ಥೈರಾಯ್ಡ್ ಆರೋಗ್ಯಕ್ಕೆ ಹಲಸಿನ ಹಣ್ಣು ಪ್ರಯೋಜನಕಾರಿ, ಇದು ಥೈರಾಯ್ಡ್ ಗ್ರಂಥಿಯಲ್ಲಿ ಹಾರ್ಮೋನುಗಳ ಸ್ರವಿಸುವಿಕೆಯನ್ನು ಸಮತೋಲನಗೊಳಿಸುತ್ತದೆ ಎಂದು ಫೇಸ್‌ಬುಕ್ ನಲ್ಲಿ ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ.

ಇದರ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ಭಾಗಶಃ ತಪ್ಪು ಎಂದು ಕಂಡುಕೊಂಡಿದ್ದೇವೆ.
Also Read: ಬೆಲ್ಲದ ಚಹಾ ತೂಕ ನಷ್ಟ, ಜೀರ್ಣಕ್ರಿಯೆ ಮತ್ತು ರಕ್ತಹೀನತೆ ಸಮಸ್ಯೆಗೆ ಸಹಾಯ ಮಾಡುತ್ತದೆಯೇ?
Fact Check/Verification
ಹಲಸು ಥೈರಾಯ್ಡ್ ಕಾರ್ಯಕ್ಕೆ ಪೋಷಕಾಂಶವಾಗಿ ಪ್ರಯೋಜನಕಾರಿಯೇ?
ಸಾಮಾನ್ಯ ಅರ್ಥದಲ್ಲಿ ಹೌದು. ಆದರೆ ಇದು ಥೈರಾಯ್ಡ್ ಸ್ನೇಹಿ ಆಹಾರವಲ್ಲ. ಹಲಸು ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್‌ನಂತಹ ಕೆಲವು ಪ್ರಯೋಜನಕಾರಿ ಪೋಷಕಾಂಶಗಳನ್ನು ಒದಗಿಸುತ್ತದೆ, ಆದರೆ ಇದು ಥೈರಾಯ್ಡ್ ಕಾರ್ಯಕ್ಕೆ ನಿರ್ಣಾಯಕವಾಗಿರುವ ಅಯೋಡಿನ್ ಮತ್ತು ಸೆಲೆನಿಯಮ್‌ನಂತಹ ಪ್ರಮುಖ ಅಂಶಗಳನ್ನು ಹೊಂದಿರುವುದಿಲ್ಲ. ಕೆಲವು ಮೂಲಗಳ ಪ್ರಕಾರ, ಹಲಸಿನ ಹಣ್ಣಿನಲ್ಲಿರುವ ತಾಮ್ರದ ಅಂಶವು ಥೈರಾಯ್ಡ್ ಆರೋಗ್ಯಕ್ಕೆ ಪೂರಕ ಆದಾಗ್ಯೂ, ಇದರ ಕುರಿತ ಸಂಶೋಧನೆ ಸೀಮಿತವಾಗಿದೆ ಮತ್ತು ಥೈರಾಯ್ಡ್ ಹಾರ್ಮೋನ್ ನಿಯಂತ್ರಣಕ್ಕೆ ತಾಮ್ರವು ಸಾಕಾಗುವುದಿಲ್ಲ. ಹಣ್ಣಿನ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡಬಹುದಾದರೂ, ಅವು ನಿರ್ದಿಷ್ಟವಾಗಿ ಥೈರಾಯ್ಡ್ ಹಾರ್ಮೋನ್ ಅಸಮತೋಲನವನ್ನು ಪರಿಹರಿಸುವುದಿಲ್ಲ. ಯಾರಿಗಾದರೂ ಥೈರಾಯ್ಡ್ ಸಮಸ್ಯೆ ಇದ್ದರೆ, ಅದನ್ನು ನಿರ್ವಹಿಸಲು ಸರಿಯಾದ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುತ್ತದೆ, ಹಲಸಿನ ಹಣ್ಣಿನ ಮೇಲೆ ಆಹಾರದ ಅವಲಂಬನೆ ಪೂರಕವಾದ್ದಲ್ಲ.
ಥೈರಾಯ್ಡ್ ಕಾಯಿಲೆ ಇರುವವರಿಗೆ ಹಲಸಿನ ಹಣ್ಣು ಸುರಕ್ಷಿತವೇ?
