Fact Check: ಬಿಜೆಪಿ ಮುಖಂಡನ ಕಾರಿನಲ್ಲಿ ಮತಯಂತ್ರ ಸಿಕ್ಕಿದ್ದಕ್ಕೆ ಸ್ಥಳೀಯರು ಗಲಾಟೆ ಮಾಡಿದ್ದಾರೆಯೇ, ಬಸವನ ಬಾಗೇವಾಡಿಯಲ್ಲಿ ನಡೆದಿದ್ದೇನು?

ಬಿಜೆಪಿ ಮುಖಂಡನ ಕಾರಿನಲ್ಲಿ ಮತಯಂತ್ರ ಸಿಕ್ಕಿದ್ದಕ್ಕೆ ಸ್ಥಳೀಯರು ಗಲಾಟೆ ಮಾಡಿದ್ದಾರೆಯೇ, ಬಸವನ ಬಾಗೇವಾಡಿಯಲ್ಲಿ ನಡೆದಿದ್ದೇನು?

Authors

An enthusiastic journalist, researcher and fact-checker, Shubham believes in maintaining the sanctity of facts and wants to create awareness about misinformation and its perils. Shubham has studied Mathematics at the Banaras Hindu University and holds a diploma in Hindi Journalism from the Indian Institute of Mass Communication. He has worked in The Print, UNI and Inshorts before joining Newschecker.

Pankaj Menon

Claim
ಬಿಜೆಪಿ ಮುಖಂಡನ ಕಾರಿನಲ್ಲಿ ಮತಯಂತ್ರ ಸಿಕ್ಕಿದ್ದಕ್ಕೆ ಸ್ಥಳೀಯರು ಗಲಾಟೆ ಮಾಡಿದ್ದಾರೆ

Fact
ಹೆಚ್ಚುವರಿ ಮತಯಂತ್ರಗಳನ್ನು ಅಧಿಕಾರಿಗಳು ಸಾಗಿಸುತ್ತಿರುವ ವೇಳೆ ತಪ್ಪಾಗಿ ತಿಳಿದ ಗ್ರಾಮಸ್ಥರು ಮತಯಂತ್ರಗಳನ್ನು ಪುಡಿಗೈದು ಅಧಿಕಾರಿಗಳಿಗೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ವಿಜಯಪುರ ಬಸವನಬಾಗೇವಾಡಿಯ ಮಸಬಿನಾಳ ಗ್ರಾಮದ್ದು

ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೆಲವು ಜನರು ಇವಿಎಂ ಯಂತ್ರವನ್ನು ಒಡೆಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಿಜೆಪಿ ನಾಯಕನ ವಾಹನದಲ್ಲಿ ಇವಿಎಂ ಯಂತ್ರ ಸಿಕ್ಕಿದಾಗ ಸ್ಥಳೀಯರು ಗಲಾಟೆ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಬಿಜೆಪಿ ಮುಖಂಡನ ಕಾರಿನಲ್ಲಿ ಮತಯಂತ್ರ ಸಿಕ್ಕಿದ್ದಕ್ಕೆ ಸ್ಥಳೀಯರು ಗಲಾಟೆ ಮಾಡಿದ್ದಾರೆಯೇ, ಬಸವನ ಬಾಗೇವಾಡಿಯಲ್ಲಿ ನಡೆದಿದ್ದೇನು?

(ಆರ್ಕೈವ್‌ ಮಾಡಲಾದ ಲಿಂಕ್‌ ಇಲ್ಲಿದೆ)

ರಾಜ್ಯದಲ್ಲಿ ಚುನಾವಣೆ ಪ್ರಯುಕ್ತ ಮತದಾನ ಮೇ 10 ರಂದು ಮುಕ್ತಾಯಗೊಂಡಿದೆ. ಮೇ 13ರಂದು ಮತ ಎಣಿಕೆ ನಡೆಯಲಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 72.67% ಮತದಾನ ದಾಖಲಾಗಿದೆ. ಮತದಾನದ ಸಂದರ್ಭದಲ್ಲೇ ಇವಿಎಂ ಧ್ವಂಸ ಮಾಡಿದ ವೀಡಿಯೋ ಹರಿದಾಡಿದೆ.

Also Read: ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಮನೆ ಮನೆ ಪ್ರಚಾರದ ವೇಳೆ ಡಿಕೆಶಿ ತೂರಾಡಿದ್ದರೇ?

Fact Check/Verification

ಹೇಳಿಕೆಯ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು, ನಾವು ಗೂಗಲ್‌ ಕೀವರ್ಡ್ ಸರ್ಚ್ ನಡೆಸಿದ್ದು, ಇದು ಮೇ.10ರ ಮತದಾನದ ದಿನ ನಡೆದ ಘಟನೆ ಇದು ಎಂಬುದು ತಿಳಿದುಬಂದಿದೆ.

