Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಸಿದವರನ್ನು ಭಾರತೀಯ ಯೋಧರು ಬಂಧಿಸಿದ್ದಾರೆ
ಢಾಕಾದ ಮೊಹಮ್ಮದ್ಪುರದಲ್ಲಿರುವ ಜಿನೀವಾ ಶಿಬಿರದಲ್ಲಿ ಮಾದಕವಸ್ತು ದೊರೆ ಬುನಿಯಾ ಸೊಹೆಲ್ ಬಂಧನಕ್ಕೆ ಬಾಂಗ್ಲಾದೇಶದ ಸೇನೆ ನಡೆಸಿದ ಕಾರ್ಯಾಚರಣೆ ಇದಾಗಿದೆ
ವಕ್ಪ್ ತಿದ್ದುಪಡಿ ಕಾಯ್ದೆ ಜಾರಿಯಾದ ಬಳಿಕ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ಹಿಂಸಾಚಾರ ನಡೆದ ಬಳಿಕ ಅಲ್ಲಿ ಹಿಂಸಾಚಾರ ನಡೆಸಿದವರನ್ನು ಭಾರತೀಯ ಯೋಧರು ಬಂಧಿಸಿದ್ದಾರೆ ಎಂದು ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಈ ಹೇಳಿಕೆ ಕಂಡುಬಂದಿದ್ದು, ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದೆ. ಈ ವೇಳೆ ಇದು ತಪ್ಪು ಹೇಳಿಕೆ ಎಂದು ಗೊತ್ತಾಗಿದೆ.

ಸತ್ಯಶೋಧನೆಗಾಗಿ ನಾವು ಈ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಈ ವೇಳೆ ವೀಡಿಯೋದಲ್ಲಿ ಬಾಂಗ್ಲಾ ವಿಷನ್ ಎಂಬ ಲೋಗೋ ನೋಡಿದ್ದೇವೆ. ಇದು ಬಾಂಗ್ಲಾದೇಶದ ಒಂದು ಸುದ್ದಿ ವಾಹಿನಿ ಎಂದು ಕಂಡುಬಂದಿದೆ.

ಜೊತೆಗೆ ಸೈನಿಕರ ಸಮವಸ್ತ್ರ, ವಾಹನ ಇತ್ಯಾದಿಗಳನ್ನು ನೋಡಿದ್ದು, ಇದು ಭಾರತದ ಸೈನಿಕರಲ್ಲ ಎಂದು ಕಂಡುಬಂದಿದೆ.

ಬಳಿಕ ನಾವು ಈ ಕುರಿತು ಗೂಗಲ್ ಲೆನ್ಸ್ ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದು, ಫಲಿತಾಂಶಗಳು ಲಭ್ಯವಾಗಿವೆ. ಈ ಫಲಿತಾಂಶಗಳು ಇದು ಬಾಂಗ್ಲಾದೇಶದ ಜಿನೀವಾ ಶಿಬಿರದಲ್ಲಿ ಮಿಲಿಟರಿ ನಡೆಸಿದ ಬಂಧನ ಕಾರ್ಯಾಚರಣೆಯದ್ದು ಎಂದು ಗೊತ್ತಾಗಿದೆ.
ಎಟಿಎನ್ ನ್ಯೂಸ್ ಲೈವ್ ಅಕ್ಟೋಬರ್ 29, 2024 ರಂದು ಯೂಟ್ಯೂಬ್ ನಲ್ಲಿ ಪ್ರಕಟಿಸಿದ ವೀಡಿಯೋದಲ್ಲಿ “ಮೊಹಮ್ಮದ್ಪುರ ಜಿನೀವಾ ಶಿಬಿರದಲ್ಲಿ ಸೇನಾ ಕಾರ್ಯಾಚರಣೆಯ ಸಮಯದಲ್ಲಿ ಏನಾಯಿತು?” ಎಂದಿದೆ.
ಜಮುನಾ ಟಿವಿ ಅಕ್ಟೋಬರ್ 28, 2024ರಂದು ಯೂಟ್ಯೂಬ್ ನಲ್ಲಿ ಪ್ರಕಟಿಸಿದ ವೀಡಿಯೋದಲ್ಲಿ “ಮೊಹಮ್ಮದ್ಪುರದಲ್ಲಿ ಸೇನೆಯಿಂದ ಎಂಬತ್ತಾರನೇ ಕಾರ್ಯಾಚರಣೆ” ಎಂದಿದೆ. ಈ ಎರಡೂ ವೀಡಿಯೋಗಳಲ್ಲಿ ವೈರಲ್ ವೀಡಿಯೋವನ್ನು ಹೋಲುವ ದೃಶ್ಯಗಳಿರುವುದನ್ನು ನಾವು ಕಂಡಿದ್ದೇವೆ.
ಇದರ ಪ್ರಕಾರ ನಾವು ಇನ್ನಷ್ಟು ಕೀವರ್ಡ್ ಸರ್ಚ್ ನಡೆಸಿದ್ದು ವಿವಿಧ ಮಾಧ್ಯಮ ವರದಿಗಳು ಬಾಂಗ್ಲಾದೇಶದ ಸೇನಾ ಕಾರ್ಯಾಚರಣೆಗಳ ಬಗ್ಗೆ ಹೇಳಿವೆ.
ಈಖೋನ್ ಟಿವಿ 29 ಅಕ್ಟೋಬರ್ 2024ರ ವರದಿಯಲ್ಲಿ “ರಾಜಧಾನಿಯ ಮೊಹಮ್ಮದ್ಪುರದಲ್ಲಿರುವ ಜಿನೀವಾ ಶಿಬಿರದಲ್ಲಿ ನಡೆಸಿದ ದಾಳಿಯಲ್ಲಿ ಸೇನೆಯು ಬಂದೂಕುಗಳೊಂದಿಗೆ ಏಳು ಜನರನ್ನು ಬಂಧಿಸಿದೆ. ಆ ಸಮಯದಲ್ಲಿ, ಸೇನೆಯು ಎರಡು ಬಂದೂಕುಗಳು, 20 ಸುತ್ತು ಗುಂಡುಗಳು ಮತ್ತು ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿತು. ಸೋಮವಾರ (ಅಕ್ಟೋಬರ್ 28) ರಾತ್ರಿ 11 ಗಂಟೆ ಸುಮಾರಿಗೆ ಸೇನೆ ಕಾರ್ಯಾಚರಣೆ ನಡೆಸಿದೆ. 23 ಪೂರ್ವ ಬಂಗಾಳ ರೆಜಿಮೆಂಟ್ನ ಡೇರಿಂಗ್ ಟೈಗರ್ಸ್ ಘಟಕವು ರಾತ್ರಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿತು. ಜಿನೀವಾ ಕ್ಯಾಂಪ್ ಮಾದಕವಸ್ತು ದೊರೆ ಬುನ್ಯಾ ಸೊಹೆಲ್ನನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗಿದೆ ಎಂದು ಸೇನೆ ತಿಳಿಸಿದೆ. ಆದಾಗ್ಯೂ, ಸೈನ್ಯವು ಅವನನ್ನು ಬಂಧಿಸಲು ಸಾಧ್ಯವಾಗದಿದ್ದರೂ, ಅವನ ಏಳು ಸಹಚರರನ್ನು ಬಂಧಿಸಿತು. ಕಾರ್ಯಾಚರಣೆಯ ಸಮಯದಲ್ಲಿ, 9 ತಂಡಗಳು ಎರಡು ಬಂದೂಕುಗಳು, 20 ಸುತ್ತು ಗುಂಡುಗಳು ಮತ್ತು ಮಾದಕ ವಸ್ತುಗಳನ್ನು ವಶಪಡಿಸಿಕೊಂಡವು.” ಎಂದಿದೆ.

