Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ದೌರ್ಭಾಗ್ಯದಿಂದ ನಾನು ಸಂಸದನಾದೆ ಎಂದು ರಾಹುಲ್ ಹೇಳಿದ್ದಾರೆ
“ದುರದೃಷ್ಟವಶಾತ್ ಸಂಸತ್ ಸದಸ್ಯ” ಎಂಬ ಮಾತನ್ನು ರಾಹುಲ್ ಗಾಂಧಿ ಅವರು ಮಾಧ್ಯಮಗೋಷ್ಠಿಯಲ್ಲಿ ಬಾಯ್ತಪ್ಪಿನಿಂದ ಹೇಳಿದ್ದು, ಇದು 2023ರ ಘಟನೆಯಾಗಿದೆ
ದೌರ್ಭಾಗ್ಯದಿಂದ ನಾನು ಸಂಸದನಾದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ ಎಂಬಂತೆ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಫೇಸ್ಬುಕ್ ನಲ್ಲಿ ಈ ಕುರಿತು ಪೋಸ್ಟ್ ಕಂಡುಬಂದಿದೆ.

ಈ ವೀಡಿಯೋ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಅದು ಎರಡು ವರ್ಷಗಳ ಹಿಂದಿನ ವೀಡಿಯೋ ಆಗಿದ್ದು, ರಾಹುಲ್ ನಿಜಕ್ಕೂ ಏನನ್ನು ಹೇಳಿದ್ದಾರೆ ಎಂಬುದನ್ನು ಈ ಸತ್ಯಶೋಧನೆಯಲ್ಲಿ ಪತ್ತೆ ಮಾಡಲಾಗಿದೆ.
Also Read: ಮೇಘಸ್ಫೋಟದ ಈ ವೀಡಿಯೋ ನಿಜವಾದದ್ದೇ, ಇಲ್ಲ ಇದು ಎಐ ಸೃಷ್ಟಿ!
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ 2023ರ ಮಾರ್ಚ್ ಹೊತ್ತಿಗೆ ಅದಾನಿ-ಹಿಂಡನ್ ಬರ್ಗ್ ವಿವಾದದ ಬಗ್ಗೆ ಲಂಡನ್ ನಲ್ಲಿ ರಾಹುಲ್ ಗಾಂಧಿಯವರು ಮಾತನಾಡಿದ್ದರ ವಿರುದ್ಧ ಅವರು ಸಂಸತ್ತಿಗೆ ಬಂದ ಬಳಿಕ ಆಡಳಿತಾರೂಢ ಪಕ್ಷದ ಸದಸ್ಯರು ಗದ್ದಲವೆಬ್ಬಿಸಿದ್ದರು. ಈ ವಿಚಾರದಲ್ಲಿ ರಾಹುಲ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಲು ಮುಂದಾಗಿದ್ದು ಅವರು ಈ ವೇಳೆ “ದುರದೃಷ್ಟವಶಾತ್, ನಾನು ಸಂಸತ್ ಸದಸ್ಯ” ಎಂದು ಸರಿಯಾಗಿರದ ವಾಕ್ಯವನ್ನು ಹೇಳಿದ್ದರು ಎಂದು ಗೊತ್ತಾಗಿದೆ. ಈ ಸಂದರ್ಭದ ಮಾಧ್ಯಮ ವರದಿಗಳು ಲಭ್ಯವಾಗಿದ್ದು ಅದರಲ್ಲಿ ರಾಹುಲ್ ಗಾಂಧಿ ಅವರು ಮಾಧ್ಯಮಗೋಷ್ಠಿಯಲ್ಲಿ ಬಾಯ್ತಪ್ಪಿದ್ದು ಮತ್ತು ಆ ಬಳಿಕ ಜೈರಾಂ ರಮೇಶ್ ಅವರ ಸೂಚನೆ ಮೇರೆಗೆ ವಾಕ್ಯ ಸರಿಪಡಿಸಿದ್ದಾರೆ ಎಂಬ ವಿಚಾರ ಗೊತ್ತಾಗಿದೆ.
