Fact Check: ಪಾಕಿಸ್ಥಾನ ಕ್ರಿಕೆಟಿಗರಿಗೆ ಕೇಸರಿ ಶಾಲುಗಳನ್ನು ಮಾತ್ರವೇ ಹಾಕಿ ಸ್ವಾಗತಿಸಲಾಯಿತು, ಎನ್ನುವುದು ನಿಜವೇ?

ಕೇಸರಿ ಶಾಲು, ಪಾಕಿಸ್ಥಾನ ಭಾರತ, ಕ್ರಿಕೆಟ್

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಭಾರತಕ್ಕೆ ಬಂದಿಳಿದ ಪಾಕಿಸ್ಥಾನ ಕ್ರಿಕೆಟಿಗರಿಗೆ ಕೇಸರಿ ಶಾಲುಗಳನ್ನು ಹಾಕಿ ಸ್ವಾಗತಿಸಲಾಯಿತು

Fact
ಹೈದ್ರಾಬಾದ್‌ನ ಪಾರ್ಕ್ ಹಯಾಟ್‌ ಹೋಟೆಲ್‌ಗೆ ಬಂದ ಪಾಕಿಸ್ತಾನ ಕ್ರಿಕೆಟಿಗರಿಗೆ ಸಾಂಪ್ರದಾಯಿಕವಾಗಿ ಶಾಲು ಹಾಕಿ ಬರಮಾಡಿಕೊಳ್ಳಲಾಗಿದೆ. ಈ ವೇಳೆ ಕೇಸರಿ ಶಾಲು ಮಾತ್ರವಲ್ಲದೆ ಇತರ ಬಣ್ಣದ ಶಾಲುಗಳನ್ನೂ ಹಾಕಿ ಬರಮಾಡಿಕೊಳ್ಳಲಾಗಿತ್ತು.

ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್‌ಗಾಗಿ ಪಾಕಿಸ್ಥಾನ ಕ್ರಿಕೆಟ್ ತಂಡ ಭಾರತಕ್ಕೆ ಬಂದಿಳಿದಿದ್ದು, ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದನ್ನು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಭಾರತಕ್ಕೆ ಆಗಮಿಸಿದ ಪಾಪಿಸ್ತಾನ ಕ್ರಿಕೆಟ್ ತಂಡದವರಿಗೆ ಕೇಸರಿ ಶಾಲು ಹಾಕಿ ಬರಮಾಡಿಕೊಂಡರು… ದೇಶವೆಲ್ಲಾ ವೈರಲ್ ಆಗ್ತಿದೆ…” ಎಂದು ಹೇಳಲಾಗಿದೆ.

Also Read: ಕಾವೇರಿ ವಿವಾದ ಹಿನ್ನೆಲೆ ತಮಿಳುನಾಡು ಲಾರಿ ಚಾಲಕನ ಮೇಲೆ ಹಲ್ಲೆಯ ವೀಡಿಯೋ ಈಗಿನದ್ದಲ್ಲ!

Fact Check: ಪಾಕಿಸ್ಥಾನ ಕ್ರಿಕೆಟಿಗರಿಗೆ ಕೇಸರಿ ಶಾಲುಗಳನ್ನು ಮಾತ್ರವೇ ಹಾಕಿ ಸ್ವಾಗತಿಸಲಾಯಿತು, ಎನ್ನುವುದು ನಿಜವೇ?
ಫೇಸ್‌ಬುಕ್‌ ನಲ್ಲಿ ಕಂಡುಬಂದ ಕ್ಲೇಮ್

ಪಾಕಿಸ್ಥಾನ ಕ್ರಿಕೆಟ್‌ ಟೀಂ ಹೈದ್ರಾಬಾದ್‌ ನಲ್ಲಿ ಆಗಮಿಸಿದ ವೇಳೆ ಅವರಿಗೆ ಕೇಸರಿ ಶಾಲು ಹಾಕಲಾಗಿದೆ ಎಂದು ಬೊಟ್ಟು ಮಾಡಲಾಗಿದೆ.

ಈ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಭಾಗಶಃ ತಪ್ಪು ಎಂದು ಕಂಡುಬಂದಿದೆ.

Fact Check/ Verification

ಸತ್ಯಶೋಧನೆಗಾಗಿ ನಾವು ಗೂಗಲ್‌ನಲ್ಲಿ ‘pak cricketers hyderabad shawl’ ಎಂದು ಕೀವರ್ಡ್‌ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.

