Authors
Claim
ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲೇ ಭಾರೀ ಸಂಖ್ಯೆಯಲ್ಲಿ ವಾನರ ಸೇನೆ ಕಂಡುಬಂದಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ಹರಿದಾಡಿದೆ.
ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ಥೈಲ್ಯಾಂಡ್ ವೀಡಿಯೋ, ಅಯೋಧ್ಯೆಯದ್ದಲ್ಲ ಎಂದು ಪತ್ತೆ ಮಾಡಿದೆ.
Also Read: ಅಯೋಧ್ಯೆ ಆಗಸದಲ್ಲಿ ಡ್ರೋನ್ ಮೂಲಕ ರಾಮನ ಚಿತ್ರವನ್ನು ಸೃಷ್ಟಿಸಲಾಗಿದೆಯೇ?
Fact
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ಮಾರ್ಚ್ 11, 2020 ರಂದು ಥಾಯ್ಲೆಂಡ್ನ ನೇಷನ್ ಟಿವಿ ವರದಿ ಪ್ರಕಾರ, “ಫಾರಾ ಕನ್ ದೇಗುಲ ಮತ್ತು ಫರಾ ಪ್ರಾಂಗ್ ಸಾಮ್ ಯೋಟ್ ನಲ್ಲಿ ಸಾಗುತ್ತಿದ್ದ ವಾಹನ ಚಾಲಕರಿಗೆ ಅಚ್ಚರಿ ಕಾದಿತ್ತು. ಈ ದೇಗುಲ ಸುತ್ತ ಇದ್ದ ದೊಡ್ಡ ಸಂಖ್ಯೆಯ ಮಂಗಗಳು ರಸ್ತೆಗೆ ಬಂದಿದ್ದು , ನೋಡಲು ಭಯ ಹುಟ್ಟಿಸುವಂತಿತ್ತು.” (ಗೂಗಲ್ ಮೂಲಕ ಭಾಷಾಂತರಿಸಲಾಗಿದೆ.) ಎಂದಿದೆ.
ಮಾರ್ಚ್ 11, 2020ರ ಖಾಸೋದ್ ವರದಿ ಪ್ರಕಾರ, “ಚಾವೊ ಚೀಲೋಪಬರಿ ಎಂಬಲ್ಲಿ ಜನರನ್ನು ಲೆಕ್ಕಿಸದ ಸಾವಿರಕ್ಕೂ ಹೆಚ್ಚು ಕಪಿಗಳು ರಸ್ತೆ ಮಧ್ಯದಲ್ಲೇ ಜಗಳ ಮಾಡಿದವು” (ಗೂಗಲ್ ಮೂಲಕ ಭಾಷಾಂತರಿಸಲಾಗಿದೆ) ಎಂದಿದೆ.
ಈ ಬಗ್ಗೆ ನಾವು ಇನ್ನೂ ಹೆಚ್ಚಿನ ಶೋಧನೆ ನಡೆಸಿದ್ದು ಯೂಟ್ಯೂಬ್ ವೀಡಿಯೋ ಲಭ್ಯವಾಗಿವೆ. ಮಾರ್ಚ್ 13, 2020 ರಂದು ಪ್ರಕಟಿಸಿದ ಗಾರ್ಡಿಯನ್ ನ್ಯೂಸ್ ಯೂಟ್ಯೂಬ್ ವರದಿ ಪ್ರಕಾರ, ಈ ವೀಡಿಯೊ ಥೈಲ್ಯಾಂಡ್ನ ಚಿಲೋಪಬರಿ ಎಂಬ ಸ್ಥಳದಿಂದ ಬಂದಿದೆ, ಇದು ಪ್ರವಾಸಿಗರಿಂದ ತುಂಬಿರುತ್ತದೆ, ಅವರು ವಿವಿಧ ಆಹಾರಗಳನ್ನು ಕಪಿಗಳಿಗೆ ನೀಡುತ್ತಾರೆ. ಆದರೆ ಕೋವಿಡ್ ಕಾರಣಕ್ಕೆ ಜನಸಂದಣಿ ಕಡಿಮೆ ಇದ್ದ ಕಾರಣ ಕಪಿಗಳಿಗೆ ಆಹಾರ ಸಿಗುತ್ತಿರಲಿಲ್ಲ. ಇದು ಈಶಾನ್ಯ ಬ್ಯಾಂಕಾಕ್ ನಲ್ಲಿ ಪ್ರವಾಸಿಗರು ಚಿತ್ರೀಕರಿಸಿದ ವೀಡಿಯೋವಾಗಿದ್ದು ಕಪಿಗಳು ರಸ್ತೆಯಲ್ಲಿ ಸಂಚರಿಸಿ ಕಾದಾಡುವ ದೃಶ್ಯ ಇದೆ. ಈ ಎಲ್ಲ ವರದಿಗಳಲ್ಲಿರುವ ಫೋಟೋ, ವೀಡಿಯೋಗಳು ವೈರಲ್ ವೀಡಿಯೋವನ್ನು ಹೋಲುವುದುನ್ನು ನಾವು ಕಂಡುಕೊಂಡಿದ್ದೇವೆ.
ಆದ್ದರಿಂದ ಸತ್ಯಶೋಧನೆಯ ಪ್ರಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲೇ ಭಾರೀ ಸಂಖ್ಯೆಯಲ್ಲಿ ವಾನರ ಸೇನೆ ಕಂಡುಬಂದಿದೆ ಎನ್ನುವುದು ತಪ್ಪಾಗಿದೆ..
Also Read: ಅಯೋಧ್ಯೆಗೆ ಪಟಾಕಿ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಎನ್ನುವುದು ನಿಜವೇ?
Result: False
Our Sources
Report By Nationtv.tv, Dated: March 11, 2020
Report By Khaosad, Dated: March 11, 2020
YouTube Video By Gardian News, Dated: March 13, 2020
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.