Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ವಿಸರ್ಜನೆ ವೇಳೆ ಗಣೇಶ ಮೂರ್ತಿಯನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ
Fact
ವಿಸರ್ಜನೆ ವೇಳೆ ಗಣೇಶ ಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನುವುದು ನಿಜವಲ್ಲ. ಬೆಂಗಳೂರಿನ ಟೌನ್ ಹಾಲ್ ಎದುರು ಪ್ರತಿಭಟನಕಾರರ ಬಂಧನದ ವೇಳೆ ಇದ್ದ ಗಣೇಶ ಮೂರ್ತಿಯನ್ನು ಪೊಲೀಸರು ವ್ಯಾನ್ ನಲ್ಲಿಟ್ಟಿದ್ದು ಬಳಿಕ ವಿಸರ್ಜಿಸಿದ್ದರು.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ಸಮಯದಲ್ಲಿ ಗಲಾಟೆ ನಡೆದ ಬೆನ್ನಲ್ಲೆ ಗಣೇಶ ಚತುರ್ಥಿಯ ನಂತರ ವಿಸರ್ಜನೆಗೆ ಹೋಗುತ್ತಿದ್ದ ಭಕ್ತರನ್ನು ತಡೆಯಲು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೊಲೀಸ್ ವ್ಯಾನ್ ನಲ್ಲಿ ಇರಿಸಲಾಗಿದ್ದ ಗಣೇಶ ಮೂರ್ತಿಯ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಗಣೇಶನನ್ನು ಬಂಧಿಸುವ ಮೂಲಕ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿಯಾಗಿದೆ ಎಂಬ ಹೇಳಿಕೆಯೊಂದಿಗೆ ಪೊಲೀಸ್ ವ್ಯಾನ್‌ನೊಳಗೆ ಕಾಣಿಸಿಕೊಂಡ ಗಣೇಶನ ವಿಗ್ರಹದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಗಣೇಶ ಚತುರ್ಥಿಯ ನಂತರ ವಿಸರ್ಜನೆಗೆ ತೆರಳುವ ಭಕ್ತರನ್ನು ತಡೆಯುವ ಸಲುವಾಗಿ ಕರ್ನಾಟಕ ಪೊಲೀಸರು ಗಣೇಶನ ಮೂರ್ತಿಯನ್ನು ವಶಕ್ಕೆ ಪಡೆದು ಅವಮಾನಿಸುವ ಮನೋಭಾವನೆಯಿಂದ ಗಣಪತಿಯನ್ನು ಪೊಲೀಸ್ ವ್ಯಾನ್‌ನಲ್ಲಿಟ್ಟಿದ್ದರು ಎಂದು ಹೇಳಲಾಗುತ್ತಿದೆ. ಇನ್ನೊಂದು ಪೋಸ್ಟ್ ನಲ್ಲಿ ಪೋಸ್ಟ್, ‘ಕರ್ನಾಟಕ ಪೊಲೀಸರು ಗಣೇಶನನ್ನು ಬಂಧಿಸಿದ್ದಾರೆ… ಗಣೇಶನ ಪೂಜೆ ಧಾರ್ಮಿಕ ಸಾಮರಸ್ಯವನ್ನು ಕೆಡಿಸುತ್ತದೆ. ಒಳ್ಳೆಯದು ಹಿಂದೂಗಳೇ… ನಿಮ್ಮ ಪೂಜೆಯನ್ನು ನಿಷೇಧಿಸಲಾಗಿದೆ, ನಾನು ಮತ್ತೊಮ್ಮೆ ಪ್ರಮಾಣ ಮಾಡುತ್ತೇನೆ ಮತ್ತೆ ಕಾಂಗ್ರೆಸ್ಸನ್ನೇ ಚುನಾಯಿಸುತ್ತೀರಿ, ಮತ್ತೆ ಇಲ್ಲಿ ಪೂಜೆಯ ಅಗತ್ಯವಿಲ್ಲ ಎಂದಿದೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಆರ್ಕೈವ್ ಅನ್ನು ಇಲ್ಲಿ ಮತ್ತು ಇಲ್ಲಿ ನೋಡಿ.
Also Read: ವಂದೇ ಭಾರತ್ ರೈಲಿನ ಗಾಜು ಒಡೆಯುವ ವೀಡಿಯೋ ಹಿಂದಿನ ಸತ್ಯವೇನು?
