Fact Check: ಹಿಂದೂ ವಿಭಜನೆ, ಮುಸ್ಲಿಂ ಸಂಘಟನೆ ಮಾಡುವುದಾಗಿ ಸೋನಿಯಾ ಗಾಂಧಿಗೆ ಎಂ.ಬಿ. ಪಾಟೀಲ್‌ ಬರೆದ ಪತ್ರ ಸತ್ಯವೇ?

ಎಂಬಿ ಪಾಟೀಲ್‌ ಪತ್ರ ಸೋನಿಯಾ ಗಾಂಧಿ, ಹಿಂದೂ ವಿಭಜನೆ, ಮುಸ್ಲಿಂ ಸಂಘಟನೆ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಹಿಂದೂಗಳನ್ನು ವಿಭಜಿಸಿ, ಮುಸ್ಲಿಮರನ್ನು ಸಂಘಟಿಸುವುದಾಗಿ, ಈಗ ಕರ್ನಾಟಕದಲ್ಲಿ ಸಚಿವರಾಗಿರುವ ಎಂ.ಬಿ. ಪಾಟೀಲ್‌ ಅವರು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ

Fact
ಈ ಪತ್ರವು ನಕಲಿಯಾಗಿದ್ದು, ಬಿಎಲ್‌ಡಿ ಅಸೋಸಿಯೇಷನ್‌ ಲೆಟರ್ ಹೆಡ್ ಅನ್ನು ತಿರುಚಲಾಗಿದೆ, 2019ರಲ್ಲಿ ಈ ಬಗ್ಗೆ ಪೊಲೀಸ್‌ ದೂರು ದಾಖಲಾಗಿತ್ತು

ಹಿಂದೂಗಳನ್ನು ವಿಭಜಿಸಿ, ಮುಸ್ಲಿಮರನ್ನು ಸಂಘಟಿಸುವುದಾಗಿ, ಈಗ ಕರ್ನಾಟಕದಲ್ಲಿ ಸಚಿವರಾಗಿರುವ ಎಂ.ಬಿ. ಪಾಟೀಲ್‌ ಅವರು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

2017 ಜುಲೈ 10 ರಂದು  ಬಿಎಲ್‌ಡಿಇ ಅಸೋಸಿಯೇಷನ್‌ ಲೆಟರ್ ಹೆಡ್ ನಲ್ಲಿ ಎಂ.ಬಿ. ಪಾಟೀಲ್‌ ಅವರು ಈ ಪತ್ರವನ್ನು ಬರೆದಿದ್ದು, ಕಾಂಗ್ರೆಸ್ಸಿಗರು ಹಿಂದೂಗಳನ್ನು ವಿಭಜಿಸಿ, ಮುಸ್ಲಿಮರನ್ನು ಒಗ್ಗೂಡಿಸುವ ಮೂಲಕ ತನ್ನದೇ ತಂತ್ರಗಾರಿಕೆಯಲ್ಲಿ ಕರ್ನಾಟಕದಲ್ಲಿ ಆಗ ವಿಧಾನಸಭೆ ಚುನಾವಣೆಯನ್ನು ಗೆಲ್ಲಲು ಮುಂದಾಗಿತ್ತು ಎಂದು ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ ಹೇಳಲಾಗಿದೆ.

Also Read: ಕೇರಳ ಪೊಲೀಸರು ಅಬಕಾರಿ ಮಂತ್ರಿಯನ್ನು ಬಲಾತ್ಕಾರವಾಗಿ ಬಂಧಿಸಿದ್ದಾರೆ ಎನ್ನುವ ವೀಡಿಯೋ ಹಿಂದಿನ ಸತ್ಯವೇನು?

Fact Check: ಹಿಂದೂ ವಿಭಜನೆ, ಮುಸ್ಲಿಂ ಸಂಘಟನೆ ಮಾಡುವುದಾಗಿ ಸೋನಿಯಾ ಗಾಂಧಿಗೆ ಎಂ.ಬಿ. ಪಾಟೀಲ್‌ ಬರೆದ ಪತ್ರ ಸತ್ಯವೇ?

ಇದೇ ರೀತಿಯ ಹೇಳಿಕೆಗಳು ಇಲ್ಲಿ, ಇಲ್ಲಿ, ಇಲ್ಲಿ ಕಂಡುಬಂದಿವೆ.

ಈ ಪತ್ರದ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದೊಂದು ನಕಲಿ ಪತ್ರ ಎಂದು ಕಂಡುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ಮಾಡಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.

