Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಯುದ್ಧದಲ್ಲಿ ಮಡಿದ ಸೈನಿಕರ ಕುಟುಂಬಗಳ ಕಲ್ಯಾಣಕ್ಕಾಗಿ, ಸೇನೆಗೆ ಶಸ್ತ್ರಾಸ್ತ್ರ ಖರೀದಿಗಾಗಿ ದೇಣಿಗೆ ಸ್ವೀಕರಿಸಲು ನರೇಂದ್ರ ಮೋದಿ ಸರ್ಕಾರ ವಿಶೇಷ ಬ್ಯಾಂಕ್ ಖಾತೆಯನ್ನು ತೆರೆದಿದೆ
'ಸಶಸ್ತ್ರ ಪಡೆಗಳ ಯುದ್ಧ ಅಪಘಾತ ಕಲ್ಯಾಣ ನಿಧಿ'ಯನ್ನು ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಳಸಲಾಗುತ್ತಿಲ್ಲ. ಯುದ್ಧದಲ್ಲಿ ಮಡಿದವರ ಅವಲಂಬಿತರು ಮತ್ತು ವಿಧವೆಯರಿಗೆ ಆರ್ಥಿಕ ನೆರವು/ಅನುದಾನಗಳನ್ನು ಒದಗಿಸಲು ಮಾತ್ರ ಬಳಸಲಾಗುತ್ತದೆ.
26 ಭಾರತೀಯರ ಜೀವವನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಹೆಚ್ಚುತ್ತಿರುವ ಯುದ್ಧದ ಕಾರ್ಮೋಡ ಮಧ್ಯೆ, ಶಸ್ತ್ರಾಸ್ತ್ರಗಳನ್ನು ಖರೀದಿಸಲು ಭಾರತೀಯ ಸೇನೆಯ ಸಶಸ್ತ್ರ ಪಡೆಗಳ ಯುದ್ಧ ಅಪಘಾತಗಳ ಕಲ್ಯಾಣ ನಿಧಿಗೆ ದೇಣಿಗೆ ನೀಡುವಂತೆ ಕೋರಿದ ಮೆಸೇಜ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಯುದ್ಧದಲ್ಲಿ ಮಡಿದ ಸೈನಿಕರ ಕುಟುಂಬಗಳ ಕಲ್ಯಾಣಕ್ಕಾಗಿ ದೇಣಿಗೆ ಸ್ವೀಕರಿಸಲು ನರೇಂದ್ರ ಮೋದಿ ಸರ್ಕಾರ ವಿಶೇಷ ಬ್ಯಾಂಕ್ ಖಾತೆಯನ್ನು ತೆರೆದಿದೆ ಎಂದು ಹೇಳಿಕೊಂಡಿರುವ ಪೋಸ್ಟ್, ಪ್ರತಿಯೊಬ್ಬ ಭಾರತೀಯನು ಸೈನಿಕರ ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯ ಮಾಡಲು ‘ಸಶಸ್ತ್ರ ಪಡೆಗಳ ಯುದ್ಧ ಅಪಘಾತಗಳ ಕಲ್ಯಾಣ ನಿಧಿ’ ಬ್ಯಾಂಕ್ ಖಾತೆಗೆ ಯಾವುದೇ ಮೊತ್ತವನ್ನು ದೇಣಿಗೆ ನೀಡಬಹುದು ಮತ್ತು ಈ ದೇಣಿಗೆಯನ್ನು ಸೇನೆ ಮತ್ತು ಅರೆಸೈನಿಕ ಪಡೆಗಳಿಗೆ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಸಹ ಬಳಸಲಾಗುವುದು ಎಂದು ಹೇಳುತ್ತದೆ.
ವೈರಲ್ ಮೆಸೇಜ್ ನಲ್ಲಿ ಉಲ್ಲೇಖಿಸಲಾದ ಬ್ಯಾಂಕ್ ಖಾತೆ ವಿವರಗಳು ಕೆನರಾ ಬ್ಯಾಂಕ್ ಖಾತೆಯಾಗಿದ್ದು, ಅದರ ಹೆಸರು: ಸೇನಾ ಕಲ್ಯಾಣ ನಿಧಿ ಯುದ್ಧ ಅಪಘಾತಗಳು, ಖಾತೆ ಸಂಖ್ಯೆ 90552010165915, IFSC ಕೋಡ್: CNRB0000267, ಕೆನರಾ ಬ್ಯಾಂಕ್ ದಕ್ಷಿಣ ವಿಸ್ತರಣಾ ಶಾಖೆ, ನವದೆಹಲಿ ಎಂದಿದೆ.
ಇಂತಹ ನಿಧಿಯನ್ನು ಪ್ರಾರಂಭಿಸಲು ಚಲನಚಿತ್ರ ನಟ ಅಕ್ಷಯ್ ಕುಮಾರ್ ಅವರು ಸೂಚಿಸಿದ್ದರುಎಂದು ಈ ಮೆಸೇಜ್ ನಲ್ಲಿದೆ.
