Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಕರ್ನಾಟಕದಲ್ಲಿ ಕೇಸರಿ ಬಟ್ಟೆಯನ್ನು ತೊಡುವದೂ ಅಪರಾಧವೇ ಎಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಪ್ರಶ್ನೆ
ವೈರಲ್ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾದ ವೀಡಿಯೋ ಚಾಮುಂಡಿ ಚಲೋ ಪ್ರತಿಭಟನೆಯ ಸಂದರ್ಭದ್ದಾಗಿದ್ದು ಪೊಲೀಸರು ತಪ್ಪಾಗಿ ಮಹಿಳೆಯೊಬ್ಬರನ್ನು ವಶಕ್ಕೆ ಪಡೆದ ವಿದ್ಯಮಾನವಾಗಿದೆ.
ಕರ್ನಾಟಕದಲ್ಲಿ ಕೇಸರಿ ಬಟ್ಟೆಯನ್ನು ತೊಡುವದೂ ಅಪರಾಧವೇ? ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದು ವೈರಲ್ ಆಗುತ್ತಿದೆ.
ವೈರಲ್ ವೀಡಿಯೋ ಜೊತೆಗಿರುವ ಹೇಳಿಕೆಯಲ್ಲಿ, “ಕರ್ನಾಟಕದಲ್ಲಿ ಈಗ ಕೇಸರಿ ಬಟ್ಟೆ ಧರಿಸುವುದು ಅಪರಾಧವೇ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ? ಮಾತಾ ಚಾಮುಂಡಾ ದೇವಿ ದೇವಸ್ಥಾನದ ಹೊರಗೆ ಒಬ್ಬ ಗೌರವಾನ್ವಿತ ಮಹಿಳೆ ದೇವಸ್ಥಾನದಿಂದ ಹಿಂತಿರುಗಲಿರುವ ತನ್ನ ಪತಿಗಾಗಿ ಕಾಯುತ್ತಿದ್ದಾಳೆ. ಕರ್ನಾಟಕ ಪೊಲೀಸರು ಬಂದು ಪೊಲೀಸ್ ವ್ಯಾನ್ಗೆ ತಳ್ಳಲು ಪ್ರಾರಂಭಿಸುತ್ತಾರೆ. ಮಹಿಳೆ ಅಳಲು ಪ್ರಾರಂಭಿಸುತ್ತಾಳೆ. ಈ ಸರಳ, ಗೌರವಾನ್ವಿತ ಮಹಿಳೆಯ ಅಪರಾಧವನ್ನು ಕಂಡುಹಿಡಿಯಿರಿ, ಅವಳು ಕೇಸರಿ ಸೀರೆ ಧರಿಸಿದ್ದಳು. ಯಾವುದೇ ವೀಡಿಯೊ ಇಲ್ಲದಿದ್ದರೆ, ಈ ಘಟನೆಯನ್ನು ಯಾರೂ ನಂಬುತ್ತಿರಲಿಲ್ಲ. ಕಾಂಗ್ರೆಸ್ನ ಹಿಂದೂ ವಿರೋಧಿ ಹತಾಶೆ, ನೀಚತನ ಮತ್ತು ಹಿಟ್ಲರಿಸಂ ಈಗ ಎಲ್ಲಾ ಮಿತಿಗಳನ್ನು ಮೀರಿದೆ…..” ಎಂದಿದೆ.
ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ರೀತಿಯ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

ಅಲ್ಲದೆ ಇದರ ಬಗ್ಗೆ ವಾಟ್ಸಾಪ್ (+91-9999499044) ಮೂಲಕವೂ ಬಳಕೆದಾರರೊಬ್ಬರು ನಮ್ಮೊಂದಿಗೆ ಹಂಚಿಕೊಂಡಿದ್ದು, ಇದನ್ನು ಸತ್ಯಶೋಧನೆ ನಡೆಸುವಂತೆ ಕೇಳಿದ್ದಾರೆ. ಅದರಂತೆ ಸತ್ಯಶೋಧನೆಗೆ ಸ್ವೀಕರಿಸಲಾಗಿದೆ.

