Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಇಂಡಿಗೋ ಬಿಕ್ಕಟ್ಟಿನ ನಡುವೆ, ವಿಮಾನ ವಿಳಂಬ ಹಿನ್ನೆಲೆಯಲ್ಲಿ ಪ್ರಯಾಣಿಕರು ಗೋವಾ ವಿಮಾನ ನಿಲ್ದಾಣದಲ್ಲಿ ಡ್ಯಾನ್ಸ್ ಮಾಡಿದರು ಎಂದು ಹೇಳಿಕೆಯೊಂದನ್ನುಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ನ್ಯೂಸ್ ಚೆಕರ್ ಈ ಬಗ್ಗೆ ತನಿಖೆ ನಡೆಸಿದ್ದು, ಇದು ಇಂಡಿಗೋ ಬಿಕ್ಕಟ್ಟಿಗೆ ಸಂಬಂಧಿಸಿದ್ದಲ್ಲ ಮತ್ತು ಘಟನೆ ಅದಕ್ಕೂ ಹಿಂದಿನದ್ದು ಎಂದು ಕಂಡುಕೊಂಡಿದೆ.

Also Read: ಪಾಕಿಸ್ತಾನದ ಸಂಸತ್ತಿಗೆ ಕತ್ತೆ ಪ್ರವೇಶ; ಎಐ ವೀಡಿಯೋವನ್ನು ನಿಜವೆಂದು ತಿಳಿದು ವರದಿ ಮಾಡಿದ ಮಾಧ್ಯಮಗಳು
ಸತ್ಯಶೋಧನೆಗಾಗಿ ನ್ಯೂಸ್ ಚೆಕರ್ ಗೂಗಲ್ನಲ್ಲಿ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ಅಕ್ಟೋಬರ್ 1, 2025 ರಂದು ಟೈಮ್ಸ್ ನೌ ಫೇಸ್ಬುಕ್ನಲ್ಲಿ ಪ್ರಕಟಿಸಲಾದ ವೈರಲ್ ಕ್ಲಿಪ್ನ ದೀರ್ಘ ಆವೃತ್ತಿಯಿರುವ ಪೋಸ್ಟ್ ಲಭ್ಯವಾಗಿದೆ. ಗೋವಾ ವಿಮಾನ ನಿಲ್ದಾಣದಲ್ಲಿ ವಿಮಾನ ವಿಳಂಬದಿಂದಾಗಿ ಟರ್ಮಿನಲ್ ಒಳಗೆ ಪ್ರಯಾಣಿಕರು ಮತ್ತು ಸಿಬ್ಬಂದಿ ನೃತ್ಯ ಮಾಡುವುದರೊಂದಿಗೆ ಸ್ವಯಂಪ್ರೇರಿತ ಗರ್ಬಾ ನೃತ್ಯ ಮಾಡಿದ್ದಾರೆ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.
ಸೆಪ್ಟೆಂಬರ್ 30, 2025 ರ ಎನ್ ಡಿಟಿವಿ ವರದಿಯಲ್ಲಿ ಅದೇ ವೀಡಿಯೋದ ಸ್ಕ್ರೀನ್ಶಾಟ್ಗಳು ಲಭ್ಯವಾಗಿವೆ. ಈ ವರದಿಯಲ್ಲಿ, ” ಸೂರತ್ಗೆ ಹೋಗುವ ವಿಮಾನವು ಭಾನುವಾರ ಸಂಜೆ 5 ಗಂಟೆಗೆ ಗೋವಾದಿಂದ ಹೊರಡಬೇಕಿತ್ತು. ಪ್ರಯಾಣಿಕರು ಸೂರತ್ಗೆ ಹೋಗಿ ನವರಾತ್ರಿ ಉತ್ಸವಗಳಲ್ಲಿ, ವಿಶೇಷವಾಗಿ ಗರ್ಬಾದಲ್ಲಿ ಭಾಗವಹಿಸಲು ಎದುರು ನೋಡುತ್ತಿದ್ದರು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನ ವಿಳಂಬವಾಯಿತು… ವಿಮಾನ ಸಿಬ್ಬಂದಿ ಸ್ಪೀಕರ್ಗಳಿಗೆ ವ್ಯವಸ್ಥೆ ಮಾಡಿ, ಗರ್ಬಾಕ್ಕಾಗಿ ಎಲ್ಲರನ್ನೂ ಒಟ್ಟುಗೂಡಿಸಿದರು. ವಿಮಾನಯಾನ ಸಿಬ್ಬಂದಿ ಸೇರಿದಂತೆ ಜನರು ಜಾನಪದ ಗೀತೆಗಳಿಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ”

ಮಿಡ್ ಡೇ ಕೂಡ ಸೆಪ್ಟೆಂಬರ್ 30, 2025 ರಂದು ಫೇಸ್ಬುಕ್ನಲ್ಲಿ ಅದೇ ವೀಡಿಯೋವನ್ನು ಹಂಚಿಕೊಂಡಿದ್ದು, ಇದು ಈಗಿನ ವಿದ್ಯಮಾನಕ್ಕೆ ಸಂಬಂಧಿಸಿದ್ದಲ್ಲ. ಅದಕ್ಕೂ ಹಿಂದಿನದು ಎಂದು ದೃಢಪಡಿಸಿದೆ.

ಆದ್ದರಿಂದ, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಗರ್ಬಾ ಪ್ರದರ್ಶಿಸುತ್ತಿರುವ ವೈರಲ್ ವೀಡಿಯೋ ಹಳೆಯದಾಗಿದ್ದು, ಪ್ರಸ್ತುತ ಇಂಡಿಗೊ ಬಿಕ್ಕಟ್ಟಿಗೆ ಸಂಬಂಧಿಸಿಲ್ಲ ಎಂದು ಕಂಡುಬಂದಿದೆ.
Also Read: ಪುಟಿನ್ ವಿಮಾನದಲ್ಲಿ ಭಗವದ್ಗೀತೆ ಓದುತ್ತಿದ್ದಾರೆ ಎಂದ ವೈರಲ್ ಫೋಟೋ ಎಐ ಸೃಷ್ಟಿ!
Our Sources
Facebook Post By Times Now, Dated: October 1, 2025
Report By NDTV, Dated: September 30, 2025
Facebook Post By Mid Day, Dated: September 30, 2025
(ಈ ವರದಿಯನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)