Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಾಂಗ್ಲಾದೇಶದ ಚಿತ್ತಗಾಂಗ್ ನಲ್ಲಿ ಪ್ರತಿಭಟನೆ
ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಾಂಗ್ಲಾದೇಶದ ಚಿತ್ತಗಾಂಗ್ ನಲ್ಲಿ ಪ್ರತಿಭಟನೆ ಎನ್ನುವುದು ನಿಜವಲ್ಲ, ಇದು ವಿದ್ಯಾರ್ಥಿ ಸಂಘಟನೆ ವತಿಯಿಂದ 2024ರಲ್ಲಿ ನಡೆದ ಪ್ರತಿಭಟನೆಯಾಗಿದೆ
ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ಹಿಂಸೆ ಭುಗಿಲೆದ್ದಿರುವಂತೆಯೇ, ಸಾವಿರಾರು ಸಂಖ್ಯೆಯ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮ ಹರಿದಾಡಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ವೀಡಿಯೋದಲ್ಲಿ, ವಕ್ಫ್ ಬಿಲ್ ವಿರೋಧಿಸಿ ಚಿತ್ತಗಾಂಗ್ ನಲ್ಲಿ ಪ್ರತಿಭಟನೆ ಎಂದು ಹೇಳಲಾಗಿದೆ.
ಈ ವೈರಲ್ ವೀಡಿಯೋ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಯಾಗಿದ್ದು ವಕ್ಫ್ ವಿಚಾರದ್ದಲ್ಲ ಎಂದು ತಿಳಿದುಬಂದಿದೆ.
Also Read: ಪೋಲಂಡ್ ಪ್ರವೇಶಿಸುತ್ತಿದ್ದ ಜಿಹಾದಿಗಳಿಗೆ ಗುಂಡಿಕ್ಕಿ ಕೊಲ್ಲಲಾಗಿದೆ ಎಂದ ಈ ವೀಡಿಯೋ ಹಿಂದಿನ ಸತ್ಯವೇನು?
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಸರ್ಚ್ ಮಾಡಿದ್ದೇವೆ. ಈ ವೇಳೆ ಹಲವು ಫೇಸ್ಬುಕ್ ಪೋಸ್ಟ್ ಗಳಲ್ಲಿ ಈ ವೀಡಿಯೋ ಬಾಂಗ್ಲಾದೇಶದ ಚಿತ್ತಗಾಂಗ್ ನದ್ದು ಎಂದು ಹೇಳಿ ಪೋಸ್ಟ್ ಗಳನ್ನು ಕಂಡಿದ್ದೇವೆ.
27 ನವೆಂಬರ್ 2024ರಂದು ಅರ್ಮಾನ್ ಪಾತ್ವರಿ ಎಂಬವರ ಫೇಸ್ಬುಕ್ ಪೋಸ್ಟ್ ನಲ್ಲಿ “ಜುಲೈನಲ್ಲಿ ಸಾಮೂಹಿಕ ಹತ್ಯೆ ನಡೆಸಿದ ಭಯೋತ್ಪಾದಕರ ವಿಚಾರಣೆಗೆ ಒತ್ತಾಯಿಸಿ ರಾಷ್ಟ್ರೀಯ ವಿದ್ಯಾರ್ಥಿ ಐಕ್ಯತಾ ಸಪ್ತಾಹದ ಸಂದರ್ಭದಲ್ಲಿ ಚಿತ್ತಗಾಂಗ್ ನಗರದಲ್ಲಿ ಬೃಹತ್ ಮೆರವಣಿಗೆ ಮತ್ತು ರಾಲಿ ನಡೆಯಿತು” ಎಂದಿದೆ.
ಇದರ ಆಧಾರದಲ್ಲಿ ಇನ್ನಷ್ಟು ಹುಡುಕಾಟ ನಡೆಸಿದಾಗ, 28 ನವೆಂಬರ್ 2024ರಂದು ಚಿತ್ತಗಾಂಗ್ನಲ್ಲಿ ಛಾತ್ರ ಶಿಬಿರ್ ನಿಂದ ಪ್ರತಿಭಟನೆ ಎಂಬ ಶೀರ್ಷಿಕೆಯಡಿ ಚಾನೆಲ್ 24 ಯೂಟ್ಯೂಬ್ ಚಾನೆಲ್ ನಲ್ಲಿ ವೈರಲ್ ವೀಡಿಯೋ ಹೋಲುವ ವೀಡಿಯೋ ಕಂಡುಕೊಂಡಿದ್ದೇವೆ.
27 ನವೆಂಬರ್ 2024ರಂದು ಬಾಂಗ್ಲಾದೇಶಿ ಇಸ್ಲಾಮಿ ಛಾತ್ರ ಶಿಬಿರ್ ವೆಬ್ ಸೈಟ್ ವರದಿಯ ಪ್ರಕಾರ, “ರಾಷ್ಟ್ರೀಯ ವಿದ್ಯಾರ್ಥಿ ಐಕ್ಯತಾ ಸಪ್ತಾಹದ ಸಂದರ್ಭದಲ್ಲಿ ಬಾಂಗ್ಲಾದೇಶದ ಇಸ್ಲಾಮಿ ಛಾತ್ರಶಿಬೀರ್ ಚಿತ್ತಗಾಂಗ್ ನಗರದಲ್ಲಿ ಪ್ರತಿಭಟನ ಮೆರವಣಿಗೆ ಮತ್ತು ರ್ಯಾಲಿಯನ್ನು ಆಯೋಜಿಸಿತ್ತು. ಜುಲೈನಲ್ಲಿ ನಡೆದ ಹತ್ಯಾಕಾಂಡದ ತ್ವರಿತ ವಿಚಾರಣೆಯನ್ನು ಒತ್ತಾಯಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿತ್ತು.” ಎಂದಿದೆ.
ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಈ ಸಾಕ್ಷ್ಯಗಳ ಪ್ರಕಾರ ಇದು ಬಾಂಗ್ಲಾದೇಶದ ಚಿತ್ತಗಾಂಗ್ ನಲ್ಲಿ ಛಾತ್ರ ಶಿಬಿರ ನಡೆಸಿದ ಪ್ರತಿಭಟನೆಯ ದೃಶ್ಯಾವಳಿಗಳಾಗಿದ್ದು, ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯದ್ದಲ್ಲ ಎಂದು ತಿಳಿದುಬಂದಿದೆ.
Also Read: ಬುರ್ಖಾ ಮತ್ತು ಹಿಜಾಬ್ ನಲ್ಲಿ ಇಂದಿರಾ ಗಾಂಧಿ ಎಂದು ಕ್ರಾಪ್ ಮಾಡಲಾದ ಫೋಟೋ ಹಂಚಿಕೆ
Our Sources
Facebook post By arman.patwary.31, Dated: 27 November 2024
YouTube Post By Channel 24, Dated: 28 November 2024
Report By shibir.org.bd, Dated: 27 November 2024
Ishwarachandra B G
April 26, 2025
Runjay Kumar
April 22, 2025
Ishwarachandra B G
April 21, 2025