Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ಭಾರತ ದಾಳಿ
ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ಭಾರತ ದಾಳಿ ಎಂದು ವೈರಲ್ ಆಗುತ್ತಿರುವ ವೀಡಿಯೋ ಫಿಲೆಡೆಲ್ಫಿಯಾದಲ್ಲಿ ವಿಮಾನ ಪತನಗೊಂಡ ಘಟನೆಯದ್ದಾಗಿದೆ
ಆಪರೇಷನ್ ಸಿಂದೂರ ಮುಂದುವರಿದಿದ್ದು ಭಾರತದ ಪಡೆಗಳು ಡ್ರೋನ್ ಮೂಲಕ ವಿವಿಧ ಗುರಿಗಳನ್ನು ಭೇದಿಸಿವೆ. ಇದರ ಬೆನ್ನಲ್ಲೇ ಪಾಕಿಸ್ತಾನ ಕೂಡ ಡ್ರೋನ್, ಕ್ಷಿಪಣಿಗಳ ಮೂಲಕದಾಳಿ ನಡೆಸಲು ಯತ್ನಸಿದ್ದು, ಅದನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆಗಳು ತಡೆದಿವೆ.
ಏತನ್ಮಧ್ಯೆ ಆಪರೇಷನ್ ಸಿಂದೂರದ ಭಾಗವಾಗಿ ಕರಾಚಿ ಬಂದರಿನ ಮೇಲೆ ಭಾರತ ದಾಳಿ ನಡೆಸಿದೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.


ಇವುಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಈ ವೈರಲ್ ವೀಡಿಯೋ ಬಗ್ಗೆ ನ್ಯೂಸ್ಚೆಕರ್ ತನಿಖೆ ನಡೆಸಿದ್ದು, ಇದು ಫಿಲೆಡೆಲ್ಫಿಯಾದಲ್ಲಿ ನಡೆದ ವಿಮಾನ ಅಪಘಾತದ ನಂತರದ ದೃಶ್ಯಾವಳಿ ಎಂದು ಕಂಡುಹಿಡಿದಿದೆ.
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ಗೂಗಲ್ ಲೆನ್ಸ್ ಮೂಲಕ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ.
ಈ ವೇಳೆ ರೆಡಿಟ್ ನಲ್ಲಿ ಮೂರು ತಿಂಗಳ ಹಿಂದಿನ ಪೋಸ್ಟ್ ಲಭ್ಯವಾಗಿದೆ ಇದರಲ್ಲಿ “ಬ್ರೇಕಿಂಗ್: ಫಿಲಡೆಲ್ಫಿಯಾದಲ್ಲಿ ಮತ್ತೊಂದು ವಿಮಾನ ಅಪಘಾತಕ್ಕೀಡಾಗಿದೆ, ಮತ್ತು ಟ್ರಂಪ್ ಅಧಿಕಾರ ವಹಿಸಿಕೊಂಡ ಕೇವಲ ಎರಡು ವಾರಗಳಲ್ಲಿ ಎರಡನೇ ರಜೆಗಾಗಿ ಫ್ಲೋರಿಡಾಕ್ಕೆ ತೆರಳುತ್ತಿದ್ದಾರೆ. ಅಮೆರಿಕನ್ನರು ಬಳಲುತ್ತಿರುವಾಗ, ಅವರು ಜವಾಬ್ದಾರಿಯನ್ನು ಬಿಟ್ಟು ಹೋಗಿದ್ದಾರೆ. ನಾಚಿಕೆಗೇಡಿನ ಸಂಗತಿ.” ಎಂದಿದೆ.
1 ಫೆಬ್ರವರಿ 2025ರಂದು ace_2_smooth ಎಂಬ ಇನ್ ಸ್ಟಾಗ್ರಾಂ ಖಾತೆಯಿಂದಲೂ ವೈರಲ್ ವೀಡಿಯೋ ಹೋಲುವ ವೀಡಿಯೋ ಪೋಸ್ಟ್ ಮಾಡಲಾಗಿದೆ. ಇಲ್ಲೂ ಫಿಲೆಡೆಲ್ಫಿಯಾದಲ್ಲಿ ವಿಮಾನ ಪತನಗೊಂಡಿದೆ ಎಂದು ಬರೆಯಲಾಗಿದೆ.

