Authors
Claim
ಕಾಸರಗೋಡು ಮುಸ್ಲಿಂ ಲೀಗ್ ಕಚೇರಿ ಉದ್ಘಾಟನೆಗೆ ಕಾರ್ಯಕರ್ತರು ಪಾಕಿಸ್ಥಾನದ ಕ್ರಿಕೆಟ್ ಜೆರ್ಸಿ ಧರಿಸಿದ್ದರು
Fact
ಕಾಸರಗೋಡು ಮುಸ್ಲಿಂ ಲೀಗ್ ಕಚೇರಿ ಉದ್ಘಾಟನೆಗೆ ಕಾರ್ಯಕರ್ತರು ಧರಿಸಿದ್ದ ಜೆರ್ಸಿ ಪಾಕಿಸ್ತಾನ ಕ್ರಿಕೆಟ್ ತಂಡದದ್ದಲ್ಲ, ಅವರು ಪಚ್ಚಪದ ಆರಂಗಡಿ ಎಂದು ಬರೆದಿರುವ ಹಸಿರು ಜೆರ್ಸಿಯನ್ನು ಧರಿಸಿದ್ದರು
ಕಾಸರಗೋಡು ಮುಸ್ಲಿಂ ಲೀಗ್ ಕಚೇರಿ ಉದ್ಘಾಟನೆಗೆ ಕಾರ್ಯಕರ್ತರು ಪಾಕಿಸ್ಥಾನದ ಕ್ರಿಕೆಟ್ ಜೆರ್ಸಿ ಧರಿಸಿ ಬಂದಿದ್ದಾರೆ ಎಂಬ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಸರಗೋಡು ಲೀಗ್ ಕಚೇರಿಯನ್ನು ಪಾಕಿಸ್ಥಾನದ ಕ್ರಿಕೆಟ್ ಜೆರ್ಸಿ ಧರಿಸಿ ಉದ್ಘಾಟನೆ ಮಾಡಲಾಗಿದೆ ಎಂದು ವೀಡಿಯೋ ಜೊತೆಗಿನ ವಿವರಣೆಯಲ್ಲಿ ಹೇಳಲಾಗಿದೆ.
ಇದೇ ರೀತಿಯ ಹೇಳಿಕೆಗಳು ಇಲ್ಲಿ, ಇಲ್ಲಿ, ಇಲ್ಲಿ ಕಂಡುಬಂದಿವೆ.
Fact Check/Verification
ಸತ್ಯಶೋಧನೆಯ ಭಾಗವಾಗಿ, ಈ ಜೆರ್ಸಿಯು ಪಾಕಿಸ್ತಾನ ಕ್ರಿಕೆಟ್ ತಂಡದ್ದೇ ಎಂದು ನೋಡಲು ನಾವು ಮೊದಲು ಪಾಕಿಸ್ಥಾನ ಕ್ರಿಕೆಟ್ ಮಂಡಳಿಯ ವೆಬ್‌ಸೈಟ್ ಅನ್ನು ಪರಿಶೀಲಿಸಿದ್ದೇವೆ. ಪಾಕಿಸ್ಥಾನದ ಬೋರ್ಡ್ ಜರ್ಸಿಯು ಗಾಢವಾದ ಹಸಿರು ಬಣ್ಣದ್ದಾಗಿದ್ದು ಅದರಲ್ಲಿ ನಕ್ಷತ್ರ ಮತ್ತು ಉರ್ದುವಿನಲ್ಲಿ ಬರೆಯಲಾಗಿದೆ. ಜೊತೆಗೆ ಪಾಕಿಸ್ಥಾನ ಎಂದು ಇಂಗ್ಲಿಷ್ ನಲ್ಲಿ ಬರೆಯಲಾಗಿದೆ. ಇದು ಐಸಿಸಿ ವಿಶ್ವಕಪ್ ಲೋಗೋವನ್ನು ಸಹ ಒಳಗೊಂಡಿದೆ. ಒಂದೆಡೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಂಕ್ಷಿಪ್ತ ರೂಪವಾದ PCB ಅನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಇನ್ನೊಂದೆಡೆ ತಂಡದ ಪ್ರಾಯೋಜಕರಾದ ಪೆಪ್ಸಿಯ ಲೋಗೋ ಇದೆ.
ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ವೆಬ್‌ಸೈಟ್ ಕೂಡ ಪಾಕಿಸ್ಥಾನದ ಜೆರ್ಸಿಯ ಚಿತ್ರವನ್ನು ಹೊಂದಿದೆ.
ವೈರಲ್ ಆಗಿರುವ ವೀಡಿಯೋದಲ್ಲಿ ಜನರು ಧರಿಸಿರುವ ಜೆರ್ಸಿ ಇದಲ್ಲ ಎಂದು ನಾವು ಕಂಡುಕೊಂಡಿದ್ದೇವೆ.
ಆ ನಂತರ ನಾವು ಫೇಸ್ಬುಕ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು ಜೂನ್ 28, 2024 ರಂದು ಫೇಸ್‌ಬುಕ್ ಪುಟ ಪಚ್ಚಪದ ಅರಂಗಡಿ ಎಂಬಲ್ಲಿ ವೈರಲ್ ಆದ ವೀಡಿಯೋ ರೀತಿಯ ವೀಡಿಯೋ ನೋಡಿದ್ದೇವೆ.
ಹಸಿರು ಜರ್ಸಿಯನ್ನು ಧರಿಸಿರುವ ಜನರಿರುವ ಮತ್ತೊಂದು ವೀಡಿಯೋವನ್ನು ಜೂನ್ 28, 2024 ರಂದು ಅದೇ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ . ಈ ವೀಡಿಯೋದಲ್ಲಿ ಜೆರ್ಸಿ ಮೇಲಿನ ಬರಹ ಹೆಚ್ಚು ಸ್ಪಷ್ಟವಾಗಿ ಇದೆ.
ಈ ವೀಡಿಯೋಗಳಲ್ಲಿ ಒಂದರಲ್ಲಿ ಒಬ್ಬರ ಜರ್ಸಿಯ ಹಿಂಭಾಗದಲ್ಲಿ ಮಲಯಾಳದಲ್ಲಿ ಪಚ್ಚಪದ ಅರಂಗಡಿ ಎಂದು ಬರೆದಿರುವುದನ್ನು ನೋಡಿದ್ದೇವೆ. ಇನ್ನೊಬ್ಬರ ಜೆರ್ಸಿಯ ಮುಂಭಾಗದಲ್ಲಿ ಆರಂಗಡಿ ಎಂದು ಇಂಗ್ಲಿಷ್‌ನಲ್ಲಿ ಬರೆದಿದೆ. ಮುಂಭಾಗ, ಬಲಭಾಗದಲ್ಲಿ ಮುಸ್ಲಿಂ ಲೀಗ್‌ನ ಲಾಂಛನ ಮತ್ತು ಲೋಗೋವನ್ನು ನೋಡಬಹುದಾಗಿದೆ.
IUML ಅನ್ನು ಬಲ ತೋಳಿನಲ್ಲಿ ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. MYL ಅನ್ನು ಎಡ ತೋಳಿನಲ್ಲಿ ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ.
Conclusion
ಸತ್ಯಶೋಧನೆಯ ಪ್ರಕಾರ ಮುಸ್ಲಿಂ ಲೀಗ್ ಕಾರ್ಯಕರ್ತರು ಧರಿಸಿದ್ದ ಜೆರ್ಸಿ ಪಾಕಿಸ್ತಾನ ಕ್ರಿಕೆಟ್ ತಂಡದದ್ದಲ್ಲ, ಅವರು ಪಚ್ಚಪದ ಆರಂಗಡಿ ಎಂದು ಬರೆದಿರುವ ಹಸಿರು ಜೆರ್ಸಿಯನ್ನು ಧರಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
Result: False
Our Sources
ICC Website
PCB website
Facebook Post by Pachapada Arangadi Dated: June 28, 2024
Facebook Post by Pachapada Arangadi Dated: June 28, 2024
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಮಲಯಾಳದಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.