Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಮುಸ್ಲಿಂ ಮತೀಯವಾದಿಗಳು ದೇಶದ ತ್ರಿವರ್ಣ ಧ್ವಜವನ್ನು ತಿರುಚಿ ಇಸ್ಲಾಂ ಚಿಹ್ನೆಯನ್ನು ಹಾಕಿ ಕೋಲ್ಕತಾದ ಹೌರಾ ಸೇತುವೆಯಲ್ಲಿ ಹಾರಾಡಿಸಿದ್ದಾರೆ ಎಂಬ ಕ್ಲೇಮ್ ಒಂದು ಹರಿದಾಡುತ್ತಿದೆ.
ಇದರ ಸತ್ಯಾಸತ್ಯತೆಯನ್ನು ತಿಳಿಯಲು ಬಳಕೆದಾರರೊಬ್ಬರು ನ್ಯೂಸ್‌ಚೆಕರ್ ವಾಟ್ಸಾಪ್ ಟಿಪ್‌ಲೈನ್ (+91 9999499044)ಗೆ ದೂರನ್ನು ಕಳಿಸಿದ್ದು, ಸತ್ಯಶೋಧನೆಗಾಗಿ ನಾವು ಅದನ್ನು ಸ್ವೀಕರಿಸಿದ್ದೇವೆ.
Also Read: ಮಣಿಪುರ ಬೆತ್ತಲೆ ಪ್ರಕರಣದ ಆರೋಪಿಗಳನ್ನು ಬೆಂಬಲಿಸಿ ರಾಲಿ ಎಂದು ತಪ್ಪಾದ ಫೋಟೋ ಹಂಚಿಕೆ

ಇದೇ ರೀತಿಯ ಕ್ಲೇಮ್ ಇರುವ ಟ್ವೀಟ್ ಇಲ್ಲಿದೆ.
ಇದೇ ರೀತಿಯ ಕ್ಲೇಮ್ ಇರುವ ಟ್ವೀಟ್ ನ ಆರ್ಕೈವ್ ಪ್ರತಿಯನ್ನು ಇಲ್ಲಿ ನೋಡಬಹುದು.
ಸತ್ಯಶೋಧನೆಗಾಗಿ ನಾವು ಫೇಸ್ಬುಕ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ಈ ವೀಡಿಯೋವನ್ನು ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿರುವುದು ಕಂಡುಬಂದಿದೆ. ಅಂತ ಪೋಸ್ಟ್ ಒಂದರಲ್ಲಿ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದು ಈ ಸೇತುವೆ ಉತ್ತರ 24 ಪರಗಣದ ಭಟ್ಪಾರಾದ ಕಂಕಿನಾರಾ ಸೇತುವೆಯನ್ನು ಹೋಲುತ್ತದೆ ಎಂದು ಹೇಳಿದ್ದಾರೆ.
ಈ ಸುಳಿವನ್ನು ತೆಗೆದುಕೊಂಡು ನಾವು ಮತ್ತಷ್ಟು ಕೀವರ್ಡ್‌ಗಳೊಂದಿಗೆ ಫೇಸ್‌ಬುಕ್‌ನಲ್ಲಿ ಹುಡುಕಿದ್ದೇವೆ. ಮತ್ತು ಕಂಕಿನಾರಾಕ್ಕೆ ಸಂಬಂಧಿಸಿದ “ಕಂಕಿನಾರಾ ಮಾನೆ” ಎಂಬ ಬಂಗಾಳಿ ಪುಟವನ್ನು ಪತ್ತೆ ಮಾಡಿದ್ದೇವೆ. ಈ ಖಾತೆಯಲ್ಲಿ ಜೂನ್ 28, 2023ರಂದು ಮಾಡಿದ ಪೋಸ್ಟ್ ನಲ್ಲಿ ಅದೇ ವೀಡಿಯೋ ಇರುವುದನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ಬಂಗಾಳಿಯಲ್ಲಿ ಕ್ಯಾಪ್ಷನ್ ಬರೆಯಲಾಗಿದ್ದು “ಇದು ಕಂಕಿನಾರಾ ಸೇತುವೆಯ ವೈರಲ್ ವೀಡಿಯೋ” ಎಂದಿದೆ.