ಹೌದು, ಆದರೆ ಮಿತ ತಿನ್ನುವುದು ಮುಖ್ಯವಾಗಿದೆ, ವಿಶೇಷವಾಗಿ ಇನ್ಸುಲಿನ್ ಪ್ರತಿರೋಧ ಹೊಂದಿರುವವರು ಜಾಗ್ರತೆ ವಹಿಸಬೇಕು. ಥೈರಾಯ್ಡ್ ರೋಗಿಗಳಿಗೆ ಹಲಸು ಸಾಮಾನ್ಯವಾಗಿ ಸುರಕ್ಷಿತವಾಗಿದೆ, ಆದರೆ ಹೆಚ್ಚು ಹಣ್ಣಾದ ಹಲಸು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ (GI) ಅನ್ನು ಹೊಂದಿರುತ್ತದೆ, ಅಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಅನೇಕ ಥೈರಾಯ್ಡ್ ರೋಗಿಗಳು, ವಿಶೇಷವಾಗಿ ಹೈಪೋಥೈರಾಯ್ಡಿಸಮ್ ಹೊಂದಿರುವವರು, ಇನ್ಸುಲಿನ್ ಪ್ರತಿರೋಧ ಹೊಂದಿರುತ್ತಾರೆ., ಹಲಸಿನ ಹಣ್ಣನ್ನು ಆಗಾಗ್ಗೆ ಅಥವಾ ಅತಿಯಾಗಿ ಸೇವನೆ ಮಾಡಿದಲ್ಲಿ, ರಕ್ತದಲ್ಲಿ ಸಕ್ಕರೆಯ ಅಂಶದ ಅಸಮತೋಲನಕ್ಕೆ ಕಾರಣವಾಗಬಹುದು. ಮಧುಮೇಹ ಅಥವಾ ಚಯಾಪಚಯ ಸಮಸ್ಯೆ ಇರುವವರು ಇದನ್ನು ನಿಯಂತ್ರಿತ ರೀತಿಯಲ್ಲಿ ಸೇವಿಸಬೇಕು.
ಯಾವುದೇ ವೈಜ್ಞಾನಿಕ ಅಧ್ಯಯನಗಳಿವೆಯೇ?
ಹಲಸು ಥೈರಾಯ್ಡ್ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ ಎಂದು ಹೇಳುವುದಕ್ಕೆ ಬಲವಾದ ವೈಜ್ಞಾನಿಕ ಪುರಾವೆಗಳು ಇಲ್ಲ. ಥೈರಾಯ್ಡ್ ಆರೋಗ್ಯಕ್ಕೆ ಹಲಸಿನ ಹಣ್ಣಿನ ಪ್ರಯೋಜನಗಳ ಬಗ್ಗೆ ವೈಜ್ಞಾನಿಕ ಸಾಕ್ಷ್ಯಗಳೂ ಇಲ್ಲ. ಹಾಗೆಯೇ ಹಲಸಿನ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಡ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ವಿವಿಧ ಅಧ್ಯಯನಗಳು ಹೇಳಿವೆ, ಇವುಗಳು ನೇರ ಥೈರಾಯ್ಡ್ ಹಾರ್ಮೋನ್ ನಿಯಂತ್ರಣಕ್ಕೆ ಪೂರಕವಾಗಿಲ್ಲ. ಥೈರಾಯ್ಡ್ ಅಸ್ವಸ್ಥತೆಗಳ ವೈದ್ಯಕೀಯ ಸಂಶೋಧನೆಯು ಹಲಸಿನ ಹಣ್ಣಿನಂತಹ ಉಷ್ಣವಲಯದ ಹಣ್ಣುಗಳಿಗಿಂತ ಹೆಚ್ಚಾಗಿ ಅಯೋಡಿನ್-ಭರಿತ ಆಹಾರಗಳು (ಸಮುದ್ರ ಆಹಾರ ಮತ್ತು ಡೈರಿ) ಮತ್ತು ಸೆಲೆನಿಯಮ್ ಮೂಲಗಳ ಮೇಲೆ (ಬ್ರೆಜಿಲ್ ಬೀಜಗಳು ಮತ್ತು ಮೊಟ್ಟೆಗಳಂತಹವು) ಹೆಚ್ಚು ಪ್ರಯೋಜನಕಾರಿ ಎಂದಿದೆ.
ಥೈರಾಯ್ಡ್ ರೋಗಿಗಳು ಏನು ತಿನ್ನಬೇಕು?
ಸಮತೋಲಿತ ಆಹಾರ, ಅಯೋಡಿನ್, ಸೆಲೆನಿಯಮ್ ಮತ್ತು ಅಗತ್ಯ ಪೋಷಕಾಂಶಗಳು ಪ್ರಮುಖವಾಗಿದೆ.