ಸೆಪ್ಟೆಂಬರ್ 14, 2024 ರ ಎಕ್ಸ್ ಪೋಸ್ಟ್ ( ಆರ್ಕೈವ್ ) ನಲ್ಲಿ, ಪೊಲೀಸ್ ವ್ಯಾನ್‌ನೊಳಗೆ ಕಂಡುಬರುವ ಗಣೇಶನ ವಿಗ್ರಹದ ಚಿತ್ರದೊಂದಿಗೆ ಶೀರ್ಷಿಕೆ ಹೀಗಿದೆ: “ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ರಾಜ್ಯದ ಪೊಲೀಸರು ಗಣೇಶ ನನ್ನು ಬಂಧಿಸಿದ್ದಾರೆ. ಹೌದು, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಕಾಂಗ್ರೆಸ್ ಪೊಲೀಸರು ಗಣೇಶನನ್ನು ಬಂಧಿಸಿದ್ದಾರೆ “ಹಿಂದೂಗಳು ಅವಮಾನಕ್ಕೊಳಗಾಗಲು ಕಾಂಗ್ರೆಸ್‌ಗೆ ಏಕೆ ಮತ ಹಾಕುತ್ತಾರೆ?” ಎಂದಿದೆ. ಪೋಸ್ಟ್‌ನಲ್ಲಿ ಸುಮಾರು ಒಂದು ನಿಮಿಷದ ವೀಡಿಯೋವನ್ನು ಸಹ ಹಂಚಿಕೊಳ್ಳಲಾಗಿದೆ, ಇದರಲ್ಲಿ ಕೆಲವರು ಗಣೇಶನ ವಿಗ್ರಹದ ಜೊತೆಗೆ ‘ಗಣಪತಿ ಬಪ್ಪಾ ಮೋರೆಯಾ’ ಎಂದು ಹೇಳುತ್ತಿರುವುದು ಕಂಡುಬರುತ್ತದೆ.
ಸೆಪ್ಟೆಂಬರ್ 17 ರಂದು ಕುರುಕ್ಷೇತ್ರದಲ್ಲಿ ನಡೆದ ರಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ, ಗಣೇಶನನ್ನು ಸಹ ಜೈಲಿಗೆ ಹಾಕಲಾಗುತ್ತಿದೆ. “ಗಣೇಶನನ್ನು ಪೊಲೀಸ್ ಕಂಪಾರ್ಟ್ಮೆಂಟ್ ಒಳಗೆ ಲಾಕ್ ಮಾಡಲಾಗಿತ್ತು. ಇಂದು, ಇಡೀ ದೇಶವು ಗಣೇಶ ಉತ್ಸವವನ್ನು ಆಚರಿಸುತ್ತಿದೆ ಮತ್ತು ಕಾಂಗ್ರೆಸ್ ‘ವಿಘ್ನಹರ್ತಾ’ (ಗಣೇಶ) ಪೂಜೆಯಲ್ಲಿ ‘ವಿಘ್ನ’ (ಅಡೆತಡೆಗಳನ್ನು) ಹಾಕುತ್ತಿದೆ” ಎಂದು ಅವರು ಹೇಳಿದ್ದರು.
ಹರಿಯಾಣ ಬಿಜೆಪಿ ಘಟಕವು ಕರ್ನಾಟಕದ ಘಟನೆಯ ಬಗ್ಗೆ ಪ್ರಧಾನಿ ಮೋದಿಯವರ ಹೇಳಿಕೆಯನ್ನು ಹಂಚಿಕೊಂಡಿದೆ.
ಹಿಂದೂಸ್ತಾನ್ ಟೈಮ್ಸ್ ಮತ್ತು ಮಾತೃಭೂಮಿಯಂತಹ ಸುದ್ದಿ ಸಂಸ್ಥೆಗಳು ಸಹ ಪ್ರಧಾನಿಯವರ ಹೇಳಿಕೆಯ ಬಗ್ಗೆ ವರದಿ ಮಾಡಿವೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಕರ್ನಾಟಕದಲ್ಲಿ ಗಣೇಶನ ವಿಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು.
