Authors
Claim
ಇಸ್ರೇಲ್ ಸ್ನಿಪರ್ ಗಳು ಶಕ್ತಿಶಾಲಿ ರೈಫಲ್ ಗಳನ್ನು ಬಳಸಿ ಭಯೋತ್ಪಾದಕರನ್ನು ಶೂಟ್ ಮಾಡುತ್ತಿರುವ ನೈಜ ಮತ್ತು ಇತ್ತೀಚಿನ ದೃಶ್ಯ
Fact
ವೈರಲ್ ವೀಡಿಯೋ ಆರ್ಮಾ 3 ಎಂಬ ವೀಡಿಯೋ ಗೇಮ್ ನೊಂದಿಗೆ ರಚಿಸಲಾದ ಸಿಮ್ಯುಲೇಶನ್ ಆಗಿದ್ದು, ಇದು ನಿಜವಾದ ವೀಡಿಯೋ ಅಲ್ಲ
ಇಸ್ರೇಲ್-ಹಮಾಸ್ ಮಧ್ಯೆ ಸಂಘರ್ಷ ನಡೆಯುತ್ತಿರುವಂತೆಯೇ, ಇಸ್ರೇಲ್ ಸ್ನಿಪರ್ ಗಳು ಶಕ್ತಿಶಾಲಿ ಗನ್‌ಗಳನ್ನು ಬಳಸಿ ಭಯೋತ್ಪಾದಕರನ್ನು ಚೆಂಡಾಡುತ್ತಿದ್ದಾರೆ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಇಸ್ರೇಲ್ ಸೈನಿಕರು ಎಂತಹ ಶಕ್ತಿಯುತವಾದ ಟೆಲಿಸ್ಕೋಪಿಕ್ ಲಾಂಗ್ ರೇಂಜ್ ಲೇಸರ್ ರೈಫಲ್ಸ್ ? ಬಳಸಿ ಭಯೋತ್ಪಾದಕರನ್ನು ಚಂಡಾಡುತ್ತಿದ್ದಾರೆ. ಅಸಲಿಗೆ ಗುಂಡು ಎತ್ತ ಕಡೆಯಿಂದ ಬರುತ್ತಿದೆ ಎನ್ನುವುದು ಗೊತ್ತಾಗದೆ ಸಾಯುತ್ತಿದ್ದಾರೆ.. ಭಯೋತ್ಪಾದಕರು.” ಎಂದು ಹೇಳಲಾಗಿದೆ.
Also Read: ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಎಂಬ ಈ ಹೇಳಿಕೆಗಳು ಸುಳ್ಳು!
ಈ ಕುರಿತು ನಾವು ಸತ್ಯಶೋಧನೆ ನಡೆಸಿದ್ದು, ಇದು ಗೇಮ್ ಒಂದರ ದೃಶ್ಯವಾಗಿದ್ದು ಸುಳ್ಳು ಎಂದು ಕಂಡುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ನಮಗೆ ಯೂಟ್ಯೂಬ್ ವೀಡಿಯೋವೊಂದು ಲಭ್ಯವಾಗಿದೆ.
ಮಾರ್ಕಸ್ ರಾಮ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೋವನ್ನು ಅಕ್ಟೋಬರ್ 9, 2023ರಂದು ಅಪ್ಲೋಡ್ ಮಾಡಲಾಗಿದ್ದು, 3.48 ನಿಮಿಷದ ಅವಧಿಯದ್ದಾಗಿದೆ. ಇದರ ಕೊನೆಯಲ್ಲಿ “ಥ್ಯಾಂಕ್ಸ್ ಫಾರ್ ವಾಚಿಂಗ್” ಎಂದು ಬರೆಯಲಾಗಿದೆ. ಆದರೆ ಫೇಸ್‌ಬುಕ್‌ನಲ್ಲಿ ಕಂಡುಬಂದಿರುವ ವೀಡಿಯೋ 3.08 ನಿಮಿಷದ್ದಾಗಿದೆ. ಇದು ಯೂಟ್ಯೂಬ್ ವೀಡಿಯೋಕ್ಕಿಂತ ಕಡಿಮೆ ಅವಧಿಯದ್ದು.
