Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಮದುವೆಗೂ ಮುನ್ನ ಮಾಜಿ ಗೆಳೆಯನನ್ನು ಭೇಟಿಯಾಗಿ ಕಣ್ಣೀರಿಟ್ಟ ವಧು
ಮದುವೆಗೂ ಮುನ್ನ ಮಾಜಿ ಗೆಳೆಯನನ್ನು ಭೇಟಿಯಾಗಿ ಕಣ್ಣೀರಿಟ್ಟ ವಧು ಎನ್ನುವುದು ಸುಳ್ಳು, ವೈರಲ್ ವೀಡಿಯೋ ಸ್ಕ್ರಿಪ್ಟೆಡ್ ಆಗಿದೆ
ವಧುವೊಬ್ಬಳು ತನ್ನ ಮದುವೆಯ ಆಚರಣೆಗಳಿಗೆ ಕೇವಲ ಎರಡು ಗಂಟೆಗಳ ಮೊದಲು ತನ್ನ ಮಾಜಿ ಗೆಳೆಯನನ್ನು ಭೇಟಿಯಾಗಲು ಕಾರಿನಲ್ಲಿ ಬರುತ್ತಿರುವುದನ್ನು ತೋರಿಸುವ ಅತ್ಯಂತ ಭಾವನಾತ್ಮಕ ವೀಡಿಯೋವೊಂದು ಇಂಟರ್ನೆಟ್ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಈ ವೀಡಿಯೋವನ್ನು ವಿಶ್ವವಾಣಿ ನೈಜ ಘಟನೆ ಎಂಬಂತೆ ವರದಿ ಮಾಡಿದೆ.

ವೈರಲ್ ಆಗಿರುವ ಈ ಕ್ಲಿಪ್ನಲ್ಲಿ ವಧುವನ್ನು ಶ್ರೇಯಾ ಎಂದು ಗುರುತಿಸಲಾಗಿದ್ದು, ತನ್ನ ಮಾಜಿ ಗೆಳೆಯನಿಗೆ ವಿದಾಯ ಹೇಳಲು ಕೊನೆಯ ಕ್ಷಣದಲ್ಲಿ ಆಕೆ ಭೇಟಿ ನೀಡಿದ್ದಾಗಿ ಹೇಳಲಾಗಿದೆ. ವಧುವಿನ ಉಡುಗೆಯಲ್ಲಿ, ಸ್ನೇಹಿತನೊಂದಿಗೆ ವೈಷ್ಣವ್ ಕೆಮಿಸ್ಟ್ ಎಂದು ಗುರುತಿಸಲಾದ ಸ್ಥಳಕ್ಕೆ ಅವರು ಆಗಮಿಸುತ್ತಿರುವುದು ಕಂಡುಬರುತ್ತದೆ. ವೀಡಿಯೋದಲ್ಲಿ, ಶ್ರೇಯಾ ಭೇಟಿಯನ್ನು ನಿಗದಿ ಮಾಡಲು ತನ್ನ ಮಾಜಿ ಗೆಳೆಯನೊಂದಿಗೆ ಮಾತನಾಡುತ್ತಿರುವುದನ್ನು ಕೇಳಬಹುದು. ಅನಂತರ ಆಕೆಯ ಸ್ನೇಹಿತ ಕ್ಯಾಮೆರಾ ಮುಂದೆ ಮಾತನಾಡುತ್ತಾ, ಶ್ರೇಯಾ ತನ್ನ ಮಾಜಿ ಗೆಳೆಯನನ್ನು “ಕೊನೆಯ ಬಾರಿಗೆ” ಭೇಟಿಯಾಗಲು ಬಯಸಿದ್ದಾಳೆ ಮತ್ತು ತನ್ನ ಸ್ವಂತ ಇಚ್ಛೆಯಿಂದಲ್ಲ ಬದಲಾಗಿ ಕುಟುಂಬದ ಒತ್ತಡದಿಂದಾಗಿ ತಾನು ಮದುವೆಯಾಗುತ್ತಿರುವುದಾಗಿ ಹೇಳುತ್ತಾನೆ.