ವೈರಲ್ ಕ್ಲೈಮ್ ಅನ್ನು ತನಿಖೆ ಮಾಡಲು, ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ಸಮಯದಲ್ಲಿ ನಾವು ಈ ವಿಷಯಕ್ಕೆ ಸಂಬಂಧಿಸಿದ ಅನೇಕ ಮಾಧ್ಯಮ ವರದಿಗಳನ್ನು ಕಂಡುಕೊಂಡಿದ್ದೇವೆ. 14 ಸೆಪ್ಟೆಂಬರ್ 2024 ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯು ಈ ವಿಷಯವು ಸೆಪ್ಟೆಂಬರ್ 13 ರಂದು ನಡೆದಿದೆ ಎಂದು ಹೇಳುತ್ತದೆ. ಸೆಪ್ಟೆಂಬರ್ 11 2024 ರಂದು ಗಣೇಶ ವಿಸರ್ಜನೆ ಸಮಯದಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಡೆದ ಕೋಮು ಹಿಂಸಾಚಾರವನ್ನು ವಿರೋಧಿಸಿ, ಕೆಲವರು ಬೆಂಗಳೂರಿನ ಟೌನ್ ಹಾಲ್ ಎದುರು ಪ್ರತಿಭಟನೆಯನ್ನು ನಡೆಸಿದ್ದರು, ಈ ವೇಳೆ ಪ್ರತಿಭಟನಕಾರರ ಜೊತೆಗೆ 1 ಅಡಿ ಎತ್ತರದ ಗಣೇಶನ ವಿಗ್ರಹವೂ ಇತ್ತು. ಈ ವೇಳೆ ಅನುಮತಿ ಪಡೆಯದೇ ಪ್ರತಿಭಟನೆಗೆ ಬಂದಿದ್ದ 40 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪೊಲೀಸ್ ಪೇದೆಯೊಬ್ಬರು ಗಣೇಶನ ಮೂರ್ತಿಯನ್ನು ಎತ್ತಿಕೊಂಡು ಹೋಗಿ ಪೊಲೀಸ್ ವ್ಯಾನ್‌ನಲ್ಲಿ ಇರಿಸಿದ್ದರು.
ಬೆಂಗಳೂರಿನ ಟೌನ್ ಹಾಲ್‌ಗೆ ಆಗಮಿಸಿದ ಪ್ರತಿಭಟನಾಕಾರರು ಗಣೇಶ ಮೂರ್ತಿಗಳೊಂದಿಗೆ ಪ್ರತಿಭಟನೆ ನಡೆಸಿದ್ದು, ನಾಗಮಂಗಲದಲ್ಲಿ ದೊಂಬಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು ಎನ್ನುವುದು ಗೊತ್ತಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ‘ದಿ ಪ್ರಿಂಟ್’ ವರದಿಯು , “ಜನರ ಗುಂಪು ಟೌನ್ ಹಾಲ್ ಮುಂದೆ ಪ್ರತಿಭಟನೆಗೆ ಮುಂದಾಯಿತು, ಆದರೆ ಅವರು ಸ್ಥಳಕ್ಕೆ ತಲುಪುವ ಮೊದಲು, ಪ್ರತಿಭಟನೆಗೆ ಅವಕಾಶವಿಲ್ಲದ ಕಾರಣ ನಾವು ಅವರನ್ನು ತಡೆದಿದ್ದೇವೆ. ಆದರೆ ಪ್ರತಿಭಟನಾಕಾರರು ಅಲ್ಲಿಗೆ ಹೋಗುವುದಾಗಿ ಹಠ ಹಿಡಿದಿದ್ದರು, ಇದರಿಂದಾಗಿ ಅವರನ್ನು ಬಂಧಿಸಲಾಯಿತು. ಅವರಲ್ಲಿ ಸುಮಾರು 40 ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ” ಎಂದಿದೆ.
