Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಬಳಿಕ ಮುರ್ಷಿದಾಬಾದ್ ಗಲಭೆ ಬೆನ್ನಲ್ಲೇ, ಅಲ್ಲಿನ ಹಿಂದೂಗಳ ರಕ್ಷಣೆಗಾಗಿ ಸಾವಿರಾರು ಬಜರಂಗದಳದ ಕಾರ್ಯಕರ್ತರು ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ
ಹಿಂದೂಗಳ ರಕ್ಷಣೆಗಾಗಿ ಸಾವಿರಾರು ಬಜರಂಗದಳದ ಕಾರ್ಯಕರ್ತರು ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ ಎಂದ ಈ ವೀಡಿಯೋ ಸುಳ್ಳು. ಸಾಂಗ್ಲಿಯಲ್ಲಿ ಚಿಂಚಲಿ ಮಾಯಕ್ಕ ದೇವಸ್ಥಾನ ಉತ್ಸವ ಮುಗಿಸಿ ಬಂದವರು ರಸ್ತೆಯಲ್ಲಿ ಹಾರ್ನ್ ಮಾಡುತ್ತ, ಕೂಗುತ್ತ ಅನಾಗರಿಕವಾಗಿ ವರ್ತಿಸಿದ್ದು ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದರು
ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಬಳಿಕ ಮುರ್ಷಿದಾಬಾದ್ ಗಲಭೆ ಬೆನ್ನಲ್ಲೇ, ಅಲ್ಲಿನ ಹಿಂದೂಗಳ ರಕ್ಷಣೆಗಾಗಿ ಸಾವಿರಾರು ಬಜರಂಗದಳದ ಕಾರ್ಯಕರ್ತರು ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ಇತ್ಯಾದಿ ರಾಜ್ಯಗಳ ಮೂಲೆ ಮೂಲೆಗಳಿಂದ ಸಾವಿರಾರು ಬಜರಂಗದಳ ಕಾರ್ಯಕರ್ತರು ಹಿಂದೂಗಳ ಜೀವಗಳನ್ನು ರಕ್ಷಿಸಲು ನಿನ್ನೆ ರಾತ್ರಿ ಮಧ್ಯರಾತ್ರಿ ಬಂಗಾಳವನ್ನು ತಲುಪಿದರು. ಯಾವುದೇ ಸರ್ಕಾರವಾಗಲಿ ಅಥವಾ ಪೊಲೀಸರಾಗಲಿ ನಿಮ್ಮನ್ನು ಉಳಿಸಲು ಸಾಧ್ಯವಿಲ್ಲ..!! ನಿಮ್ಮನ್ನು ಉಳಿಸಲು ಸಾಧ್ಯವಾದರೆ, ಅದು ನಿಮ್ಮ ಒಗ್ಗಟ್ಟು….” ಹೀಗೆ ಹೇಳಲಾಗಿದೆ.

ಈ ಹೇಳಿಕೆಯೊಂದಿಗಿರುವ ವೈರಲ್ ವೀಡಿಯೋವನ್ನು ನಾವು ಪರಿಶೀಲಿಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ. (ಆರ್ಕೈವ್ ಆವೃತ್ತಿ ಇಲ್ಲಿದೆ)
Also Read: ಬಾಂಗ್ಲಾದೇಶದಲ್ಲಿ ಮಹಿಳೆಯೊಬ್ಬಳ ಮೇಲೆ ಕಲ್ಲೆಸೆಯಲಾಗುತ್ತಿದೆ ಎಂದ ಈ ವೀಡಿಯೋ ನಿಜವಲ್ಲ, ಇದು ಶೂಟಿಂಗ್!
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ.
ಈ ವೇಳೆ dnyaneshwar_3116 ಎಂಬ ಇನ್ಸ್ಟಾ ಬಳಕೆದಾರರು ಫೆಬ್ರವರಿ 17, 2025ರಂದು ಹಂಚಿಕೊಂಡಿರುವ ವೀಡಿಯೋವನ್ನು ನೋಡಿದ್ದೇವೆ. ಇದು ವೈರಲ್ ವೀಡಿಯೋಕ್ಕೆ ಸಾಮ್ಯತೆಯನ್ನು ಹೊಂದಿದೆ.