ಈ ವೀಡಿಯೋದ ವಿವರಣೆಯಲ್ಲಿ “ಪಿಸಿ ಮಿಲಿಟರಿ ಸಿಮ್ಯುಲೇಶನ್ ಅನ್ನು ಆರ್ಮಾ 3ಯೊಂದಿಗೆ ರಚಿಸಲಾಗಿದೆ” ಎಂದಿದೆ. ಜೊತೆಗೆ ಆರ್ಮಾ 3 ಲಿಂಕ್ ಕೂಡ ಕೊಡಲಾಗಿದೆ. ಆರ್ಮಾ 3 ಎನ್ನುವುದು ಒಂದು ಖ್ಯಾತ ವೀಡಿಯೋ ಗೇಮ್ ಆಗಿದೆ.
Also Read: ಹಮಾಸ್ ದಾಳಿಕೋರರು ಇಸ್ರೇಲ್ ವ್ಯಕ್ತಿಯ ಎದೆ ಸೀಳಿ ಹೃದಯ ಹೊರ ತೆಗೆದಿದ್ದಾರೆಯೇ?
ಆ ಬಳಿಕ ನಾವು ಯೂಟ್ಯೂಬ್‌ನಲ್ಲಿರುವ ಮಾರ್ಕಸ್ ರಾಮ್ ವೀಡಿಯೋ ಮತ್ತು ವೈರಲ್ ಆಗುತ್ತಿರುವ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಈ ಎರಡರಲ್ಲೂ ವೀಡಿಯೋ ಮಧ್ಯೆ RAM ಎಂಬ ವಾಟರ್ ಮಾರ್ಕ್ ಇರುವುದನ್ನು ಗಮನಿಸಿದ್ದೇವೆ.
ಇದೇ ರೀತಿ ಮಾರ್ಕಸ್ ರಾಮ್ ಚಾನೆಲ್‌ನ ಇತರ ವೀಡಿಯೋಗಳಲ್ಲೂ RAM ಎಂದು ಬರೆದಿರುವುದನ್ನು ನಾವು ಗಮನಿಸಿದ್ದೇವೆ. ಜೊತೆಗೆ ಈ ಬಳಕೆದಾರರು ಹಲವು ಕಂಪ್ಯೂಟರ್ ಸಿಮ್ಯುಲೇಶನ್ ವೀಡಿಯೋಗಳನ್ನು ಪೋಸ್ಟ್ ಮಾಡಿರುವುದನ್ನು ಗಮನಿಸಿದ್ದೇವೆ.
ಆ ಬಳಿಕ ಮಾರ್ಕಸ್ ರಾಮ್ ಯೂಟ್ಯೂಬ್ ಚಾನೆಲ್ ವಿವರಗಳನ್ನು ತಿಳಿಯಲು ಚಾನೆಲ್‌ನ About ಮಾಹಿತಿಯನ್ನು ನೋಡಿದ್ದು, ಅಲ್ಲಿ “SNIPER Computer simulations that are fun” ಎಂದು ಬರೆದಿರುವುದನ್ನು ನೋಡಿದ್ದೇವೆ. ಅರ್ಥಾತ್ ಸ್ನಿಪರ್ ಕಂಪ್ಯೂಟರ್ ಸಿಮ್ಯುಲೇಶನ್ಗಳು ಮೋಜಿನ ಉದ್ದೇಶ ಹೊಂದಿವೆ ಎಂದಿದೆ. ಹೆಚ್ಚಿನ ಮಾಹಿತಿಗಾಗಿ ನಾವು ಮಾರ್ಕಸ್ ರಾಮ್ ಚಾನೆಲ್ ಸಂಪರ್ಕಿಸಲು ಯತ್ನಿಸಿದ್ದೇವೆ. ಅವರಿಂದ ಪ್ರತಿಕ್ರಿಯೆ ಬಂದ ಬಳಿಕ ಈ ಲೇಖನವವನ್ನು ಪರಿಷ್ಕರಿಸಲಾಗುವುದು.
Also Read: ಇಸ್ರೇಲ್ ದಾಳಿ ವೇಳೆ ಪ್ಯಾಲಸ್ತೀನೀಯರು ತ್ರಿವರ್ಣ ಧ್ವಜ ಹೊದ್ದು ದಾಳಿಯಿಂದ ಪಾರಾದರು ಎನ್ನುವುದು ನಿಜವೇ?
Conclusion
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಇದು ವೀಡಿಯೋ ಗೇಮ್ ನ ದೃಶ್ಯವಾಗಿದ್ದು ನಿಜವಾದ್ದಲ್ಲ ಎಂದು ತಿಳಿದುಕೊಳ್ಳಬಹುದಾಗಿದೆ.
Result: False
Our Sources
YouTube Video By Markus Ram, Dated October 9, 2023
Self Analysis
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.