ಈ ವಿಡಿಯೋದಲ್ಲಿ ಶ್ರೇಯಾ ತನ್ನ ಮಾಜಿ ಸಂಗಾತಿಯನ್ನು ಅಪ್ಪಿಕೊಂಡು, ಆತನೊಂದಿಗೆ ಮಾತನಾಡುತ್ತ, ಕಾರಿಗೆ ಹಿಂತಿರುಗುವ ಮೊದಲು ಭಾವನಾತ್ಮಕವಾಗಿ ಅಪ್ಪಿಕೊಳ್ಳುವುದನ್ನು ತೋರಿಸಲಾಗಿದೆ. ಈ ಕ್ಲಿಪ್ ಅಂದಿನಿಂದ ವೈರಲ್ ಆಗಿದ್ದು, ಸಾಮಾಜಿಕವಾಗಿ, ಸಂಬಂಧಗಳ ಬಗ್ಗೆ ಚರ್ಚೆಗೂ ಕಾರಣವಾಗಿದೆ.
ವೈರಲ್ ವೀಡಿಯೋದ ಕೀಫ್ರೇಮ್ಗಳ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಡಿಸೆಂಬರ್ 13 ರಂದು @chalte_phirte098 ಖಾತೆಯ ಇನ್ಸ್ಟಾಗ್ರಾಮ್ ಪೋಸ್ಟ್ ಲಭ್ಯವಾಗಿದೆ.. ಇದು ಡಿಜಿಟಲ್ ಕ್ರಿಯೇಟರ್ ಆರವ್ ಮಾವಿ ಅವರದ್ದಾಗಿದೆ. ಕಂಟೆಂಟ್ ಕ್ರಿಯೇಟರ್ ಆರವ್ ಮಾವಿ ಅವರ ಇನ್ಸ್ಟಾಗ್ರಾಮ್ ಪುಟ ಮತ್ತು ಯೂಟ್ಯೂಬ್ ಚಾನೆಲ್ ಅನ್ನು ಪರಿಶೀಲಿಸಿದಾಗ , ಸಂಬಂಧ ದ್ರೋಹ , ಹೃದಯಾಘಾತ ಮತ್ತು ತ್ರಿಕೋನ-ಪ್ರೇಮ ನಿರೂಪಣೆಗಳ ವಿಷಯಗಳ ಸುತ್ತ ಕೇಂದ್ರೀಕೃತವಾಗಿರುವ ಹಲವಾರು ವೀಡಿಯೋಗಳು ನಮಗೆ ಕಂಡುಬಂದವು . ಅವರು ವೀಕ್ಷಕರು ವೈಯಕ್ತಿಕ ಅನುಭವಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸುತ್ತಾರೆ, ಅವರ ವಿಷಯವು ನಿಜ ಜೀವನದ ದೃಶ್ಯಗಳಿಗಿಂತ ನಾಟಕೀಯ ಕಥೆ ಹೇಳುವಿಕೆಯನ್ನು ಆಧರಿಸಿದೆ ಎಂದು ಇದರಲ್ಲಿ ತಿಳಿದುಬರುತ್ತದೆ.
ಅವರ ಒಂದು ವೀಡಿಯೋದಲ್ಲಿ , ಕ್ಯಾಮೆರಾಗಳು ಮತ್ತು ಲೈಟ್ ಗಳಂತಹ ವೃತ್ತಿಪರ ಶೂಟಿಂಗ್ ಸಲಕರಣೆಗಳು ಸ್ಪಷ್ಟವಾಗಿ ಕಾಣುವುದನ್ನು ನೋಡಬಹುದು.
