Fact Check: ಡಿಎಂಕೆ ಸಂಸದೆ ಕನಿಮೋಳಿ ಅಯೋಧ್ಯೆ ರಾಮ ಮಂದಿರಕ್ಕೆ 613 ಕೆಜಿಯ ಗಂಟೆ ದಾನ ಮಾಡಿದ್ದಾರಾ?

ಕನಿಮೋಳಿ, ಅಯೋಧ್ಯೆ, ಗಂಟೆ ದಾನ,

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim:
ಡಿಎಂಕೆ ಸಂಸದೆ ಕನಿಮೋಳಿ ಅಯೋಧ್ಯೆ ರಾಮ ಮಂದಿರಕ್ಕೆ 613 ಕೆಜಿಯ ಗಂಟೆ ದಾನ ಮಾಡಿದ್ದಾರೆ

Fact:
ರಾಮ ಮಂದಿರಕ್ಕೆ ಗಂಟೆ ದಾನ ಮಾಡಿದವರು ಸಂಸದೆ ಕನಿಮೋಳಿ ಅವರಲ್ಲ, ತಮಿಳುನಾಡಿನ ಎಸ್‌ ಪಿ ಇ ಗ್ರೂಪ್ ನ ಪಿ.ಕೆ.ಕನಿಮೋಳಿ ಎಂಬವರಾಗಿದ್ದಾರೆ

ತೂತುಕುಡಿ ಲೋಕಸಭಾ ಸದಸ್ಯೆ ಮತ್ತು ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಕನಿಮೋಳಿ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ 613 ಕೆಜಿ ತೂಕದ ಗಂಟೆಯನ್ನು ದಾನ ಮಾಡಿದ್ದಾರೆ ಎಂಬ ಹೇಳಿಕೆ ಜಾಲತಾಣಗಳಲ್ಲಿ ಹರಿದಾಡಿದೆ.

Fact Check: ಡಿಎಂಕೆ ಸಂಸದೆ ಕನಿಮೋಳಿ ಅಯೋಧ್ಯೆ ರಾಮ ಮಂದಿರಕ್ಕೆ 613 ಕೆಜಿಯ ಗಂಟೆ ದಾನ ಮಾಡಿದ್ದಾರಾ?

ಈ ಸುದ್ದಿಯ ಆರ್ಕೈವ್ ಆವೃತ್ತಿ ಇಲ್ಲಿದೆ.

Also Read: ಬಾಂಬ್‌ ಸ್ಫೋಟದ ದಾಳಿಯಲ್ಲಿ ಉಗ್ರ ಮಸೂದ್ ಅಜರ್ ಸಾವು ಎಂಬ ವೈರಲ್ ವೀಡಿಯೋ ಹಿಂದಿನ ಸತ್ಯ ಏನು?

ಝೀ ಕನ್ನಡ ನ್ಯೂಸ್‌ ನಲ್ಲಿ ಪ್ರಕಟವಾದ ಈ ಮಾಹಿತಿಯ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ನ್ಯೂಸ್ ಸೆಕರ್ ಈ ಮಾಹಿತಿಯನ್ನು ಪರಿಶೀಲಿಸಲು ನಿರ್ಧರಿಸಿದೆ.

Fact Check/ Verification

ಕನಿಮೋಳಿ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ 613 ಕೆಜಿ ತೂಕದ ಗಂಟೆಯನ್ನು ದಾನ ಮಾಡಿದ್ದಾರೆ ಎಂಬ ಮಾಧ್ಯಮ ವರದಿಯ ನಂತರ ನಾವು ಗೂಗಲ್‌ ಸರ್ಚ್ ನಡೆಸಿದ್ದೇವೆ.

ಅಕ್ಟೋಬರ್ 07, 2020 ರಂದು ಎಎನ್ಐ ನ್ಯೂಸ್   “’Jai Sri Ram’ embossed bell weighing 613 kgs brought to Ram Temple in Ayodhya” ಎಂಬ ಸುದ್ದಿಯನ್ನು ಪ್ರಕಟಿಸಿರುವುದನ್ನು ಗಮನಿಸಿದ್ದೇವೆ. ವರದಿಯ ಪ್ರಕಾರ, ಚೆನ್ನೈ ಮೂಲದ ಲೀಗಲ್ ರೈಟ್ಸ್ ಕೌನ್ಸಿಲ್ ಎಂಬ ಸಂಸ್ಥೆಯು ‘ರಾಮ ರಥ ಯಾತ್ರೆ’ ಹೆಸರಿನಲ್ಲಿ ರಾಮೇಶ್ವರಂನಿಂದ ಅಯೋಧ್ಯೆಗೆ ಮೆರವಣಿಗೆಯಲ್ಲಿ 613 ಕೆಜಿ ತೂಕದ ಗಂಟೆಯನ್ನು ತೆಗೆದುಕೊಂಡು ಹೋಗಿತ್ತು ಎಂದು ಇದರಲ್ಲಿ ಹೇಳಲಾಗಿದೆ.

ಎಎನ್‌ಐ ವರದಿ

ಈ ಯಾತ್ರೆ ಸೆಪ್ಟೆಂಬರ್ 17 ರಂದು ಪ್ರಾರಂಭವಾಗಿ ಅಕ್ಟೋಬರ್ 2 ರಂದು ಕೊನೆಗೊಂಡಿತು. ಇದರಲ್ಲಿ ಕಾನೂನು ಹಕ್ಕುಗಳ ಮಂಡಳಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜಲಕ್ಷ್ಮಿ ಮಂಥಾ ಅವರೊಂದಿಗಿನ ಸಂದರ್ಶನವೂ ಸೇರಿದೆ.

