Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಹಿಂದೂ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ ಡಿಎಂಕೆ ಆಡಳಿತಕ್ಕೆ ಬುದ್ಧಿ ಕಲಿಸಿದ ಆನೆ, ಕಾವಲುಗಾರನನ್ನು ತಳ್ಳಿದ ಆನೆ
ಈ ಹೇಳಿಕೆ ತಪ್ಪಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಂಡಿ ಉತ್ಸವದಲ್ಲಿ ಮಕ್ಕಳೊಂದಿಗೆ ಆನೆ ಆಟವಾಡುತ್ತಿದ್ದು ಮಧ್ಯೆ ಬಂದು ಮಕ್ಕಳನ್ನು ತಡೆದ ಪೊಲೀಸ್ ಒಬ್ಬರನ್ನು ಆನೆ ತಳ್ಳಿದೆ
ಹಿಂದೂ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ ಡಿಎಂಕೆ ಆಡಳಿತಕ್ಕೆ ಬುದ್ಧಿ ಕಲಿಸಿದ ಆನೆ ಎಂಬರ್ಥದಲ್ಲಿ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ತಮಿಳು ಭಾಷೆಯಲ್ಲಿ ಕಂಡುಬಂದ ಈ ಹೇಳಿಕೆಯಲ್ಲಿ “ತೀರ್ಥವರಿ ಸಮಾರಂಭ ಮಾಡಬಾರದೆಂದು ಹೇಳಿದ ಕಾವಲುಗಾರನನ್ನು ಆನೆ ಓಡಿಸಿತು. ಆದರೆ 2026 ರ ಜನರು ಇಂದು ಇರುವ ದ್ರಾವಿಡ ಕಳಗಂ ಅನ್ನು ಓಡಿಸಬೇಕು, ನಮಗೆ ಪ್ರಾಣಿಯ ಬುದ್ಧಿವಂತಿಕೆ ಇರಬೇಕು ಮತ್ತು ದೇಶವನ್ನು ಉಳಿಸಲು ಎಲ್ಲರೂ ಒಂದಾಗಬೇಕು.” ಎಂದಿದೆ.

ಈ ಹೇಳಿಕೆ ಮೂಲಕ ಹಿಂದೂ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ಡಿಎಂಕೆ ಸರ್ಕಾರವನ್ನು ಆನೆ ವಿರೋಧಿಸುವ ಬುದ್ಧಿ ಹೊಂದಿದ್ದು, ಮತದಾರರೂ ಚುನಾವಣೆಯಲ್ಲಿ ಇದನ್ನು ಪಾಲಿಸಬೇಕು ಎಂಬ ಅರ್ಥದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದುಈ ಹೇಳಿಕೆ ನಿಜವಲ್ಲ, ತಪ್ಪು ಹೇಳಿಕೆಯೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಇತ್ತೀಚಿನ ಘಟನೆಯನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಈ ವೇಳೆ ವೀಡಿಯೋದಲ್ಲಿ ನೆಲದಲ್ಲಿ ನೀರು ತುಂಬಿರುವುದು ಮಕ್ಕಳು ಆನೆಗ ಎದುರು ನಿಂತಿರುವುದು ಮತ್ತು ಖಾಕಿ ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬರನ್ನು ಆನೆ ಸೊಂಡಿಲಿನಿಂದ ಎಳೆದು ಹಾಕಿರುವ ರೀತಿ ಇರುವುದು, ಎದುರುಗಡೆ ಬೋರ್ಡ್ ನಲ್ಲಿ “ಶ್ರೀ ಸಂಪುಟ ನರಸಿಂಹ ದೇವರು ಶ್ರೀ ಸುಬ್ರಹ್ಮಣ್ಯ ಮಠ” ಎಂದಿರುವುದು ಕಂಡುಬಂದಿದೆ. ಈ ಬೋರ್ಡ್ ಪ್ರಕಾರ, ಇದು ಸುಬ್ರಹ್ಮಣ್ಯದ್ದಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಆ ಬಳಿಕ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ಈ ವೇಳೆ ಹಲವು ಮಾಧ್ಯಮ ವರದಿಗಳು ಕಂಡುಬಂದಿವೆ ಡಿಸೆಂಬರ್ 3, 2025ರ ಟಿವಿ 9 ಕನ್ನಡ ವರದಿಯ ಪ್ರಕಾರ, “ಭಕ್ತರೊಂದಿಗೆ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಅಡ್ಡ ಬಂದ ಸಿಬ್ಬಂದಿಯನ್ನು ಹೇ ನಡಿಯೋ ಆಕಡೆ ಎಂದು ಆನೆ ಎತ್ತಿ ಬಿಸಾಡಿರುವ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಹೌದು… ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರಾ ಪ್ರಯುಕ್ತ ನಡೆದ ನೀರು ಬಂಡಿ ಉತ್ಸವದಲ್ಲಿ ಆನೆ ಯಶಸ್ವಿನಿ ಆಟವಾಡುತ್ತಿತ್ತು. ಭಕ್ತರೊಂದಿಗೆ ನೀರಿನಲ್ಲಿ ಚೆಲ್ಲಾಟವಾಡುತ್ತಿತ್ತು. ಈ ವೇಳೆ ದೇವಸ್ಥಾನದ ಸಿಬ್ಬಂದಿ ಅಡ್ಡಬಂದಿದ್ದಾನೆ. ಇದರಿಂದ ಕೆರಳಿದ ಆನೆ, ಸಿಬ್ಬಂದಿಯನ್ನು ಸೊಂಡಿಲಿನಿಂದ ಎತ್ತಿ ಸೈಡಿಗೆ ಬಿಸಾಡಿದೆ. ಇದರಿಂದ ಸ್ಥಳದಲ್ಲಿ ಒಂದು ಕ್ಷಣ ಆತಂಕ ಸೃಷ್ಟಿಸಿತು.” ಎಂದಿದೆ.

ಡಿಸೆಂಬರ್ 3, 2025ರ ವಿಶ್ವವಾಣಿ ನ್ಯೂಸ್ ವರದಿಯ ಪ್ರಕಾರ, “ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ದೇವಸ್ಥಾನದ ಆನೆ ಯಶಸ್ವಿಯು (Yashaswi) ಸಿಬ್ಬಂದಿಯನ್ನು ಸೊಂಡಿಲಿನಿಂದ ನೀರಿಗೆ ಎಸೆದು ಕೆಲ ಹೊತ್ತು ಆತಂಕದ ವಾತಾವಣ ನಿರ್ಮಾಣವಾಯಿತು. ಭಕ್ತರೊಂದಿಗೆ ಬೆರೆಯುತ್ತ, ಆಟವಾಡುತ್ತಿದ್ದ ಯಶಸ್ವಿ ಇದ್ದಕ್ಕಿದ್ದಂತೆ ಅಸಾಮಾಧನಗೊಂದಿದ್ದು ನೋಡಿ ಸುತ್ತ ನೆರೆದವರು ಅಚ್ಚರಿಗೊಂಡರು. ಅದಾದ ಕ್ಷಣದಲ್ಲೇ ಯಶಸ್ವಿ ಶಾಂತಾವಾಗಿದ್ದು, ಯಾವುದೇ ಸಮಸ್ಯೆ ಎದುರಾಗಿಲ್ಲ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರಾ ಪ್ರಯುಕ್ತ ಆಯೋಜಿಸಿದ್ದ ನೀರು ಬಂಡಿ ಉತ್ಸವದ ವೇಳೆ ಈ ಘಟನೆ ನಡೆದಿದೆ. ಸುತ್ತ ನೆರೆದ ಭಕ್ತರೊಂದಿಗೆ ಯಶಸ್ವಿ ನೀರಾಟವಾಡುತ್ತಿತ್ತು. ಭಕ್ತರೊಂದಿಗೆ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಆನೆಗೆ ಸಿಬ್ಬಂದಿ ಅಡ್ಡ ಬಂದಿದ್ದರು. ಇದರಿಂದ ಸಮಾಧಾನಗೊಂಡ ಆನೆ ಸಿಬ್ಬಂದಿಯನ್ನು ಆಚೆ ತಳ್ಳಿ ಮತ್ತೆ ನೀರಾಟದಲ್ಲಿ ತೊಡಗಿಕೊಂಡಿತ್ತು. ಒಮ್ಮೆಗೆ ಆತಂಕ ವಾತಾರಣ ಸೃಷ್ಟಿಸಿದ್ದ ಆನೆ ಸಹಜ ಸ್ಥಿತಿಗೆ ಮರಳಿತು.” ಎಂದಿದೆ.

