Claim
ಆರ್ ಸಿಬಿ ಗೆಲುವಿಗೆ ಬೆಂಗಳೂರಲ್ಲಿ ಮೊದಲ ಸಂಭ್ರಮಾಚರಣೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.


ಈ ಹೇಳಿಕೆಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
Also Read: ಉಕ್ರೇನ್‌ನ ಡ್ರೋನ್ ದಾಳಿಯ ನಂತರ ರಷ್ಯಾದ ವಾಯುನೆಲೆ ನಾಶ ಎಂದ ವೈರಲ್ ಫೋಟೋ, ಎಐ ಸೃಷ್ಟಿ
Fact
ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಭಾರತ ಕ್ರಿಕೆಟ್ ತಂಡದ ಗೆಲುವಿಗೆ ಕೊಲ್ಹಾಪುರದಲ್ಲಿ 2024ರ ವೇಳೆ ನಡೆದ ಸಂಭ್ರಮಾಚರಣೆ ಎಂದು ಗೊತ್ತಾಗಿದೆ.
ಸತ್ಯಶೋಧನೆಗಾಗಿ ನಾವು ಕೀಫ್ರೇಮ್ ಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಸರ್ಚ್ ಮಾಡಿದ್ದೇವೆ. ಈ ವೇಳೆ ಫೇಸ್‌ಬುಕ್ ನಲ್ಲಿ ಜೂನ್ 30, 2024ರಂದು cricketstats.in ಎಂಬ ಬಳಕೆದಾರರು ಹಂಚಿಕೊಂಡ ವೀಡಿಯೋ ನೋಡಿದ್ದೇವೆ. ಈ ಪೋಸ್ಟ್ ನಲ್ಲಿ ಬರೆದ ವಿವರಣೆಯಲ್ಲಿ ಭಾರತ ಟಿ20 ವರ್ಲ್ಡ್ ಕಪ್ 2024ರ ಗೆಲುವಿನ ಸಂಭ್ರಮಾಚರಣೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ ಎಂದಿದೆ. ಈ ವೀಡಿಯೋ ವೈರಲ್ ವೀಡಿಯೋಕ್ಕೆ ಸಾಮ್ಯತೆಯನ್ನು ಹೊಂದಿದೆ.
ಇದೇ ರೀತಿಯ ಹೇಳಿಕೆಯೊಂದಿಗೆ ಜೂನ್ 30 2024ರಂದು ಎಕ್ಸ್ ನಲ್ಲಿ @omii_msdians7 ಎಂಬ ಬಳಕೆದಾರರೂ ಹಂಚಿಕೊಂಡಿದ್ದಾರೆ. ಇದೂ ವೈರಲ್ ವೀಡಿಯೋ ಜೊತೆಗೆ ಸಾಮ್ಯತೆಯನ್ನು ಹೊಂದಿದೆ.
ಜೂನ್ 30, 2024ರಂದು aapal_kolhapur_mh09 ಎಂಬ ಇನ್‌ಸ್ಟಾಗ್ರಾಂ ಬಳಕೆದಾರರು ಪೋಸ್ಟ್ ಮಾಡಿರುವ ವೀಡಿಯೋ ವೀಡಿಯೋಕ್ಕೆ ಸಾಮ್ಯತೆಯನ್ನು ಹೊಂದಿದೆ.
ಸತ್ಯಶೋಧನೆ ವೇಳೆ ಲಭ್ಯವಾದ ವಿವಿಧ ವೀಡಿಯೋಗಳ ಕೀಫ್ರೇಮ್ ಗಳಲ್ಲಿ ಅಂಗಡಿಗಳ ಬೋರ್ಡ್ ಗಳು ಇತ್ಯಾದಿ ಮರಾಠಿಯಲ್ಲಿರುವುದು ಕಾಣಿಸುತ್ತದೆ.

ಆ ಅಂಗಡಿಗಳ ಬೋರ್ಡ್ ಆಧಾರದ ಮೇಲೆ ನಾವು ಗೂಗಲ್ ಲೊಕೇಶನ್ ಬಳಸಿ ಸಂಭ್ರಮಾಚರಣೆಯ ಸ್ಥಳವನ್ನು ಪತ್ತೆ ಮಾಡಿದ್ದೇವೆ. ಈ ಪ್ರಕಾರ ಸ್ಥಳ ಕೊಲ್ಹಾಪುರದ malkar sweets mart Kolhapur ಮುಂಭಾಗದ ಪ್ರದೇಶವಾಗಿದೆ. ಇದನ್ನು ಇಲ್ಲಿ ನೋಡಬಹುದು.

ಈ ಸಾಕ್ಷ್ಯಾಧಾರಗಳ ಪ್ರಕಾರ, ಭಾರತ ತಂಡ ಟಿ20 ವರ್ಲ್ಡ್ ಕಪ್ ಗೆದ್ದ ಹಿನ್ನೆಲೆಯಲ್ಲಿ ಕೊಲ್ಹಾಪುರದಲ್ಲಿ ಜೂನ್ 30, 2024ರಂದು ನಡೆಸಿದ ಸಂಭ್ರಮಾಚರಣೆಯಾಗಿದೆ ಎಂದು ಗೊತ್ತಾಗಿದೆ.
Also Read: ಉಕ್ರೇನ್ ಮೇಲೆ ರಷ್ಯಾ ದಾಳಿ ಎಂದು ಯುಎಇ ಅಗ್ನಿ ಅನಾಹುತದ ವೀಡಿಯೋ ವೈರಲ್
Our Sources
Facebook Post By cricketstats.in, Dated: June 30, 2024
X post By omii_msdians7, Dated: June 30, 2024
Instagram Post By aapal_kolhapur_mh09, Dated: June 30, 2024
Google Maps