Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಪೊಲೀಸರು ಮಹಿಳೆಯರಿಗೆ ರಾತ್ರಿ ಉಚಿತ ಪ್ರಯಾಣ ಯೋಜನೆ ಆರಂಭಿಸಿದ್ದಾರೆ 1091- 7837018555 ಕರೆ ಮಾಡಿ ನೆರವು ಪಡೆಯಬಹುದು
Fact
ಕರ್ನಾಟಕದಲ್ಲಿ ಮಹಿಳೆಯರಿಗೆ ರಾತ್ರಿ ಉಚಿತ ಪ್ರಯಾಣ ಯೋಜನೆಯನ್ನು ಪೊಲೀಸರು ಆರಂಭಿಸಿಲ್ಲ, 1091 ಎನ್ನುವುದು ಮಹಿಳೆಯರ ಸುರಕ್ಷತೆ ಕುರಿತ ಸಹಾಯವಾಣಿ ಆಗಿದೆ
ಪೊಲೀಸರು ಮಹಿಳೆಯರಿಗೆ ರಾತ್ರಿ ಉಚಿತ ಪ್ರಯಾಣ ಯೋಜನೆಯನ್ನು ಪ್ರಾಂಭಿಸಿದ್ದು, ಒಂಟಿ ಮಹಿಳೆಯರು, ವಾಹನ ಸಿಗದೇ ಇರುವವರು ಇದನ್ನುಬಳಸಿಕೊಳ್ಳಬಹುದು ಎಂಬಂತೆ ಸಂದೇಶವೊಂದು ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ.
ಈ ಹೇಳಿಕೆಯಲ್ಲಿ ಕಂಡುಬಂದಂತೆ “ಪೊಲೀಸರು ಉಚಿತ ಪ್ರಯಾಣ ಯೋಜನೆಯನ್ನು ಪ್ರಾರಂಭಿಸಿದ್ದು, ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯೊಳಗೆ ಮನೆಗೆ ಹೋಗಲು ವಾಹನ ಸಿಗದೇ ಇರುವ ಯಾವುದೇ ಮಹಿಳೆಯು ಪೊಲೀಸ್ ಸಹಾಯವಾಣಿ ಸಂಖ್ಯೆಗಳನ್ನು (1091 ಮತ್ತು 7837018555) ಸಂಪರ್ಕಿಸಿ ಮತ್ತು ವಾಹನಕ್ಕಾಗಿ ವಿನಂತಿಸಬಹುದು. ಅವರು 24×7 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ನಿಯಂತ್ರಣ ಕೊಠಡಿಯ ವಾಹನ ಅಥವಾ ಹತ್ತಿರದ ಪಿಸಿಆರ್ ವಾಹನ/ಎಸ್‌ಎಚ್‌ಒ ವಾಹನವು ಅವಳನ್ನು ಸುರಕ್ಷಿತವಾಗಿ ಅವಳ ಗಮ್ಯಸ್ಥಾನಕ್ಕೆ ಬಿಡುತ್ತದೆ. ಇದನ್ನು ಉಚಿತವಾಗಿ ಮಾಡಲಾಗುವುದು. ನಿಮಗೆ ತಿಳಿದಿರುವ ಎಲ್ಲರಿಗೂ ಈ ಸಂದೇಶವನ್ನು ಹರಡಿ….” ಎಂದಿದೆ.
Also Read: ಆಸ್ಟ್ರೇಲಿಯನ್ ಖಗೋಳ ವಿಜ್ಞಾನಿ ಬಾಹ್ಯಾಕಾಶದಿಂದ ಜಿಗಿದರು ಎನ್ನುವ ಹೇಳಿಕೆ ಹಿಂದಿನ ನಿಜಾಂಶ ಏನು?
ಈ ಕುರಿತು ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ತಪ್ಪಾದ ಸಂದರ್ಭ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ವರದಿ ಲಭ್ಯವಾಗಿದೆ.
