Fact check: ಕರ್ನಾಟಕ ಚುನಾವಣೆಗೆ ಮುನ್ನ ಭಯೋತ್ಪಾದಕರ ವಿರುದ್ಧದ ಕ್ರಮಕ್ಕೆ ಕಾಂಗ್ರೆಸ್‌ ವಿರೋಧ, ಸುಳ್ಳು ಹೇಳಿಕೆ ವೈರಲ್!

ಭಯೋತ್ಪಾದಕರ ವಿರುದ್ಧ ಕ್ರಮ ವಿರೋಧಿಸಿ ಕಾಂಗ್ರೆಸ್‌ ಹೇಳಿಕೆ

Authors

A self-taught social media maverick, Saurabh realised the power of social media early on and began following and analysing false narratives and ‘fake news’ even before he entered the field of fact-checking professionally. He is fascinated with the visual medium, technology and politics, and at Newschecker, where he leads social media strategy, he is a jack of all trades. With a burning desire to uncover the truth behind events that capture people's minds and make sense of the facts in the noisy world of social media, he fact checks misinformation in Hindi and English at Newschecker.

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಕರ್ನಾಟಕ ಚುನಾವಣೆಗೆ ಮುನ್ನ ಭಯೋತ್ಪಾದಕರ ವಿರುದ್ಧದ ಕ್ರಮಕ್ಕೆ ಕಾಂಗ್ರೆಸ್‌ ವಿರೋಧ

Fact
ಕಾಂಗ್ರೆಸ್ ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ವೈರಲ್ ಆಗಿರುವ ಗ್ರಾಫಿಕ್ ಪ್ಲೇಟ್ ನಕಲಿ ಎಂದು ಕಾಂಗ್ರೆಸ್ ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಹೇಳಿದ್ದಾರೆ

ಕರ್ನಾಟಕ ಚುನಾವಣೆಗೆ ಮುನ್ನ ಭಯೋತ್ಪಾದಕರ ವಿರುದ್ಧ ಕ್ರಮವನ್ನು ಕಾಂಗ್ರೆಸ್‌ ವಿರೋಧಿಸಿ ಕಾಂಗ್ರೆಸ್‌ ಹೇಳಿಕೆ ನೀಡಿದೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10 2023ರಂದು ಚುನಾವಣೆ ನಡೆಯಲಿದ್ದು, ಈ ವೇಳೆ ಗೆಲುವಿನ ಜಿದ್ದಿಗೆ ಬಿದ್ದಿರುವ ರಾಜಕೀಯ ಪಕ್ಷಗಳು ನಾನಾ ಪ್ರಯತ್ನಗಳನ್ನು ಮಾಡುತ್ತಿವೆ. ನ್ಯೂಸ್‌ಚೆಕರ್ ವಿಶ್ಲೇಷಣೆಗಳ ಪ್ರಕಾರ, ಚುನಾವಣೆಗಳು ನಡೆಯಲಿರುವ ರಾಜ್ಯಗಳಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಮತ್ತು ತಪ್ಪುದಾರಿಗೆಳೆಯುವ ಮಾಹಿತಿಗಳಲ್ಲಿ ಹೆಚ್ಚಳ ಕಂಡುಬಂದಿದೆ. ಕರ್ನಾಟಕ ಚುನಾವಣೆಯ ಬಗ್ಗೆ ಹಂಚಿಕೊಳ್ಳಲಾಗುತ್ತಿರುವ ಎಲ್ಲ ಹೇಳಿಕೆಗಳನ್ನು ನ್ಯೂಸ್‌ಚೆಕರ್‌ ಕನ್ನಡ ವೆಬ್‌ಸೈಟ್‌ನಲ್ಲಿ ಓದಬಹುದು.