ಈ ವೈರಲ್ ಮೇಸೇಜ್ ಬಗ್ಗೆ ತನಿಖೆ ನಡೆಸುವಂತೆ ನ್ಯೂಸ್‌ಚೆಕರ್ (+91-9999499044) ಗೆ ಮನವಿ ಬಂದಿದ್ದು,ಇದನ್ನು ಪರಿಶೀಲನೆಗೆ ಅಂಗೀಕರಿಸಲಾಗಿದೆ.
ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ AFBCWF ಬ್ಯಾಂಕ್ ಖಾತೆಗೆ ಸಂಬಂಧಿಸಿದ ವಿವರಗಳನ್ನು ನಾವು ಕಂಡುಕೊಂಡಿದ್ದೇವೆ , ಅದು ಹೀಗೆ ಹೇಳುತ್ತದೆ, “ಸಶಸ್ತ್ರ ಪಡೆಗಳ ಯುದ್ಧ ಅಪಘಾತ ಕಲ್ಯಾಣ ನಿಧಿ ಎಂಬ ಖಾತೆ ಇದೆ, ಇದನ್ನು ಭಾರತ ಸರ್ಕಾರ/ರಕ್ಷಣಾ ಸಚಿವಾಲಯವು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಸೇರಿದ ಮೃತರ ಕುಟುಂಬಗಳಿಗಾಗಿ ನಿರ್ವಹಿಸುತ್ತದೆ.
“ಈ ನಿಧಿಯಲ್ಲಿ ಸ್ವೀಕರಿಸಿದ ದೇಣಿಗೆಗಳನ್ನು ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮೃತ ಸಿಬ್ಬಂದಿಯ ಹತ್ತಿರದ ಸಂಬಂಧಿಕರು ಮತ್ತು ಅವಲಂಬಿತರಿಗೆ ಆರ್ಥಿಕ ನೆರವು ನೀಡಲು ಬಳಸಲಾಗುತ್ತದೆ.” ಆದಾಗ್ಯೂ, ಬ್ಯಾಂಕ್ ಖಾತೆಯಲ್ಲಿ ಸ್ವೀಕರಿಸಿದ ದೇಣಿಗೆಗಳನ್ನು ಸೇನೆ ಅಥವಾ ಅರೆಸೈನಿಕ ಪಡೆಗಳಿಗೆ ಮಿಲಿಟರಿ ಉಪಕರಣಗಳನ್ನು ಖರೀದಿಸಲು ಬಳಸಲಾಗುತ್ತದೆ ಎಂದು ವಿವರಣೆಯಲ್ಲಿ ಎಲ್ಲಿಯೂ ಹೇಳಿಲ್ಲ. ಈ ನಿಧಿಯನ್ನು ಅಕ್ಷಯ್ ಕುಮಾರ್ ಅವರ ಸೂಚನೆ ಮೇರೆಗೆ ರಚಿಸಲಾಗಿದೆ ಎಂದೂ ಈ ವೆಬ್‌ಸೈಟ್‌ನಲ್ಲಿ ಎಲ್ಲಿಯೂ ಹೇಳಲಾಗಿಲ್ಲ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಆಗಸ್ಟ್ 26, 2020 ರಂದು ಭಾರತೀಯ ಸೇನೆಯ ಹೆಚ್ಚುವರಿ ಸಾರ್ವಜನಿಕ ಮಾಹಿತಿ ನಿರ್ದೇಶನಾಲಯವು ನೀಡಿದ ಸ್ಪಷ್ಟೀಕರಣವನ್ನು ಸಹ ನಾವು ನೋಡಿದ್ದೇವೆ.
ಈ ವದಂತಿಗಳು ಸುಳ್ಳು ಎಂಬುದನ್ನು ದೃಢಪಡಿಸಿ ಎಕ್ಸ್ ನಲ್ಲಿ ಸ್ಪಷ್ಟೀಕರಣ ನೀಡಲಾಗಿದೆ. “ಸಶಸ್ತ್ರ ಪಡೆಗಳು ಯುದ್ಧ ಹುತಾತ್ಮರ ಕಲ್ಯಾಣ ನಿಧಿಯಿಂದ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ಖರೀದಿಸಲು ದೇಣಿಗೆಗಳನ್ನು ಬಳಸುತ್ತವೆ ಎಂಬ ಸಾಮಾಜಿಕ ಮಾಧ್ಯಮದ ವರದಿಗಳು ನಿಜವಲ್ಲ. ಯುದ್ಧಗಳಲ್ಲಿನ ಹುತಾತ್ಮರು / ಅವರ ಹತ್ತಿರದ ಸಂಬಂಧಿಕರ ಕಲ್ಯಾಣಕ್ಕೆ ಕೊಡುಗೆ ನೀಡುವ ನಾಗರಿಕರ ಪ್ರಾಮಾಣಿಕ ಬಯಕೆಗೆ ಪ್ರತಿಕ್ರಿಯೆಯಾಗಿ ಈ ನಿಧಿಯನ್ನು ಪ್ರಾರಂಭಿಸಲಾಗಿದೆ ಮತ್ತು ಆ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ,” ಎಂದಿದೆ.