ಇದನ್ನು ಖಚಿತಪಡಿಸಲು ನಾವು ಶೋಧ ನಡೆಸಿದಾಗ, ಜನವರಿ 31ರಂದು ಐರಿಷ್ ಸ್ಟಾರ್ ವರದಿಯಲ್ಲಿ ಅಮೆರಿಕದ ಫಿಲೆಡೆಲ್ಫಿಯಾದಲ್ಲಿ ರೂಸ್ ವೆಲ್ಟ್ ಮಾಲ್ ಗೆ ಡಿಕ್ಕಿಯಾದ ವಿಮಾನ ಅಪಘಾತದ ಬಗ್ಗೆ ಹೇಳಲಾಗಿದೆ. ಇದರಲ್ಲಿ “ಶುಕ್ರವಾರ ಸಂಜೆ 6 ಗಂಟೆಯ ನಂತರ ಕಾಟ್ಮನ್ ಅವೆನ್ಯೂ ಮತ್ತು ರೂಸ್ವೆಲ್ಟ್ ಬೌಲೆವಾರ್ಡ್ ಬಳಿಯ ಈಶಾನ್ಯ ಫಿಲಡೆಲ್ಫಿಯಾ ಪ್ರದೇಶದಲ್ಲಿ ಸಣ್ಣ ವಿಮಾನ ಅಪಘಾತ ಸಂಭವಿಸಿದೆ. ಕಾನ್ಸಾಸ್ನ ವಿಚಿಟಾದಿಂದ ವಾಷಿಂಗ್ಟನ್ ಡಿಸಿಗೆ ಹೋಗುತ್ತಿದ್ದ ಅಮೇರಿಕನ್ ಏರ್ಲೈನ್ಸ್ ವಿಮಾನವು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ಗೆ ಡಿಕ್ಕಿ ಹೊಡೆದು ಪೊಟೊಮ್ಯಾಕ್ ನದಿಗೆ ಬಿದ್ದ ಎರಡು ದಿನಗಳ ನಂತರ ಈ ಅಪಘಾತ ಸಂಭವಿಸಿದೆ ಎಂದಿದೆ.

ಫೆಬ್ರವರಿ 4, 2025ರ ಸಿಬಿಸಿನ್ಯೂಸ್ ವರದಿಯ ಪ್ರಕಾರ, ಶುಕ್ರವಾರ ಸಂಜೆ ಫಿಲಡೆಲ್ಫಿಯಾ ಭಾಗದಲ್ಲಿ ವೈದ್ಯಕೀಯ ಜೆಟ್ ವಿಮಾನ ಅಪಘಾತಕ್ಕೀಡಾಗಿ ಆರು ಪ್ರಯಾಣಿಕರು ಮತ್ತು ದಾರಿಹೋಕ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೂಸ್ವೆಲ್ಟ್ ಬೌಲೆವಾರ್ಡ್ ಮತ್ತು ಕಾಟ್ಮನ್ ಅವೆನ್ಯೂ ಪ್ರದೇಶದ ರೂಸ್ವೆಲ್ಟ್ ಮಾಲ್ ಬಳಿ ಅಪಘಾತ ಸಂಭವಿಸಿ ಹಲವಾರು ಮನೆಗಳಿಗೆ ಬೆಂಕಿ ಬಿದ್ದಿದೆ. ಇದರಿಂದ ಕನಿಷ್ಠ 20 ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ನಗರದ ಆಸ್ಪತ್ರೆಗಳು ವರದಿ ಮಾಡಿವೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ನ ಹೇಳಿಕೆಯ ಪ್ರಕಾರ, ಲಿಯರ್ಜೆಟ್ 55 ಎಂಬ ಸಣ್ಣ ವಿಮಾನವು ಈಶಾನ್ಯ ಫಿಲಡೆಲ್ಫಿಯಾ ವಿಮಾನ ನಿಲ್ದಾಣದಿಂದ ಮಿಸೌರಿಯ ಸ್ಪ್ರಿಂಗ್ಫೀಲ್ಡ್ಗೆ ಹೊರಟಿದ್ದಾಗ ಪತನಗೊಂಡಿತು ಎಂದಿದೆ.