ಕರ್ನಾಟಕ ಚುನಾವಣೆಗೆ ಮುನ್ನ ಭಯೋತ್ಪಾದಕರ ವಿರುದ್ಧದ ಕ್ರಮವನ್ನು ಕಾಂಗ್ರೆಸ್ ವಿರೋಧಿಸಿತೇ, ಸುಳ್ಳು ಹೇಳಿಕೆ ವೈರಲ್!
ನ್ಯೂಸ್‌ಚೆಕರ್ ವಾಟ್ಸಾಪ್‌ ಟಿಪ್‌ಲೈನ್‌ನಲ್ಲಿ ಸ್ವೀಕರಿಸಿದ ವೈರಲ್‌ ಮೆಸೇಜ್‌

ರಾಜ್ಯದ ಚುನಾವಣೆಗೂ ಮುನ್ನ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಕಾಂಗ್ರೆಸ್ ವಿರೋಧಿಸಿ ಮಾತನಾಡುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಲಾಗಿದೆ. ಹಿಂದಿ ಭಾಷೆಯಲ್ಲಿರುವ ಈ ಕ್ಲೇಮ್‌ ಕುರಿತು ನ್ಯೂಸ್‌ಚೆಕರ್‌ ವಾಟ್ಸಾಪ್‌ ಟಿಪ್‌ಲೈನ್‌ (+91-9999499044)ಗೆ ದೂರು ಬಂದಿದ್ದು, ಅದರಂತೆ ಸತ್ಯಶೋಧನೆ ನಡೆಸಿದಾಗ ಇದು ತಪ್ಪು ಎಂದು ತಿಳಿದುಬಂದಿದೆ.

Fact Check/ Verification

ನ್ಯೂಸ್‌ಚೆಕರ್‌ ಸತ್ಯಶೋಧನೆಗಾಗಿ ಆರಂಭದಲ್ಲಿ ರಾಜ್ಯದ ಚುನಾವಣೆಗೆ ಮೊದಲು ಕಾಂಗ್ರೆಸ್‌ ಭಯೋತ್ಪಾದಕರ ವಿರುದ್ಧ ಕ್ರಮಕ್ಕೆ ವಿರೋಧಿಸಿದ ಕುರಿತ ಚಿತ್ರವನ್ನು ನೋಡಲು ಮುಂದಾದೆವು. ಇದಕ್ಕಾಗಿ ಗೂಗಲ್‌ನಲ್ಲಿ ಹುಡುಕಾಡಿದಾಗ ವೈರಲ್‌ ಗ್ರಾಫಿಕ್‌ ಪ್ಲೇಟ್‌ನಲ್ಲಿ ಕಾಣುವ ರೀತಿ, ಇತರ ಹಲವು ಗ್ರಾಫಿಕ್‌ ಪ್ಲೇಟ್‌ಗಳು ಪತ್ತೆಯಾಗಿವೆ.

ಕರ್ನಾಟಕ ಚುನಾವಣೆಗೆ ಮುನ್ನ ಭಯೋತ್ಪಾದಕರ ವಿರುದ್ಧದ ಕ್ರಮವನ್ನು ಕಾಂಗ್ರೆಸ್ ವಿರೋಧಿಸಿತೇ, ಸುಳ್ಳು ಹೇಳಿಕೆ ವೈರಲ್!

ಇದರ ಆಧಾರವಾಗಿ ಇನ್ನಷ್ಟು ಪರಿಶೀಲನೆಗಳನ್ನು ನಡೆಸಲಾಗಿದ್ದು ಈ ವೇಳೆ  ವೈರಲ್ ಗ್ರಾಫಿಕ್ ಪ್ಲೇಟ್ ಅನ್ನು ಹೋಲುವ ಗ್ರಾಫಿಕ್ಸ್ ಅನ್ನು ಜಿಬಿಕೆ ಆನ್ಲೈನ್ ಮತ್ತು ಕೋಲ್ಕತಾ ಟೈಮ್ ಎಂಬ ಪುಟಗಳು ಹಂಚಿಕೊಂಡಿರುವುದು ಪತ್ತೆಯಾಗಿದೆ.

