗಿದೆ ಎಂಬುದನ್ನು ನಿರ್ದಿಷ್ಟವಾಗಿ ಪತ್ತೆ ಮಾಡುವುದಕ್ಕೆ ವಿಫಲವಾಗಿದೆ. ಆದರೆ ಈ ವೀಡಿಯೋ ತಪ್ಪು ದಾರಿಗೆಳೆಯುವಂತಿದೆ. ಈ ವೀಡಿಯೋವನ್ನು ನಿಧಾನವಾಗಿಸಿ ನೋಡಿದಾಗ, ಹಲವು ಜನರ ಆಕಾರಗಳು ಅಸಹಜವಾಗಿ ಬದಲಾಗುವುದನ್ನು ಕಾಣಬಹುದು. ಇದಕ್ಕೂ ಹೆಚ್ಚಿಗೆ ಮೇಲಿಂದ ಎಸ್ಕಲೇಟರ್ ಭಾಗ ಬಿದ್ದಾಗಲೂ ಕೆಳಗಿನ ಜನರು ಗಾಬರಿಯಿಂದ ಓಡದೇ ಇರುವುದನ್ನು ಗಮನಿಸಬಹುದು. ಇದರೊಂದಿಗೆ ಮೇಲಿನ ಎಸ್ಕಲೇಟರ್ ನಿಂದ ಬೀಳುವವರ ಸಂಖ್ಯೆ ಅಸಹಜವಾಗಿ ಹೆಚ್ಚಾಗುವುದನ್ನು ನೋಡಬಹುದು ಮತ್ತು ಅಸಂಖ್ಯಾತ ಸಂಖ್ಯೆಯಲ್ಲಿ ಅವರು ಬೀಳುವುದು ಮತ್ತು ಆಕೃತಿಗಳು ಬಿದ್ದಂತೆ ಇರುವುದನ್ನು ಗಮನಿಸಹುದು. ಈಎಲ್ಲ ಕಾರಣಗಳಿಂದ ಇದು ನಿಜ ಘಟನೆಯ ದೃಶ್ಯಗಳಲ್ಲ ಎಂದು ಕಂಡುಬಂದಿದೆ.”
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಮೈಸೂರು ಬಿ.ಎಂ. ಹ್ಯಾಬಿಟೇಟ್ ಮಾಲ್ ನಲ್ಲಿ ಎಸ್ಕಲೇಟರ್ ಕುಸಿತ ಎಂದು ಹಂಚಿಕೊಳ್ಳಲಾದ ವೀಡಿಯೋ ಸುಳ್ಳು ಮತ್ತು ನಿಜವಾದ್ದಲ್ಲ ಎಂದು ಕಂಡುಬಂದಿದೆ.
Also Read: ಹೆರಿಗೆಯ ಸಮಯದಲ್ಲಿ ತಾಯಿ ಸಾವನ್ನಪ್ಪಿದಾಗ ವೈದ್ಯರು ದುಃಖಿತರಾದರು ಎಂಬ ವೈರಲ್ ಪೋಸ್ಟ್ ಕಟ್ಟುಕಥೆ!
Our Sources
Report by Prajavani, Dated: September 8, 2025
Report by Udayakala, Dated: September 9, 2025
X post by Express Bangalore, Dated: September 9, 2025
Was it Ai
AI or not
Analysis by Deepfakes Analysis Unit
Ishwarachandra B G
October 1, 2025
Ishwarachandra B G
September 13, 2025
Ishwarachandra B G
April 27, 2024