Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಮನೆ ಬಳಿ ಬಸ್ ನಿಲ್ಲಿಸದ್ದಕ್ಕೆ ಮುಸ್ಲಿಂ ಗುಂಪಿನಿಂದ ಬಸ್ ಪುಡಿ
Fact
ಮುಸ್ಲಿಂ ಮಹಿಳೆಯೊಬ್ಬರು ಬಸ್ಸನ್ನು ತಮ್ಮ ಮನೆ ಬಳಿ ನಿಲ್ಲಿಸಲು ಹೇಳಿದರೂ ನಿಲ್ಲಿಸದ ಕಾರಣಕ್ಕೆ ಬಸ್ ಧ್ವಂಸ ಮಾಡಲಾಗಿದೆ ಎನ್ನುವುದು ನಿಜವಲ್ಲ. ಸೂರತ್ ನಲ್ಲಿ ಗುಂಪು ಹತ್ಯೆ ವಿರುದ್ಧ ನಡೆದ ಪ್ರತಿಭಟನೆ ಹಿಂಸಾತ್ಮಕವಾದಾಗ ಗುಂಪೊಂದು ಬಸ್ ಪುಡಿಗಟ್ಟಿದ ದೃಶ್ಯ ಇದಾಗಿದೆ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಚುನಾವಣೆ ಪೂರ್ವದಲ್ಲಿ ನೀಡಿದ್ದ 5 ಗ್ಯಾರೆಂಟಿಗಳ ಜಾರಿಗೆ ಮುಂದಾಗಿತ್ತು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿಯೋಜನೆ ಅದರಲ್ಲೊಂದು. ಶಕ್ತಿ ಯೋಜನೆ ಜಾರಿಗೆ ಬರುತ್ತಲೇ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಪೋಸ್ಟ್ ಗಳು, ಕ್ಲೇಮುಗಳು ಹರಿದಾಡಿದ್ದವು. ಇದೇ ರೀತಿ ಇನ್ನೊಂದು ಕ್ಲೇಮ್ ಗಮನಕ್ಕೆ ಬಂದಿದೆ. ಮಹಿಳೆಯರಿಗೆ ಕರ್ನಾಟಕ ಸರ್ಕಾರವು ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಿದೆ… ಇದರ ಪರಿಣಾಮದಿಂದ ಹೀಗಾಗಿದೆ ಎಂದು ಬಸ್ ಒಂದನ್ನು ಮುಸ್ಲಿಂ ಗುಂಪು ಪುಡಿಗಟ್ಟುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಫೇಸ್ ಬುಕ್ನಲ್ಲಿ ಕಂಡುಬಂದಿರುವ ಈ ಕ್ಲೇಮ್ ನಲ್ಲಿ “ಮಹಿಳೆಯರಿಗೆ ಕರ್ನಾಟಕ ಸರ್ಕಾರ, ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಿದೆ. ಮುಸ್ಲಿಂ ಮಹಿಳೆಯೊಬ್ಬರು ಬಸ್ಸನ್ನು ತಮ್ಮ ಮನೆ ಬಳಿ ನಿಲ್ಲಿಸಲು ಹೇಳಿದರು. ಆದರೆ ಅವರು ನಿಲ್ಲಸಲಿಲ್ಲ. ಇದರ ಪರಿಣಾಮ ಏನಾಯಿತು ಎಂಬುದನ್ನು ನೀವೇ ನೋಡಿ” ಎಂದಿದೆ.
Also Read: ಕೆನಡಾದಲ್ಲಿ ಆರೆಸ್ಸೆಸ್ ನಿಷೇಧ? ವೈರಲ್ ಹೇಳಿಕೆ ಸತ್ಯವೇ?
ಈ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ಸುಳ್ಳು ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದಿದ್ದೇವೆ. ಈ ವೇಳೆ ಇದು ಕರ್ನಾಟಕದ ಬಸ್ ಅಲ್ಲ ಎಂಬುದು ಗೊತ್ತಾಗಿದೆ. ಕಾರಣ ಈ ಬಸ್ ಅನ್ನು ಕೂಲಂಕಷವಾಗಿ ನೋಡಿದಾಗ ಎದುರು ಭಾಗದಲ್ಲಿ ಅಸ್ಪಷ್ಟವಾಗಿ ಗುಜರಾತಿ ಭಾಷೆ ಕಂಡುಬಂದಿದೆ. ಜೊತೆಗೆ ಬಸ್ನ ಎಡಭಾಗದಲ್ಲಿ ಹಿಂಭಾಗ “ಸಿಟಿ ಲಿಂಕ್” ಎಂದು ಇಂಗ್ಲಿಷ್ ನಲ್ಲಿ ಬರೆದಿರುವುದನ್ನು ಗುರುತಿಸಿದ್ದೇವೆ.
ಇದನ್ನು ಸಾಕ್ಷ್ಯವಾಗಿ ಪರಿಗಣಿಸಿ ನಾವು ಗೂಗಲ್ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಸಿಟಿ ಲಿಂಕ್ ಎಂಬ ಬಸ್ ಸರ್ವಿಸ್ ಇರುವುದು ಸೂರತ್ ನಲ್ಲಿ ಎಂದು ತಿಳಿದುಬಂದಿದೆ.