ನಂತರ ನಾವು ಗೂಗಲ್ ನಕ್ಷೆಯಲ್ಲಿ ಕಂಕಿನಾರಾ ಸೇತುವೆಯ ಚಿತ್ರಗಳನ್ನು ಪರಿಶೀಲಿಸಿದ್ದು, ಬಳಕೆದಾರೊಬ್ಬರು ಸೇತುವೆಯ 360 ಡಿಗ್ರಿ ಚಿತ್ರವನ್ನು ತೆಗೆದಿರುವುದನ್ನು ಗಮನಿಸಿದ್ದೇವೆ.
ವೈರಲ್ ವೀಡಿಯೋದಲ್ಲಿ ಕಂಡುಬಂದಿರುವ ಫ್ರೇಮ್‌ಗಳು ಮತ್ತು ಗೂಗಲ್ ನಕ್ಷೆಯ 360 ಡಿಗ್ರಿ ಫೋಟೋಗಳ ಮಧ್ಯೆ ಹೋಲಿಕೆಗೆ ನಾವು ಯತ್ನಿಸಿದ್ದೇವೆ. ಈ ವೇಳೆ ಎರಡೂ ಚಿತ್ರಗಳಲ್ಲಿ ರೈಲ್ವೇ ಮಾರ್ಗದಲ್ಲಿರುವ ಕಟ್ಟಡ, ಗೋಪುರ, ಮರವನ್ನು ನಾವು ಕಾಣಬಹುದು.


Also Read: ಕ್ಯಾಪ್ಸಿಕಂನಲ್ಲಿ ಪ್ರಪಂಚದ ಅತಿ ಚಿಕ್ಕ ವಿಷಕಾರಿ ಹಾವು, ವೈರಲ್ ವೀಡಿಯೋ ಸತ್ಯವೇ?
ನ್ಯೂಸ್ಚೆಕರ್ ನಂತರ ಸ್ಥಳೀಯ ಪತ್ರಕರ್ತ ದೀಪಕ್ ದೇಬ್ನಾಥ್ ಅವರನ್ನು ಸಂಪರ್ಕಿಸಿದರು, ಅವರು ವೈರಲ್ ವೀಡಿಯೊ ನಿಜವಾಗಿಯೂ ಉತ್ತರ 24 ಪರಗಣದ ಭಟ್ಪಾರಾ ಪ್ರದೇಶದ ಕಂಕಿನಾರಾ ಸೇತುವೆಯನ್ನು ತೋರಿಸುತ್ತದೆ ಎಂದು ದೃಢಪಡಿಸಿದರು.
ಕಂಕಿನಾರಾ ವ್ಯಾಪ್ತಿಗೆ ಬರುವ ಬರಾಕ್ ಪೋರ್ ನ ಆಯುಕ್ತ ಅಲೋಕ್ ರಾಜೋರಿಯಾ ಅವರನ್ನೂ ನ್ಯೂಸ್ ಚೆಕ್ ಸಂಪರ್ಕಿಸಿದೆ. ವೀಡಿಯೋ ನಿಜವಾಗಿಯೂ ಕಂಕಿನಾರಾದಿಂದ ಬಂದಿದೆ ಎಂದು ಐಪಿಎಸ್ ಅಧಿಕಾರಿ ನಮಗೆ ದೃಢಪಡಿಸಿದರು. “ಈ ಧ್ವಜವನ್ನು ಅಲ್ಲಿ ಹಾಕಿದವರು ಯಾರು ಎಂದು ನಾವು ತನಿಖೆ ನಡೆಸುತ್ತಿದ್ದೇವೆ. ಪ್ರಸ್ತುತ ಯಾವುದೇ ಧ್ವಜವಿಲ್ಲ ಎಂದವರು ಹೇಳಿದ್ದಾರೆ”.
ಆದ್ದರಿಂದ, ವೈರಲ್ ವೀಡಿಯೊವು ಹೌರಾ ಸೇತುವೆಯನ್ನು ತೋರಿಸುವುದಿಲ್ಲ ಆದರೆ ಉತ್ತರ 24 ಪರಗಣಗಳ ಕಂಕಿನಾರಾ ಸೇತುವೆಯನ್ನು ತೋರಿಸುತ್ತದೆ ಎಂದು ನಾವು ಹೇಳಬಹುದಾಗಿದೆ.
Our Sources
Facebook post by Kankinara Maane, Dated June 28, 2023
Image seen on Google maps, 360 view
Telephone conversation with journalist Deepak Debnath
WhatsApp communication with Barrackpore commissioner Alok Rajoria
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 4, 2025
Ishwarachandra B G
October 18, 2025
Runjay Kumar
October 13, 2025