ಡಿಸೆಂಬರ್ 16, 2025 ರಂದು, ಆರವ್ ಮಾವಿ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ ವೈರಲ್ ಆಗಿರುವ ವಧುವಿನ ವೀಡಿಯೋ ನಿಜವಾದ ಘಟನೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೀಡಿಯೋದ ಶೀರ್ಷಿಕೆಯಲ್ಲಿ, ಅವರು “ಈ ಕಥೆಯು ನೈಜ ಘಟನೆಗಳಿಂದ ಪ್ರೇರಿತವಾಗಿದೆ. ಇದು ಕೇವಲ ಜಾಗೃತಿಗಾಗಿ ಮತ್ತು ಹೃದಯಗಳನ್ನು ಸ್ಪರ್ಶಿಸಲು” ಎಂದು ಬರೆದಿದ್ದಾರೆ.

ವೀಡಿಯೋದಲ್ಲಿ, ಮಾವಿ ಈ ಕ್ಲಿಪ್ ಅನ್ನು ಸ್ವತಃ ರಚಿಸಿದ್ದಾರೆ ಮತ್ತು ಅವರೊಂದಿಗೆ ಜನರು ಹಂಚಿಕೊಂಡ ನೈಜ ಕಥೆಗಳಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ವಿವರಿಸಿದ್ದಾರೆ. “ನೀವು ವಧು ಓಡಿಹೋಗುವ ವೀಡಿಯೋವನ್ನು ನೋಡಿರಬೇಕು. ನಾನು ಆ ವೀಡಿಯೋವನ್ನು ಮಾಡಿದ್ದೇನೆ ಮತ್ತು ಅದು ಇಷ್ಟೊಂದು ವೈರಲ್ ಆಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಪ್ರಮುಖ ಸುದ್ದಿ ವಾಹಿನಿಗಳು ಸಂದರ್ಶನಗಳು ಮತ್ತು ಪಾಡ್ಕ್ಯಾಸ್ಟ್ಗಳಿಗಾಗಿ ನನ್ನನ್ನು ಕರೆಯುವ ಹಂತಕ್ಕೆ ಅದು ತಲುಪುತ್ತದೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಈ ವೀಡಿಯೋದ ಹಿಂದಿನ ಸತ್ಯವೇನು ಎಂದು ಅವರು ನನ್ನನ್ನು ಕೇಳುತ್ತಿದ್ದಾರೆ. ನಾನು ಸತ್ಯಕಥೆಯನ್ನು ಆಧರಿಸಿ, ಅವುಗಳ ಮೇಲೆ ವೀಡಿಯೋಗಳನ್ನು ಮಾಡುತ್ತೇನೆ ಎಂದು ನನ್ನ ಎಲ್ಲಾ ಅನುಯಾಯಿಗಳಿಗೆ ತಿಳಿದಿದೆ. ದೃಶ್ಯಗಳನ್ನು ನಾನೇ ಸೃಷ್ಟಿಸುತ್ತೇನೆ. ಜನರು ತಮ್ಮ ಕಥೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾರೆ.” ಎಂದಿದ್ದಾರೆ.
ಅವರ ಪ್ರಕಾರ, ವೈರಲ್ ವೀಡಿಯೋ ವೀಕ್ಷಕರೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಹೊಂದಿದ್ದು, ಸಾಪೇಕ್ಷವಾಗಿ ಭಾಸವಾಗಿರುವುದರಿಂದ ಆಕರ್ಷಣೆಯನ್ನು ಪಡೆದುಕೊಂಡಿತು, ಇದು ಅನೇಕರು ಅದನ್ನು ನಿಜವೆಂದು ನಂಬುವಂತೆ ಮಾಡಿತು.
ಆದ್ದರಿಂದ ವೈರಲ್ ಕ್ಲಿಪ್ ನಿಜವಲ್ಲ, ಅದು ಸ್ಕ್ರಿಪ್ಟೆಡ್ ವೀಡಿಯೋ ಎನ್ನುವುದು ಖಚಿತವಾಗಿದೆ.