ಥೈರಾಯ್ಡ್ ಸಮಸ್ಯೆ ಹೊಂದಿದ್ದರೆ, ಥೈರಾಯ್ಡ್ ಕಾರ್ಯವನ್ನು ನೇರವಾಗಿ ಬೆಂಬಲಿಸುವ ಆಹಾರಗಳ ಮೇಲೆ ಗಮನ ಕೇಂದ್ರೀಕರಿಸುವುದು ಹೆಚ್ಚು ಪ್ರಯೋಜನಕಾರಿ. ಇವುಗಳಲ್ಲಿ ಕೆಲವು ಸೇರಿವೆ:
- ಅಯೋಡಿನ್ ಭರಿತ ಆಹಾರಗಳು (ಕಡಲಕಳೆ, ಮೀನು, ಡೈರಿ) ಹಾರ್ಮೋನ್ ಉತ್ಪಾದನೆಗೆ ಪೂರಕ
- ಸೆಲೆನಿಯಮ್ ಮೂಲಗಳು (ಬ್ರೆಜಿಲ್ ಬೀಜಗಳು, ಮೊಟ್ಟೆಗಳು, ಸೂರ್ಯಕಾಂತಿ ಬೀಜಗಳು) ಕಿಣ್ವ ದ ಕಾರ್ಯಕ್ಕಾಗಿ
- ಸತು-ಹೊಂದಿರುವ ಆಹಾರಗಳು (ಕಡಲೆ, ಮಾಂಸ, ಕುಂಬಳಕಾಯಿ ಬೀಜಗಳು) ಹಾರ್ಮೋನ್ ಸಂಶ್ಲೇಷಣೆಗೆ ಸಹಾಯ ಮಾಡುತ್ತದೆ
- ಫೈಬರ್ ಭರಿತ ಆಹಾರಗಳು (ತರಕಾರಿಗಳು, ಧಾನ್ಯಗಳು) ಜೀರ್ಣಕ್ರಿಯೆಯನ್ನು ಬೆಂಬಲಿಸಲು ಪೂರಕ
ಹಲಸು ಆರೋಗ್ಯಕರ ಆಹಾರದ ಭಾಗವಾಗಿರಬಹುದು, ಆದರೆ ಇದನ್ನು ಥೈರಾಯ್ಡ್ ಸಮಸ್ಯೆ ಪರಿಹಾರದ ನಿರ್ದಿಷ್ಟ ವಿಷಯವಾಗಿ ಅವಲಂಬಿಸಬಾರದು.
Conclusion
ಹಲಸು ತಾಮ್ರದಂಶವನ್ನು ಹೊಂದಿದ್ದರೂ, ಥೈರಾಯ್ಡ್ ಚಯಾಪಚಯ ಕ್ರಿಯೆಯಲ್ಲಿ ಒಳಗೊಂಡಿರುವ ಖನಿಜವಾಗಿದೆ, ಹಲಸಿನ ಹಣ್ಣನ್ನು ನೇರವಾಗಿ ಸೇವಿಸುವುದರಿಂದ ಥೈರಾಯ್ಡ್ ಹಾರ್ಮೋನ್ ನಿಯಂತ್ರಣಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಸೂಚಿಸಲು ಯಾವುದೇ ಬಲವಾದ ವೈಜ್ಞಾನಿಕ ಪುರಾವೆಗಳಿಲ್ಲ. ಹಲಸು ಪೌಷ್ಟಿಕಾಂಶದ ಹಣ್ಣು. ಇದನ್ನು ಸಮತೋಲಿತ ಆಹಾರದ ಭಾಗವಾಗಿ ಸೇರಿಸಿದಾಗ ಒಟ್ಟಾರೆ ಆರೋಗ್ಯಕ್ಕೆ ಧನಾತ್ಮಕವಾಗಿ ಕೊಡುಗೆ ನೀಡುತ್ತದೆ. ಥೈರಾಯ್ಡ್ ಸಮಸ್ಯೆ ಹೊಂದಿರುವವರು, ಸಮಗ್ರ ಆಹಾರದ ಕಾರ್ಯತಂತ್ರದ ಮೇಲೆ ಗಮನ ಕೇಂದ್ರೀಕರಿಸುವುದು ಮತ್ತು ಥೈರಾಯ್ಡ್ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಸಲಹೆ ಪಡೆಯುವುದು ಮುಖ್ಯವಾಗಿದೆ.
Also Read: ಸದಾಪುಷ್ಪದ ಚಹಾ ಕುಡಿಯುವುದರಿಂದ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಬಹುದೇ?
Our Sources
Efficacy of jackfruit components in prevention and control of human disease: A scoping review
Nutritional and Health Benefits of Jackfruit (Artocarpus heterophyllus Lam.): A Review
(This article has been published in collaboration with THIP Media)