Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಬಿಹಾರದ ಕಾಂಗ್ರೆಸ್ ಯಾತ್ರೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕಡೆಗಣಿಸಲಾಗಿದೆ
ಬಿಹಾರದ ಕಾಂಗ್ರೆಸ್ ಯಾತ್ರೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕಡೆಗಣಿಸಲಾಗಿಲ್ಲ. ಯಾತ್ರೆ ಆರಂಭದ ವೀಡಿಯೋ ಕ್ಲಿಪ್ ಗಳನ್ನು ಹಂಚಿಕೊಂಡು ತಪ್ಪು ಹೇಳಿಕೆಗಳನ್ನು ನೀಡಲಾಗುತ್ತಿದೆ
ಬಿಹಾರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಯಾತ್ರೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕಡೆಗಣಿಸಲಾಗಿದೆ ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ, ‘ಯಾರಿಗಾದ್ರೂ ನಮ್ಮ ಡಿಸಿಎಂ ಡಿಕೆ ಶಿವಕುಮಾರ್ ಕಾಣ್ತಾರೇನ್ರೋ? ಕೆಲಸಕ್ಕೆ ಬಾರದವರೆಲ್ಲ ಗಾಡಿ ಮೇಲೆ ನಮ್ಮ ಚಾಣಕ್ಯ ಬಂಡೆ’ ಎಂದಿದೆ.

ಬಿಹಾರದಲ್ಲಿ “ವೋಟರ್ ಅಧಿಕಾರ ಯಾತ್ರಾ” ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಮಾಡಲಾಗಿದೆ. ಇದನ್ನು ಹಲವಾರು ಬಿಜೆಪಿ ಪರ ಖಾತೆಗಳು ವೀಡಿಯೋ ಹಂಚಿಕೊಳ್ಳುವ ಮೂಲಕ ಹೇಳಿವೆ. ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬದಿಗಿಟ್ಟು “ಸಾಮಾನ್ಯ ಕಾರ್ಯಕರ್ತನಂತೆ ನಡೆಯಲು ಒತ್ತಾಯಿಸಲಾಗುತ್ತಿದೆ” ಎಂದು ಕೆಲವು ಪೋಸ್ಟ್ ನಲ್ಲಿದೆ. “ಕಾಂಗ್ರೆಸ್ ಸಂಸ್ಕೃತಿ ಪೂರ್ಣವಾಗಿ ಪ್ರದರ್ಶನಗೊಂಡಿದೆ, ಡಿಕೆ ಶಿವಕುಮಾರ್ ಭದ್ರತಾ ಸಿಬ್ಬಂದಿಯಂತೆ ಜೀಪಿನ ಹೊರಗೆ ನೇತಾಡುವ ಹಂತಕ್ಕೆ ಇಳಿದರು, ಆದರೆ ಒಳಗಿನ ‘ವಿಐಪಿ ಸೀಟುಗಳು’ ಆಯ್ದ ಕೆಲವರಿಗೆ ಮಾತ್ರ ಮೀಸಲಾಗಿವೆ” ಎಂದು ಆಂಧ್ರಪ್ರದೇಶ ಬಿಜೆಪಿ ಘಟಕದ ಉಪಾಧ್ಯಕ್ಷ ಎಸ್ ವಿಷ್ಣುವರ್ಧನ್ ರೆಡ್ಡಿ ಅವರ ಪೋಸ್ಟ್ನಲ್ಲಿ ಹೇಳಲಾಗಿದೆ, ಮತ್ತೊಬ್ಬರು “ರಾಜವಂಶವು ತನ್ನ ಹಿರಿಯ ನಾಯಕರನ್ನು ಹೇಗೆ ನಡೆಸಿಕೊಳ್ಳುತ್ತದೆ” ಎಂದು ವೀಡಿಯೋ ತೋರಿಸುತ್ತದೆ ಎಂದು ಹೇಳಿದ್ದಾರೆ.



ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಆಗಸ್ಟ್ 25, 2025 ರಂದು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರು ಇತ್ತೀಚೆಗೆ ಮತದಾರರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ರಾಲಿಯಲ್ಲಿ ಭಾಗಿಯಾದ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿಯನ್ನು ನಮಗೆ ತೋರಿಸಿದೆ.

