Fact Check
ತಲ್ಲಿಕಿ ವಂದನಂ ಯೋಜನೆ ಮುಸ್ಲಿಮರಿಗೆ ಸೀಮಿತ, ಸ್ಯಾನಿಟರಿ ನ್ಯಾಪ್ಕಿನ್ಗಳ ಮೇಲೆ ರಾಹುಲ್ ಗಾಂಧಿ ಫೋಟೋ ವಾರದ ನೋಟ
ಆಂಧ್ರಪ್ರದೇಶದ ತಲ್ಲಿಕಿ ವಂದನಂ ಯೋಜನೆ ಮುಸ್ಲಿಮರಿಗೆ ಸೀಮಿತ, ಬಿಹಾರದಲ್ಲಿ ಕಾಂಗ್ರೆಸ್ ಪಕ್ಷವು ವಿತರಿಸುತ್ತಿರುವ ಸ್ಯಾನಿಟರಿ ನ್ಯಾಪ್ಕಿನ್ಗಳ ಮೇಲೆ ರಾಹುಲ್ ಗಾಂಧಿ ಫೋಟೋ ಹಾಕಲಾಗಿದೆ, ಆಪರೇಷನ್ ಸಿಂದೂರದ ವೇಳೆ ಭಾರತದ 3 ರಫೇಲ್ ಜೆಟ್ ನಾಶವಾಗಿದೆ ಎಂದು ಎಸ್ ಜೈಶಂಕರ್ ಒಪ್ಪಿಕೊಂಡಿದ್ದಾರೆ ಎಂದ ವೀಡಿಯೋ, ಇಂಟರ್ ಮಿಲನ್ ಫುಟ್ಬಾಲ್ ಕ್ಲಬ್ ಪ್ಯಾಲೆಸ್ತೀನ್ ಗೆ ಬೆಂಬಲ ಸೂಚಿಸಿದೆ ಎಂಬ ಫೋಟೋ, ಬೆಲ್ಲ ಮತ್ತು ಈರುಳ್ಳಿ ರಸವನ್ನು ಸೇವಿಸುವುದರಿಂದ ಎತ್ತರ ಹೆಚ್ಚಿಸಬಹು ಎಂಬ ರೀತಿಯ ಹೇಳಿಕೆಗಳು ಈವಾರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ. ಇವುಗಳ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂಬುದನ್ನು ಸಾಕ್ಷ್ಯ ಸಮೇತ ನಿರೂಪಿಸಿದೆ. ಈ ಕುರಿತ ವಾರದ ನೋಟ ಇಲ್ಲಿದೆ.

ಆಂಧ್ರದ ತಲ್ಲಿಕಿ ವಂದನಂ ಯೋಜನೆ ಮುಸ್ಲಿಮರಿಗೆ ಸೀಮಿತವೇ?
ಆಂಧ್ರಪ್ರದೇಶ ಸರ್ಕಾರದ ತಲ್ಲಿಕಿ ವಂದನಂ ಯೋಜನೆ ಮುಸ್ಲಿಮರಿಗೆ ಸೀಮಿತವಾಗಿದೆ ಮತ್ತು ಕುಟುಂಬದ ಬಳಕೆಗೆ ಹಣ ಲಭ್ಯವಾಗಲಿದೆ ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಸತ್ಯಶೋಧನೆಯ ಪ್ರಕಾರ, ಇದು ಆಂಧ್ರದ ಬಡ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾಡಿದ ಯೋಜನೆಯಾಗಿದ್ದು, 12ನೇ ತರಗತಿವರೆಗೆ ವಾರ್ಷಿಕ 15 ಸಾವಿರ ರೂ. ನೆರವು ಸಿಗಲಿದೆ, ಇದು ಮುಸ್ಲಿಮರಿಗೆ ಸೀಮಿತವಲ್ಲ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಬಿಹಾರದಲ್ಲಿ ಕಾಂಗ್ರೆಸ್ ಪಕ್ಷವು ವಿತರಿಸುತ್ತಿರುವ ಸ್ಯಾನಿಟರಿ ನ್ಯಾಪ್ಕಿನ್ಗಳ ಮೇಲೆ ರಾಹುಲ್ ಗಾಂಧಿ ಫೋಟೋ