ರಕ್ಷಣಾ ಸಚಿವಾಲಯವು ಏಪ್ರಿಲ್ 27, 2025 ರಂದು ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ವೈರಲ್ ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ ಬ್ಯಾಂಕ್ ಖಾತೆ ತಪ್ಪಾಗಿದೆ ಎಂದು ಸ್ಪಷ್ಟಪಡಿಸಿದೆ.
ಫೆಬ್ರವರಿ 15, 2019 ರಂದು ಬಳಕೆದಾರರ ಪ್ರಶ್ನೆಗೆ ಉತ್ತರಿಸುತ್ತಾ, ಸಿಂಡಿಕೇಟ್ ಬ್ಯಾಂಕಿನ ಎಕ್ಸ್-ಖಾತೆ ‘ ಸಿಂಡಿಕೇಟ್ ಬ್ಯಾಂಕ್ – ಈಗ ಕೆನರಾ ಬ್ಯಾಂಕ್’ , ನಿಧಿಯಲ್ಲಿ ಸ್ವೀಕರಿಸಿದ ಕೊಡುಗೆಗಳನ್ನು ಯುದ್ಧದಲ್ಲಿ ಮಡಿದವರ ವಿಧವೆಯರು ಮತ್ತು ಅವಲಂಬಿತರಿಗೆ ಅನುದಾನ ನೀಡಲು ಬಳಸಲಾಗುವುದು ಎಂದು ಹೇಳಿದೆ. ಸಿಂಡಿಕೇಟ್ ಬ್ಯಾಂಕ್ ಅನ್ನು 2020 ರಲ್ಲಿ ಕೆನರಾ ಬ್ಯಾಂಕಿನೊಂದಿಗೆ ವಿಲೀನಗೊಳಿಸಲಾಗಿದೆ ಎಂದಿದೆ.
ಇನ್ನೊಬ್ಬ ಗ್ರಾಹಕರ ಪ್ರಶ್ನೆಗೆ ಉತ್ತರವಾಗಿ, ಕೆನರಾ ಬ್ಯಾಂಕಿನ ಎಕ್ಸ್ ಪ್ರೊಫೈಲ್, ವಿಲೀನದ ನಂತರ, ಸಿಂಡಿಕೇಟ್ IFCN ಕೋಡ್‌ಗಳನ್ನು ನಿಷ್ಕ್ರಿಯಗೊಳಿಸಿ ಕೆನರಾ ಬ್ಯಾಂಕ್ ಕೋಡ್‌ಗಳಾಗಿ ಪರಿವರ್ತಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಹೊಸ ಖಾತೆ ಸಂಖ್ಯೆಯನ್ನು ಸೇನೆಯ ವೆಬ್‌ಸೈಟ್‌ನಲ್ಲಿಯೂ ನೀಡಲಾಗಿದೆ.
ನಮ್ಮ ತನಿಖೆಯಲ್ಲಿ ಕಂಡುಬಂದ ಪ್ರಕಾರ,’ಸಶಸ್ತ್ರ ಪಡೆಗಳ ಯುದ್ಧ ಅಪಘಾತ ಕಲ್ಯಾಣ ನಿಧಿ’ಯನ್ನು ವೈರಲ್ ಮೆಸೇಜ್ ನಲ್ಲಿ ಹೇಳಿದ ರೀತಿ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಳಸಲಾಗುತ್ತಿಲ್ಲ ಎಂದು ಗೊತ್ತಾಗಿದೆ. ಯುದ್ಧದಲ್ಲಿ ಮಡಿದವರ ಅವಲಂಬಿತರು ಮತ್ತು ವಿಧವೆಯರಿಗೆ ಆರ್ಥಿಕ ನೆರವು/ಅನುದಾನಗಳನ್ನು ಒದಗಿಸಲು ಈ ನಿಧಿಯನ್ನು ಬಳಸಲಾಗುತ್ತಿದೆ. ಜೊತೆಗೆ ಈ ಖಾತೆಯೊಂದಿಗೆ ನೀಡಲಾದ ಐಎಫ್ ಎಸ್ ಸಿ ಕೋಡ್ ತಪ್ಪಾಗಿದ್ದು, ಅದು CNRB0019055 ಆಗಿದೆ ಎಂದು ಗೊತ್ತಾಗಿದೆ.
Our Sources
X post by @syndicatebank Dated: February 15, 2019
X post by @adgpi Dated: August 26, 2020
Press Release from the Ministry of Defence Dated: April 27, 2025
Indian Army Website
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Salman
July 1, 2025
Ishwarachandra B G
June 27, 2025
Komal Singh
May 19, 2025