Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್ ಸೇನಾಪಡೆ ದಾಳಿ, ಹಿಜಾಬ್ ಧರಿಸದ್ದಕ್ಕೆ ಬಾಂಗ್ಲಾದೇಶದಲ್ಲಿ ಕಿರುಕುಳ, ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿ ಪಾಕಿಸ್ತಾನ ಕಂಪೆನಿ ಉದ್ಯೋಗಿಗಳ ಪಟ್ಟಿ ಕೋಮು ಹೇಳಿಕೆಯೊಂದಿಗೆ ವೈರಲ್, ಬಾಳೆಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಉಜ್ಜುವುದರಿಂದ ಚಿರಯುವಕರಂತೆ ಕಾಣಬಹುದು ಎಂಬ ಹೇಳಿಕೆಗಳು ಈ ವಾರ ಸಾಮಾಜಿಕ ಮಾಧ್ಯಮದಲ್ಲಿ ಸದ್ದುಮಾಡಿವೆ. ಈ ಹೇಳಿಕೆಗಳ ಸತ್ಯಾಸತ್ಯತೆಯನ್ನು ನ್ಯೂಸ್‌ಚೆಕರ್ ತೆರೆದಿಟ್ಟಿದ್ದು, ಇವುಗಳು ತಪ್ಪು ಹೇಳಿಕೆಗಳು ಎಂದು ಸಾಬೀತು ಮಾಡಿದೆ.
ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್ ಸೇನಾಪಡೆ ನಡೆಸಿದ ದಾಳಿ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್ ಸೇನಾಪಡೆ ನಡೆಸಿದ ದಾಳಿ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡ ವೀಡಿಯೋ ತಪ್ಪಾಗಿದೆ. ಇದು ಇಂಡೋನೇಷ್ಯಾದ ಸಾಂಗ್ಕುಲಿರಾಂಗ್ ಮಾರುಕಟ್ಟೆಯಲ್ಲಿ ಸಂಭವಿಸಿದ ಅಗ್ನಿ ಅನಾಹುತವೊಂದರ ದೃಶ್ಯವಾಗಿದೆ. ಈ ಕುರಿತ ವಿವರ ಇಲ್ಲಿದೆ
ತಿರುಪತಿ ದೇವಸ್ಥಾನಕ್ಕೆ ಲಡ್ಡು ಪ್ರಸಾದಕ್ಕೆ ತುಪ್ಪ ಸರಬರಾಜು ಮಾಡುವ ಕಂಪನಿಯ ಆಡಳಿತದಲ್ಲಿರುವ ಎಲ್ಲರೂ ಮುಸ್ಲಿಮರು ಎಂದು ಕಂಪೆನಿಯೊಂದರ ಉದ್ಯೋಗಿಗಳ ಪಟ್ಟಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ, ವೈರಲ್ ಸ್ಕ್ರೀನ್‌ಶಾಟ್‌ನಲ್ಲಿರುವ ಹೆಸರು ಪಾಕಿಸ್ತಾನದ ಕಂಪನಿ ಎಆರ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ಉನ್ನತ ಉದ್ಯೋಗಿಗಳ ಪಟ್ಟಿಯಾಗಿದೆ. ಈ ಕುರಿತ ವಿವರ ಇಲ್ಲಿದೆ
ಹಿಜಾಬ್ ಧರಿಸದ ಕಾರಣಕ್ಕೆ/ವಿದೇಶಿ ಮಹಿಳೆಯರಿಗೆ ಬಾಂಗ್ಲಾದೇಶದಲ್ಲಿ ಕಿರುಕುಳ ನೀಡಲಾಗುತ್ತಿದೆ. ಆದರೆ ನಿಜವಾಗಿ, ಬಾಂಗ್ಲಾದೇಶದ ನಟಿ ಮಾಡೆಲ್ ಮಿಶ್ತಿ ಸುಬಾಸ್ ಅವರು ಶೇಖ್ ಹಸೀನಾ ಅವರ ಜನ್ಮದಿನದಂದು ಟಿಎಸ್ ಸಿಯಲ್ಲಿ ಕೇಕ್ ಕತ್ತರಿಸಲು ಮುಂದಾಗಿದ್ದ ವೇಳೆ ಅದಕ್ಕೆ ವಿರೋಧ ವ್ಯಕ್ತವಾಯಿತು. ಅವರು ಹಿಜಾಬ್ ಧರಿಸದ್ದ ಕಾರಣಕ್ಕೆ ಅಥವಾ ವಿದೇಶಿ ಮಹಿಳೆ ಎಂಬ ಕಾರಣಕ್ಕೆ ಕಿರುಕುಳ ನೀಡಿದ್ದಲ್ಲ ಎಂದು ಗೊತ್ತಾಗಿದೆ. ಈ ಕುರಿತ ವಿವರ ಇಲ್ಲಿದೆ
ಬಾಳೆಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಉಜ್ಜುವುದರಿಂದ ಚಿರಯುವಕರಂತೆ ಕಾಣಬಹುದು, ಬಾಳೆಹಣ್ಣಿನ ಸಿಪ್ಪೆಯಲ್ಲಿದೆ ಸೌಂದರ್ಯದ ರಹಸ್ಯ ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸತ್ಯಶೋಧನೆಯಲ್ಲಿ, ಬಾಳೆಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಉಜ್ಜುವುದರಿಂದ ಚಿರಯುವಕರಂತೆ ಕಾಣಬಹುದು ಎಂಬ ಹೇಳಿಕೆಯನ್ನು ದೃಢೀಕರಿಸಲು ವೈಜ್ಞಾನಿಕ ಸಂಶೋಧನೆಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿಲ್ಲ. ಬಾಳೆಹಣ್ಣಿನ ಸಿಪ್ಪೆಯಿಂದ ಒಂದಷ್ಟು ಪ್ರಯೋಜನಗಳಿದ್ದರೂ ಅದೊಂದೇ ಏಕೈಕ ಪರಿಹಾರವಲ್ಲ ಎಂದು ಗೊತ್ತಾಗಿದೆ. ಈ ಕುರಿತ ವಿವರ ಇಲ್ಲಿದೆ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
June 14, 2025
Rifat Mahmdul
October 4, 2024
Newschecker and THIP Media
October 4, 2024