Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಪ್ರಿಯಾಂಕಾ ವಾದ್ರಾ ಕಾಲ ಕೆಳಗೆ ಭಾರತದ ಧ್ವಜವಿರುವ ಬ್ಯಾನರ್ ಗಳನ್ನು ಬೆಂಗಳೂರಲ್ಲಿ ಅಳವಡಿಸಲಾಗಿದೆ
Fact
ಪ್ರಿಯಾಂಕ ವಾದ್ರಾ ಕಾಲ ಕೆಳಗೆ, ತಲೆಕೆಳಗಾದ ತ್ರಿವರ್ಣ ಧ್ವಜದ ಚಿತ್ರ ಹೊಂದಿರುವ ಬ್ಯಾನರ್ ಗಳು ಬೆಂಗಳೂರಿನಲ್ಲಿ ರಾರಾಜಿಸುತ್ತಿವೆ ಎಂದ ವೀಡಿಯೋ ಮಧ್ಯಪ್ರದೇಶ ಜಬಲ್ಪುರದ್ದಾಗಿದ್ದು ಬೆಂಗಳೂರಿನ ಪ್ರಿಯಾಂಕಾ ಪ್ರಚಾರಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಬೆಂಗಳೂರು ರಾಲಿಗೂ ಮುನ್ನ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಿಯಾಂಕಾ ಗಾಂಧಿ ಅವರ ಪಾದಗಳ ಬಳಿ ತಲೆಕೆಳಗಾಗಿ ತ್ರಿವರ್ಣ ಧ್ವಜ ಚಿತ್ರವಿರುವ ಬ್ಯಾನರ್ ಹಾಕಲಾಗಿದೆ ಎಂಬ ವೀಡಿಯೋ ಹಂಚಿಕೊಂಡಿದ್ದಾರೆ.
ಟ್ವೀಟರ್ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಪ್ರಿಯಾಂಕ ವಡ್ರಾಳ ಕಾಲ ಕೆಳಗೆ, ತಲೆಕೆಳಗಾದ ಭಾರತದ ಧ್ವಜವಿರುವ ಬ್ಯಾನರ್ ಗಳು ಬೆಂಗಳೂರಿನಲ್ಲಿ ರಾರಾಜಿಸತ್ತಿವೆ. ಭಾರತದ ಗರ್ವ ನಮ್ಮ ತ್ರಿವರ್ಣಧ್ವಜವನ್ನ ಗೌರವಿಸಲು ಬಾರದವರಿಗೆ ದೇಶ ಆಳುವ ಹಂಬಲ” ಎಂದಿದೆ.
Also Read: ರಾಮಭಕ್ತರು ಚರ್ಚ್ ಗೆ ಹೋಗಿ ರಾಮನವಮಿ ಆಚರಿಸಿದ ರೀತಿ ಎಂದ ವೈರಲ್ ವೀಡಿಯೋ ಹಿಂದಿನ ಸತ್ಯ ಏನು?

ಈ ಕ್ಲೇಮಿನ ಆರ್ಕೈವ್ ಆವೃತ್ತಿ ಇಲ್ಲಿದೆ.
ಇದೇ ರೀತಿ ಅನೇಕ ಎಕ್ಸ್ ಮತ್ತು ಫೇಸ್ಬುಕ್ ಬಳಕೆದಾರರು ವೀಡಿಯೋವನ್ನು ಹಂಚಿಕೊಂಡಿದ್ದಾರೆ.






ಅವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈ ವೀಡಿಯೋದ ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ “ಪ್ರಿಯಾಂಕಾ ಗಾಂಧಿ”, “ಬ್ಯಾನರ್” ಮತ್ತು “ತ್ರಿವರ್ಣ ಧ್ವಜ” ಎಂಬ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಆಗಸ್ಟ್ 22, 2023 ರ ಫಸ್ಟ್ ಪೋಸ್ಟ್ ವರದಿ ಲಭ್ಯವಾಗಿದೆ.. ವೈರಲ್ ವೀಡಿಯೋದ ಸ್ಕ್ರೀನ್ ಶಾಟ್ ಗಳನ್ನು ಹೊಂದಿರುವ ಈ ವರದಿಯಲ್ಲಿ, “ಮಧ್ಯಪ್ರದೇಶದಲ್ಲಿ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಸಾಧ್ಯವಿರುವ ಎಲ್ಲ ಕೆಲಸಗಳನ್ನು ಮಾಡುತ್ತಿದೆ, ಆದರೆ ಪಕ್ಷದ ಪ್ರಯತ್ನದಲ್ಲಿ ಎಲ್ಲವೂ ಸರಿಯಾಗಿಲ್ಲ. ಬಿಜೆಪಿ ಹಂಚಿಕೊಂಡಿರುವ ವೀಡಿಯೋದಲ್ಲಿ ಹಿರಿಯ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪೋಸ್ಟರ್ ಗಳಲ್ಲಿ ತಲೆಕೆಳಗಾಗಿ ತ್ರಿವರ್ಣ ಧ್ವಜವನ್ನು ಅವರ ಪಾದಗಳ ಮೇಲೆ ಇರಿಸಲಾಗಿದೆ” ಎಂದಿದೆ.