ಸೆಪ್ಟೆಂಬರ್ 28, 2023ರ ಅನಾಮಿಕ ಅಫೀಶಿಯಲ್‌ ಹೆಸರಿನ ಯೂಟ್ಯೂಬ್‌ ಚಾನೆಲ್‌ನಲ್ಲಿ ವೀಡಿಯೋವನ್ನು ಅಪ್‌ಲೋಡ್‌ ಮಾಡಲಾಗಿದ್ದು, ‘ಹೈದ್ರಾಬಾದ್‌ಗೆ ಪಾಕಿಸ್ಥಾನ ಕ್ರಿಕೆಟಿಗರ ಆಗಮನ|ಕೇಸರಿ ಶಾಲು ಧರಿಸಿ’ ಎಂದಿದೆ. ಇದರಲ್ಲಿ ಪಾಕಿಸ್ಥಾನ ಕ್ರಿಕೆಟಿಗರಿಗೆ ಶಾಲು ಹಾಕಿ ಸ್ವಾಗತಿಸುತ್ತಿರುವ ದೃಶ್ಯವಿದೆ. ಕೇಸರಿ ಶಾಲು ಅಲ್ಲದೆ ಇತರ ಬಣ್ಣದ ಶಾಲುಗಳನ್ನೂ ಹಾಕಿ ಅವರನ್ನು ಸ್ವಾಗತಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ.

ಸೆಪ್ಟೆಂಬರ್ 28, 2023ರ ದಿ ಎಕನಾಮಿಕ್‌ ಟೈಮ್ಸ್‌ ಯೂಟ್ಯೂಬ್ ಚಾನೆಲ್‌ ವೀಡಿಯೋವೊಂದನ್ನು ಪ್ರಕಟಿಸಿದ್ದು, ಇದಕ್ಕೆ ‘ಐಸಿಸಿ ವರ್ಲ್ಡ್ ಕಪ್‌ 2023: ಹೈದ್ರಾಬಾದ್‌ನಲ್ಲಿ ಪಿಸಿಬಿ ಕ್ರಿಕೆಟ್ ತಂಡಕ್ಕೆ ಆತ್ಮೀಯ ಸ್ವಾಗತ, ಪಿಸಿಬಿ ಶೇರ್ ಮಾಡಿದ ಕ್ಲಿಪ್’ ಎಂಬ ಶೀರ್ಷಿಕೆಯಿದೆ. ಈ ವೀಡಿಯೋದಲ್ಲಿಯೂ ಆಟಗಾರರ ತಂಡಕ್ಕೆ ಶಾಲುಗಳನ್ನು ಹಾಕಿ ಬರಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ್ದೇವೆ. ಇಲ್ಲಿ ಕೇಸರಿ ಶಾಲಿನೊಂದಿಗೆ ಇತರ ಬಣ್ಣದ ಶಾಲುಗಳೂ ಇವೆ ಎಂಬುದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ.

Also Read: ಹುಡುಗಿಯ ದುಪ್ಪಟ್ಟಾ ಎಳೆದ ಆರೋಪಿಗಳ ಪರಿಸ್ಥಿತಿ ಹೀಗಾಗಿದೆ ಎಂದ ವೈರಲ್ ವೀಡಿಯೋ ನಿಜವೇ?

ದಿ ಎಕನಾಮಿಕ್‌ ಟೈಮ್ಸ್ ಪ್ರಕಟಿಸಿದ ವೀಡಿಯೋದಲ್ಲಿ ವೀಡಿಯೋದ ಮೂಲ ಪಾಕಿಸ್ಥಾನ ಕ್ರಿಕೆಟ್ ಎಂದಿದ್ದು, ಅದನ್ನು ಗಮನಿಸಿ ನಾವು ಇನ್ನಷ್ಟು ಶೋಧ ನಡೆಸಿದ್ದೇವೆ. ಜೊತೆಗೆ ಯೂಟ್ಯೂಬ್ ನಲ್ಲಿ ಪಾಕಿಸ್ಥಾನ ಕ್ರಿಕೆಟ್ ಶೇರ್ ಮಾಡಿದ ವೀಡಿಯೋ ಕಂಡುಕೊಂಡಿದ್ದೇವೆ. ಸೆಪ್ಟೆಂಬರ್ 28, 2023ರಂದು ಪ್ರಕಟಿಸಿದ ಈ ವೀಡಿಯೋದಲ್ಲಿ ‘ನಾವು ಭಾರತದ ತೀರಕ್ಕೆ ಬಂದಿಳಿಯುತ್ತಿದ್ದಂತೆ ಹೈದರಾಬಾದ್‌ನಲ್ಲಿ ಆತ್ಮೀಯ ಸ್ವಾಗತ’ ಎಂಬ ಶೀರ್ಷಿಕೆಯಿದೆ. ಈ ವೀಡಿಯೋದಲ್ಲಿಯೂ ಆಟಗಾರರಿಗೆ ಕೇಸರಿ ಶಾಲುಗಳೊಂದಿಗೆ ವಿವಿಧ ಬಣ್ಣದ ಶಾಲುಗಳನ್ನು ಹಾಕಿ ಸ್ವಾಗತಿಸುತ್ತಿರುವುದನ್ನು ಗಮನಿಸಿದ್ದೇವೆ.

