Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೇ ನಿಲ್ದಾಣದ ಚಿತ್ರ
Fact
ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೇ ನಿಲ್ದಾಣದ ಚಿತ್ರ ಎಂದು ಹಾಕಲಾಗಿರುವ ಚಿತ್ರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಿಂದ ಮಾಡಿದ್ದು, ಇದು ನಿಜವಲ್ಲ
ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೇ ನಿಲ್ದಾಣದ ಚಿತ್ರಣ ಎಂದು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಪೋಸ್ಟ್ ಕಾರ್ಡ್ ಫೇಸ್‌ಬುಕ್‌ನಲ್ಲಿ ಮಾಡಿದ ಪೋಸ್ಟ್ ನಲ್ಲಿ “ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೆ ನಿಲ್ದಾಣದ ಚಿತ್ರಣ ಮೋದಿಜೀ ನಿಮಗೆ ನೀಡಿದ ಒಂದು ಮತ ನಮ್ಮ ಕನಸಿನ ಭಾರತವನ್ನು ರೂಪಿಸುತ್ತಿದೆ” ಎಂದು ಹೇಳಿದೆ.
Also Read: ವಿಧಾನಸೌಧದಿಂದ ಪರಪ್ಪನ ಅಗ್ರಹಾರಕ್ಕೆ 420 ಸಂಖ್ಯೆಯ ಬಸ್ ಇದೆ ಎನ್ನುವುದು ಸುಳ್ಳು!

ಈ ಕುರಿತು ನ್ಯೂಸ್‌ಚೆಕರ್ ಸತ್ಯಶೋಧನೆಯನ್ನು ನಡೆಸಿದ್ದು, ಇದು ನಿಜವಾದ ಚಿತ್ರಗಳಲ್ಲ ಎಂಬುದನ್ನು ಕಂಡುಕೊಂಡಿದೆ.
ಸತ್ಯಶೋಧನೆಗಾಗಿ ನಾವು ವೈರಲ್ ಪೋಸ್ಟ್ ನ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶ ಲಭ್ಯವಾಗಿದೆ.
ಈ ಪ್ರಕಾರ, ರೊಬೊನೊಮೊಸ್ ಎಂಬ ಎಕ್ಸ್ ಖಾತೆಯಿಂದ ಫೋಟೊಗಳನ್ನು ಪೋಸ್ಟ್ ಮಾಡಿರುವುದು ಕಂಡುಬಂದಿದೆ. ವೈರಲ್ ಪೋಸ್ಟ್ ನಲ್ಲಿರುವ ಎಲ್ಲ ಫೋಟೋಗಳನ್ನು ಇಲ್ಲೂ ಪೋಸ್ಟ್ ಮಾಡಲಾಗಿದೆ. ಇದರೊಂದಿಗೆ “Ayodhya railway station how is this?” ಎಂದು ಹಾಕಲಾಗಿದೆ.

ಈ ಪೋಸ್ಟ್ ನ ಕಮೆಂಟ್ ವಿಭಾಗದಲ್ಲಿ ಈ ಖಾತೆದಾರರು ಇದು Dall-e ನಿಂದ ರಚಿಸಲಾಗಿದೆ ಎಂದು ಹಾಕಿದ್ದಾರೆ Dall-e ಎನ್ನುವುದು ಒಂದು ಎಐ ಆಧರಿತ ಟೂಲ್ ಆಗಿದ್ದು ಇದರ ಮೂಲಕ ಫೋಟೋಗಳನ್ನು ಸೃಷ್ಟಿಸಬಹುದಾಗಿದೆ.
ಈ ಶೋಧನೆಗಳ ಬಳಿಕ ನಾವು ನಿಜಕ್ಕೂ ಅಯೋಧ್ಯೆಯ ನಿರ್ಮಾಣ ಹಂತದಲ್ಲಿರುವ ರೈಲ್ವೇ ನಿಲ್ದಾಣದ ಬಗ್ಗೆ ನೋಡಲು ಮುಂದಾಗಿದ್ದೇವೆ. ಇದಕ್ಕಾಗಿ ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದು, ಹಲವು ಮಾಹಿತಿಗಳು ಲಭ್ಯವಾಗಿವೆ.
Also Read: ಹಮಾಸ್‌ನಿಂದ ಅಂತಿಮ ಯಾತ್ರೆಯ ನಾಟಕ ಎನ್ನುವ ವೀಡಿಯೋ ನಿಜವೇ?