2019 ಏಪ್ರಿಲ್‌ 16ರ ದಿ ನ್ಯೂಸ್‌ ಮಿನಿಟ್ ವರದಿ ಪ್ರಕಾರ ‘ಹಿಂದೂಗಳನ್ನು ಒಡೆಯಲು ಸಚಿವರಿಂದ ಸಂಚು’ ನಕಲಿ ಪತ್ರ ಟ್ವೀಟ್ ಮಾಡಿದ ಬಿಜೆಪಿ: ಪೊಲೀಸರ ಮೊರೆ ಹೋದ ಎಂ.ಬಿ.ಪಾಟೀಲ್ ಬಿಜೆಪಿಯ ಮಾಜಿ ಸಂಸದರೊಬ್ಬರು ಆರಂಭಿಸಿದ ಕನ್ನಡ ಪತ್ರಿಕೆ ವಿಜಯವಾಣಿ ಕೂಡ ಈ ಖೋಟಾ ಪತ್ರವನ್ನು ತನ್ನ ಮುಖಪುಟದಲ್ಲಿ ಪ್ರಕಟಿಸಿದೆ ಎಂದಿದೆ. 

Fact Check: ಹಿಂದೂ ವಿಭಜನೆ, ಮುಸ್ಲಿಂ ಸಂಘಟನೆ ಮಾಡುವುದಾಗಿ ಸೋನಿಯಾ ಗಾಂಧಿಗೆ ಎಂ.ಬಿ. ಪಾಟೀಲ್‌ ಬರೆದ ಪತ್ರ ಸತ್ಯವೇ?

ಏಪ್ರಿಲ್‌ 16, 2019ರ ಕನ್ನಡ ಒನ್‌ ಇಂಡಿಯಾ ವರದಿ ಪ್ರಕಾರ, ಸೋನಿಯಾ ಗಾಂಧಿಗೆ ಪತ್ರ: ವರದಿ ವಿರುದ್ಧ ದೂರು ನೀಡಿದ ಎಂ.ಬಿ.ಪಾಟೀಲ ಎಂದಿದೆ. ಈ ವರದಿಯಲ್ಲಿ , 2017 ರ ಜುಲೈ ತಿಂಗಳಿನಲ್ಲಿ ಲಿಂಗಾಯಿತ ಪ್ರತ್ಯೇಕ ಧರ್ಮದ ಕುರಿತು ಪತ್ರವೊಂದನ್ನು ಎಂಬಿ ಪಾಟೀಲರು ಬರೆದಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಈ ವರದಿಯ ವಿರುದ್ಧ ಪಾಟೀಲರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದು, ಚುನಾವಣೆಯ ಸಮಯದಲ್ಲಿ ತಮ್ಮ ವ್ಯಕ್ತಿತ್ವಕ್ಕೆ ಚ್ಯುತಿಯಾಗುವಂತೆ ಮಾಡಿದ ಈ ವರದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಂಬಿ ಪಾಟೀಲ್ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಕರ್ನಾಟಕ ಸರ್ಕಾರದ ಫ್ಯಾಕ್ ಚೆಕ್‌ ಪೇಜ್‌ ಸತ್ಯ.ಕರ್ನಾಟಕ ಮೇ 31, 2024ರಂದು ಪ್ರಕಟಿಸಿದ ವರದಿಯೂ ಲಭ್ಯವಾಗಿದ್ದು, ಅದರಲ್ಲಿ, ಸಚಿವ ಎಂ.ಬಿ.ಪಾಟೀಲ್ ಹೆಸರಿನಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಗೆ ಬರೆದಿದ್ದರು ಎನ್ನಲಾದ ನಕಲಿ ಪತ್ರ ಮತ್ತೆ ವೈರಲ್ ಎಂದಿದೆ. ಜೊತೆಗೆ, ಈ ನಕಲಿ ಪತ್ರ ವೈರಲ್ ಆದ ಕೂಡಲೇ ಎಂ. ಬಿ. ಪಾಟೀಲ್ ಅವರು ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದರು. ಇದು ನಕಲಿ ಪತ್ರ ಎಂದು ಸಾಬೀತುಪಡಿಸಲು ಎಂ. ಬಿ. ಪಾಟೀಲ್ ಅವರು ವೈರಲ್ ಆಗಿರುವ ಪತ್ರ ಹಾಗೂ ಬಿಎಲ್‌ಡಿಇಎ ಸಂಸ್ಥೆಯ ಅಸಲಿ ಲೆಟರ್ ಹೆಡ್‌ ಅನ್ನು ತಮ್ಮ ಪರಿಶೀಲಿಸಿದ ಎಕ್ಸ್‌ ಹಾಗೂ ಫೇಸ್‌ಬುಕ್ ಖಾತೆಗಳಲ್ಲಿ ಪ್ರಕಟ ಮಾಡಿದ್ದರು. ಜೊತೆಯಲ್ಲೇ ಪೊಲೀಸರಿಗೆ ದೂರು ನೀಡಿರುವ ಪತ್ರವನ್ನೂ ಪ್ರಕಟಿಸಿದ್ದರು. ಈ ಎಲ್ಲಾ ಫೋಟೋಗಳ ಜೊತೆಯಲ್ಲೇ ಒಂದಿಷ್ಟು ವಿವರಣೆಯನ್ನೂ ಬರೆದುಕೊಂಡಿದ್ದರು ಎಂದಿದೆ.

