Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಇರಾನ್ನ ನಗರಗಳ ಮೇಲೆ ಇಸ್ರೇಲ್ನ ಬೃಹತ್ ದಾಳಿ
ಇರಾನ್ನ ನಗರಗಳ ಮೇಲೆ ಇಸ್ರೇಲ್ನ ಬೃಹತ್ ದಾಳಿ ಎಂದು ಹಂಚಿಕೊಳ್ಳಲಾಗಿರುವ ಈ ವೀಡಿಯೋ ಮೆಕ್ಸಿಕೋದ ಡೀಸೆಲ್ ಪ್ಲಾಂಟ್ ಒಂದರಲ್ಲಿ ಸಂಭವಿಸಿದ ಅವಘಡದ ದೃಶ್ಯವಾಗಿದೆ
ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ವಿವಿಧ ರೀತಿಯ ವೀಡಿಯೋಗಳು ಸಾಮಾಜಿಕ ಮಾಧ್ಯದಮದಲ್ಲಿ ಹರಿದಾಡಿವೆ.
ಫೇಸ್ಬುಕ್ ನಲ್ಲಿ ಕಂಡುಬಂದ ಪೋಸ್ಟ್ ಒಂದರಲ್ಲಿ “ಇರಾನ್ನ 8 ನಗರಗಳ ಮೇಲೆ ಇಸ್ರೇಲ್ನ ಬೃಹತ್ ದಾಳಿ. ಇರಾನ್ನ ನೂರಾರು ಕ್ಷಿಪಣಿಗಳು ನಾಶವಾದವು, ಪರಮಾಣು ಸ್ಥಾಪನೆಗಳ ಮೇಲೂ ದಾಳಿ ಮಾಡಲಾಗಿದೆ,” ಎಂದಿದೆ.

ಈ ಕುರಿತು ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಮೆಕ್ಸಿಕೋದಲ್ಲಿ ಡೀಸಲ್ ಪ್ಲಾಂಟ್ ನಲ್ಲಿ ಸಂಭವಿಸಿದ ಬೆಂಕಿ ಅನಾಹುತದ ವೀಡಿಯೋ ಆಗಿದ್ದು ಇರಾನ್ ನದ್ದಲ್ಲ ಎಂದು ಗೊತ್ತಾಗಿದೆ.
Also Read: ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನದ ದೃಶ್ಯ ಎಂದು ನೇಪಾಳದ ವೀಡಿಯೋ ವೈರಲ್
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ.
ಈ ವೇಳೆ ವಿವಿಧ ಫಲಿತಾಂಶಗಳು ಇದು ಮೆಕ್ಸಿಕೋದ ವೀಡಿಯೋ ಎಂದು ಹೇಳಿವೆ.
ಮೇ 22, 2025ರಂದು ಶಾರ್ಕ್ ಟೆಲಿವಿಷನ್ ಯೂಟ್ಯೂಬ್ ಶಾರ್ಟ್ಸ್ ನಲ್ಲಿ ವೈರಲ್ ವೀಡಿಯೋವನ್ನು ಹೋಲುವ ವೀಡಿಯೋವನ್ನು ಪ್ರಕಟಿಸಿದ್ದು, ಇದು ಮೆಕ್ಸಿಕೋದ ನ್ಯೂವೊ ಲಿಯೊನ್ ನ ಕ್ಯಾಡೆರೈಟಾದ ಡೀಸೆಲ್ ಪ್ಲಾಂಟ್ ನಲ್ಲಿ ಸಂಭವಿಸಿದ ಸ್ಫೋಟ ಎಂದು ಹೇಳಿದೆ.
ಮೇ 22, 2025ರಂದು ಇಂಡಿನ್ ನ್ಯೂಸ್ ನೆಟ್ ವರ್ಕ್ ಎಕ್ಸ್ ನಲ್ಲಿ ಮಾಡಿದ ಪೋಸ್ಟ್ ನಲ್ಲೂ ವೈರಲ್ ವೀಡಿಯೋ ಹೋಲುವ ವೀಡಿಯೋ ಇದ್ದು, ಮೆಕ್ಸಿಕೋದ ಕ್ಯಾಡೆರೈಟಾದ ಡೀಸೆಲ್ ಪ್ಲಾಂಟ್ ನಲ್ಲಿ ಸಂಭವಿಸಿದ ಸ್ಫೋಟ ಎಂದಿದೆ.
ಈ ಕುರಿತು ಮತ್ತಷ್ಟು ಹುಡುಕಾಟ ನಡೆಸಿದಾಗ ಮಾಧ್ಯಮ ವರದಿಗಳು ಕಂಡುಬಂದಿವೆ. ಬಿಎನ್ಒ ನ್ಯೂಸ್ ಮೇ 21, 2025ರಂದು ಪ್ರಕಟಿಸಿದ ವರದಿಯಲ್ಲಿ, ಉತ್ತರ ಮೆಕ್ಸಿಕೋದಲ್ಲಿರುವ ಡೀಸೆಲ್ ಸಂಸ್ಕರಣಾ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಕನಿಷ್ಠ ಒಬ್ಬರು ಗಾಯಗೊಂಡಿದ್ದಾರೆ.
ನ್ಯೂವೊ ಲಿಯಾನ್ನ ಕ್ಯಾಡೆರೈಟಾದಲ್ಲಿರುವ ಮಾರ್ವಿಕ್ ಕಂಪನಿಯಲ್ಲಿ ಬುಧವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ. ಮಾಂಟೆರ್ರಿಯಿಂದ ಸುಮಾರು 25 ಮೈಲುಗಳಷ್ಟು ಪೂರ್ವಕ್ಕೆ ಇರುವ ಈ ಸೌಲಭ್ಯವು ಡೀಸೆಲ್ ಬಟ್ಟಿ ಇಳಿಸುವಿಕೆ ಕೆಲಸ ಮಾಡುತ್ತದೆ ಎಂದಿದೆ. ಇದೇ ವರದಿಯಲ್ಲಿ, ನ್ಯೂವೋ ಲಿಯಾನ್ನ ನಾಗರಿಕ ರಕ್ಷಣಾ ಸಂಸ್ಥೆಯ ಪ್ರಕಾರ, ಬೆಂಕಿಯು ಕನಿಷ್ಠ 13 ದಾಸ್ತಾನು ವ್ಯವಸ್ಥೆಯನ್ನು ಸುಟ್ಟುಹಾಕಿದೆ, ಪ್ರತಿಯೊಂದೂ 10,000 ಲೀಟರ್ಗಳಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿತ್ತು ಎಂದಿದೆ.