ಈ ಪ್ರಕರಣದ ಬಗ್ಗೆ ಹಲವು ವರದಿಗಳು ಲಭ್ಯವಾಗಿವೆ. ಮೇ 10, 2023ರಂದು ಸುವರ್ಣ ನ್ಯೂಸ್‌ ಪ್ರಕಟಿಸಿದ ವರದಿ ಪ್ರಕಾರ, “ಮತದಾನ ಮಾಡುವುಕ್ಕಾಗಿ ತರಲಾಗಿದ್ದ  ಮತಯಂತ್ರಗಳನ್ನ ಒಡೆದು ಪುಡಿಪುಡಿ ಮಾಡಿದ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ. ಇವಿಎಂ ಮಶೀನ್ ಹಾಗೂ ವಿವಿಪ್ಯಾಟ್ ಮಶೀನ್‌ಗಳನ್ನ ಒಡೆದು ಹಾಕಿದ ಗ್ರಾಮಸ್ಥರು. ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಬರ್ತಿದ್ದಾಗ ಘಟನೆ ನಡೆದಿದೆ. ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗ್ತಿದೆ ಎಂದು ತಪ್ಪು ಭಾವಿಸಿ ಮತ ಯಂತ್ರ ಒಡೆದು ಹಾಕಿದ ಗ್ರಾಮಸ್ಥರು. ಅಧಿಕಾರಿಗಳ ಕಾರನ್ನು ಜಖಂಗೊಳಿಸಿದ ಗ್ರಾಮಸ್ಥರು. ಸಿಬ್ಬಂದಿಗಳಿಗು ಥಳಿತ, ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಮತದಾನದ ವೇಳೆ ಮತಯಂತ್ರಗಳು ಕೆಟ್ಟು ಹೋದಲ್ಲಿ ಬದಲಿಗಾಗಿ ಸಂಗ್ರಹಣೆ ಮಾಡಿದ್ದ ಮತಯಂತ್ರಗಳು ಇವಾಗಿದ್ದವು.  ಮಸಬಿನಾಳ ಗ್ರಾಮದಲ್ಲಿ ಚುನಾವಣಾ ಅಧಿಕಾರಿಗಳು ಮತಯಂತ್ರಗಳನ್ನು ಅರ್ಧಕ್ಕೆ ತೆಗೆದುಕೊಂಡು ಹೋಗುತ್ತಿರುವುದನ್ನು ಕಂಡು ಗ್ರಾಮಸ್ಥರು ಚುನಾವಣಾ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ. ಆದರೆ, ಚುನಾವಣಾ ಅಧಿಕಾರಿಗಳು ಇವು ಹೆಚ್ಚುವರಿ ಯಂತ್ರಗಳು ಎಂದು ಹೇಳಿದರೂ ಕೇಳದೇ, ಈ ಎಲ್ಲ ಮತಯಂತ್ರಗಳನ್ನು ಅರ್ಧಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಗಲಾಟೆ ಆರಂಭಿಸಿ ಮತಯಂತ್ರಗಳನ್ನು ಒಡೆದು ಹಾಕಿದ್ದಾರೆ. ಚುನಾವಣಾ ಅಧಿಕಾರಿಗಳ ಕಾರನ್ನು ಕೂಡ ಒಡೆದು ಹಾಕಿ, ಕಾರನ್ನು ಉರುಳಿಸಿ ಹಾಕಿದ್ದಾರೆ.” ಎಂದಿದೆ.

ಬಿಜೆಪಿ ಮುಖಂಡನ ಕಾರಿನಲ್ಲಿ ಮತಯಂತ್ರ ಸಿಕ್ಕಿದ್ದಕ್ಕೆ ಸ್ಥಳೀಯರು ಗಲಾಟೆ ಮಾಡಿದ್ದಾರೆಯೇ, ಬಸವನ ಬಾಗೇವಾಡಿಯಲ್ಲಿ ನಡೆದಿದ್ದೇನು?
ಸುವರ್ಣ ನ್ಯೂಸ್ ವರದಿ

