Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಇಟಲಿ ಮೂಲದ ಫುಟ್ಬಾಲ್ ಕ್ಲಬ್ ಇಂಟರ್ ಮಿಲನ್ ಆಟಗಾರರು ಪ್ಯಾಲೆಸ್ತೀನಿಯನ್ ಧ್ವಜವನ್ನು ಹಿಡಿದು ಪ್ಯಾಲೆಸ್ತೀನ್ ಗೆ ಬೆಂಬಲ ಸೂಚಿಸಿದರು
2009ರ ಈ ಫೋಟೋವನ್ನು ತಪ್ಪಾದ ಅರ್ಥ ಬರುವಂತೆ ಕತ್ತರಿಸಿ ಹಂಚಿಕೊಳ್ಳಲಾಗುತ್ತಿದೆ
ಇಟಲಿ ಮೂಲದ ಫುಟ್ಬಾಲ್ ಕ್ಲಬ್ ಇಂಟರ್ ಮಿಲನ್ ಆಟಗಾರರು ಪ್ಯಾಲೆಸ್ತೀನಿಯನ್ ಧ್ವಜವನ್ನು ಹಿಡಿದು ಮಕ್ಕಳನ್ನು ಸ್ವಾಗತಿಸುತ್ತಿರುವ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಫುಟ್ಬಾಲ್ ತಂಡ ಪ್ಯಾಲೆಸ್ತೀನ್ ಗೆ ಬೆಂಬಲವನ್ನು ನೀಡಿದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ.
ಇಂಟರ್ ಮಿಲನ್ “ತಮ್ಮ ಪಂದ್ಯಕ್ಕೂ ಮೊದಲು ಪ್ಯಾಲೆಸ್ತೀನ್ ಗೆ ಒಗ್ಗಟ್ಟನ್ನು ವ್ಯಕ್ತಪಡಿಸುತ್ತಿದೆ” ಎಂದು ಹೇಳುವ ಫೋಟೋವನ್ನು ಎಕ್ಸ್ ಮತ್ತು ಫೇಸ್ಬುಕ್ ಬಳಕೆದಾರರು ಹಂಚಿಕೊಂಡಿದ್ದಾರೆ. ಆದಾಗ್ಯೂ, ನ್ಯೂಸ್ಚೆಕರ್ ಇದು ಸುಳ್ಳು ಎಂದು ಕಂಡುಹಿಡಿದಿದೆ.

ಇಂತಹ ಪೋಸ್ಟ್ ಗಳನ್ನು ಇಲ್ಲಿ,ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಗೂಗಲ್ನಲ್ಲಿ “Inter Milan” ಮತ್ತು “Palestine” ಎಂಬ ಕೀವರ್ಡ್ ಹುಡುಕಾಟ ನಡೆಸಿದಾಗ, ಫುಟ್ಬಾಲ್ ಕ್ಲಬ್ ಮಧ್ಯಪ್ರಾಚ್ಯದ ದೇಶಕ್ಕೆ ಬೆಂಬಲ ನೀಡಿದೆ ಎಂದು ಹೇಳುವ ಯಾವುದೇ ಇತ್ತೀಚಿನ ವರದಿಗಳು ಕಂಡುಬಂದಿಲ್ಲ.
ಅನಂತರ ನಾವು ಗೂಗಲ್ ಲೆನ್ಸ್ನಲ್ಲಿ ವೈರಲ್ ಫೋಟೋದ ಬಗ್ಗೆ ಶೋಧ ನಡೆಸಿದ್ದು, ಇದು ಸ್ಟಾಕ್ ಇಮೇಜ್ ಡಿಪಾಸಿಟರಿ ಗೆಟ್ಟಿ ಇಮೇಜಸ್ ನಲ್ಲಿ ಕಂಡುಬಂದಿದೆ. ಇದು ವೈರಲ್ ಚಿತ್ರದ ಪೂರ್ಣ ಆವೃತ್ತಿಯನ್ನು ಒಳಗೊಂಡಿತ್ತು, ಇದರಲ್ಲಿ ಇಸ್ರೇಲಿ ಧ್ವಜವನ್ನು ಹಿಡಿದಿರುವ ಇನ್ನೊಬ್ಬ ಹುಡುಗ ಕೂಡ ಇದ್ದನು. “ಸೆಪ್ಟೆಂಬರ್ 23, 2009 ರಂದು ಇಟಲಿಯ ಮಿಲನ್ನಲ್ಲಿ ಸ್ಟೇಡಿಯೊ ಗೈಸೆಪ್ಪೆ ಮೀಝಾದಲ್ಲಿ FC ಇಂಟರ್ ಮಿಲನ್ ಮತ್ತು SSC ನಪೋಲಿ ನಡುವಿನ ಸೀರಿ A ಪಂದ್ಯದ ಮೊದಲು ಇಂಟರ್ ಕ್ಯಾಂಪ್ನ ಇಸ್ರೇಲಿ ಮತ್ತು ಪ್ಯಾಲೆಸ್ತೀನಿಯನ್ ಮಕ್ಕಳು ಆಟಗಾರರಿಗೆ FC ಇಂಟರ್ ಮಿಲನ್ನ ಹೈ ಫೈವ್ ನೀಡುತ್ತಾರೆ” ಎಂದು ಚಿತ್ರದ ಶೀರ್ಷಿಕೆಯಲ್ಲಿದೆ.
ಪಂದ್ಯದ ಇತರ ಚಿತ್ರಗಳನ್ನು, ಇಲ್ಲಿ ನೋಡಬಹುದು. ಇದರಲ್ಲಿ ಇಂಟರ್ ಕ್ಯಾಂಪ್ನ ಬ್ರೆಜಿಲ್ ಮತ್ತು ಚೀನೀ ಮಕ್ಕಳು ಪಂದ್ಯಕ್ಕೂ ಮುನ್ನ ಆಟಗಾರರನ್ನು ಸ್ವಾಗತಿಸುತ್ತಿರುವುದನ್ನು ತೋರಿಸುತ್ತವೆ.
ಇಂಟರ್ ಕ್ಯಾಂಪಸ್ ಒಂದು ಜಾಗತಿಕ ಸಂಸ್ಥೆಯಾಗಿದ್ದು, ಇದು ಕ್ರೀಡೆಯ ಮೌಲ್ಯಗಳು ಮತ್ತು ಫುಟ್ಬಾಲ್ ಆಟವನ್ನು ಶೈಕ್ಷಣಿಕ ಸಾಧನವಾಗಿ ಬಳಸಿಕೊಂಡು ಸಾವಿರಾರು ನಿರ್ಗತಿಕ ಮಕ್ಕಳಿಗೆ “ಆಟವಾಡುವ ಹಕ್ಕು” ನೀಡುತ್ತದೆ.