ಬಿಹಾರದಲ್ಲಿ ಕಾಂಗ್ರೆಸ್ ಪಕ್ಷವು ವಿತರಿಸುತ್ತಿರುವ ಸ್ಯಾನಿಟರಿ ನ್ಯಾಪ್ಕಿನ್ಗಳ ಮೇಲೆ ರಾಹುಲ್ ಗಾಂಧಿ ಫೋಟೋ ಹಾಕಲಾಗಿದೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಸ್ಯಾನಿಟರಿ ನ್ಯಾಪ್ಕಿನ್ಗಳ ಮೇಲೆ ರಾಹುಲ್ ಗಾಂಧಿ ಫೋಟೋ ಹಾಕಲಾಗಿದೆ ಎನ್ನುವುದು ಸುಳ್ಳು. ರತನ್ ರಂಜನ್ ಎಂಬ ಹಾಸ್ಯನಟ ಹಾಸ್ಯದ ಉದ್ದೇಶಕ್ಕಾಗಿ ಈ ವೀಡಿಯೋ ಮಾಡಿದ್ದಾರೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಆಪರೇಷನ್ ಸಿಂದೂರದ ವೇಳೆ ಭಾರತದ 3 ರಫೇಲ್ ಜೆಟ್ ನಾಶವಾಗಿದೆ ಎಂದು ಎಸ್ ಜೈಶಂಕರ್ ಒಪ್ಪಿಕೊಂಡಿದ್ದಾರೆಯೇ?
ಆಪರೇಷನ್ ಸಿಂದೂರದ ವೇಳೆ ಭಾರತದ 3 ರಫೇಲ್ ಜೆಟ್ ನಾಶವಾಗಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಒಪ್ಪಿಕೊಂಡಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿಕೆ ಕುರಿತ ಈ ವೀಡಿಯೋ ಡೀಪ್ ಫೇಕ್ ಆಗಿದೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿ ಓದಿ

ಇಂಟರ್ ಮಿಲನ್ ಫುಟ್ಬಾಲ್ ಕ್ಲಬ್ ಪ್ಯಾಲೆಸ್ತೀನ್ ಗೆ ಬೆಂಬಲ ಸೂಚಿಸಿದೆ ಎಂಬ ವೈರಲ್ ಫೋಟೋ ನಿಜವೇ?
ಇಟಲಿ ಮೂಲದ ಫುಟ್ಬಾಲ್ ಕ್ಲಬ್ ಇಂಟರ್ ಮಿಲನ್ ಆಟಗಾರರು ಪ್ಯಾಲೆಸ್ತೀನಿಯನ್ ಧ್ವಜವನ್ನು ಹಿಡಿದು ಪ್ಯಾಲೆಸ್ತೀನ್ ಗೆ ಬೆಂಬಲ ಸೂಚಿಸಿದರು ಎಂದು ಫೋಟೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, 2009ರ ಈ ಫೋಟೋವನ್ನು ತಪ್ಪಾದ ಅರ್ಥ ಬರುವಂತೆ ಕತ್ತರಿಸಿ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಬೆಲ್ಲ ಮತ್ತು ಈರುಳ್ಳಿ ರಸವನ್ನು ಸೇವಿಸುವುದರಿಂದ ಎತ್ತರ ಹೆಚ್ಚಿಸಬಹುದೇ?
ಬೆಲ್ಲ ಮತ್ತು ಈರುಳ್ಳಿ ರಸವನ್ನು ಸೇವಿಸುವುದರಿಂದ ಎತ್ತರ ಹೆಚ್ಚಿಸಬಹುದು ಎಂಬಂತೆ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಬೆಲ್ಲ ಮತ್ತು ಈರುಳ್ಳಿ ರಸವನ್ನು ಸೇವಿಸುವುದರಿಂದ ಎತ್ತರ ಹೆಚ್ಚಿಸಬಹುದು ಎನ್ನುವುದಕ್ಕೆ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ, ಆನುವಂಶಿಕ ವಿಚಾರ, ಪೋಷಣೆ ಎತ್ತರದ ವಿಚಾರದಲ್ಲಿ ಪರಿಣಾಮ ಬೀರುತ್ತವೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