ಸೊಮೊಯ್ ನ್ಯೂಸ್ ಟಿವಿ ಅಕ್ಟೋಬರ್ 29, 2024ರ ವರದಿಯಲ್ಲಿ, “ಸೋಮವಾರ (ಅಕ್ಟೋಬರ್ 28) ರಾತ್ರಿ ಸೇನೆಯ ಒಂಬತ್ತು ತಂಡಗಳು ಕಾರ್ಯಾಚರಣೆ ನಡೆಸಿದವು. ಸೇನಾ ಮೂಲಗಳ ಪ್ರಕಾರ, ಮಾದಕವಸ್ತು ದೊರೆ ಬುನಿಯಾ ಸೊಹೆಲ್ ಹುಡುಕಾಟಕ್ಕಾಗಿ ದಾಳಿ ನಡೆಸಲಾಯಿತು. ಅವನು ಬಿಹಾರಿ ಶಿಬಿರದಲ್ಲಿ ಮಾದಕವಸ್ತು ಸಾಮ್ರಾಜ್ಯವನ್ನು ನಡೆಸುತ್ತಾನೆ. ಆದರೆ ಸೈನ್ಯದ ಉಪಸ್ಥಿತಿಯನ್ನು ಗ್ರಹಿಸಿದ ಸೋಹೆಲ್ ಪರಾರಿಯಾಗಿದ್ದಾನೆ. ಅವನ ಅಡಗುತಾಣಕ್ಕೆ ದಾಳಿ ನಡೆಸಿ ಗುಂಪಿನ ಏಳು ಸದಸ್ಯರನ್ನು ಒಬ್ಬೊಬ್ಬರಾಗಿ ಬಂಧಿಸಲಾಯಿತು. ಇದರೊಂದಿಗೆ 2 ವಿದೇಶಿ ಬಂದೂಕುಗಳು, 20 ಗುಂಡುಗಳು ಮತ್ತು 3 ಹರಿತವಾದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.” ಎಂದಿದೆ.

ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಈ ಸಾಕ್ಷ್ಯಗಳ ಪ್ರಕಾರ ಢಾಕಾದ ಮೊಹಮ್ಮದ್ಪುರದಲ್ಲಿರುವ ಜಿನೀವಾ ಶಿಬಿರದಲ್ಲಿ ಮಾದಕವಸ್ತು ದೊರೆ ಬುನಿಯಾ ಸೊಹೆಲ್ ಬಂಧನಕ್ಕೆ ಬಾಂಗ್ಲಾದೇಶದ ಸೇನೆ ನಡೆಸಿದ ಕಾರ್ಯಾಚರಣೆ ಇದಾಗಿದೆ. ಇದು ಭಾರತೀಯ ಸೇನೆ ಬಂಧನ ನಡೆಸಿದ್ದಲ್ಲ ಎಂದು ಗೊತ್ತಾಗಿದೆ.
Also Read: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಾಂಗ್ಲಾದೇಶದ ಚಿತ್ತಗಾಂಗ್ ನಲ್ಲಿ ಪ್ರತಿಭಟನೆ ಎನ್ನುವುದು ನಿಜವಲ್ಲ
Our Sources
YouTube Video By ATN News, Dated: October 29, 2024
YouTube Video By Jamuna TV, Dated: October 28, 2024
Report By ekhon.tv, Dated: October 29, 2024
Report By somoynews.tv, Dated: October 29, 2024
(Inputs from Rifat Newschecker Bangladesh)
Vasudha Beri
November 29, 2025
Ishwarachandra B G
November 22, 2025
Tanujit Das
November 17, 2025