2009 ರ ಪಂದ್ಯದ ಮುಖ್ಯಾಂಶಗಳನ್ನು ಜನವರಿ 2023 ರಲ್ಲಿ ಇಂಟರ್ ಮಿಲನ್ನ ಅಧಿಕೃತ ಚಾನೆಲ್ನಲ್ಲಿ ಹಂಚಿಕೊಳ್ಳಲಾಗಿದೆ , ಇದರಲ್ಲಿ ಮಕ್ಕಳು ತಮ್ಮ ದೇಶಗಳ ಧ್ವಜಗಳನ್ನು ಹಿಡಿದು ಮೈದಾನದಲ್ಲಿ ಆಟಗಾರರನ್ನು ಸ್ವಾಗತಿಸುವ ದೃಶ್ಯಗಳನ್ನು ಸಹ ಒಳಗೊಂಡಿತ್ತು.
ಮೇ 2015 ರಲ್ಲಿ ರೆಡಿಫ್ ವೆಬ್ಸೈಟ್ನಲ್ಲಿ ಪ್ರಕಟವಾದ ಮತ್ತೊಂದು ಲೇಖನವು ವೈರಲ್ ಚಿತ್ರದ ಪೂರ್ಣ ಆವೃತ್ತಿಯನ್ನು ಹೊಂದಿತ್ತು. ಎರಡರ ನಡುವಿನ ಹೋಲಿಕೆಯನ್ನು ಕೆಳಗೆ ನೋಡಬಹುದು.

ತನಿಖೆಯ ಪ್ರಕಾರ, ಪಂದ್ಯಕ್ಕೂ ಮುನ್ನ ಇಂಟರ್ ಮಿಲನ್ ಪ್ಯಾಲೆಸ್ತೀನ್ ಗೆ ಬೆಂಬಲ ವ್ಯಕ್ತಪಡಿಸುತ್ತಿದೆ ಎಂದು ಹೇಳಲು ಹಳೆಯ ಫೋಟೋವನ್ನು ತಪ್ಪುದಾರಿಗೆಳೆಯುವಂತೆ ಎಡಿಟ್ ಮಾಡಲಾಗಿದೆ ಎಂದು ಕಂಡುಬಂದಿದೆ.
Our Sources
Getty Images Website
YouTube Video By Inter, Dated: January 1, 2023
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಇಲ್ಲಿದೆ)
Ishwarachandra B G
November 7, 2025
Ishwarachandra B G
July 12, 2025
Ishwarachandra B G
August 9, 2024