ಸೆಪ್ಟೆಂಬರ್ 15, 2024 ರಂದು ನ್ಯೂಸ್ 18 ಪ್ರಕಟಿಸಿದ ವರದಿಯಲ್ಲಿ, ನಾಗಮಂಗಲದ ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ನಡೆದ ದಾಳಿಯನ್ನು ವಿರೋಧಿಸಿ ನಡೆಸಲುದ್ದೇಶಿಸಿದ ಪ್ರತಿಭಟನೆಗೆ ಅನುಮತಿ ಸಿಗದಿದ್ದರೂ ಟೌನ್ ಹಾಲ್ ನಲ್ಲಿ ಪ್ರತಿಭಟನೆಗೆ ಉದ್ದೇಶಿಸಲಾಗಿತ್ತು. ಪ್ರತಿಭಟನಾಕಾರರಿಗೆ ಅನುಮತಿಸಲಾದ ಸ್ಥಳವೆಂದರೆ ಫ್ರೀಡಂ ಪಾರ್ಕ್. ಟೌನ್ ಹಾಲ್‌ನಲ್ಲಿ ಅನುಮತಿಯಿಲ್ಲದೆ ಜನರು ಜಮಾಯಿಸುತ್ತಿದ್ದಾರೆ ಎಂದು ತಿಳಿದ ತಕ್ಷಣ ಪೊಲೀಸರು ಅವರನ್ನು ಬಂಧಿಸಿ ಪೊಲೀಸ್ ವ್ಯಾನ್‌ನಲ್ಲಿ ಹಾಕಲು ಪ್ರಾರಂಭಿಸಿದರು. ಇದರಿಂದ ಗದ್ದಲ ಉಂಟಾಗಿ ಕೆಲವರು ಗಣಪತಿ ಮೂರ್ತಿಯನ್ನು ತಲೆಯ ಮೇಲೆ ಹೊತ್ತುಕೊಂಡು ಘೋಷಣೆಗಳನ್ನು ಕೂಗತೊಡಗಿದರು ಎಂದಿದೆ.
ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ್ ನ್ಯೂಸ್ 18 ರೊಂದಿಗೆ ಮಾತನಾಡಿ, ‘ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಲು ಪ್ರಾರಂಭಿಸಿದಾಗ, ಗಣೇಶ ಮೂರ್ತಿಯು ನೆಲದ ಮೇಲೆ ಬಿದ್ದಿದೆ ಎಂದು ತಿಳಿದಾಗ, ನಮ್ಮ ಅಧಿಕಾರಿ ತಕ್ಷಣವೇ ವಿಗ್ರಹವನ್ನು ಎತ್ತಿಕೊಂಡು ಅದನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದರು.
‘ಯಾವುದೇ ಮೇಲ್ವಿಚಾರಣೆಯಿಲ್ಲದೆ ನಾವು ಗಣೇಶ ಮೂರ್ತಿಯನ್ನು ಬಿಟ್ಟು ಬಿಡಲು ಸಾಧ್ಯವಿಲ್ಲ, ವಿಗ್ರಹವನ್ನು ಸುರಕ್ಷಿತವಾಗಿ ಸಾಗಿಸಲಾಗಿದೆ ಎಂದು ನಮ್ಮ ಅಧಿಕಾರಿ ಖಚಿತಪಡಿಸಿದರು ಮತ್ತು ಅದನ್ನು ವಿಸರ್ಜನೆಗೆ ತೆಗೆದುಕೊಂಡು ಹೋಗಬೇಕಾಗಿರುವುದರಿಂದ, ಅದನ್ನು ಸಂಪೂರ್ಣ ಗೌರವ ಮತ್ತು ಭಕ್ತಿಯಿಂದ ಮಾಡಲಾಯಿತು. ವ್ಯಾನಿನೊಳಗಿನ ಗಣೇಶನ ಚಿತ್ರವು ನಾವು ವಿಗ್ರಹದ ಪವಿತ್ರತೆ ಮತ್ತು ಗೌರವವನ್ನು ಹೇಗೆ ಖಾತ್ರಿಪಡಿಸಿದ್ದೇವೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
16 ಸೆಪ್ಟೆಂಬರ್ 2024 ರಂದು ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿದ ವರದಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಭಟನಾಕಾರರನ್ನು ಬಂಧಿಸುವಾಗ ಮೂರ್ತಿಯನ್ನು ಪೊಲೀಸ್ ವ್ಯಾನ್‌ನೊಳಗೆ ಇರಿಸಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ಕೇಂದ್ರ ವಿಭಾಗದ ಉಪ ಪೊಲೀಸ್ ಕಮಿಷನರ್ (ಡಿಸಿಪಿ) ಮಾತನಾಡಿ, “ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ನಾಗಮಂಗಲ ಗಣೇಶ ಮೆರವಣಿಗೆಯ ಘಟನೆಯನ್ನು ವಿರೋಧಿಸಿ 2024 ರ ಸೆಪ್ಟೆಂಬರ್ 13 ರಂದು ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಹಿಂದೂ ಗುಂಪುಗಳು ಪ್ರತಿಭಟನೆ ನಡೆಸಿದ್ದವು. ಪ್ರತಿಭಟನಾಕಾರರನ್ನು ಬಂಧಿಸಲಾಯಿತು. “ನಂತರ ಅಧಿಕಾರಿಗಳು ಗಣಪತಿ ವಿಗ್ರಹವನ್ನು ಪೂರ್ಣ ವಿಧಿವಿಧಾನಗಳೊಂದಿಗೆ ವಿಸರ್ಜಿಸಿದರು.” ಎಂದಿದೆ.