ಇದೇ ವೀಡಿಯೋವನ್ನು ಪಾಕಿಸ್ಥಾನ ಕ್ರಿಕೆಟ್ ಇನ್‌ಸ್ಟಾ ಗ್ರಾಂನಲ್ಲೂ ಹಂಚಿಕೊಂಡಿದೆ. ಅದು ಇಲ್ಲಿದೆ.

Fact Check: ಪಾಕಿಸ್ಥಾನ ಕ್ರಿಕೆಟಿಗರಿಗೆ ಕೇಸರಿ ಶಾಲುಗಳನ್ನು ಮಾತ್ರವೇ ಹಾಕಿ ಸ್ವಾಗತಿಸಲಾಯಿತು, ಎನ್ನುವುದು ನಿಜವೇ?

ಇದರೊಂದಿಗೆ, ಪಾಕಿಸ್ಥಾನ ಕ್ರಿಕೆಟಿಗರು ಆಗಮಿಸಿದ ಮತ್ತು ಅವರನ್ನು ಸ್ವಾಗತಿಸಿದ ಕುರಿತ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು

ಸತ್ಯಶೋಧನೆ ವೇಳೆ ಪಾಕಿಸ್ಥಾನ ಕ್ರಿಕೆಟಿಗರು ಹೈದ್ರಾಬಾದ್ ನಲ್ಲಿ  ಪಾರ್ಕ್ ಹಯಾಟ್‌ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ ಎಂಬುದು ಗೊತ್ತಾಗಿದ್ದು, ಅವರನ್ನು ನ್ಯೂಸ್‌ಚೆಕರ್‌ ಸಂಪರ್ಕಸಿದೆ. ಈ ವೇಳೆ ನ್ಯೂಸ್ ಚೆಕರ್ನೊಂದಿಗೆ ಮಾತನಾಡಿದ ಡ್ಯೂಟಿ ಮ್ಯಾನೇಜರ್ ಸದಾನಂದ್ ಅವರು, ಪಾಕಿಸ್ಥಾನ ಕ್ರಿಕೆಟಿಗರನ್ನು ಹೋಟೆಲ್‌ಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗಿದೆ. ಕೇಸರಿ ಶಾಲು ಮಾತ್ರವಲ್ಲದೆ ಇತರ ಬಣ್ಣದ ಶಾಲುಗಳನ್ನೂ ಹಾಕಿ ಸ್ವಾಗತಿಸಲಾಗಿದೆ ಎಂದು ಹೇಳಿದ್ದಾರೆ.

Also Read: ತೆಲಂಗಾಣ ರಾಜ್ಯ ಕಾರ್ಯಾಲಯದಲ್ಲಿ ಮಸೀದಿ ನಿರ್ಮಿಸಲಾಗಿದೆಯೇ?

Conclusion

ಈ ಸತ್ಯಶೋಧನೆ ಪ್ರಕಾರ, ಭಾರತಕ್ಕೆ ಆಗಮಿಸಿದ ಪಾಕಿಸ್ಥಾನ ಕ್ರಿಕೆಟ್ ತಂಡದವರಿಗೆ ಕೇಸರಿ ಶಾಲು ಹಾಕಿ ಬರಮಾಡಿಕೊಂಡರು ಎಂದು ಹೇಳುವುದು ಮತ್ತು ಕೇಸರಿ ಶಾಲನ್ನು ಹಾಕಿದ ವೀಡಿಯೋವನ್ನು ಮಾತ್ರವೇ ತೋರಿಸುವುದು ಭಾಗಶಃ ತಪ್ಪಾಗಿದೆ

Result: Partly False

Our Sources

YouTube Video By Anamika Official, Dated: September 28, 2023

YouTube Video By The Economic Times, Dated: September 28, 2023

YouTube Video By Pakistan Cricket, Dated: September 28, 2023

Instagram Post By therealpcb, Dated: September 28, 2023

Conversation with Sadanand, Duty Manager of Park Hyatt Hotel Hyderabad


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.