Fact Check: ಹಿಂದೂ ವಿಭಜನೆ, ಮುಸ್ಲಿಂ ಸಂಘಟನೆ ಮಾಡುವುದಾಗಿ ಸೋನಿಯಾ ಗಾಂಧಿಗೆ ಎಂ.ಬಿ. ಪಾಟೀಲ್‌ ಬರೆದ ಪತ್ರ ಸತ್ಯವೇ?

ಈ ಪ್ರಕರಣದ ಬಗ್ಗೆ ನಾವು ಸಾಮಾಜಿಕ ಮಾಧ್ಯಮಗಳಲ್ಲೂ ಸರ್ಚ್ ಮಾಡಿದ್ದು ಎಂ.ಬಿ.ಪಾಟೀಲ್‌ ಅವರು ಮಾಡಿರುವ ಪೋಸ್ಟ್ ಗಳು ಲಭ್ಯವಾಗಿವೆ.

ಏಪ್ರಿಲ್‌ 16, 2019ರ ಎಕ್ಸ್ ಪೋಸ್ಟ್ ನಲ್ಲಿ, ಎಂ.ಬಿ.ಪಾಟೀಲ್‌ ಅವರು, “ಈ ಪತ್ರ ನಕಲಿ ಅದನ್ನು ತಯಾರಿಸಿ ಪ್ರಕಟಿಸಿದವರ ವಿರುದ್ಧ ಫೋರ್ಜರಿಗಾಗಿ ಕಾನೂನು ಕ್ರಮ ಜರುಗಿಸುತ್ತೇನೆ. ಬಿಜೆಪಿಯ ಹತಾಶೆ ಎದ್ದು ಕಾಣುತ್ತಿದೆ. ಜನರ ಬೆಂಬಲವನ್ನು ಕಳೆದುಕೊಂಡಿರುವುದರಿಂದ ಅವರು ಸಂಪೂರ್ಣವಾಗಿ ನಕಲಿ ಪತ್ರಗಳ ಮೇಲೆ ಅವಲಂಬಿತರಾಗಿದ್ದಾರೆ” ಎಂದಿದ್ದಾರೆ. ಈ ಪೋಸ್ಟ್ ನಲ್ಲಿ ಅವರು ಅಸಲಿ ಮತ್ತು ನಕಲಿ ಲೆಟರ್ ಹೆಡ್‌ ಗಳ ಫೋಟೋಗಳನ್ನು ಲಗತ್ತಿಸಿರುವುದನ್ನು ನಾವು ಗಮನಿಸಿದ್ದೇವೆ.

ಕರ್ನಾಟಕ ಕಾಂಗ್ರೆಸ್‌ ಮಾಡಿದ ಎಕ್ಸ್ ಪೋಸ್ಟ್ ಲಭ್ಯವಾಗಿದೆ. ಏಪ್ರಿಲ್‌ 16, 2019ರ ಪೋಸ್ಟ್ ನಲ್ಲಿ “ಪತ್ರವು ನಕಲಿಯಾಗಿದೆ ಅದನ್ನು ತಯಾರಿಸಿ ಪ್ರಕಟಿಸಿದವರ ವಿರುದ್ಧ ಫೋರ್ಜರಿಗಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಈ ವಿಷಯವನ್ನು ತಾರ್ಕಿಕ ಕಾನೂನು ತೀರ್ಮಾನಕ್ಕಾಗಿ ಮುಂದುವರಿಸುವುದಾಗಿ, ಭಾಗಿಯಾಗಿರುವ ಎಲ್ಲರ ವಿರುದ್ಧ ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ ಗೆ ಹೋಗುವುದಾಗಿ ಗೃಹಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ” ಎಂದಿದೆ.

Conclusion

ಈ ಪುರಾವೆಗಳ ಪ್ರಕಾರ, ಹಿಂದೂಗಳನ್ನು ವಿಭಜಿಸಿ, ಮುಸ್ಲಿಮರನ್ನು ಸಂಘಟಿಸುವುದಾಗಿ ಸಚಿವ ಎಂ.ಬಿ.ಪಾಟೀಲ್ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದಾರೆ ಎನ್ನುವುದು ನಕಲಿ ಪತ್ರವಾಗಿದ್ದು, 2019ರಲ್ಲಿ ಈ ನಕಲಿ ಪತ್ರ ಹರಿದಾಡಿತ್ತು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಹೇಳಿಕೆ ಸುಳ್ಳಾಗಿದೆ.

Also Read: ವಯನಾಡಿನಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಲಾಗಿದೆಯೇ, ಸತ್ಯ ಏನು?

Result: False

Our Sources

Report By Thenewsminute, Dated: April 16, 2019

Report By kannada.oneindia, Dated: April 16, 2019

Report By Satya.Karnataka, Dated: May 31, 2024

X Post By MB Patil, Dated: April 16, 2019

X Post By Karnataka Congress Dated: April 16, 2019


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.