‘ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ವರದಿಯನ್ನು ಕರ್ನಾಟಕ ಪೊಲೀಸರು ನಿರಾಕರಿಸಿದ್ದಾರೆ’ ಶೀರ್ಷಿಕೆಯಡಿ ನ್ಯೂಸ್ 18 ಆಗಸ್ಟ್ 23, 2018ರಂದು ವರದಿಯನ್ನು ಪ್ರಕಟಿಸಿದ್ದು, ಇದರಲ್ಲಿ ಪೊಲೀಸ್ ಇಲಾಖೆಯು ಮಹಿಳೆಯರ ತುರ್ತು ಸಹಾಯವಾಣಿ 112 ಎಂದು ಹೇಳಿದೆ ಮತ್ತು ಇಲಾಖೆಯಿಂದ ಪ್ರಯಾಣ ನೆರವು ನೀಡುವುದಿಲ್ಲ ಎಂದು ಹೇಳಿದೆ” ಎಂದಿದೆ.
ಆಗಸ್ಟ್ 22, 2024ರಂದು ಕರ್ನಾಟಕ ರಾಜ್ಯ ಪೊಲೀಸ್ ಎಕ್ಸ್ ಪೋಸ್ಟ್ ಮಾಡಿದ್ದು, “ಗಮನಿಸಿ !! ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನಿಯಂತ್ರಣ ಕೊಠಡಿಗೆ ಕರೆ ಮಾಡಿದಲ್ಲಿ, ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಮೆಸೇಜ್ ಹರಿದಾಡುತ್ತಿದ್ದು, ಈ ಮಾಹಿತಿಯು ಸುಳ್ಳಾಗಿದೆ. ತುರ್ತು ಸಹಾಯಕ್ಕಾಗಿ 112 ಗೆ ಕರೆಮಾಡಿ.” ಎಂದಿದೆ. ಈ ಪೋಸ್ಟ್ ಅನ್ನು ಇಲ್ಲಿ ನೋಡಬಹುದು.
ಇನ್ನು 1909 ಸಂಖ್ಯೆಯ ಸಹಾಯವಾಣಿ ಎಲ್ಲಿಯದ್ದು ಎಂಬುದನ್ನು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಬೆಂಗಳೂರು ನಗರ ಜಿಲ್ಲೆಯ ವೆಬ್ ಸೈಟ್ ನಲ್ಲಿ ಮಹಿಳಾ ಸಹಾಯವಾಣಿ – 1091 ಇರುವುದಾಗಿ ಇದೆ. ಇದನ್ನು ಇಲ್ಲಿ ನೋಡಬಹುದು.
ಇದರೊಂದಿಗೆ ಜನವರಿ 23, 2023ರ ಡೆಕ್ಕನ್ ಹೆರಾಲ್ಡ್ ವರದಿಯೊಂದನ್ನು ನಾವು ಗಮನಿಸಿದ್ದು, ಇದರಲ್ಲಿ ಬೆಂಗಳೂರಿನ 1091 ಹೆಲ್ಪ್ ಲೈನ್‌ಗೆ ಕೌಟುಂಬಿಕ ಹಿಂಸೆ ಕುರಿತ ಕರೆಗಳು ಹೆಚ್ಚಾಗಿ ಬಂದಿವೆ ಎಂದಿದೆ. ಈ ವರದಿಯಲ್ಲಿ ಸಹಾಯವಾಣಿಯನ್ನು ಪರಿಹಾರ್ ವನಿತಾ ಸಹಾಯವಾಣಿ (1091) ಎಂದು ಹೇಳಲಾಗಿದೆ.
Also Read: ರಾಹುಲ್ ಗಾಂಧಿಗೆ ಉದ್ಧವ್ ಠಾಕ್ರೆ ಬಾಗಿ ನಮಸ್ಕರಿಸಿದ ಎಡಿಟ್ ಮಾಡಿದ ಫೋಟೋ ವೈರಲ್
ಇದರೊಂದಿಗೆ ನಾವು ಇನ್ನಷ್ಟು ಶೋಧ ನಡೆಸಿದಾಗ 1091 ಸಂಖ್ಯೆಯಲ್ಲಿ ಲುಧಿಯಾನ ಪೊಲೀಸರು ಮಹಿಳೆಯರಿಗೆ ಸಂಚಾರಕ್ಕೆ ಸಹಾಯ ಮಾಡುವ ಕುರಿತ ವಿವರಗಳು ಲಭ್ಯವಾಗಿವೆ. ಡಿಸೆಂಬರ್ 5, 2019ರ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಲುಧಿಯಾನ ಪೊಲೀಸರು 3 ಸಾವಿರಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿದ್ದು, ಕೇರಳದಿಂದಲೂ ಕರೆಗಳನ್ನು ಸ್ವೀಕರಿಸಿದ್ದಾರೆ ಎಂದಿದೆ. ಈ ವರದಿಯಲ್ಲಿರುವಂತೆ ಲುಧಿಯಾನ ಪೊಲೀಸರ 1091- 7832018555 ಸಂಖ್ಯೆಯು ರಾತ್ರಿ ವೇಳೆ ಮಹಿಳೆಯರನ್ನು ಸುರಕ್ಷಿತವಾಗಿ ತಲುಪಿಸುವ ಸಹಾಯವಾಣಿ ಎಂದು ಹೇಳಲಾಗಿದೆ.