ನ್ಯೂಸ್ 18 ಕನ್ನಡ ಇನ್ಸ್ಟಾ ಗ್ರಾಂ ಪೇಜ್ ನ ಡಿಸೆಂಬರ್ 3ರ ಪೋಸ್ಟ್ ನಲ್ಲಿ ಇದೇ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಮಾಧ್ಯಮಗಳಲ್ಲಿ ನೀಡಲಾಗಿರುವ ವೀಡಿಯೋಗಳಲ್ಲಿ ಮಕ್ಕಳು ಆನೆಯೊಂದಿಗೆ ನೀರಿನಲ್ಲಿ ಆಟ ಆಡುತ್ತಿರುವುದು ಈ ವೇಳೆ ಸಿಬ್ಬಂದಿಯೊಬ್ಬರು ಬಂದು ಅವರನ್ನು ಹಿಂದೆ ಸರಿಯುವಂತೆ ಹೇಳುವುದು, ಇದೇ ವೇಳೆ ಆ ವ್ಯಕ್ತಿಯನ್ನು ಆನೆ ತಳ್ಳುತ್ತಿರುವುದು ಕಂಡುಬಂದಿದೆ.
ಈ ಘಟನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಾವು ಕುಕ್ಕೆ ಸುಬ್ರಹ್ಮಣ್ಯ ದೇಗುಲ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಅವರನ್ನು ಸಂಪರ್ಕಿಸಿದ್ದು, ಅವರು ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಬಂಡಿ ಉತ್ಸವದ ದಿನ ಘಟನೆ ನಡೆದಿದ್ದು, ಅಡ್ಡ ಬಂದ ಪೊಲೀಸ್ ಒಬ್ಬರನ್ನು ದೇಗುಲದ ಆನೆ ಯಶಸ್ವಿ ತಳ್ಳಿದೆ ಎಂದು ಹೇಳಿದ್ದಾರೆ. ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ ಮತ್ತು ಮಕ್ಕಳೊಂದಿಗೆ ಆಟವಾಡಲು ಬಿಡದ್ದಕ್ಕೆ ಆನೆಯ ಒಂದು ಕ್ಷಣದ ಮುನಿಸು ಆಗಿತ್ತು ಎಂದು ಹೇಳಿದ್ದಾರೆ.
ಇದರೊಂದಿಗೆ ನಾವು ಕುಕ್ಕೆ ಸುಬ್ರಹ್ಮಣ್ಯದ ಸ್ಥಳೀಯ ವರದಿಗಾರ ದಯಾನಂದ ಅವರನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್ ಚೆಕರ್ ಗೆ ಘಟನೆ ಬಗ್ಗೆ ಹೇಳಿದ್ದು, ಮಕ್ಕಳೊಂದಿಗೆ ಆಟವಾಡಿದ್ದಕ್ಕೆ ಅಡ್ಡಬಂದಿದ್ದಕ್ಕೆ ಪೊಲೀಸ್ ಅವರನ್ನು ದೇಗುಲದ ಆನೆ ಸ್ವಲ್ಪ ಸೊಂಡಿಲಿನಿಂದ ಎಳೆದಿದೆ ಎಂದು ಹೇಳಿದ್ದಾರೆ.
ಆದ್ದರಿಂದ ಈ ತನಿಖೆಯ ಪ್ರಕಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಂಡಿ ಉತ್ಸವ ಸಂದರ್ಭದಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿರುವ ವೇಳೆ ಮಧ್ಯೆ ಬಂದರು ಎಂದು ಪೊಲೀಸ್ ಒಬ್ಬರನ್ನು ಆನೆ ಎಳೆದ ಘಟನೆಯಾಗಿದೆ ಎಂದು ತಿಳಿದುಬಂದಿದೆ.
Our Sources
Report by Tv9 Kannada, Dated: December 3, 2025
Report by Vishwavani News, Dated: December 3, 2025
Instagram post by News 18 Kannada, Dated: December 3, 2025
Conversation with Harish Injadi, President, Management Committee Sri Kukke Subrahmanya Temple
Conversation with Dayananda, Reporter, Udayvani, Kukke Subrahmanya
Ishwarachandra B G
December 13, 2025
Ishwarachandra B G
November 25, 2025
Ishwarachandra B G
October 1, 2025