 29 ಡಿಸೆಂಬರ್ 2023 ರಂದು ಇಂಡಿಯಾ ಟುಡೇಯ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಕಟವಾದ ವೀಡಿಯೋ ವರದಿಯನ್ನೂ ನಾವು ಕಂಡುಕೊಂಡಿದ್ದೇವೆ. ಈ ವೀಡಿಯೋದಲ್ಲಿ ಗಂಟೆಯ ಮೇಲೆ ಬರೆದಿರುವ ಹೆಸರುಗಳನ್ನು ಸ್ಪಷ್ಟವಾಗಿ ನೋಡಬಹುದು. ಇದರಲ್ಲಿ ಎಸ್‌ಪಿಇ ಗ್ರೂಪ್‌, ಪಿ.ಕೆ. ಕನಿಮೋಳಿ, ಪಿ.ಲೋಕೇಶ್, ಕುಮಾರನ್‌, ವಂಗಮ್ ಅಮರನಾಥ್, ವೆಂಕಟೇಶ್ ನಾಗಮಣಿ ಎಂಬ ಹೆಸರುಗಳು ಇವೆ.  

Also Read: ಮೋದಿ 26 ವರ್ಷದವರಿದ್ದಾಗ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ ಮಾಡಿದ್ದಾರೆಯೇ?

ಇಂಡಿಯಾ ಟುಡೇ ವರದಿ

ಇದರ ನಂತರ, ನಾವು ನಮ್ಮ ತನಿಖೆಯನ್ನು ಮುಂದುವರಿಸಿದ್ದೇವೆ ಮತ್ತು ಎಸ್ ಪಿಇ ಗ್ರೂಪ್ಬಗ್ಗೆ ಹುಡುಕಿದ್ದೇವೆ. ಈ ಗುಂಪಿಗೆ ಸಂಬಂಧಿಸಿದ ಎಸ್ ಪಿಇ ಗೋಲ್ಡ್ ಎಂಬ ಕಂಪನಿಯ ವೆಬ್ ಸೈಟ್ ಅನ್ನು ಕಂಡುಕೊಂಡಿದ್ದೇವೆ. ವೆಬ್ಸೈಟ್ನಲ್ಲಿ ನೀಡಲಾದ ಕಂಪನಿಯ ನಿರ್ದೇಶಕರ ಹೆಸರುಗಳಲ್ಲಿ, ಪಿ ಲೋಕೇಶ್ ಅವರ ಹೆಸರು ಕೂಡ ಇದೆ.  

ನಮ್ಮ ತನಿಖೆಯನ್ನು ಬಲಪಡಿಸಲು ನಾವು ಎಸ್ ಪಿಇ ಗ್ರೂಪ್ ಅನ್ನು ಸಂಪರ್ಕಿಸಿದಾಗ, ಅದರ ನಿರ್ದೇಶಕ ಪಿ ಲೋಕೇಶ್ ಅವರು “ಅವರ ಕುಟುಂಬ ಮತ್ತು ಕಂಪನಿಯ ಪರವಾಗಿ ಈ ಗಂಟೆಯನ್ನು ಸಮರ್ಪಿಸಲಾಗಿದೆ. ನಾನು ಡಿಎಂಕೆ ಸಂಸದೆ ಕನಿಮೋಳಿ ಅವರೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಾವು ಸಂಸದೆ ಕನಿಮೋಳಿ ಅವರ ಕಚೇರಿಯನ್ನೂ ಸಂಪರ್ಕಿಸಿ, ವೈರಲ್‌ ಆಗುತ್ತಿರುವ ಸುದ್ದಿಯ ಬಗ್ಗೆ ವಿವರಣೆ ಕೇಳಿದ್ದೇವೆ. ಈ ವೇಳೆ “ಈ ಸುದ್ದಿ ಸಂಪೂರ್ಣವಾಗಿ ಸುಳ್ಳು” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Conclusion

ಕನಿಮೋಳಿ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ 613 ಕೆಜಿ ತೂಕದ ಗಂಟೆ ಅರ್ಪಿಸಿದ್ದಾರೆ ಎಂಬ ಮಾಧ್ಯಮ ವರದಿ ಸುಳ್ಳಾಗಿದೆ.  ಸಂಪೂರ್ಣವಾಗಿ ಸುಳ್ಳು. ವಾಸ್ತವವಾಗಿ, ಚೆನ್ನೈ ಮೂಲದ ಸಂಸ್ಥೆಯಾದ ಲೀಗಲ್ ರೈಟ್ಸ್ ಕೌನ್ಸಿಲ್ ಈ ಗಂಟೆಯನ್ನು ಸಮರ್ಪಿಸಿದೆ.

Also Read: ರಾಜ್ಯ ಸರ್ಕಾರ ಡ್ರೈವಿಂಗ್‌ ಲೈಸೆನ್ಸ್ ದರಗಳನ್ನು ಏರಿಸುತ್ತಿದೆಯೇ?

Result: False

Our Sources

YouTube Video By ANI, Dated: October 7, 2020

YouTube Video By India Today, Dated: December 29, 2023

Telephonic Conversation with SPE Group Director P Lokesh

Telephonic conversation with Office of DMK M.P. Kanimozhi Karunanidhi

(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್‌ ಹಿಂದಿ ಮತ್ತು ತಮಿಳಿನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿ ಮತ್ತು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.