ವೈರಲ್ ಹೇಳಿಕೆಯ ಬಗ್ಗೆ ಪ್ರಕಟವಾದ ಮಾಧ್ಯಮ ವರದಿಗಳ ಬಗ್ಗೆ ಮಾಹಿತಿಗಾಗಿ, ‘ಕರ್ನಾಟಕ ಚುನಾವಣೆಗೆ ಮೊದಲು ಭಯೋತ್ಪಾದಕರ ವಿರುದ್ಧ ಕ್ರಮವನ್ನು ವಿರೋಧಿಸುತ್ತೇವೆ: ಕಾಂಗ್ರೆಸ್’, ‘ಕರ್ನಾಟಕ ಚುನಾವಣೆಗೆ ಮೊದಲು ಭಯೋತ್ಪಾದಕರನ್ನು ಉಳಿಸಲು ಬಯಸಿದ ಕಾಂಗ್ರೆಸ್‌’ ಮುಂತಾದ ಅನೇಕ ಕೀವರ್ಡ್ಗಳ ಮೂಲಕ ನಾವು ಸರ್ಚ್ ನಡೆಸಿದ್ದು, ವೈರಲ್ ಹೇಳಿಕೆಯನ್ನು ದೃಢೀಕರಿಸುವ ಯಾವುದೇ ಮಾಧ್ಯಮ ವರದಿಗಳು ಕಂಡುಬಂದಿಲ್ಲ.

Also Read: ಕರ್ನಾಟಕದಲ್ಲಿ ಬಿಜೆಪಿ ಮತಕ್ಕಾಗಿ ಹಣ ಹಂಚಿದೆಯೇ? ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

ಇದರೊಂದಿಗೆ, ವೈರಲ್ ಗ್ರಾಫಿಕ್ ಪ್ಲೇಟ್ ಅನ್ನು ವಿಶ್ಲೇಷಿಸಿದಾಗ, ಅದರಲ್ಲಿ ಅನೇಕ ವ್ಯಾಕರಣ ದೋಷಗಳಿರುವುದು ಪತ್ತೆಯಾಗಿದೆ.

  • ‘पहले’ ಅನ್ನು ‘पेहले’ ಎಂದು ಬರೆಯಲಾಗಿದೆ
  • ‘आतंकवादियों’ ಅನ್ನು ‘आतंकवादीयों’ ಎಂದು ಬರೆಯಲಾಗಿದೆ
  • ‘कार्रवाई’ ಅನ್ನು ‘कारवाई’ ಎಂದು ಬರೆಯಲಾಗಿದೆ

ಈ ವೈರಲ್‌ ಹೇಳಿಕೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ  ನಾವು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಅವರೊಂದಿಗೆ ಮಾತನಾಡಿದ್ದೇವೆ. ಈ ವೇಳೆ ಅವರು, ಕಾಂಗ್ರೆಸ್ ಪಕ್ಷವು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.

Conclusion

ಹೀಗಾಗಿ, ಕರ್ನಾಟಕ ಚುನಾವಣೆಗೆ ಮುಂಚಿತವಾಗಿ ಭಯೋತ್ಪಾದಕರ ವಿರುದ್ಧ ಕ್ರಮವನ್ನು ಕಾಂಗ್ರೆಸ್‌ ವಿರೋಧಿಸಿದೆ ಎಂದು ಹೇಳುವ ಈ ಹೇಳಿಕೆ ಸುಳ್ಳು ಎನ್ನುವುದು ನಮ್ಮ ಸತ್ಯಶೋಧನೆಯಿಂದ ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷವು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ, ವೈರಲ್ ಗ್ರಾಫಿಕ್ ಪ್ಲೇಟ್ ಅನ್ನು ತಯಾರಿಸಲಾಗಿದೆ ಎಂದು ತಿಳಿದುಬಂದಿದೆ.

Result: False

Our Sources
Newschecker analysis

Conversation with Pawan Khera, Chairman, Media & Publicity Department, All India Congress Committee

ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್‌ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು ಅದನ್ನು ಇಲ್ಲಿ ಓದಬಹುದು

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.