Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಕ್ಯಾಪ್ಸಿಕಂನಲ್ಲಿ ಪ್ರಪಂಚದ ಅತಿ ಚಿಕ್ಕ ವಿಷಕಾರಿ ಹಾವು ಪತ್ತೆ. ವಿಡಿಯೋ ವೈರಲ್
Fact
ಕ್ಯಾಪ್ಸಿಕಂನಲ್ಲಿ ಕಂಡುಬಂದಿರುವುದು ಹಾವಲ್ಲ ಒಂದು ರೀತಿಯ ಹುಳ. ಈ ಹೇಳಿಕೆ ತಪ್ಪುದಾರಿಗೆಳೆಯುವಂಥದ್ದು
ಕ್ಯಾಪ್ಸಿಕಂನಲ್ಲಿ ವಿಶ್ವದ ಅತ್ಯಂತ ಚಿಕ್ಕ ವಿಷಕಾರಿ ಹಾವು ಕಂಡುಬಂದಿದೆ. ಕ್ಯಾಪ್ಸಿಕಂಗಳನ್ನು ಬಳಸುವ ವೇಳೆ ಎಚ್ಚರಿಕೆ ವಹಿಸಬೇಕಾಗಿದೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಫೇಸ್‌ಬುಕ್‌ನಲ್ಲಿ ಕಂಡುಬಂದ ವೀಡಿಯೋ ಜೊತೆಗಿರುವ ಹೇಳಿಕೆಯೊಂದರಲ್ಲಿ “ಪ್ರಪಂಚದ ಅತ್ಯಂತ ಚಿಕ್ಕ ವಿಷಕಾರಿ ಹಾವು ಪತ್ತೆ. ವಿಡಿಯೋ ವೈರಲ್” ಎಂದಿದೆ.
Also Read: ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ರೊಬೋಟ್ ಮಾನವ ಎದುರಾಳಿಯನ್ನು ಸೋಲಿಸುವ ವೀಡಿಯೋ ವೈರಲ್

ಈ ವಿಚಾರದ ಬಗ್ಗೆ ಸತ್ಯಾಂಶಗಳನ್ನು ಪರಿಶೀಲಿಸಲು ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ಲೈನ್‌ಗೂ (+91-9999499044) ದೂರುಗಳು ಬಂದಿದ್ದು, ಅದನ್ನು ಸ್ವೀಕರಿಸಲಾಗಿದೆ.

ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಅದರ ಕೀ ಫ್ರೇಮ್ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಇದೇ ರೀತಿ ಹೇಳಿಕೆಗಳೊಂದಿಗೆ ವೀಡಿಯೋಗಳನ್ನು 2019ರಿಂದಲೂ ಹಂಚಿಕೊಳ್ಳುತ್ತಿರುವುದನ್ನು ಗಮನಿಸಿದ್ದೇವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಇನ್ನಷ್ಟು ಸಂಶೋಧನೆ ನಡೆಸಲು ನಾವು ಕೀವರ್ಡ್ ಸರ್ಚ್ ನಡೆಸಿದ್ದು, ಆಗಸ್ಟ್ 29, 2019 ರಂದು ಸ್ನೋಪ್ಸ್ ಪ್ರಕಟಿಸಿದ ಲೇಖನವನ್ನು ಕಂಡುಕೊಂಡಿದ್ದೇವೆ. ವೈರಲ್ ವೀಡಿಯೊದ ಬಗ್ಗೆ ಮಾತನಾಡಿದ ನ್ಯೂ ಮೆಕ್ಸಿಕೊ ವಿಶ್ವವಿದ್ಯಾಲಯದ ಜೀವಶಾಸ್ತ್ರದ ಹಿರಿಯ ಉಪನ್ಯಾಸಕ ಬೆನ್ ಹ್ಯಾನೆಲ್ಟ್, “ಇದು ಬಹುಶಃ ಮೆಮ್ರಿಡ್ ನೆಮಟೋಡ್ ಆಗಿರಬಹುದು. ಅವು ಮಾನವರಿಗೆ ರೋಗಕಾರಕವಲ್ಲ; ಕೇವಲ ಹುಳ” ಎಂದಿದೆ. ಅದರಂತೆ ವೀಡಿಯೋದಲ್ಲಿ ಕಂಡುಬರುವುದು ಒಂದು ರೀತಿಯ ಹುಳು ಎಂಬುದನ್ನು ಕಂಡುಕೊಂಡಿದ್ದೇವೆ.