ಮಾರ್ಚ್ 17, 2023ರ ಎನ್ಡಿಟಿವಿ ವರದಿಯಲ್ಲಿ, “ಗುರುವಾರ ಬಿಜೆಪಿ, ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದು, ವಿವಿಧ ಕೇಂದ್ರ ಸಚಿವರು ಕಾಂಗ್ರೆಸ್ ನಾಯಕರ ಪತ್ರಿಕಾಗೋಷ್ಠಿಯ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ, ಅದರಲ್ಲಿ ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಅವರನ್ನು ಸರಿಪಡಿಸುತ್ತಿರುವುದು ಕಂಡುಬಂದಿದೆ. 25 ಸೆಕೆಂಡುಗಳ ಈ ವೀಡಿಯೋದಲ್ಲಿ, ರಾಹುಲ್ ಗಾಂಧಿ ವರದಿಗಾರರಿಗೆ “ದುರದೃಷ್ಟವಶಾತ್, ನಾನು ಸಂಸತ್ ಸದಸ್ಯ” ಎಂದು ಹೇಳುವುದನ್ನು ತೋರಿಸಲಾಗಿದೆ, ಅನಂತರ ಜೈ ರಾಂರಮೇಶ್ ಅವರು ಕಾಂಗ್ರೆಸ್ ನಾಯಕನ ಬಳಿ ಬಾಗಿ ಅವರ ಹೇಳಿಕೆಉದ್ದೇಶಿಸಿ “ದುರದೃಷ್ಟವಶಾತ್, ನಾನು ಸಂಸತ್ ಸದಸ್ಯ – ಎಂದರೆ ಅವರು ತಮಾಷೆ ಮಾಡಬಹುದು” ಎಂದು ಹೇಳುತ್ತಾರೆ. ಅನಂತರ ರಾಹುಲ್ ಗಾಂಧಿ ವಾಕ್ಯವನ್ನು ಸರಿಪಡಿಸಿಕೊಳ್ಳುತ್ತಾರೆ: “ನೋಡಿ, ನಾನು ಸ್ಪಷ್ಟಪಡಿಸಲು ಬಯಸುತ್ತೇನೆ, ದುರದೃಷ್ಟವಶಾತ್ ನಿಮ್ಮ ವಿಷಯದಲ್ಲಿ, ನಾನು ಸಂಸತ್ತಿನ ಸದಸ್ಯ.” ಎನ್ನುತ್ತಾರೆ” ಎಂದು ವರದಿಯಲ್ಲಿದೆ.

ಮಾರ್ಚ್ 17, 2023ರ ಇಕನಾಮಿಕ್ ಟೈಮ್ಸ್ ವರದಿಯಲ್ಲಿ, ಲಂಡನ್ ಹೇಳಿಕೆ ಕುರಿತಂತೆ ರಾಹುಲ್ ಗಾಂಧಿಯವರು “ದುರದೃಷ್ಟವಶಾತ್ ಸಂಸತ್ ಸದಸ್ಯ” ವಾಗಿರುವುದರಿಂದ ಸ್ಪೀಕರ್ ಅವರಿಂದ ಕೇಳಲಾದ ಸಮಯದಲ್ಲಿ ಮಾತ್ರವೇ ಪ್ರತಿಕ್ರಿಯಿಸಬೇಕಾಗುತ್ತದೆ ಎಂದು ಹೇಳಿದ್ದಾಗಿ ಇದೆ. ಅದಾನಿ ಪ್ರಕರಣ- ಸಂಸತ್ ಗೊಂದಲ ವಿಚಾರದಲ್ಲಿ ಮಾಧ್ಯಮ ಗೋಷ್ಠಿಯ ಮಾತಿನ ಮಧ್ಯೆ ರಾಹುಲ್ ಗಾಂಧಿ ಅವರು ಬಾಯ್ತಪ್ಪಿದ್ದರಿಂದ ಅವರ ಸನಿಹದಲ್ಲಿ ಕುಳಿತಿದ್ದ ಎಐಸಿಸಿ ಸಂವಹನ ಉಸ್ತುವಾರಿಯಾಗಿರುವ ಜೈ ರಾಂ ರಮೇಶ್ ಅವರು “ನೀವು ‘ದುರದೃಷ್ಟವಶಾತ್ ನಾನು ಸಂಸತ್ತಿನ ಸದಸ್ಯ’ ಎಂದು ಹೇಳಿದ್ದೀರಿ. ಹೀಗೆಂದರೆ ಅವರು ತಮಾಷೆ ಮಾಡುವ ಸಾಧ್ಯತೆ ಇದ್ದು ಈಗ ನೀವು ‘ದುರದೃಷ್ಟವಶಾತ್ ನಿಮಗೆ (ಮಾಧ್ಯಮಕ್ಕೆ), ನಾನು ಸಂಸತ್ತಿನ ಸದಸ್ಯ’ ಎಂದು ಹೇಳಿ” ಎಂದು ಸರಿಪಡಿಸಿದರು ಎಂದಿದೆ.