ಫಿಲೆಡೆಲ್ಫಿಯಾ ನಗರದ ಮೇಯರ್ ಕಚೇರಿಯ ಹೇಳಿಕೆ ಈ ಕುರಿತಾಗಿ ಫೆಬ್ರವರಿ 1, 2025ರಂದು ಪ್ರಕಟಗೊಂಡಿದ್ದು, ಈಶಾನ್ಯ ಫಿಲಡೆಲ್ಫಿಯಾದಲ್ಲಿ ನಿನ್ನೆ ರಾತ್ರಿ ಕಾಟ್ಮನ್ ಅವೆನ್ಯೂ ಮತ್ತು ರೂಸ್ವೆಲ್ಟ್ ಬೌಲೆವಾರ್ಡ್ನಲ್ಲಿ ಸಣ್ಣ ವೈದ್ಯಕೀಯ ಸೇವಾ ಜೆಟ್ ಅಪಘಾತಕ್ಕೀಡಾದ ಘಟನೆಯ ನಂತರ ಫಿಲಡೆಲ್ಫಿಯಾ ನಗರವು ಈ ಕೆಳಗಿನ ಸ್ಪಷ್ಟನೆ ನೀಡಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ. ಮಿಸೌರಿಗೆ ತೆರಳುತ್ತಿದ್ದ ಲಿಯರ್ಜೆಟ್ 55 ವಿಮಾನವು ಫಿಲಡೆಲ್ಫಿಯಾ ಈಶಾನ್ಯ ವಿಮಾನ ನಿಲ್ದಾಣದಿಂದ ಸಂಜೆ 6:06 ಕ್ಕೆ ಹೊರಟ ಸ್ವಲ್ಪ ಸಮಯದಲ್ಲಿ ಅಪಘಾತ ಸಂಭವಿಸಿದೆ. ವೈದ್ಯಕೀಯ ಸಾರಿಗೆ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಹತ್ತಿರದ ವಸತಿ ಪ್ರದೇಶಕ್ಕೆ ಅಪ್ಪಳಿಸಿತು. ಸಂಜೆ 6:11 ಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ ಐದು ಮನೆಗಳು, ಹಲವಾರು ವಾಹನಗಳು ಮತ್ತು ಕಾಟ್ಮನ್ ಅವೆನ್ಯೂದಾದ್ಯಂತ ಹರಡಿರುವ ಅವಶೇಷಗಳಿಂದ ಭಾರೀ ಬೆಂಕಿ ಬರುತ್ತಿರುವುದು ಕಂಡುಬಂದಿತು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಎರಡು ಗಂಟೆಗಳು ಬೇಕಾಯಿತು ಎಂದು ಹೇಳಿದೆ.

ಈ ಸಾಕ್ಷ್ಯಾಧಾರಗಳ ಪ್ರಕಾರ, ಇದು ಅಮೆರಿಕದ ಫಿಲೆಡೆಲ್ಫಿಯಾದಲ್ಲಿ ನಡೆದ ವಿಮಾನ ಅಪಘಾತದ ದೃಶ್ಯವಾಗಿದ್ದು ಆಪರೇಷನ್ ಸಿಂದೂರದ ಭಾಗವಾಗಿ ಭಾರತ ಕರಾಚಿ ಮೇಲೆ ದಾಳಿ ನಡೆಸಿದ ದೃಶ್ಯಾವಳಿಗಳಲ್ಲ ಎಂದು ಕಂಡುಬಂದಿದೆ.
Our Sources
Reddit Post By AnythingGoesNews, February: 1, 2025
Instagram Post By ace_2_smooth, Dated: February 1, 2025
Report By CBC News, Dated: February 4, 2025
Press Updates By City Of Philadelphia, Dated: February 1, 2025
Vasudha Beri
November 20, 2025
Ishwarachandra B G
October 18, 2025
Vasudha Beri
October 15, 2025