ಆದರೆ, ಮೈಸೂರಿನಲ್ಲಿ ನಡೆದ ಚಾಮುಂಡಿ ಚಲೋ ಪ್ರತಿಭಟನೆಯ ದೃಶ್ಯವನ್ನು ದಾರಿ ತಪ್ಪಿಸುವ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡುಬಂದಿದೆ.
Also Read: WEF ಶೃಂಗಸಭೆಯಲ್ಲಿ ‘ಸುಂದರ್ ಪಿಚೈ-ಟ್ರಂಪ್’ ಮಾತಿನ ಸಮರ ನಡೆದಿದೆಯೇ?
ಸತ್ಯಶೋಧನೆಗಾಗಿ ನಾವು ವೀಡಿಯೋವನ್ನು ಕೂಲಂಕಷವಾಗಿ ನೋಡಿದ್ದೇವೆ. ಈ ವೇಳೆ ಮಹಿಳೆ ತಾನು ಚಾಮುಂಡಿ ದರ್ಶನಕ್ಕೆ ಬಂದಿದ್ದು ಎನ್ನುವುದು, ಬಳಿಕ ಪೊಲೀಸರು ಆಕೆಯನ್ನು ವ್ಯಾನ್ ಗೆ ಹತ್ತಿಸಲು ನೋಡುವುದು ಆ ಬಳಿಕ ವ್ಯಕ್ತಿಯೊಬ್ಬರು ಅವರನ್ನು ಕರೆದೊಯ್ಯುವುದನ್ನು ನೋಡಿದ್ದೇವೆ. ಇದರ ಆಧಾರದಲ್ಲಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಇದು ಇತ್ತೀಚೆಗೆ ಬಿಜೆಪಿ ಮತ್ತು ವಿವಿಧ ಹಿಂದೂ ಸಂಘಟನೆಗಳು ಮೈಸೂರಿನಲ್ಲಿ ಆಯೋಜಿಸಿದ್ದ ಚಾಮುಂಡಿ ಚಲೋ ಪ್ರತಿಭಟನೆಯ ಸಂದರ್ಭದ್ದು ಎಂದು ಗೊತ್ತಾಗಿದೆ.
ಸೆಪ್ಟೆಂಬರ್ 9, 2025ರಂದು ಕನ್ನಡ ಪ್ರಭ ವರದಿಯ ಪ್ರಕಾರ, ಲೇಖಕಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಿಸಲು ಆಹ್ವಾನಿಸಿರುವುದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಕರೆ ನೀಡಿದ್ದ ‘ಚಾಮುಂಡಿ ಬೆಟ್ಟ ಚಲೋ’ ಮೆರವಣಿಗೆ ವೇಳೆ ದೊಡ್ಡ ಹೈಡ್ರಾಮಾ ನಡೆದಿದ್ದು, ಮಹಿಳೆಯೊಬ್ಬರು ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ.
ಇದೇ ವೇಳೆ ಮಹಿಳೆಯೊಬ್ಬರು ಚಾಮುಂಡಿ ತಾಯಿಯ ದರ್ಶನಕ್ಕೆ ಬಂದಿದ್ದರು. ಅವರನ್ನೂ ಪ್ರತಿಭಟನಾಕಾರರು ಎಂದು ಭಾವಿಸಿದ ಮಹಿಳಾ ಪೊಲೀಸರು ಆಕೆಯನ್ನು ತಡೆದಿದ್ದಾರೆ. ಈ ವೇಳೆ ಆಕೆಯನ್ನು ಎಲ್ಲಿಗೆ ಹೋಗುತ್ತಿದ್ದಾರಾ ಎಂದು ಪ್ರಶ್ನಿಸಿದ್ದು ಈ ವೇಳೆ ಆಕೆ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ ಎಂದರು. ಆಗ ಅದಕ್ಕೆಲ್ಲಾ ಪರ್ಮಿಷನ್ ಇಲ್ಲ ಎಂದ ಮಹಿಳಾ ಸಿಬ್ಬಂದಿ ಆಕೆಯನ್ನೂ ವಾಹನ ಹತ್ತಿಸಲು ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ತಾನು ತನ್ನ ಪತಿಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದು, ದೇವರ ದರ್ಶನ ಪಡೆಯಲೂ ಕೂಡ ಅನುಮತಿ ಪಡೆಯಬೇಕೇ? ಎಂದು ಪ್ರಶ್ನಿಸಿದ್ದಾರೆ.