ಈ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, sumit_suryawanshi_5005 ಎಂಬ ವಾಟರ್ ಮಾರ್ಕ್ ವೀಡಿಯೋದಲ್ಲಿರುವುದನ್ನು ಗಮನಿಸಿದ್ದೇವೆ.

17 ಫೆಬ್ರವರಿ 2025ರಂದು sumit_suryawanshi_5005 ಖಾತೆಯಿಂದ ಅದೇ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಅಲ್ಲಿ #sanglikar ಎಂದು ಟ್ಯಾಗ್ ಇರುವುದನ್ನು ನೋಡಿದ್ದೇವೆ. ಇದರ ಆಧಾರದಲ್ಲಿ ನಾವು ಸಾಂಗ್ಲಿಯನ್ನು ಆಧಾರವಾಗಿರಿಸಿ ಕೀವರ್ಡ ಸರ್ಚ್ ನಡೆಸಿದ್ದು, ಮಾಧ್ಯಮ ವರದಿಗಳನ್ನು ನೋಡಿದ್ದೇವೆ.

ಫೆಬ್ರವರಿ 19, 2025ರ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, “ಕರ್ನಾಟಕದ ವಾರ್ಷಿಕ ಜಾತ್ರೆಯಿಂದ ಮಂಗಳವಾರ ಬೆಳಗಿನ ಜಾವ 2 ಗಂಟೆಗೆ ಸಾಂಗ್ಲಿಗೆ ಹಿಂತಿರುಗುತ್ತಿದ್ದ ನೂರಾರು ಮೋಟಾರ್ ಸೈಕಲ್ ಸವಾರರು ಹಾರ್ನ್ ಮಾಡುತ್ತ ಜೋರಾಗಿ ಹರ್ಷೋದ್ಗಾರ ಮಾಡುತ್ತಾ ಬಂದಿದ್ದು ಪೊಲೀಸರ ಕ್ರಮ ಎದುರಿಸಬೇಕಾಯಿತು. ಪೊಲೀಸರು ರೌಡಿ ಮೋಟಾರ್ ಸೈಕಲ್ ಸವಾರರ ಮೇಲೆ ಲಾಠಿಚಾರ್ಜ್ ನಡೆಸಿದ್ದು , ಸುಮಾರು 45 ಜನರು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಅನೇಕರು ತಮ್ಮ ದ್ವಿಚಕ್ರ ವಾಹನಗಳನ್ನು ಬಿಟ್ಟು ಓಡಿ ಹೋಗಿದ್ದಾರೆ. ಈ ಮೋಟಾರ್ ಸೈಕಲ್ ಸವಾರರು ಪ್ರತಿ ವರ್ಷ ಮಾಯಕ್ಕ ದೇವಿ ವಾರ್ಷಿಕ ಜಾತ್ರೆಯಲ್ಲಿ ಭಾಗವಹಿಸಲು ನೆರೆಯ ಕರ್ನಾಟಕದ ಚಿಂಚಲಿಗೆ ಭೇಟಿ ನೀಡುತ್ತಾರೆ, ಅಲ್ಲಿ ವಾರ್ಷಿಕ ಕುದುರೆ ಬಂಡಿ ಓಟವನ್ನು ಆಯೋಜಿಸಲಾಗುತ್ತದೆ. ಸುಮಾರು 65 ಕಿ.