Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಲಕ್ನೋದ ಸಲಾಹುದ್ದೀನ್ ಮನೆಯಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳು
ಲಕ್ನೋದ ಸಲಾಹುದ್ದೀನ್ ಮನೆಯಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳು ಎನ್ನುವುದು ತಪ್ಪಾಗಿದೆ, ಇದು ಅಮೆರಿಕದ ಅಯೋವಾದ ಕ್ರಿಮಿನಲ್ಸ್ ಲ್ಯಾಬ್ ಫೋಟೋ ಅಗಿದೆ
ಉತ್ತರ ಪ್ರದೇಶದ ಲಕ್ನೋದಲ್ಲಿರುವ ಹಕೀಮ್ ಸಲಾಹುದ್ದೀನ್ ಅವರ ಮನೆಯಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳ ಫೋಟೋ ಎಂದು ಚಿತ್ರವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಈ ಫೋಟೋದಲ್ಲಿ ಹಲವು ಪಿಸ್ತೂಗಳನ್ನು ಇಟ್ಟಿರುವುದನ್ನು ಕಾಣಬಹುದು. ಇದರೊಂದಿಗಿರುವ ಹೇಳಿಕೆಯಲ್ಲಿ “ಲಕ್ನೋದ ಹಲೀಮ್ ಸಲಾಹುದ್ದೀನ್ ಮನೆಯಿಂದ 3,000 ಬಂದೂಕುಗಳು ಮತ್ತು 50,000 ಗುಂಡುಗಳನ್ನು ಹೊಂದಿರುವ 20 ಮೂಟೆಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದಿದೆ.

ಆದಾಗ್ಯೂ, ವೈರಲ್ ಚಿತ್ರವು ಅಮೆರಿಕದ ಅಯೋವಾದಲ್ಲಿರುವ ಅಪರಾಧ ತನಿಖಾ ಅಪರಾಧಶಾಸ್ತ್ರ ಪ್ರಯೋಗಾಲಯದ್ದು ಎಂದು ಕಂಡುಬಂದಿದೆ. ಇದಕ್ಕೂ ಲಕ್ನೋದ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾವು ತನಿಖೆ ವೇಳೆ ಕಂಡುಕೊಂಡಿದ್ದೇವೆ.
Also Read: ಹಿಂದೂ ಶಿಕ್ಷಕನ ನಿವೃತ್ತಿ ದಿನ ಮುಸ್ಲಿಮರು ಚಪ್ಪಲಿ ಹಾರ ಹಾಕಿ ಅವಮಾನಿಸಿದರೇ?
ಜೂನ್ 27 ರಂದು ಲಕ್ನೋ ಪೊಲೀಸರು ಮಲಿಹಾಬಾದ್ ಪೊಲೀಸ್ ಠಾಣೆ ಪ್ರದೇಶದ ಮಿರ್ಜಾಗಂಜ್ ಗ್ರಾಮದಲ್ಲಿರುವ ಸಲಾಹುದ್ದೀನ್ ಅಲಿಯಾಸ್ ಲಾಲಾ ಎಂಬಾತನ ಮನೆಯ ಮೇಲೆ ದಾಳಿ ನಡೆಸಿದ್ದರು, ಅಲ್ಲಿ ಹೆಚ್ಚಿನ ಸಂಖ್ಯೆಯ ಶಸ್ತ್ರಾಸ್ತ್ರಗಳು ಮತ್ತು ಕಾರ್ಟ್ರಿಡ್ಜ್ ಗಳನ್ನು ವಶಪಡಿಸಿಕೊಂಡಿದ್ದರು. ಅರೆ ನಿರ್ಮಿತ ಆಯುಧಗಳು, ಕಾರ್ಟ್ರಿಡ್ಜ್ ತುಂಬಿದ ಚೀಲಗಳು, ಶಸ್ತ್ರಾಸ್ತ್ರ ತಯಾರಿಕೆಯ ಉಪಕರಣಗಳು, ಲ್ಯಾಪ್ಟಾಪ್, 2,000 ರೂ ನಗದು ಮತ್ತು ನಿಷೇಧಿತ ಜಿಂಕೆ ಚರ್ಮವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಲಕ್ನೋದಲ್ಲಿ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧ ಕಲ್ಪಿಸುವ ಈ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ, ಇದೇ ರೀತಿಯ ಪೋಸ್ಟ್ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ವೈರಲ್ ಚಿತ್ರದ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ನಾವು ಅದನ್ನು 2021ರ ಎಕ್ಸ್ ಪೋಸ್ಟ್, 2020ರ ಫೇಸ್ಬುಕ್ ಪೋಸ್ಟ್ ಮತ್ತು 2017 ರಲ್ಲಿ ಹಂಚಿಕೊಂಡ ಮತ್ತೊಂದು ಪೋಸ್ಟ್ನಲ್ಲಿ ನೋಡಿದ್ದೇವೆ. ಆದಾಗ್ಯೂ, ಈ ಚಿತ್ರ ಎಲ್ಲಿಂದ ಬಂದಿದೆ ಎಂಬುದರ ಬಗ್ಗೆ ಈ ಪೋಸ್ಟ್ಗಳಲ್ಲಿ ಸ್ಪಷ್ಟ ಮಾಹಿತಿ ಇಲ್ಲ. ಇದರಿಂದ ಲಕ್ನೋದಲ್ಲಿರುವ ಸಲಾಹುದ್ದೀನ್ ನಿವಾಸದ ಮೇಲೆ ಪೊಲೀಸರು ನಡೆಸಿದ ದಾಳಿಯಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.