ಮೇ 10, 2023ರ ವಿಜಯಕರ್ನಾಟಕ ವರದಿಯಲ್ಲಿ “ವಿಜಯಪುರದಲ್ಲಿ ಗ್ರಾಮವೊಂದರಲ್ಲಿ ಗ್ರಾಮಸ್ಥರು ಮತಯಂತ್ರಗಳನ್ನು ಒಡೆದು ಪುಡಿಪುಡಿ ಮಾಡಿದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಗ್ರಾಮಸ್ಥರು ಒಡೆದು ಹಾಕಿದ್ದಾರೆ. ಕಾಯ್ದಿರಿಸಲಾಗಿದ್ದ ಮತ ಯಂತ್ರಗಳನ್ನು ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಬರುತ್ತಿದ್ದಾಗ ಘಟನೆ ನಡೆದಿದೆ. ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗ್ತಿದೆ ಎಂದು ತಪ್ಪು ಭಾವಿಸಿದ ಗ್ರಾಮಸ್ಥರು ಮತ ಯಂತ್ರ ಒಡೆದು ಹಾಕಿದ್ದಾರೆ. ಅದಲ್ಲದೇ ಅಧಿಕಾರಿಗಳ ಕಾರನ್ನು ಕೂಡ ಗ್ರಾಮಸ್ಥರು ಜಖಂಗೊಳಿಸಿದ್ದಾರೆ. ಜೊತೆಗೆ ಚುನಾವಣಾ ಸಿಬ್ಬಂದಿಗೂ ಗ್ರಾಮಸ್ಥರು ಥಳಿಸಿದ್ದಾರೆ.” ಎಂದಿದೆ.

ಇದಲ್ಲದೆ, ಮೇ 18 ರಂದು ‘ನ್ಯೂಸ್ 10‘ ಮತ್ತು ದಿಗ್ವಿಜಯ್ ನ್ಯೂಸ್‌ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ವೀಡಿಯೋದಲ್ಲಿಯೂ ಈ ಘಟನೆಯನ್ನು ವಿಜಯಪುರ ಎಂದು ಉಲ್ಲೇಖಿಸಲಾಗಿದೆ.

Also Read: ಮತದಾರರಿಗೆ ಹಂಚಲು ಟಯರ್ ನಲ್ಲಿಟ್ಟು ಹಣ ಸಾಗಾಟ, ವೈರಲ್‌ ವೀಡಿಯೋದ ಅಸಲಿಯತ್ತೇನು?

ಮೇ 10 ರಂದು ಡೆಕ್ಕನ್ ಕ್ರಾನಿಕಲ್ ವೆಬ್ ಸೈಟ್ ನಲ್ಲಿ ಪ್ರಕಟವಾದ ವರದಿಯನ್ನು ನಾವು ನೋಡಿದ್ದೇವೆ. ಈ ವರದಿ ಪ್ರಕಾರ, ವಿಜಯಪುರ ಜಿಲ್ಲೆಯ ಮಸಬಿನಾಳ ಗ್ರಾಮದಲ್ಲಿ ಕೆಲವು ಗ್ರಾಮಸ್ಥರು ಸೆಕ್ಟರ್ ಅಧಿಕಾರಿಯ ವಾಹನವನ್ನು ತಡೆದು ಕರ್ನಾಟಕದಲ್ಲಿ ಮತದಾನದ ಸಮಯದಲ್ಲಿ ಕಾಯ್ದಿರಿಸಿದ್ದ ಇವಿಎಂ ಅನ್ನು ಹಾನಿಗೊಳಿಸಿದ್ದಾರೆ. ಮೀಸಲು ಇವಿಎಂಗಳನ್ನು ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರಕ್ಕೆ ಸಾಗಿಸುವಾಗ ಈ ಘಟನೆ ನಡೆದಿದೆ. ಇವಿಎಂಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಮತ್ತು ಅವುಗಳನ್ನು ಹಾನಿಗೊಳಿಸಲಾಗುತ್ತಿದೆ ಎಂಬ ಭ್ರಮೆಯನ್ನು ಗ್ರಾಮಸ್ಥರು ಬೆಳೆಸಿಕೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದನ್ನು ವರದಿ ಉಲ್ಲೇಖಿಸಿದೆ. ಘಟನೆಗೆ ಸಂಬಂಧಿಸಿದಂತೆ 10 ಜನರನ್ನು ಬಂಧಿಸಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ತನಿಖೆಯ ಸಮಯದಲ್ಲಿ, ಬಳಕೆದಾರರ ಟ್ವೀಟ್ ನ ಪ್ರತಿಕ್ರಿಯೆ ವಿಭಾಗದಲ್ಲಿ ವಿಭಾಗದಲ್ಲಿ ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ ಅನ್ನು ನಾವು ನೋಡಿದ್ದು, ಅದರ ಪ್ರಕಾರ ಮಸಬಿನಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಸೆಕ್ಟರ್ ಅಧಿಕಾರಿಯ ವಾಹನದ ಮೇಲೆ ದಾಳಿ ನಡೆಸಿ ಮೀಸಲು ಇವಿಎಂ ಯಂತ್ರಗಳನ್ನು ಹಾನಿಗೊಳಿಸಿದ್ದಾರೆ. ಗ್ರಾಮಸ್ಥರು ಎರಡು ಕಂಟ್ರೋಲ್ ಯೂನಿಟ್, ಎರಡು ಬ್ಯಾಲೆಟ್ ಯೂನಿಟ್ ಮತ್ತು ಮೂರು ವಿವಿಪ್ಯಾಟ್ ಗಳನ್ನು ಹಾನಿಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ 23 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ಮುಖಂಡನ ಕಾರಿನಲ್ಲಿ ಮತಯಂತ್ರ ಸಿಕ್ಕಿದ್ದಕ್ಕೆ ಸ್ಥಳೀಯರು ಗಲಾಟೆ ಮಾಡಿದ್ದಾರೆಯೇ, ಬಸವನ ಬಾಗೇವಾಡಿಯಲ್ಲಿ ನಡೆದಿದ್ದೇನು?
ಮುಖ್ಯ ಚುನಾವಣಾಧಿಕಾರಿ ಟ್ವೀಟ್