ಮೀ ದೂರವನ್ನು ಕ್ರಮಿಸುವ ಕುದುರೆ ಬಂಡಿ ಓಟವು ಆ ಪ್ರದೇಶದಲ್ಲಿ ಅತಿ ಉದ್ದದ್ದು ಎಂದು ಸಂಘಟಕರು ಹೇಳಿಕೊಳ್ಳುತ್ತಾರೆ. ಈ ಕುರಿತಾಗಿ “ಸಾಂಗ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕಿರಣ್ ಚೌಗುಲೆ ಮಾತನಾಡಿ,” ಸಾಂಗ್ಲಿ ನಗರದಲ್ಲಿ ಕುದುರೆ ಬಂಡಿ ಓಟಕ್ಕೆ ಅನುಮತಿ ಇಲ್ಲ . ಆದರೆ, ಅನೇಕ ಯುವಕರು ತಮ್ಮ ಕುದುರೆ ಬಂಡಿಗಳನ್ನು ಓಡಿಸಲು ಬಂದರು ಮತ್ತು ಅವರನ್ನು ಮುನ್ನಡೆಸುತ್ತಿದ್ದ ಬೈಕ್ ಸವಾರರು ಗಲಾಟೆ ಮಾಡಲು, ಜೋರಾಗಿ ಚೀರಾಡಲು ಮತ್ತು ಹಾರ್ನ್ ಮಾಡಲು ಪ್ರಾರಂಭಿಸಿದರು. ಸಾಂಗ್ಲಿಯಲ್ಲಿ ನಮಗೆ ಪೊಲೀಸ್ ಬಂದೋಬಸ್ತ್ ಇತ್ತು ಮತ್ತು ಅವರನ್ನು ತಡೆಯಲು ಲಾಠಿಚಾರ್ಜ್ ಮಾಡದೆ ಬೇರೆ ದಾರಿಯಿರಲಿಲ್ಲ. ಎಲ್ಲಾ ಗೂಂಡಾಗಿರಿಯನ್ನು ನಿಲ್ಲಿಸಲು ಕಟ್ಟುನಿಟ್ಟಿನ ಆದೇಶವಿತ್ತು. ಜೋರಾದ ಶಬ್ದಗಳಿಂದ ಎಚ್ಚರಗೊಂಡ ನಿವಾಸಿಗಳು ಸವಾರರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.” ಎಂದಿದೆ.

ಫೆಬ್ರವರಿ 18, 2025ರ ಸಾಮ್ ಟಿವಿ ಯೂಟ್ಯೂಬ್ ವೀಡಿಯೋ ಪ್ರಕಾರ, “ಸಾಂಗ್ಲಿಯಲ್ಲಿ, ಗೂಂಡಾಗಳ ದುರಹಂಕಾರವು ಹೊಸ ಮಟ್ಟವನ್ನು ತಲುಪಿದ್ದು, ಪೊಲೀಸರು ತ್ವರಿತ ಕ್ರಮ ಕೈಗೊಳ್ಳಲು ಕಾರಣರಾಗಿದ್ದಾರೆ. ಕಾನೂನು ಜಾರಿ ತಂಡವು ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಈ ಕಠಿಣ ಕ್ರಮವು ಈ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಢಸಂಕಲ್ಪವನ್ನು ಎತ್ತಿ ತೋರಿಸುತ್ತದೆ. ಇಂತಹ ಅಶಿಸ್ತಿನ ವರ್ತನೆಯ ವಿರುದ್ಧ ಸಾರ್ವಜನಿಕರು ಈಗ ಬಲವಾದ ನಿಲುವನ್ನು ನೋಡುತ್ತಿದ್ದಾರೆ.” ಎಂದಿದೆ. ಜೊತೆಗೆ ಈ ವೀಡಿಯೋದಲ್ಲಿ ವೈರಲ್ ವೀಡಿಯೋವನ್ನು ಹೋಲುವ ವೀಡಿಯೋವನ್ನು ಕಂಡಿದ್ದೇವೆ.