ರಾಹುಲ್ ಗಾಂಧಿ ಅವರ “ದುರದೃಷ್ಟವಶಾತ್ ಸಂಸತ್ ಸದಸ್ಯ” ಹೇಳಿಕೆಯ ಬಗ್ಗೆ ಎನ್ಡಿಟಿವಿ ಯೂಟ್ಯೂಬ್ ಚಾನೆಲ್ ನಲ್ಲೂ ಮಾರ್ಷ್ 17, 2023ರಂದು ವೀಡಿಯೋ ಅಪ್ ಲೋಡ್ ಮಾಡಲಾಗಿದ್ದು, ಇದರ ಬಗ್ಗೆ ಬಿಜೆಪಿ ನಾಯಕರು ಟೀಕಿಸಿದ್ದಾರೆ ಎಂದಿದೆ. ಈ ವೀಡಿಯೋದಲ್ಲಿ ರಾಹುಲ್ ಬಾಯ್ತಪ್ಪಿ ಹೇಳುವುದು, ಜೈ ರಾಂ ರಮೇಶ್ ಅವರು ಅದನ್ನು ಸರಿಪಡಿಸುವುದು ಕಾಣಿಸುತ್ತದೆ.
ಟೈಮ್ಸ್ ಆಫ್ ಇಂಡಿಯಾ ಕೂಡ ಮಾರ್ಚ್ 17, 2023ರಂದು ರಾಹುಲ್ ಗಾಂಧಿ ಅವರ ಮಾಧ್ಯಮಗೋಷ್ಠಿಯ ವೀಡಿಯೋ ಹಾಕಿದೆ. ರಾಹುಲ್ ಅವರ “ದುರದೃಷ್ಟವಶಾತ್ ಸಂಸತ್ ಸದಸ್ಯ” ಹೇಳಿಕೆ ಮತ್ತು ಕೂಡಲೇ ಜೈರಾಂ ರಮೇಶ್ ಅವರು ಅದನ್ನು ಸರಿಪಡಿಸಿದ್ದು ಮತ್ತು ಆ ಬಳಿಕ ಬಿಜೆಪಿ ನಾಯಕರು ಈ ಬಗ್ಗೆ ಟೀಕೆ ಮಾಡಿದ ವಿಚಾರ ಹೇಳಲಾಗಿದೆ.
ಈ ವಿಚಾರದಲ್ಲಿ ಜೈರಾಂ ರಮೇಶ್ ಅವರು ನೀಡಿದ ಸ್ಪಷ್ಟನೆಯನ್ನೂ ನಾವು ಗಮನಿಸಿದ್ದೇವೆ. ಮಾರ್ಚ್ 16, 2023ರಂದು ಅವರು ಈ ಕುರಿತು ಟ್ವೀಟ್ ಮಾಡಿದ್ದು, ರಾಹುಲ್ ಗಾಂಧಿ ಅವರ ತಪ್ಪಾದ ವಾಕ್ಯವನ್ನು ಕೂಡಲೇ ಸರಿಪಡಿಸಿಕೊಂಡರೂ ಅದಾನಿ ಪ್ರಕರಣದಲ್ಲಿ ಗಮನ ಬೇರೆಡೆ ಸೆಳೆಯಲು ಅವರ ಮಾತುಗಳನ್ನು ಅಪಪ್ರಚಾರ ಮಾಡಲಾಗುತ್ತಿದೆ ಎಂದಿದ್ದಾರೆ.
ಆದ್ದರಿಂದ ಈ ಸತ್ಯ ಶೋಧನೆಯಲ್ಲಿ ಕಂಡುಬಂದ ಪ್ರಕಾರ, ದೌರ್ಭಾಗ್ಯದಿಂದ ನಾನು ಸಂಸದನಾದೆ ಎಂದು ರಾಹುಲ್ ಅವರು ಹೇಳಿದ್ದಲ್ಲ, ಬದಲಾಗಿ “ದುರದೃಷ್ಟವಶಾತ್ ಸಂಸತ್ ಸದಸ್ಯ” ಎಂದು ಬಾಯ್ಮಾತಿನಲ್ಲಿ ತಪ್ಪಿದ್ದು, ಈ ಹೇಳಿಕೆ ಎರಡು ವರ್ಷಗಳ ಹಿಂದಿನದ್ದು ಎಂದು ಗೊತ್ತಾಗಿದೆ.
Also Read: ಜನ್ಮಾಷ್ಟಮಿ ಪ್ರಯುಕ್ತ ಉತ್ತರ ಪ್ರದೇಶ ಸರ್ಕಾರ ವಾನರ ಭೋಜನ ಏರ್ಪಡಿಸಿದೆಯೇ?
Our Sources
Report by NDTV, Dated: March 17, 2023
Report by Economic Times, Dated: March 17, 2023
YouTube Video by NDTV, Dated: March 17, 2023
YouTube Video by Times of India, Dated: March 17, 2023
Tweet by Jairam Ramesh, Dated: March 16, 2023
Ishwarachandra B G
November 22, 2025
Ishwarachandra B G
November 21, 2025
Ishwarachandra B G
November 18, 2025