ಈ ಕುರಿತು ಲುಧಿಯಾನ ಪೊಲೀಸರು ಡಿಸೆಂಬರ್ 5, 2019ರಂದು ಮಾಡಿರುವ ಟ್ವೀಟ್ ಇಲ್ಲಿದೆ.
ಇನ್ನು ಲುಧಿಯಾನ ಜಿಲ್ಲಾ ವೆಬ್ ಸೈಟ್ ಅನ್ನು ನಾವು ಪರಿಶೀಲಿಸಿದ್ದು,ಅದರಲ್ಲಿ ಮಹಿಳೆಯರ ಹೆಲ್ಪ್ ಲೈನ್ 1091 ಇರುವುದನ್ನೂ ನಾವು ಗಮನಿಸಿದ್ದೇವೆ.
ರಾಷ್ಟ್ರೀಯ ಮಹಿಳಾ ಆಯೋಗದ ವೆಬ್ಸೈಟ್ ನಲ್ಲಿಯೂ ಮಹಿಳೆಯರ ಸಹಾಯವಾಣಿ 1091 ಎಂಬ ಸಂಖ್ಯೆ ಇರುವುದನ್ನು ನಾವು ಗಮನಿಸಿದ್ದೇವೆ. ಅದನ್ನು ಇಲ್ಲಿ ನೋಡಬಹುದು.
ಮಹಿಳೆಯರಿಗೆ ರಾತ್ರಿ ವೇಳೆ ಸುರಕ್ಷಿತವಾಗಿ ಮನೆ ತಲುಪಲು ಪೊಲೀಸರಿಂದ ಹೆಲ್ಪ್ ಲೈನ್ ಎಂಬ ಬಗ್ಗೆ 2021ರಲ್ಲಿ ಕೇರಳ ಭಾಗದಲ್ಲಿ, 2023ರಲ್ಲಿ ಮಹಾರಾಷ್ಟ್ರ ಭಾಗದಲ್ಲಿ ಮೆಸೇಜ್ ವೈರಲ್ ಆಗಿದ್ದು, ಈ ಕುರಿತು ನ್ಯೂಸ್‌ಚೆಕರ್ ಮಲಯಾಳ ಮತ್ತು ಇಂಗ್ಲಿಷ್ ನಲ್ಲಿ ಈ ಬಗ್ಗೆ ವರದಿಯನ್ನು ಪ್ರಕಟಿಸಿತ್ತು.
ಈ ಸತ್ಯಶೋಧನೆಯ ಪ್ರಕಾರ 1091 ಎನ್ನುವ ಸಂಚಾರ ನೆರವಿನ ಕುರಿತ ಮಹಿಳಾ ಸಹಾಯವಾಣಿಯನ್ನು ಪೊಲೀಸರು ಆರಂಭಿಸಿಲ್ಲ. ಈ ಸಂಖ್ಯೆ ಮತ್ತು ಈ ಕುರಿತ ಹೇಳಿಕೆ ತಪ್ಪಾದ ಸಂದರ್ಭವಾಗಿದೆ ಎಂದು ತಿಳಿದುಬಂದಿದೆ.
Also Read: Fact Check: ಮಾಲ್ಡೀವ್ಸ್ ಭಾರತಕ್ಕೆ 28 ದ್ವೀಪಗಳನ್ನು ನೀಡಿದೆ ಎನ್ನುವ ಹೇಳಿಕೆ ನಿಜವೇ?
Our Sources
Report By News 18, Dated: August 23, 2024
Tweet By Karnataka state police, Dated: August 22, 2024
Report By Times of India, Dated: December 5, 2019
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
June 14, 2025
Ishwarachandra B G
June 12, 2025
Kushel Madhusoodan
May 31, 2025