Fact Check: ತಲೆದಿಂಬು ಇಲ್ಲದೆ ಮಲಗುವುದರಿಂದ ಬೆನ್ನು ನೋವು ಕಡಿಮೆಯಾಗಿ ಮೂಳೆ ಬಲವಾಗುತ್ತದೆಯೇ, ಕ್ಲೇಮ್‌ ಹಿಂದಿನ ಸತ್ಯ ಏನು?

ತಲೆದಿಂಬು, ಬೆನ್ನುನೋವು, ನಿದ್ರೆ,

Claim

ತಲೆ ದಿಂಬು ಇಲ್ಲದೆ ಮಲಗುವುದರಿಂದ ಪ್ರಯೋಜನಗಳಿವೆ ಎಂಬ ಕುರಿತ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ತಲೆದಿಂಬು ಇಲ್ಲದೆ ಮಲಗುವ ಅಭ್ಯಾಸ ಹೆಚ್ಚಿನವರಿಗೆ ಇಲ್ಲ. ಮಲಗಬೇಕಾದರೆ ತಲೆಗೆ ತಲೆದಿಂಬು ಬೇಕು. ಆದರೆ ಇದನ್ನು ಬಳಸದೇ ಇರುವುದರಿಂದ ಆರೋಗ್ಯ ಪ್ರಯೋಜನ ಇದೆ ಎಂದು ಕ್ಲೇಮಿನಲ್ಲಿ ಹೇಳಲಾಗಿದೆ. ಇದರ ಪ್ರಕಾರ “ತಲೆದಿಂಬು ಇಲ್ಲದೆ ಮಲಗುವುದರಿಂದ ಬೆನ್ನು ನೋವು ಕಡಿಮೆಯಾಗುತ್ತದೆ ಮತ್ತು ಬೆನ್ನೆಲುಬು ಬಲವಾಗಿರುತ್ತದೆ” ಎಂದಿದೆ.


Also Read: ಹಸಿ ಈರುಳ್ಳಿ ತಿಂದರೆ ಸಕ್ಕರೆ ಕಾಯಿಲೆ ಎಷ್ಟೇ ಇದ್ದರೂ ನಿಯಂತ್ರಣವಾಗುತ್ತದೆಯೇ, ಕ್ಲೇಮ್‌ ಹಿಂದಿನ ನಿಜಾಂಶ ಏನು?

ತಲೆದಿಂಬು ಇಲ್ಲದೆ ಮಲಗುವುದರಿಂದ ಬೆನ್ನು ನೋವು ಕಡಿಮೆಯಾಗಿ ಮೂಳೆ ಬಲವಾಗುತ್ತದೆಯೇ, ಕ್ಲೇಮ್‌ ಹಿಂದಿನ ಸತ್ಯ ಏನು?
ಫೇಸ್‌ಬುಕ್ ನಲ್ಲಿ ಕಂಡುಬಂದ ಕ್ಲೇಮ್‌

ಸತ್ಯಶೋಧನೆಗಾಗಿ ಕ್ಲೇಮ್‌ ಪರಿಶೀಲಿಸಿದಾಗ ಇದು ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ.

Fact

ಸತ್ಯಶೋಧನೆಯನ್ನು ನಡೆಸಿದ ವೇಳೆ ತಿಳಿದುಬಂದ ಅಂಶವೇನೆಂದರೆ, ಒಬ್ಬ ವ್ಯಕ್ತಿ ನಿದ್ದೆ ಮಾಡುವಾಗ ಅಸಮರ್ಪಕವಾದ ಭಂಗಿಯಲ್ಲಿ ನಿದ್ರಿಸಿದರೆ, ಅದು ಅವರ ನಿದ್ದೆಯ ಗುಣಮಟ್ಟದ ಮೇಲೆ ಋಣಾತ್ಮಕವಾದ ಪರಿಣಾಮವನ್ನು ಬೀರುತ್ತದೆ ಮತ್ತು ದಿನವೀಡಿ ನೋವು ಉಂಟಾಗಲು ಕಾರಣವಾಗಬಹುದು. ಜೊತೆಗೆ ಎಚ್ಚರವಾದ ನಂತರ ಆ ವ್ಯಕ್ತಿ ಕುತ್ತಿಗೆ ಮತ್ತು ಬೆನ್ನು ನೋವನ್ನುಕೂಡ ಅನುಭವಿಸಬಹುದು. ದಿಂಬು ಇಲ್ಲದೆ ಮಲಗುವ ಭಂಗಿಯ ಪರಿಣಾಮಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು ಎಂಬುದನ್ನು ನೆನಪಿನಲ್ಲಿಡುವುದು ಅತ್ಯಗತ್ಯ.

Also Read: ಚಿಕ್ಕಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆಯೇ?