ನಾವು ಆರವ್ ಮಾವಿಯವರ ಇನ್ಸ್ಟಾಗ್ರಾಮ್ ಪೋಸ್ಟ್ ಗಳನ್ನು ಪರಿಶೀಲಿಸಿದಾಗ, ಅವರು ತಮ್ಮ ವೈಯಕ್ತಿಕ ಕಥೆಗಳನ್ನು ಕಳುಹಿಸಿದ ವ್ಯಕ್ತಿಗಳಿಂದ ಬಂದ ಸಂದೇಶಗಳ ಹಲವಾರು ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅವುಗಳನ್ನು ವೀಡಿಯೋ ಮಾಡುವಂತೆ ವಿನಂತಿಸಿದ್ದಾರೆ ಎಂದು ಗೊತ್ತಾಗಿದೆ.

ಇದಲ್ಲದೆ, ಅವರ ಖಾತೆಯಲ್ಲಿ ಪೋಸ್ಟ್ ಮಾಡಲಾದ ಇತರ ವೀಡಿಯೋಗಳಲ್ಲಿ, ವೈರಲ್ ಕ್ಲಿಪ್ನಲ್ಲಿ ಮಾಜಿ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಂಡ ಅದೇ ವ್ಯಕ್ತಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಆದ್ದರಿಂದ ವೀಡಿಯೋ ಸ್ಕ್ರಿಪ್ಟೆಡ್ ಎನ್ನುವುದನ್ನು ಹೆಚ್ಚು ಖಚಿತಪಡಿಸುತ್ತದೆ.
ಪ್ರತಿಕ್ರಿಯೆಗಾಗಿ ನಾವು ಆರವ್ ಮಾವಿ ಅವರನ್ನು ಸಂಪರ್ಕಿಸಿದ್ದೇವೆ. ಅವರ ಉತ್ತರ ಬಂದ ನಂತರ ವರದಿಯನ್ನು ಪರಿಷ್ಕರಿಸಲಾಗುವುದು.
ವಧುವೊಬ್ಬಳು ತನ್ನ ಮದುವೆಗೆ ಕೆಲವೇ ಗಂಟೆಗಳ ಮೊದಲು ತನ್ನ ಮಾಜಿ ಗೆಳೆಯನನ್ನು ಭೇಟಿಯಾಗುವುದನ್ನು ತೋರಿಸುವ ವೈರಲ್ ವೀಡಿಯೋ ನಿಜವಲ್ಲ. ಇದು ಕಂಟೆಂಟ್ ಕ್ರಿಯೇಟರ್ ಆರವ್ ಮಾವಿ ಅವರು ರಚಿಸಿದ ಸ್ಕ್ರಿಪ್ಟೆಡ್ ರೀಲ್ ಆಗಿದೆ.
Also Read: ಹೈದರಾಬಾದ್ನಲ್ಲಿ ಮೆಸ್ಸಿ ಸ್ವಾಗತಕ್ಕೆ ಬೃಹತ್ ಜನಸಮೂಹ ಎಂದು ಹಳೆಯ ವೀಡಿಯೋ ವೈರಲ್
FAQ ಗಳು
ವೈರಲ್ ಆಗಿರುವ ವಧುವಿನ ವಿಡಿಯೋ ನಿಜವೇ?
ಇಲ್ಲ. ಈ ವೀಡಿಯೋ ಸ್ಕ್ರಿಪ್ಟೆಡ್ ವೀಡಿಯೋ ಆಗಿದೆ.
ವೀಡಿಯೋವನ್ನು ಯಾರು ರಚಿಸಿದ್ದಾರೆ?
ಆರವ್ ಮಾವಿ, ಇನ್ಸ್ಟಾಗ್ರಾಮ್ (@chalte_phirte098) ಮತ್ತು ಯೂಟ್ಯೂಬ್ನಲ್ಲಿ ಸಕ್ರಿಯವಾಗಿರುವ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ.
Our Sources
Instagram account @chalte_phirte098 – Aarav Mavi, posts and stories, Dec 13, 2025
YouTube channel by Aarav Mavi, disclaimer and videos
(ಈ ವರದಿಯನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)