Also Read: ಬಾಂಗ್ಲಾದೇಶದಲ್ಲಿ ಹಿಂದೂಗಳ ಬಲವಂತದ ಮತಾಂತರ? ಈ ವೀಡಿಯೋ ಹಿಂದಿನ ಸತ್ಯ ಇಲ್ಲಿದೆ
ಸೆಪ್ಟೆಂಬರ್ 15, 2024 ರಂದು, ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್, ಸೆಂಟ್ರಲ್ ಡಿವಿಷನ್, ಬೆಂಗಳೂರು ಅವರು ತಮ್ಮ ಅಧಿಕೃತ X ಖಾತೆಯಿಂದ ಸ್ಪಷ್ಟೀಕರಣವನ್ನು ನೀಡಿದ್ದಾರೆ. “ಬೆಂಗಳೂರಿನ ಟೌನ್ ಹಾಲ್ ಬಳಿ ವಿಸರ್ಜನೆಗೆ ಹೋಗುತ್ತಿದ್ದ ಭಕ್ತರಿಂದ ಅಧಿಕಾರಿಗಳು ಗಣೇಶನ ಮೂರ್ತಿಯನ್ನು ಕಸಿದುಕೊಂಡರು ಎಂಬ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಪೋಸ್ಟ್ ಕುರಿತು ಸ್ಪಷ್ಟೀಕರಣ… ಸೆಪ್ಟೆಂಬರ್ 13, 2024 ರಂದು, ಹಿಂದೂ ಗುಂಪುಗಳು ಬೆಂಗಳೂರಿನ ಟೌನ್ ಹಾಲ್‌ನಲ್ಲಿ ನಾಗಮಂಗಲ ಗಣೇಶ ಮೆರವಣಿಗೆಯ ಘಟನೆಯನ್ನು ವಿರೋಧಿಸಿ, ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಪ್ರತಿಭಟಿಸಿದವು. ಈ ವೇಳೆ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಬಳಿಕ ಗಣಪತಿ ಮೂರ್ತಿಯನ್ನು ಅಧಿಕಾರಿಗಳು ವಿಧಿ ವಿಧಾನಗಳೊಂದಿಗೆ ವಿಸರ್ಜನೆ ಮಾಡಿದರು ಎಂದಿದೆ.
ತನಿಖೆಯ ಸಂದರ್ಭದಲ್ಲಿ ನಾವು ಬೆಂಗಳೂರು ಪೊಲೀಸರನ್ನೂ ಸಂಪರ್ಕಿಸಿದ್ದೇವೆ. ಉತ್ತರ ಬಂದಾಗ ಕಥೆಯನ್ನು ನವೀಕರಿಸಲಾಗುತ್ತದೆ.
ಈ ತನಿಖೆಯ ಪ್ರಕಾರ ವಿಸರ್ಜನೆ ವೇಳೆ ಕರ್ನಾಟಕ ಪೊಲೀಸರು ಗಣೇಶ ಮೂರ್ತಿಯನ್ನು ಬಂಧಿಸಿದ್ದಾರೆ ಎನ್ನುವ ಹೇಳಿಕೆ ತಪ್ಪು ದಾರಿಗೆಳೆಯುವಂಥದ್ದಾಗಿದೆ ಎಂದು ಗೊತ್ತಾಗಿದೆ.
Also Read: ಸೆ.30ರಂದು ಎಲ್ಲ ಪ್ಲ್ಯಾನ್ ಹಿಂತೆಗೆದುಕೊಳ್ಳುವುದಾಗಿ ಹೇಳಿದ ಎಲ್‌ಐಸಿ ಸುತ್ತೋಲೆ ನಕಲಿ
Our Sources
Report published by Times of India, Dated: 13th September 2024
Report published by Hindustan Times Dated: 16th September 2024
X post by Deputy Commissioner of Police, Central Division, Bengaluru City Dated: 15th September 2024
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
October 22, 2024
Dipalkumar Shah
October 16, 2024
Ishwarachandra B G
August 24, 2024