ತನಿಖೆಯ ಸಮಯದಲ್ಲಿ, ಫೋಟೋ ಸ್ಟಾಕ್ ಏಜೆನ್ಸಿ ಅಲಮಿಯ ವೆಬ್ಸೈಟ್ನಲ್ಲಿ ವೈರಲ್ ಫೋಟೋ ಹೋಲುವ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ, ಇದರಲ್ಲಿ ಅದೇ ದೃಶ್ಯಗಳನ್ನು ಕಾಣಬಹುದು.

“ಅಯೋವಾ ಅಪರಾಧ ತನಿಖಾ ಇಲಾಖೆಯ ಅಪರಾಧಶಾಸ್ತ್ರಜ್ಞ ಕಾರ್ಲ್ ಬೇಸ್ಮನ್, ಜೂನ್ 7, 2005 ರ ಮಂಗಳವಾರ ಅಯೋವಾದ ಅಂಕೆನಿಯಲ್ಲಿರುವ ಬ್ಯಾಲಿಸ್ಟಿಕ್ಸ್ ಲ್ಯಾಬ್ನಲ್ಲಿ ಇರಿಸಲಾದ 3,300 ಕ್ಕೂ ಹೆಚ್ಚು ಬಂದೂಕುಗಳಲ್ಲಿ ಒಂದನ್ನು ನೋಡುತ್ತಿದ್ದಾರೆ. ಈ ಬಂದೂಕುಗಳನ್ನು ತನಿಖೆಯಲ್ಲಿ ಉಲ್ಲೇಖಗಳಾಗಿ ಬಳಸಲಾಗುತ್ತದೆ” ಎಂದು ಅಸೋಸಿಯೇಟೆಡ್ ಪ್ರೆಸ್ನ ಸ್ಟೀವ್ ಪೋಪ್ಗೆ ಈ ಫೋಟೋದ ಕ್ರೆಡಿಟ್ ನೀಡಲಾಗಿದೆ.
ಅಂಕೆನಿ ಅಮಮೆರಿಕದ ಅಯೋವಾ ರಾಜ್ಯದ ಒಂದು ನಗರ. ಇಲ್ಲಿನ ಪ್ರಯೋಗಾಲಯವು ಅಪರಾಧಗಳ ತನಿಖೆಯಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸುತ್ತದೆ.
ಅಲಮಿಯ ಫೋಟೋ ಮತ್ತು ವೈರಲ್ ಫೋಟೋ ನಡುವಿನ ಹೋಲಿಕೆಯನ್ನು ಇಲ್ಲಿ ಸ್ಪಷ್ಟವಾಗಿ ಕಾಣಬಹುದು. ಪಿಸ್ತೂಲ್ ಅನ್ನು ಪರಿಶೀಲಿಸುವ ವ್ಯಕ್ತಿಯನ್ನು ದೃಶ್ಯದಿಂದ ತೆಗೆದರೆ, ಪಿಸ್ತೂಲ್ ಗಳು ಮತ್ತು ಮುಂಭಾಗದ ಗೋಡೆಯ ಮೇಲೆ ಕಂಡುಬರುವ ವಿದ್ಯುತ್ ತಂತಿ ಮತ್ತು ಸಾಕೆಟ್ ನಡುವಿನ ಭಾಗಗಳು ಹೋಲುತ್ತವೆ ಮತ್ತು ಸ್ಪಷ್ಟವಾಗಿ ಗೋಚರಿಸುತ್ತದೆ. ಇದೇ ಫೋಟೋವನ್ನು ಕ್ವಾಡ್ ಸಿಟಿ ಟೈಮ್ಸ್ ನ ೨೦೦೫ ರ ವರದಿಯಲ್ಲಿಯೂ ಬಳಸಲಾಗಿದೆ.
ಅಯೋವಾ ಸಾರ್ವಜನಿಕ ಸುರಕ್ಷತಾ ಇಲಾಖೆಯ ವೆಬ್ಸೈಟ್ ಅನ್ನು ಪರಿಶೀಲಿಸುವಾಗ, ಅಯೋವಾ ಅಪರಾಧ ತನಿಖಾ ವಿಭಾಗದ ಅಪರಾಧಶಾಸ್ತ್ರ ಪ್ರಯೋಗಾಲಯದ ವರ್ಚುವಲ್ ಪ್ರವಾಸವನ್ನು ತೋರಿಸುವ ಯೂಟ್ಯೂಬ್ ವೀಡಿಯೋಗೆ ಲಿಂಕ್ ಅನ್ನು ನಾವು ನೋಡಿದ್ದೇವೆ. ವೈರಲ್ ಫೋಟೋದಲ್ಲಿ ಕಂಡುಬರುವಂತೆ 4:11 ರಿಂದ 4:13 ಮತ್ತು 4:48 ರಿಂದ 4:54 ರ ಅವಧಿಯಲ್ಲಿ ಅದೇ ದೃಶ್ಯವನ್ನು ವೀಡಿಯೋ ತೋರಿಸುತ್ತದೆ, ಅಲ್ಲಿ ಹೆಚ್ಚಿನ ಸಂಖ್ಯೆಯ ಪಿಸ್ತೂಲ್ಗಳನ್ನು ಅಚ್ಚುಕಟ್ಟಾಗಿ ಇಡಲಾಗಿದೆ.