ಆಗಸ್ಟ್ 22, 2023 ರ @SureshNakhua ಅವರ ಎಕ್ಸ್ ಪೋಸ್ಟ್ ನಲ್ಲಿ ವೈರಲ್ ತುಣುಕಿನ ಸ್ವಲ್ಪ ಉದ್ದ ವೀಡಿಯೋ ಆವೃತ್ತಿಯನ್ನು ನಾವು ಗಮನಿಸಿದ್ದೇವೆ. ಅದರಲ್ಲಿ “ಮಧ್ಯಪ್ರದೇಶದ ಕಾಂಗ್ರೆಸ್ ತನ್ನ ಪೋಸ್ಟರ್ನಲ್ಲಿ ಉದ್ದೇಶಪೂರ್ವಕವಾಗಿ #Tiranga ತಲೆಕೆಳಗಾಗಿಸಿದೆ” ಎಂದಿದೆ.
Also Read: ರಾಮನವಮಿ ದಿನವೇ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಮಾಂಸಾಹಾರ ಊಟ ಮಾಡಿದ್ದಾರೆಯೇ?


ವೈರಲ್ ವೀಡಿಯೊದ ದೀರ್ಘ ಆವೃತ್ತಿಯನ್ನು ಹೊಂದಿರುವ ಜೂನ್ 12, 2023 ರ @kakar_harsha ರ ಎಕ್ಸ್ ಪೋಸ್ಟ್ ಅನ್ನೂ ನಾವು ಕಂಡುಕೊಂಡಿದ್ದೇವೆ.

ವಿಶೇಷವೆಂದರೆ, ಈ ಆವೃತ್ತಿಯ ಆಡಿಯೋ ಹಿಂದಿಯಲ್ಲಿದೆ, ಕನ್ನಡದಲ್ಲಿಲ್ಲ. ಈ ವೀಡಿಯೋದಲ್ಲಿ, ವ್ಯಕ್ತಿಯೊಬ್ಬರು “ಪ್ರಿಯಾಂಕಾ ಗಾಂಧಿ ಅವರ ಪಾದದ ಬಳಿ ತ್ರಿವರ್ಣ ಧ್ವಜ… ಇದು ಗ್ವಾರಿಘಾಟ್ ರಸ್ತೆ… ಅವರಿಗೆ ತ್ರಿವರ್ಣ ಧ್ವಜ ಅರ್ಥವಾಗುವುದಿಲ್ಲ, ಅವರು ದೇಶವನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ (ಹಿಂದಿಯಿಂದ ಅನುವಾದಿಸಲಾಗಿದೆ)” ಎಂದು ಅವರು ಹೇಳುತ್ತಾರೆ.
ಅಂದರೆ ವೀಡಿಯೋದಲ್ಲಿ ಹಿಂದಿ ಆಡಿಯೋ ಬದಲಾಗಿ ಕನ್ನಡ ಆಡಿಯೋವನ್ನು ಸೇರಿಸಲಾಗಿದ್ದು, ಬೆಂಗಳೂರಿನದ್ದು ಎಂಬ ಭಾವನೆಯನ್ನು ಮೂಡಿಸಲಾಗಿದೆ. ನಂತರ ನಾವು ಗೂಗಲ್ನಲ್ಲಿ “ಗ್ವಾರಿಘಾಟ್ ಮತ್ತು ಮಧ್ಯಪ್ರದೇಶ” ಎಂದು ಹುಡುಕಿದ್ದೇವೆ ಮತ್ತು ಸ್ಥಳವು ಜಬಲ್ಪುರ ಸನಿಹದ್ದು ಎಂದು ಕಂಡುಕೊಂಡೆವು. ಇದರೊಂದಿಗೆ ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ವೀಡಿಯೋದಲ್ಲಿ ಕಂಡುಬರುವ ನಿಖರವಾದ ಸ್ಥಳವನ್ನು ಗುರುತಿಸಲು ನಮಗೆ ಸಾಧ್ಯವಾಯಿತು.


ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ 2023 ರ ಜೂನ್ 12 ರಂದು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ
ಜಬಲ್ಪುರದಲ್ಲಿ ರಾಲಿಯನ್ನುದ್ದೇಶಿಸಿ ಮಾತನಾಡಿದ್ದರು. ಅದಕ್ಕೂ ಮುಂಚಿತವಾಗಿ ಈ ಬ್ಯಾನರ್ ಗಳನ್ನು ಹಾಕಲಾಗಿತ್ತು.

ಪ್ರಿಯಾಂಕ ವಾದ್ರಾ ಕಾಲ ಕೆಳಗೆ, ತಲೆಕೆಳಗಾದ ತ್ರಿವರ್ಣ ಧ್ವಜದ ಚಿತ್ರ ಹೊಂದಿರುವ ಬ್ಯಾನರ್ ಗಳು ಬೆಂಗಳೂರಿನಲ್ಲಿ ರಾರಾಜಿಸುತ್ತಿವೆ ಎಂದ ವೀಡಿಯೋ ಮಧ್ಯಪ್ರದೇಶ ಜಬಲ್ಪುರದ್ದಾಗಿದ್ದು ಬೆಂಗಳೂರಿನ ಪ್ರಿಯಾಂಕಾ ಪ್ರಚಾರಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ.
Also Read: ಚಿತ್ರದುರ್ಗದಲ್ಲಿ ಪ್ರಧಾನಿ ಹೆಲಿಕಾಪ್ಟರ್ ನಿಂದ ನಿಗೂಢ ಪೆಟ್ಟಿಗೆ ಇಳಿಸಲಾಯಿತು ಎನ್ನುವ ಪೋಸ್ಟ್ ನಿಜವೇ?
Our Sources
X Post By @SureshNakhua, Dated August 22, 2023
X Post By @kakar_harsha, Dated June 12, 2023
Google Street View
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
September 26, 2025
Ishwarachandra B G
June 7, 2025
Ishwarachandra B G
June 5, 2025