‘ನನ್ನ ಮಗಳಿಗೆ ಇಂದು ಇಂಟರ್ ವ್ಯೂ ಇದೆ. ಚಾಮುಂಡೇಶ್ವರಿ ತಾಯಿ ಬೇಡಲು ಹೋಗುತ್ತಿದ್ದೇನೆ. ನಮ್ಮನ್ನು ತಡೆದು ಎಳೆದು ಹಾಕುತ್ತಿದ್ದೀರಾ. ಇದು ನ್ಯಾಯವಲ್ಲ’ ಅಂತ ಪೊಲೀಸರ ನಡೆ ಖಂಡಿಸಿ ಮಹಿಳೆ ಕಣ್ಣೀರು ಹಾಕಿದ್ದಾರೆ.
ಈ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿ ಆಕೆಯನ್ನು ಬಲವಂತವಾಗಿ ವಾಹನ ಹತ್ತಿಸಲು ಯತ್ನಿಸಿದಾಗ ಮಹಿಳೆ ಕಣ್ಣೀರು ಹಾಕುತ್ತಾ ನಾನು ಪ್ರತಿಭಟನೆ ಮಾಡಲು ಬಂದಿಲ್ಲ.. ದೇವಸ್ಥಾನಕ್ಕೆ ಬಂದಿದ್ದಾಗಿ ಹೇಳಿದ್ದಾರೆ. ಆಗ ಅಲ್ಲಿ ನೆರೆದಿದ್ದ ಸ್ಥಳೀಯರು ಆಕೆಯನ್ನು ಬಿಡುವಂತೆ ಮನವಿ ಮಾಡಿದಾಗ ಹಿರಿಯ ಅಧಿಕಾರಿಗಳು ಬಿಟ್ಟು ಕಳುಹಿಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ” ಎಂದಿದೆ.

ಸೆಪ್ಟೆಂಬರ್ 9, 2025ರ ಸ್ಟಾರ್ ಆಫ್ ಮೈಸೂರು ವರದಿಯಲ್ಲಿ, “ನಾಟಕೀಯ ಘಟನೆಯೊಂದರಲ್ಲಿ, ಬೆಂಗಳೂರಿನಿಂದ ದೇವಸ್ಥಾನಕ್ಕೆ ಭೇಟಿ ನೀಡಲು ಪ್ರಯಾಣಿಸಿದ್ದ ಮಹಿಳೆ ಮತ್ತು ಆಕೆಯ ಪತಿಯನ್ನು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪೊಲೀಸರು ತಪ್ಪಾಗಿ ಬಂಧಿಸಿದರು, ಅವರು ಪ್ರತಿಭಟನೆಯ ಭಾಗವಾಗಿದ್ದಾರೆಂದು ಭಾವಿಸಿದರು. ಸ್ವಲ್ಪ ಸಮಯದ ನಂತರ, ನೊಂದ ಮಹಿಳೆ ಕಣ್ಣೀರು ಹಾಕುತ್ತಾ, ತಮ್ಮ ಮಗಳು ಇತ್ತೀಚೆಗೆ ಹೆಚ್ಚಿನ ಅಂಕಗಳೊಂದಿಗೆ ಪರೀಕ್ಷೆಗಳಲ್ಲಿ ಉತ್ತೀರ್ಣಳಾಗಿದ್ದರಿಂದ, ಉದ್ಯೋಗ ಸಂದರ್ಶನದಲ್ಲಿ ಯಶಸ್ಸಿಗಾಗಿ ಪ್ರಾರ್ಥಿಸಲು ಬಂದಿದ್ದೇವೆ ಎಂದು ಪೊಲೀಸರಿಗೆ ವಿವರಿಸಿದರು. ಆ ಮಹಿಳೆ ಅಳುತ್ತಾ ತಮ್ಮ ಬಿಡುಗಡೆಗಾಗಿ ಬೇಡಿಕೊಳ್ಳುತ್ತಾ, ತಾವು ಮುಗ್ಧ ಭಕ್ತರು ಎಂದು ಹೇಳಿದರು. ತಪ್ಪನ್ನು ಅರಿತುಕೊಂಡ ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ದಂಪತಿಗಳನ್ನು ತಕ್ಷಣವೇ ಬಂಧನದಿಂದ ಬಿಡುಗಡೆ ಮಾಡಿದರು. ಆದಾಗ್ಯೂ, ಈ ಅಗ್ನಿಪರೀಕ್ಷೆಯಿಂದ ತೀವ್ರವಾಗಿ ನೊಂದ ದಂಪತಿಗಳು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗದೆ ಬೆಂಗಳೂರಿಗೆ ಮರಳಿದರು.” ಎಂದಿದೆ.