ನಾವು ಪ್ರಸಿದ್ಧ ಆಯುರ್ವೇದ ತಜ್ಞ ಡಾ.ಭೂಷಣ್ ಸುತಾರ್ ಅವರನ್ನು ಸಂಪರ್ಕಿಸಿದಾಗ, “ಹುಳುಗಳು ಮಾನವ ದೇಹದಲ್ಲಿ ಸಂಭವಿಸುವಂತೆ, ಅವು ಹಣ್ಣುಗಳು ಮತ್ತು ತರಕಾರಿಗಳಲ್ಲಿಯೂ ಕಂಡುಬರುತ್ತವೆ. ವೈರಲ್ ವೀಡಿಯೊದಲ್ಲಿ ಕಂಡುಬರುವ ಹುಳು ಇದು. ಈ ಜೀವಿ ಹಾವು ಅಲ್ಲ. ಇದಲ್ಲದೆ, ಇಲ್ಲಿಯವರೆಗೆ ಸೇವೆಯಲ್ಲಿ, ಅಂತಹ ಹುಳುವಿನಿಂದ ಯಾರಾದರೂ ಸಾಯುವ ಬಗ್ಗೆ ಯಾರೂ ಕೇಳಿಲ್ಲ ಅಥವಾ ನೋಡಿಲ್ಲ. ಅಂತಹ ಹುಳುಗಳ ಸ್ಪರ್ಶ ಅಥವಾ ಆಕಸ್ಮಿಕ ಸೇವನೆಯು ಮಾನವ ಜೀವಕ್ಕೆ ಹಾನಿ ಮಾಡುವುದಿಲ್ಲ. ವೈರಲ್ ಸಂದೇಶದಲ್ಲಿರುವ ಹೇಳಿಕೆ ಸುಳ್ಳು” ಎಂದು ಅವರು ಹೇಳಿದರು.
Also Read: ಬ್ರೆಜಿಲ್ ನಲ್ಲಿ ನಡೆದ ಮಹಿಳೆಯ ಬರ್ಬರ ಹತ್ಯೆಯ ಹಳೆಯ ವೀಡಿಯೋ ಮಣಿಪುರದ್ದು ಎಂದು ತಪ್ಪಾಗಿ ಹಂಚಿಕೆ
ವೈರಲ್ ಕ್ಲೈಮ್ನಲ್ಲಿರುವ ಜೀವಿ ಹುಳುವಿನಂತಿದೆ ಎಂದು ತಜ್ಞರು ಹೇಳಿದ ನಂತರ ನಾವು ಅದರ ಬಗ್ಗೆ ಹುಡುಕಿದ್ದೇವೆ. ಈ ವೇಳೆ biomedcentral.com ಪ್ರಕಟಿಸಿದ ಲೇಖನ ಲಭ್ವಯವಾಗಿವೆ. ಇದರಲ್ಲಿನ ಮಾಹಿತಿ ಮತ್ತು ಛಾಯಾಚಿತ್ರಗಳನ್ನು ನೋಡಿದಾಗ, ಸೊಳ್ಳೆಯ ಹೊಟ್ಟೆಯಿಂದ ಹೊರಹೊಮ್ಮಿದ ಹುಳುವಿನ ವಿವರಗಳು ನಮಗೆ ಸಿಕ್ಕಿವೆ.