ಮೇ 22, 2025ರಂದು ಕ್ಯಾಲಿಬರ್ ಪ್ರಕಟಿಸಿದ ವರದಿಯಲ್ಲಿ, ಉತ್ತರ ಮೆಕ್ಸಿಕೋದ ಡೀಸೆಲ್ ಸಂಸ್ಕರಣಾ ಘಟಕದಲ್ಲಿ ಸ್ಫೋಟದ ನಂತರ ಬೆಂಕಿ ಕಾಣಿಸಿಕೊಂಡಿದೆ. ಮಧ್ಯಾಹ್ನದ ವೇಳೆ ಬೆಂಕಿ ಹೊತ್ತಿಕೊಂಡು, ಸ್ಥಳದಲ್ಲಿ ಸಂಗ್ರಹಿಸಲಾದ ಹೆಚ್ಚು ಸುಡುವ ವಸ್ತುಗಳಿಂದ ಬೆಂಕಿ ಬೇಗನೆ ಉಲ್ಬಣಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದಿದೆ.

ಆದ್ದರಿಂದ ಈ ಸಾಕ್ಷ್ಯಾಧಾರಗಳ ಪ್ರಕಾರ, ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ ದೃಶ್ಯಗಳು ಎಂದು ಹಂಚಿಕೊಂಡಿರುವ ದೃಶ್ಯಗಳು ನಿಜವಲ್ಲ, ಇದು ಮೆಕ್ಸಿಕೋದ ಡೀಸೆಲ್ ಪ್ಲಾಂಟ್ ಒಂದರಲ್ಲಿ ಸಂಭವಿಸಿದ ಅವಘಡ ಎಂದು ತಿಳಿದುಬಂದಿದೆ.
Also Read: ಜೂನ್ 15ರಿಂದ ಎಲ್ಲ ಹಿರಿಯ ನಾಗರಿಕರಿಗೆ ಸಾರ್ವಜನಿಕ ಸಾರಿಗೆಗಳಲ್ಲಿ ಉಚಿತ ಪ್ರಯಾಣ ಎನ್ನುವುದು ನಿಜವೇ?
Our Sources
YouTube shots By SharkTelivision, Dated: May 22, 2025
X post By Indian News Network, Dated: May 22, 2025
Report By BNO News, Dated: May 22, 2025
Report By Caliber, Dated: May 22, 2025
Ishwarachandra B G
June 25, 2025
Ishwarachandra B G
June 23, 2025
Ishwarachandra B G
June 21, 2025