ಘಟನೆಯ ಕುರಿತ ವೀಡಿಯೋವನ್ನು ನಾವು ಟಿವಿ 9 ಕನ್ನಡ ಯೂಟ್ಯೂಬ್ ಚಾನೆಲ್ ಸೆಪ್ಟೆಂಬರ್ 9 2025ರಂದು ಪ್ರಕಟಿಸಿದ್ದು, ಇದರಲ್ಲಿ ಚಾಮುಂಡಿ ಚಲೋಗೆ ಅನುಮತಿ ನಿರಾಕರಣೆ ವಿಚಾರಕ್ಕೆ ಸಾರ್ವಜನಿಕರಿಗೆ ತಟ್ಟಿದ್ದ ಬಿಸಿ. ಮಗಳಿಗೆ ಇಂಟರ್ ವ್ಯೂ ಇದ್ದ ಕಾರಣ ಬೆಟ್ಟಕ್ಕೆ ತೆರಳಬೇಕಿದ್ದ ಮಹಿಳೆ ಕಣ್ಣೀರು. ನನ್ನ ಮಗಳಿಗೆ ಇಂದು ಇಂಟರ್ ವ್ಯೂ ಇದೇ, ಚಾಮುಂಡೇಶ್ವರಿ ತಾಯಿ ಬೇಡಲು ಹೋಗುತ್ತಿದ್ದೇನೆ. ನಮ್ಮನ್ನು ತಡೆದು ಎಳೆದು ಹಾಕುತ್ತಿದ್ದೀರಾ. ಇದು ನ್ಯಾಯವಲ್ಲ ಅಂತ ಪೊಲೀಸರ ನಡೆ ಖಂಡಿಸಿ ಮಹಿಳೆ ಕಣ್ಣೀರು ಎಂದು ವಿವರಣೆ ಕೊಡಲಾಗಿದೆ.
ಘಟನೆ ಕುರಿತಂತೆ ನಾವು ಮೈಸೂರು ಪೊಲೀಸರನ್ನು ಸಂಪರ್ಕಿಸಲು ಯತ್ನಿಸಿದ್ದೇವೆ. ಈ ಕುರಿತು ಅವರ ಪ್ರತಿಕ್ರಿಯೆ ಬಂದ ಬಳಿಕ ಈ ವರದಿಯನ್ನು ನವೀಕರಿಸಲಾಗುವುದು.
ಈ ಸತ್ಯಶೋಧನೆಯ ಪ್ರಕಾರ ವೈರಲ್ ವೀಡಿಯೋ ಇತ್ತೀಚಿನ ಚಾಮುಂಡಿ ಚಲೋ ಪ್ರತಿಭಟನೆಯ ಸಂದರ್ಭದ್ದಾಗಿದ್ದು, ದಾರಿತಪ್ಪಿಸುವ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ.
Also Read: ಬೇಲೂರಿನಲ್ಲಿ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಮತಾಂತರ ಮಾಫಿಯಾ ಕೈವಾಡ?
Our Sources
Report by Kannadaprabha, Dated: September 9, 2025
Report by Star of Mysore, Dated: September 9, 2025
Report by TV9 Kannada, Dated: September 9, 2025
Ishwarachandra B G
November 22, 2025
Ishwarachandra B G
November 19, 2025
Ishwarachandra B G
November 18, 2025