ಇದರೊಂದಿಗೆ ನಾವು ಹಾವಿನ ಸಂಶೋಧಕ ಮತ್ತು ಹಾವುಗಳ ಸ್ನೇಹಿತ ಆನಂದ್ ಚಿಟ್ಟಿ ಅವರನ್ನು ಸಂಪರ್ಕಿಸಿದ್ದೇವೆ. ನ್ಯೂಸ್‌ಚೆಕರ್ ಗೆ ಪ್ರತಿಕ್ರಿಯಿಸಿದ ಅವರು, “ವೈರಲ್ ವೀಡಿಯೋದಲ್ಲಿ ಕಂಡುಬರುವ ಜೀವಿಗೂ, ಹಾವಿಗೂ ಯಾವುದೇ ಸಂಬಂಧವಿಲ್ಲ ಮತ್ತು ಸುಳ್ಳು ಹೇಳಿಕೆಯನ್ನು ನೀಡಲಾಗುತ್ತಿದೆ” ಎಂದು ಹೇಳಿದರು. ಭಾರತದ ಅತ್ಯಂತ ಚಿಕ್ಕ ಹಾವನ್ನು ಬ್ರಹ್ಮಿಣಿ ಬ್ಲೈಂಡ್ ಸ್ನೇಕ್ ಎಂದು ಕರೆಯಲಾಗುತ್ತದೆ. “ಹಾವಿಗೂ ವೀಡಿಯೊದಲ್ಲಿರುವ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ” ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ, ನಾವು ಭಾರತದ ಅತ್ಯಂತ ಚಿಕ್ಕ ಹಾವು ಬ್ಲೈಂಡ್ ಸ್ನೇಕ್ ಮತ್ತು ವಿಶ್ವದ ಅತಿ ಚಿಕ್ಕ ಹಾವು ಬಾರ್ಬಡೋಸ್ ಥ್ರೆಡ್ಕ್ ಸ್ನೇಕ್ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದೇವೆ. ಈ ರೀತಿ ಕಾಣುವ ಹಾವುಗಳು ವೈರಲ್ ವೀಡಿಯೊದಲ್ಲಿ ಕಂಡುಬಂದಿಲ್ಲ.

ಈ ಹೇಳಿಕೆಯ ಬಗ್ಗೆ ಇನ್ನಷ್ಟು ಸಂಶೋಧನೆಯ ನಿಟ್ಟಿನಲ್ಲಿ, ನಾವು ಸಸ್ಯಶಾಸ್ತ್ರ ಮತ್ತು ಹಾವು ವಿಜ್ಞಾನಕ್ಕೆ ಸಂಬಂಧಿಸಿದ ತಜ್ಞರನ್ನು ಸಂಪರ್ಕಿಸಿದ್ದೇವೆ ಅವರ ಪ್ರತಿಕ್ರಿಯೆಯನ್ನು ಪಡೆದ ಕೂಡಲೇ ಈ ಲೇಖನವನ್ನು ನವೀಕರಿಸಲಾಗುವುದು.
Also Read: ಮಣಿಪುರ ಬೆತ್ತಲೆ ಮೆರವಣಿಗೆ ಆರೋಪಿಗಳು ಆರೆಸ್ಸೆಸ್ ದಿರಿಸಿನಲ್ಲಿದ್ದ ಫೋಟೋ ನಿಜವೇ?
ವೈರಲ್ ಕ್ಲೈಮ್ನಲ್ಲಿ ಕಂಡುಬರುವ ಜೀವಿ ಹಾವು ಅಲ್ಲ ಮತ್ತು ಹುಳುವಿನಂತಹ ಜೀವಿ ಮತ್ತು ಮಾನವ ಜೀವಕ್ಕೆ ಯಾವುದೇ ಹಾನಿ ಇಲ್ಲ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ವೈರಲ್ ಹೇಳಿಕೆ ಸುಳ್ಳು ಮತ್ತು ಅನಗತ್ಯ ಭಯವನ್ನು ಸೃಷ್ಟಿಸುತ್ತದೆ.
Our Sources
Article published by Snopes, Dated: August 29, 2019
Article published by animalia.bio
Article published by britannica.com
Conversation With Dr. Bhushan Sutar
Conversation With Snake Expert Anand Chitti
(ಈ ಲೇಖನವು ಮೊದಲು ನ್ಯೂಸ್‌ಚೆಕರ್ ಮರಾಠಿಯಲ್ಲಿ ಪ್ರಕಟಗೊಂಡಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.