ಸುದ್ದಿಯಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ರಾಹುಲ್ ಗಾಂಧಿಯವರೊಂದಿಗೆ ಶಿವಕುಮಾರ್ ಅವರು ಜೀಪಿನಲ್ಲಿ ನಿಂತಿರುವುದನ್ನು ನಾವು ಸ್ಪಷ್ಟವಾಗಿ ನೋಡಬಹುದು, ಇದು ವೈರಲ್ ಆಗಿರುವ ಫೋಟೋವನ್ನು ಆ ಸಂದರ್ಭಕ್ಕೆ ಮೀರಿ ಹಂಚಿಕೊಳ್ಳಲಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. “ಬಿಹಾರದಲ್ಲಿ ನಡೆದ ಯಾತ್ರೆ ದೇಶದಲ್ಲಿ ದೊಡ್ಡ ಬದಲಾವಣೆ ತಂದಿದೆ. ರಾಹುಲ್ ಗಾಂಧಿ ಕರ್ನಾಟಕದಿಂದ ಬಿಹಾರಕ್ಕೆ ಎತ್ತಿರುವ ವಿಷಯ (ಮತ ಕಳ್ಳತನ) ದೇಶದಾದ್ಯಂತ ಚರ್ಚೆಯಾಗಿದೆ. ಅವರು ತನಗಾಗಿ ಹೋರಾಡುತ್ತಿಲ್ಲ… ಸಂವಿಧಾನವು ಖಾತರಿಪಡಿಸಿದಂತೆ ಸಾಮಾನ್ಯ ಮನುಷ್ಯನಿಗಾಗಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ” ಎಂದು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಬಿಹಾರದ ಅರಾರಿಯಾದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಎಂದಿದೆ. ಇದರ ಸುಳಿವು ಪಡೆದು, ಆಗಸ್ಟ್ 24, 2025 ರಂದು ರಾಹುಲ್ ಗಾಂಧಿಯವರ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ನೇರ ಪ್ರಸಾರವಾದ ಅರಾರಿಯಾದಲ್ಲಿ ನಡೆದ ರಾಲಿಯ ವೀಡಿಯೊವನ್ನು ನಾವು ನೋಡಿದ್ದೇವೆ , ಅಲ್ಲಿ ವೈರಲ್ ಆದ ಭಾಗ ಪ್ರಾರಂಭವಾಗುವ ಮೊದಲು ಶಿವಕುಮಾರ್ ಜೀಪಿನತ್ತ ಸಾಗುತ್ತಿದ್ದರು ಎಂದು ಗೊತ್ತಾಗುತ್ತದೆ. ಅದನ್ನು 15:54 ಕ್ಕೆ ನಾವು ನೋಡಬಹುದು.
21:52 ನಿಮಿಷದಲ್ಲಿ, ಬಿಹಾರ ಸಂಸದ ಪಪ್ಪು ಯಾದವ್ ಶಿವಕುಮಾರ್ ಅವರಿಗೆ ಜೀಪ್ ಹತ್ತಲು ಸಹಾಯ ಮಾಡುವುದನ್ನು ನಾವು ಸ್ಪಷ್ಟವಾಗಿ ನೋಡಬಹುದು, ಇದು ವೈರಲ್ ಹೇಳಿಕೆಗೆ ವಿರುದ್ಧವಾಗಿದೆ. ಜೀಪಿನಲ್ಲಿ ಆರ್ಜೆಡಿಯ ತೇಜಸ್ವಿ ಯಾದವ್, ಸಿಪಿಐ (ಎಂಎಲ್) ನಾಯಕ ದೀಪಂಕರ್ ಭಟ್ಟಾಚಾರ್ಯ, ಮಾಜಿ ಸಚಿವ ಮುಖೇಶ್ ಸಹಾನಿ, ಪಪ್ಪು ಯಾದವ್ ಮತ್ತು ರಾಹುಲ್ ಗಾಂಧಿ ಇದ್ದರು ಎಂಬುದನ್ನು ನೋಡಬಹುದು.


ಶಿವಕುಮಾರ್ ಕೂಡ ಆಗಸ್ಟ್ 24, 2025 ರಂದು ವೈರಲ್ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ. ಅವರು ಫೋಟೋಗಳನ್ನು ಹಂಚಿಕೊಂಡಿದ್ದು ಪಾಟ್ನಾದ ಸರ್ಕ್ಯೂಟ್ ಹೌಸ್ಗೆ ರಾಲಿಯನ್ನು ಮುನ್ನಡೆಸಿದ ಜೀಪಿನಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸೇರುವ ಮೊದಲಿನ ವೈರಲ್ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಗೆ ಸಂಬಂಧಿಸಿದ ಹ್ಯಾಂಡಲ್ಗಳು ” ಅಪರಾಧ ಅಭಿಯಾನ ” ನಡೆಸುತ್ತಿವೆ ಎಂದು ಆರೋಪಿಸಿ ಶಿವಕುಮಾರ್ ಅವರು ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ಅದನ್ನು ಇಲ್ಲಿ ಇಲ್ಲಿ ಇಲ್ಲಿ ನೋಡಬಹುದು.
ಬಿಹಾರದಲ್ಲಿ ಮತದಾರರ ಹಕ್ಕುಗಳಿಗಾಗಿ ರಾಹುಲ್ ಗಾಂಧಿ ನಡೆಸಿದ ರಾಲಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕಡೆಗಣಿಸಲಾಗಿದೆ. ಅವರನ್ನು ಉನ್ನತ ನಾಯಕರನ್ನು ಹೊತ್ತೊಯ್ಯುತ್ತಿದ್ದ ಜೀಪಿನ ಹೊರಗೆ ನಿಲ್ಲಿಸಲಾಗಿದೆ ಎನ್ನುವುದನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಕಂಡುಬಂದಿದೆ.
Also Read: ಮೇಘಸ್ಫೋಟದ ಈ ವೀಡಿಯೋ ನಿಜವಾದದ್ದೇ, ಇಲ್ಲ ಇದು ಎಐ ಸೃಷ್ಟಿ!
Our Sources
The New Indian Express report, August 25, 2025
YouTube video, Rahul Gandhi, August 24, 2025
X post, DK Shivakumar, August 24, 2025
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
November 22, 2025
Ishwarachandra B G
November 21, 2025
Ishwarachandra B G
November 19, 2025