ಜನವರಿ 11, 2023ರ ಫೈನಾನ್ಷಿಯಲ್ ಎಕ್ಸ್ ಪ್ರೆಸ್ ವರದಿ ಪ್ರಕಾರ ದೇಶಾದ್ಯಂತ ರೈಲ್ವೇ ನಿಲ್ದಾಣಗಳ ಮರು ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದ್ದು, ಅಯೋಧ್ಯೆಯಲ್ಲಿ ಕೂಡ ನಡೆಯುತ್ತಿದೆ. ಅಯೋಧ್ಯೆಯಲ್ಲಿ ಅಂತಾರಾಷ್ಟ್ರೀಯ ದರ್ಜೆಯ ನಿಲ್ದಾಣ ನಿರ್ಮಾಣವಾಗುತ್ತಿದ್ದು ವಿವಿಧ ಸೌಕರ್ಯಗಳು, ಪ್ರಯಾಣಿಕ ಸೌಕರ್ಯ, ಶುಚಿತ್ವ ನಿರ್ವಹಣೆಯ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದಿದೆ. ಜೊತೆಗೆ ಮರು ನಿರ್ಮಾಣದ ಹಲವು ಫೋಟೋಗಳನ್ನು ಕೂಡ ವರದಿಯಲ್ಲಿ ಹಂಚಿಕೊಳ್ಳಲಾಗಿದೆ.
ಜುಲೈ 2, 2023ರ ಇಂಡಿಯನ್ ಎಸ್‌ಆರ್ ಜೆ ಎಂಬ ಯುಟ್ಯೂಬ್ ಚಾನೆಲ್‌ನಲ್ಲಿ “India’s Most Advanced Railway Station | Ayodhya Railway Station Redevelopment Project | Indian SRJ”ಶೀರ್ಷಿಕೆಯಡಿ ವೀಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ಅಯೋಧ್ಯೆಯ ನಿರ್ಮಾಣ ಹಂತದ ರೈಲ್ವೇ ನಿಲ್ದಾಣವನ್ನು ತೋರಿಸಲಾಗಿದೆ. ಇದು ಫೈನಾನ್ಷಿಯಲ್ ವರದಿಯಲ್ಲಿರುವ ಫೊಟೋಕ್ಕೆ ಸಾಮ್ಯತೆಗಳನ್ನು ಹೊಂದಿದೆ.
ಇನ್ನು ಕೇಂದ್ರ ರೈಲ್ವೇ ಸಚಿವಾಲಯ ಜುಲೈ 20, 2023ರಂದು ಅಯೋಧ್ಯೆಯಲ್ಲಿ ಮರುನಿರ್ಮಾಣಗೊಳ್ಳುತ್ತಿರುವ ರೈಲ್ವೇ ಸ್ಟೇಷನ್ ಬಗ್ಗೆ ಟ್ವೀಟ್ ಮಾಡಿದ್ದು ಅದನ್ನು ಇಲ್ಲಿ ನೋಡಬಹುದು. ಇದರಲ್ಲಿ ಹಲವು ಫೋಟೋಗಳನ್ನು ಕೊಡಲಾಗಿದೆ.
ದಿ ಉತ್ತರ್ ಪ್ರದೇಶ್ ಇಂಡಕ್ಸ್ ತನ್ನ ಎಕ್ಸ್ ಖಾತೆಯಲ್ಲಿ ಜನವರಿ 26, 2023ರಂದು ಅಯೋಧ್ಯೆಯ ರೈಲ್ವೇ ನಿಲ್ದಾಣದ ಬಗ್ಗೆ ಪೋಸ್ಟ್ ಮಾಡಿದ್ದು, ನಿಲ್ದಾಣದ ಎರಡು ಹಂತಗಳ ಕಾಮಗಾರಿಗಳ ಕುರಿತ ಮಾಹಿತಿ, ಫೋಟೋಗಳನ್ನು ಶೇರ್ ಮಾಡಿದೆ.
Also Read:ಇಸ್ರೇಲ್ ಸ್ನಿಪರ್ ಗಳು ಶೂಟ್ ಮಾಡುತ್ತಿರುವ ದೃಶ್ಯ ಎನ್ನುವುದು ನಿಜವಾದ್ದೇ?
ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ, ಈ ವರದಿಗಳಲ್ಲಿರುವ ಯಾವುದೇ ಫೊಟೋಗಳು ವೈರಲ್ ಫೋಟೋದೊಂದಿಗೆ ಸಾಮ್ಯತೆ ಹೊಂದಿಲ್ಲ ಮತ್ತು ಸಂಪೂರ್ಣ ಭಿನ್ನವಾಗಿರುವುದನ್ನು ನಾವು ಗಮನಿಸಿದ್ದೇವೆ.
ಸತ್ಯಶೋಧನೆಯ ಪ್ರಕಾರ, ವೈರಲ್ ಪೋಸ್ಟ್ ನಲ್ಲಿರುವುದು ನಿರ್ಮಾಣ ಹಂತದಲ್ಲಿರುವ ಅಯೋಧ್ಯೆ ರೈಲು ನಿಲ್ದಾಣವಲ್ಲ. ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಿಂದ ಮಾಡಿದ ಫೊಟೋವಾಗಿದೆ. ನೈಜ ಚಿತ್ರವಲ್ಲ.
Our Sources
X post By Robonomous, Dated: October 21, 2023
Report By Financial Express, Dated: January 11, 2023
YouTube Video By Indian SRJ, Dated: July 2, 2023
X post By Ministry of Railways, Dated: July 20, 2023
X post By Uttar Pradesh Index, Dated: Janaury 26, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
October 23, 2025
Ishwarachandra B G
May 30, 2025
Kushel Madhusoodan
May 13, 2024