ಈ ಘಟನೆ ಕುರಿತಾಗಿ ಸ್ಥಳೀಯ ಪತ್ರಕರ್ತ ವಿನಾಯಕ್ ಜಾಧವ್ ಅವರನ್ನು ನ್ಯೂಸ್ ಚೆಕರ್ ಸಂಪರ್ಕಿಸಿದಾಗ, ಅವರು ಘಟನೆಯ ವಿವರ ನೀಡಿದ್ದಾರೆ. ಕರ್ನಾಟಕದ ಚಿಂಚಲಿ ಮಾಯಕ್ಕ ದೇವಸ್ಥಾನ ಉತ್ಸವ ಸಂದರ್ಭ ಕ್ಕೆ ಸಾಂಗ್ಲಿಯಲ್ಲಿರುವ ಸಾಂಗ್ಲಿವಾಡಿಯಿಂದ ಯುವಕರು ವಾಹನಗಳಲ್ಲಿ ಕುದುರೆ ಗಾಡಿ, ಎತ್ತಿನ ಗಾಡಿಗಳಲ್ಲಿ ಯಾತ್ರೆ ಹೋಗುತ್ತಾರೆ. ಹೀಗೆ ಹೋಗಿ ನೂರಾರು ಮಂದಿ ವಾಪಸ್ ಬರುವವೇಳೆ ಸಾಂಗ್ಲಿ ಪೊಲೀಸ್ ಠಾಣೆ ರಸ್ತೆ ಸನಿಹ ಕರ್ಕಶ ಹಾರನ್ ಹಾಕಿದ್ದು, ಶಬ್ದ ಮಾಲಿನ್ಯ ಉಂಟುಮಾಡಿದ್ದರು. ಇದೇ ಸಂದರ್ಭ ಬ್ಯಾರಿಕೇಡ್ ಹಾಕಿದ್ದ ಪೊಲೀಸರು, ಅನಾಗರಿಕವಾಗಿ ವರ್ತಿಸಿದವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಕಳೆದ ಮೂರ್ನಾಲ್ಕು ವರ್ಷದಿಂದ ಯಾತ್ರೆ ವಾಪಸ್ ಬರುವ ವೇಳೆ ಯುವಕರು ಇಂತಹ ವರ್ತನೆ ತೋರುತ್ತಿದ್ದು ಅವರ ಮೇಲೆ ಪೊಲೀಸರು ಇತ್ತೀಚಿಗೆ ಕ್ರಮ ಕೈಗೊಂಡಿದ್ದರು ಎಂದು ಹೇಳಿದ್ದಾರೆ.
ಈ ಸಾಕ್ಷ್ಯಾಧಾರಗಳ ಪ್ರಕಾರ, ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಬಳಿಕ ಮುರ್ಷಿದಾಬಾದ್ ಗಲಭೆ ಬೆನ್ನಲ್ಲೇ, ಅಲ್ಲಿನ ಹಿಂದೂಗಳ ರಕ್ಷಣೆಗಾಗಿ ಸಾವಿರಾರು ಬಜರಂಗದಳದ ಕಾರ್ಯಕರ್ತರು ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ ಎಂದು ಹಂಚಿಕೊಳ್ಳುತ್ತಿರುವ ವೀಡಿಯೋ ಸಾಂಗ್ಲಿಯದ್ದಾಗಿದೆ. ಸಾಂಗ್ಲಿಯಲ್ಲಿ ಚಿಂಚಲಿ ಮಾಯಕ್ಕ ದೇವಸ್ಥಾನ ಉತ್ಸವ ಮುಗಿಸಿ ಬಂದವರು ರಸ್ತೆಯಲ್ಲಿ ಹಾರ್ನ್ ಮಾಡುತ್ತ, ಕೂಗುತ್ತ ಅನಾಗರಿಕವಾಗಿ ವರ್ತಿಸಿದ್ದು ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದರು ಎಂದು ಗೊತ್ತಾಗಿದೆ.
Also Read: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಾಂಗ್ಲಾದೇಶದ ಚಿತ್ತಗಾಂಗ್ ನಲ್ಲಿ ಪ್ರತಿಭಟನೆ ಎನ್ನುವುದು ನಿಜವಲ್ಲ
Our Sources
Instagram Post By sumit_suryawanshi_5005, Dated: February 17, 2025
Report By Times Of India, Dated: February 19, 2025
YouTube Video By Saam Tv, Dated: February 18, 2025
Conversation with Vinayak Jadhav, Journalist, Sangli
(Inputs From Prasad Prabhu, Newschecker Marathi)
Ishwarachandra B G
November 4, 2025
Ishwarachandra B G
November 1, 2025
Ishwarachandra B G
October 29, 2025