ಆ ಬಳಿಕ ನಾವು ಕೀವರ್ಡ್ ಗಳೊಂದಿಗೆ ಸರ್ಚ್ ನಡೆಸಿದ್ದು, ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ಜುಲೈ 6, 2019ರ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, “ದೇಶದ ವಿವಿಧೆಡೆ ಗುಂಪು ಹತ್ಯೆ ವಿರುದ್ಧ ಸೂರತ್ ನಗರದ ಸಂಘಟನೆಯೊಂದು ಸಂಘಟಿಸಿದ್ದ ಪ್ರತಿಭಟನೆಯಲ್ಲಿ ಗುಂಪು ಕಲ್ಲೆಸತಕ್ಕೆ ಶುರು ಮಾಡಿದ್ದು ಅವರನ್ನು ನಿಯಂತ್ರಿಸಲು ಪೊಲೀಸರು 15 ಟಿಯರ್ ಗ್ಯಾಸ್ ಶೆಲ್ ಗಳನ್ನು ಪ್ರಯೋಗಿಸಿದರು” ಎಂದಿದೆ.
Also Read: ತೆಲಂಗಾಣ ರಾಜ್ಯ ಕಾರ್ಯಾಲಯದಲ್ಲಿ ಮಸೀದಿ ನಿರ್ಮಿಸಲಾಗಿದೆಯೇ?
ಜುಲೈ 5, 2019ರ ನ್ಯೂಸ್ 18 ವರದಿಯಲ್ಲಿ “ಗುಂಪು ಹತ್ಯೆಯ ವಿರುದ್ಧ ಸೂರತ್ ನಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕವಾಗಿದ್ದು, ನಿಯಂತ್ರಣಕ್ಕಾಗಿ ಪೊಲೀಸರು ಶುಕ್ರವಾರ ಗಾಳಿಯಲ್ಲಿ ಗುಂಡುಹಾರಿಸಿದರು ಮತ್ತು ಟಿಯರ್ ಗ್ಯಾಸ್ ಉಪಯೋಗಿಸಿದರು” ಎಂದಿದೆ.
ಈ ಬಗ್ಗೆ ಹೆಚ್ಚಿನ ಶೋಧ ನಡೆಸಲಾಗಿದ್ದು, ಜುಲೈ 5, 2019ರಂದು ಟಿವಿ 9 ಗುಜರಾತಿ ಯೂಟ್ಯೂಬ್ ಚಾನೆಲ್ನಲ್ಲಿ Rally against mob lynching incidents turns violent in Surat, stones pelted on buses ಎಂಬ ಶೀರ್ಷಿಕೆಯಡಿ ಸೂರತ್ ನಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕವಾದ ಬಗ್ಗೆ ವರದಿಯಿದೆ. ಇದರಲ್ಲಿ ವೈರಲ್ ವೀಡಿಯೋದ ದೃಶ್ಯಗಳಲ್ಲಿ ಕಂಡುಬರುವ ರೀತಿಯ ಬಸ್ಗೆ ಕಲ್ಲೆಸೆತವಾದ ಬಗ್ಗೆ ಹೇಳಲಾಗಿದೆ.
ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
Also Read: ಭಾರತಕ್ಕೆ ಪ್ರಯಾಣಿಸುವಾಗ ಎಚ್ಚರಿಕೆ ವಹಿಸುವಂತೆ ಕೆನಡಾ ಹೇಳಿದೆ ಎಂಬ ಎಎನ್ಐ ವರದಿ ನಿಜವೇ?
ಈ ಸಾಕ್ಷ್ಯಾಧಾರಗಳ ಪ್ರಕಾರ, . ಮುಸ್ಲಿಂ ಮಹಿಳೆಯೊಬ್ಬರು ಬಸ್ಸನ್ನು ತಮ್ಮ ಮನೆ ಬಳಿ ನಿಲ್ಲಿಸಲು ಹೇಳಿದರು. ಆದರೆ ಅವರು ನಿಲ್ಲಸಲಿಲ್ಲ. ಇದರ ಪರಿಣಾಮ ಹೀಗಾಯಿತು ಎಂದು ಹೇಳಿರುವುದು ಸುಳ್ಳಾಗಿದೆ. ಈ ವೀಡಿಯೋ ಸೂರತ್ ನಲ್ಲಿ ಗುಂಪು ಹತ್ಯೆ ವಿರುದ್ಧ ನಡೆದ ಪ್ರತಿಭಟನೆ ಹಿಂಸಾತ್ಮಕವಾದಾಗ ತೆಗೆದಿದ್ದಾಗಿದೆ.
Our Sources
Report By Times Of India, Dated: July 6, 2019
Report By News18, Dated: July 5, 2019
YouTube Video By Tv9 Gujarati, Dated: July 5, 2019
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Sabloo Thomas
January 27, 2025
Ishwarachandra B G
November 30, 2024
Prasad S Prabhu
November 29, 2024