ಆದ್ದರಿಂದ ಲಕ್ನೋದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಫೋಟೋ ವಾಸ್ತವವಾಗಿ ಅಮೆರಿಕದ ಅಯೋವಾದ ಅಪರಾಧಿಗಳ ಪ್ರಯೋಗಾಲಯದಿಂದ ಬಂದಿದೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.
ಸಲಾಹುದ್ದೀನ್ ಮನೆಯಿಂದ ವಶಪಡಿಸಿಕೊಂಡ ಆಯುಧಗಳ ಬಗ್ಗೆ ಪೊಲೀಸರು ಏನು ಹೇಳಿದರು?
ಲಕ್ನೋ ಪೊಲೀಸರು ಸಲಾಹುದ್ದೀನ್ ಅವರ ಮನೆಯ ಮೇಲೆ ದಾಳಿ ನಡೆಸಿ, ಆತನಿಂದ ಮೂರು ಪಿಸ್ತೂಲ್ (.32 ಬೋರ್), ಒಂದು ದೇಶೀಯ ನಿರ್ಮಿತ ಪಿಸ್ತೂಲ್ (.315 ಬೋರ್), ಎರಡು ದೇಶೀಯ ನಿರ್ಮಿತ ಪಿಸ್ತೂಲ್ (.22 ಬೋರ್), ಒಂದು ರೈಫಲ್ (.22 ಬೋರ್) ಮತ್ತು ಏಳು ಏರ್ ಗನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. ಇದಲ್ಲದೆ, 88 ಜೀವಂತ ಕಾಟ್ರಿಡ್ಜ್ ಗಳು, 40 ಖಾಲಿ ಕಾಟ್ರಿಡ್ಜ್ ಳು, 22 ಬೋರ್, 30 ಕಾರ್ಟ್ರಿಡ್ಜ್ಗಳು 12 ಬೋರ್, ಎರಡು ಜೀವಂತ ಕಾಟ್ರಿಡ್ಜ್ ಗಳು 32 ಬೋರ್, ಒಂದು ಟೊಳ್ಳು 32 ಬೋರ್, 6 ಬಂಕಾ, ಎರಡು ಚಾಕುಗಳು, ಒಂದು ಗರಗಸ, 9 ಫರ್ಸಾ, ಅರೆ ನಿರ್ಮಿತ ಶಸ್ತ್ರಾಸ್ತ್ರಗಳು, ಸರಕುಗಳು ಮತ್ತು ಅಕ್ರಮ ಶಸ್ತ್ರಾಸ್ತ್ರ ತಯಾರಿಕೆ ಸಲಕರಣೆಗಳು, ನಗದು ಮತ್ತು ಜಿಂಕೆ ಚರ್ಮವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜೂನ್ 27 ರಂದು ತಮ್ಮ ಎಕ್ಸ್-ಪೋಸ್ಟ್ ಮೂಲಕ ಹೇಳಿದ್ದಾರೆ.
ಇದು ಸಲಾಹುದ್ದೀನ್ ಮನೆಯಿಂದ 3,000 ಬಂದೂಕುಗಳು ಮತ್ತು 50,000 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ಹೇಳಿಕೆಯನ್ನು ಲಕ್ನೋ ಪೊಲೀಸರ ಅಧಿಕೃತ ಹೇಳಿಕೆ ನಿರಾಕರಿಸಿದೆ.
ಲಕ್ನೋದ ಸಲಾಹುದ್ದೀನ್ ಮನೆಯಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗಿರುವ ಫೋಟೋ ವಾಸ್ತವವಾಗಿ ಅಮೆರಿಕದ ಅಯೋವಾದ ಕ್ರಿಮಿನಲ್ಸ್ ಲ್ಯಾಬ್ನಿಂದ ಬಂದಿದೆ.
Also Read: ಉಕ್ರೇನ್ನ ಡ್ರೋನ್ ದಾಳಿಯ ನಂತರ ರಷ್ಯಾದ ವಾಯುನೆಲೆ ನಾಶ ಎಂದ ವೈರಲ್ ಫೋಟೋ, ಎಐ ಸೃಷ್ಟಿ
Our Sources
Image By Photo Stock Agency Alamy Dated: June 7, 2005
Report by Quad City Times, Dated: June 9, 2005
YouTube Video By Iowa Department of Public Safety, Dated: September 21, 2016
X post By Lucknow Police Dated: June 27, 2025
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
July 5, 2025
Komal Singh
May 19, 2025
Sabloo Thomas
May 1, 2025