ಬೆನ್ನುಮೂಳೆಯನ್ನು ತಟಸ್ಥ ಸ್ಥಿತಿಯಲ್ಲಿ ಇರಿಸುವ ಮೂಲಕ ದೇಹದ ಉಳಿದ ಭಾಗಗಳನ್ನು ಜೋಡಿಸುವ ಕುತ್ತಿಗೆಗೆ ಉತ್ತಮ ಭಂಗಿಯನ್ನು ಒದಗಿಸುವುದಕ್ಕಾಗಿ ದಿಂಬುಗಳನ್ನು ಬಳಸಲಾಗುfತದೆ. ದಿಂಬು ಇಲ್ಲದೆ ಮಲಗುವುದರಿಂದ ನಿರ್ದಿಷ್ಟವಾಗಿ ಬೆನ್ನುಮೂಳೆಯ ಜೋಡಣೆ ಮೇಲೆ ಹೇಗೆ ಪರಿಣಾ ಬೀರುತ್ತದೆ ಎಂಬುದರ ಬಗ್ಗೆ ಸಂಶೋಧನೆಗಳ ಕೊರತೆ ಇದೆ. ಆದಾಗ್ಯೂ,ಹೊಟ್ಟೆಯ ಮೇಲೆ ಮಲಗುವವರಿಗೆ, ಈ ಮಲಗುವ ಭಂಗಿಯು ಬೆನ್ನುಮೂಳೆಯನ್ನು ಅಸ್ವಾಭಾವಿಕ ಸ್ಥಾನದಲ್ಲಿ ಇರಿಸಬಹುದು ಮತ್ತು ಬೆನ್ನು ಮತ್ತು ಕತ್ತಿನ ಮೇಲೆ ಒತ್ತಡವನ್ನು ಉಂಟುಮಾಡಬಹುದು ಎಂಬ ಕಾರಣದಿಂದ ದಿಂಬನ್ನು ತ್ಯಜಿಸುವುದು ಪ್ರಯೋಜನಕಾರಿ. ಈ ಮಾದರಿಯಲ್ಲಿ ದಿಂಬು ಇಲ್ಲದೆ ಮಲಗುವುದು ತಲೆಯನ್ನು ಸಮತಟ್ಟಾಗಿ ಇರಿಸಲು ಸಹಾಯ ಮಾಡುತ್ತದೆ, ಕುತ್ತಿಗೆಯ ಮೇಲಿನ ಕೆಲವು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ಜೋಡಣೆಯನ್ನು ಉತ್ತೇಜಿಸುತ್ತದೆ. ಆದಾಗ್ಯೂ, ಬೆನ್ನಿನ ಅಥವಾ ಬದಿಯಲ್ಲಿ ಮಲಗುವ ವ್ಯಕ್ತಿಗಳಿಗೆ, ಬೆನ್ನುಮೂಳೆಯನ್ನು ತಟಸ್ಥವಾಗಿರಿಸಲು ಮತ್ತು ಭಂಗಿಗೆ ಯಾವುದೇ ಹಾನಿಯಾಗದಂತೆ ತಡೆಯಲು ದಿಂಬನ್ನು ಬಳಸುವುದು ಉತ್ತಮ.

ತಟಸ್ಥ ಸ್ಥಿತಿಯಲ್ಲಿ ತಲೆಯೊಂದಿಗೆ ಮಲಗಲು ಸೂಚಿಸಲಾಗಿದೆ, ಎಂದರೆ ಅದು ತುಂಬಾ ಹಿಂದೆ ಅಥವಾ ತುಂಬಾ ಮುಂದಕ್ಕೆ ಹೋಗದೆ ಭುಜಗಳ ಮೇಲೆ ಚೌಕಾಕಾರದ ರೀತಿಯಲ್ಲಿ ವಿಶ್ರಾಂತಿ ಪಡೆಯಬೇಕು.

Also Read: ಡಾರ್ಕ್ ಚಾಕಲೆಟ್ ತಿಂದರೆ ಗರ್ಭಧಾರಣೆಗೆ ಸಹಾಯವಾಗುತ್ತಾ?

ದಿಂಬಿನ ಆಕಾರ, ವಸ್ತು, ಗರ್ಭ ಕಂಠ, ತಾಪಮಾನ ಮತ್ತು ಒಟ್ಟಾರೆ ಮಲಗುವ ಸೌಕರ್ಯದ ಮೇಲೆ ಪರಿಣಾಮ ಬೀರುವ ಅಂಶಗಳೆಂದು ಸಂಶೋಧನಾ ಅಧ್ಯಯನಗಳು ಸೂಚಿಸಿವೆ. ಆರ್ಥೋಪೆಡಿಕ್‌ ದಿಂಬು ಅತ್ಯುತ್ತಮ ನಿದ್ರೆಯ ಗುಣಮಟ್ಟವನ್ನು ಸಾಧಿಸಲು ಬಯಸುವ ವ್ಯಕ್ತಿಗಳಿಗೆ ಅತ್ಯಂತ ಸೂಕ್ತವಾದ ಆಯ್ಕೆಯಾಗಿದೆ.
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ತಲೆದಿಂಬು ಇಲ್ಲದೆ ಮಲಗುವುದರಿಂದ ಬೆನ್ನು ನೋವು ಕಡಿಮೆಯಾಗುತ್ತದೆ ಮತ್ತು ಬೆನ್ನೆಲುಬು ಬಲವಾಗಿರುತ್ತದೆ ಎನ್ನುವುದು ತಪ್ಪಾದ ಸಂದರ್ಭವಾಗಿದೆ.

Result: Missing Context

Our Sources
Good Sleeping Posture Helps Your Back – Health Encyclopedia – University of Rochester Medical Center

Effects of mattress support on sleeping position and low-back pain | Sleep Science and Practice | Full Text (biomedcentral.com)

Pillow use: the behaviour of cervical pain, sleep quality and pillow comfort in side sleepers – PubMed (nih.gov)

Improving the quality of sleep with an optimal pillow: a randomized, comparative study – PubMed (nih.gov)

The effects of pillow designs on neck pain, waking symptoms, neck disability, sleep quality and spinal alignment in adults: A systematic review and meta-analysis – PubMed (nih.gov)

Memory Foam Pillow as an Intervention in Obstructive Sleep Apnea Syndrome: A Preliminary Randomized Study – PubMed (nih.gov)

(This article has been published in collaboration with THIP Media)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.