ಇದಲ್ಲದೆ, ವಿಜಯಪುರ ಜಿಲ್ಲಾಧಿಕಾರಿಗಳ ಟ್ವಿಟ್ಟರ್ ಹ್ಯಾಂಡಲ್ ಸಹ ವೈರಲ್ ವೀಡಿಯೋ ಬಗ್ಗೆ ಟ್ವೀಟ್ ಮಾಡಿದೆ. ಬಿಜೆಪಿ ನಾಯಕನ ವಾಹನದಲ್ಲಿ ಇವಿಎಂ ಇತ್ತು ಎಂಬ ಹೇಳಿಕೆಯನ್ನು ಅದು ನಿರಾಕರಿಸಿದೆ. ಟ್ವೀಟ್ ಪ್ರಕಾರ, “ಈ ಹೇಳಿಕೆಯು ದಾರಿತಪ್ಪಿಸುತ್ತದೆ. ವಾಸ್ತವವಾಗಿ, ಸೆಕ್ಟರ್ ಅಧಿಕಾರಿಯ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಮೀಸಲು ಇವಿಎಂ ಯಂತ್ರವನ್ನು ಗ್ರಾಮಸ್ಥರು ಹಾನಿಗೊಳಿಸಿದರು. ಪ್ರಕರಣ ದಾಖಲಾಗಿದ್ದು, 24 ಜನರನ್ನು ಬಂಧಿಸಲಾಗಿದೆ. ” ಎಂದಿದೆ.


Also Read: ಮತ ಕೇಳಲು ಹೋದಾಗ ಸಿಎಂ ಬಸವರಾಜ ಬೊಮ್ಮಾಯಿಗೆ ಥಳಿತ? ಈ ಹೇಳಿಕೆ ಸುಳ್ಳು

ಬಿಜೆಪಿ ಮುಖಂಡನ ಕಾರಿನಲ್ಲಿ ಮತಯಂತ್ರ ಸಿಕ್ಕಿದ್ದಕ್ಕೆ ಸ್ಥಳೀಯರು ಗಲಾಟೆ ಮಾಡಿದ್ದಾರೆಯೇ, ಬಸವನ ಬಾಗೇವಾಡಿಯಲ್ಲಿ ನಡೆದಿದ್ದೇನು?
ಜಿಲ್ಲಾಧಿಕಾರಿ ಕಚೇರಿ ಟ್ವೀಟ್

Conclusion

ಹೀಗಾಗಿ, ಕರ್ನಾಟಕದ ಬಿಜೆಪಿ ನಾಯಕರೊಬ್ಬರ ವಾಹನದಲ್ಲಿ ಇವಿಎಂ ಯಂತ್ರ ಸಿಕ್ಕಿಬಿದ್ದಿದೆ ಎಂಬ ಹೇಳಿಕೆ ತಪ್ಪುದಾರಿಗೆಳೆಯುತ್ತದೆ ಎಂದು ನಮ್ಮ ತನಿಖೆಯಿಂದ ಸ್ಪಷ್ಟವಾಗಿದೆ.

Result: False

Our Sources
Report Published by Suvarna News on May 10, 2023

Report Published by Decaan Chronicle on May 10, 2023

Tweet by CEO of Karnataka on May 10, 2023

Tweet by DC of Vijayapura on May 10, 2023

ಈ ಲೇಖನ ಮೊದಲು ನ್ಯೂಸ್‌ಚೆಕರ್‌ ಇಂಗ್ಲಿಷ್‌ನಲ್ಲಿ ಪ್ರಕಟವಾಗಿದ್ದು, ಅದನ್ನು ಇಲ್ಲಿ ಓದಬಹುದು.


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

An enthusiastic journalist, researcher and fact-checker, Shubham believes in maintaining the sanctity of facts and wants to create awareness about misinformation and its perils. Shubham has studied Mathematics at the Banaras Hindu University and holds a diploma in Hindi Journalism from the Indian Institute of Mass Communication. He has worked in The Print, UNI and Inshorts before joining Newschecker.

Pankaj Menon