Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಇರಾನ್ ಯುದ್ಧ ನಿಲ್ಲಿಸುವಂತೆ ಇಸ್ರೇಲ್ ಸೈನಿಕ ಬೇಡಿಕೊಳ್ಳುತ್ತಿದ್ದಾನೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಈ ಪೋಸ್ಟ್ ಕಂಡುಬಂದಿದ್ದು.

ಸತ್ಯಶೋಧನೆಯ ಭಾಗವಾಗಿ ನಾವು ವೈರಲ್ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಈ ವೇಳೆ ಕ್ಲಿಪ್ ನ ಬಲ ಮೂಲೆಯಲ್ಲಿ “Veo” ಎಂದು ಬರೆದಿರುವ ವಾಟರ್ ಮಾರ್ಕ್ ಗಮನಿಸಿದ್ದೇವೆ. ಇದು Google ನ ಎಐ ಮಾದರಿಯಾಗಿದ್ದು ಅದು ಪಠ್ಯ ಅಥವಾ ಚಿತ್ರ ಪ್ರಾಂಪ್ಟ್ಗಳಿಂದ ವೀಡಿಯೋಗಳನ್ನು ಉತ್ಪಾದಿಸುತ್ತದೆ.
Also Read: 2ನೇ ಮತ್ತು 4ನೇ ಶನಿವಾರ ಮತ್ತೆ ಕೆಲಸದ ದಿನಗಳಾಗಿ, ಸರ್ಕಾರಿ ರಜೆ ರದ್ದು ಮಾಡಲಾಗಿದೆಯೇ?

ಅನಂತರ ನಾವು ವೀಡಿಯೋವನ್ನು ಎಐ ಪತ್ತೆಸಾಧನ ಹೈವ್ ಮಾಡರೇಶನ್ ಮೂಲಕ ಪರಿಶೀಲಿಸಿದ್ದೇವೆ. ಅದು ವೀಡಿಯೋ 88% ರಷ್ಟು ಎಐ ರಚಿತ ಅಥವಾ ಡೀಪ್ಫೇಕ್ ವಿಷಯವನ್ನು ಒಳಗೊಂಡಿರುವ ಸಾಧ್ಯತೆಯಿದೆ ಎಂದು ಕಂಡುಹಿಡಿದಿದೆ.

ನ್ಯೂಸ್ಚೆಕರ್ ಅನ್ನು ಒಳಗೊಂಡಿರುವ ಮಿಸ್ಇನ್ಫಾರ್ಮೇಶನ್ ಕಾಂಬ್ಯಾಟ್ ಅಲೈಯನ್ಸ್ (MCA) ನ ಡೀಪ್ಫೇಕ್ಸ್ ಅನಾಲಿಸಿಸ್ ಯೂನಿಟ್ (DAU) ಕೂಡ ಕ್ಲಿಪ್ ಅನ್ನು ವಿಶ್ಲೇಷಣೆ ನಡೆಸಿದೆ. DAU ಹಿಯಾ ಡೀಪ್ಫೇಕ್ ವಾಯ್ಸ್ ಡಿಟೆಕ್ಟರ್ ಅನ್ನು ಬಳಸಿತು, ಇದು ಆಡಿಯೊ ಟ್ರ್ಯಾಕ್ ಅನ್ನು AI ನಿಂದ ರಚಿಸಲಾಗಿದೆ ಅಥವಾ ಮಾರ್ಪಡಿಸಲಾಗಿದೆ ಎಂದು ಕಂಡುಹಿಡಿದಿದೆ, ಆದರೆ ಡೀಪ್ಫೇಕ್-ಒ-ಮೀಟರ್ ಆರು ಆಡಿಯೊ ವರ್ಗೀಕರಣಗಳಲ್ಲಿ, ನಾಲ್ಕು ಆಡಿಯೋ “ಎಐ- ರಚಿತವಾಗಿದೆ” ಎಂದು ಹೆಚ್ಚಿನ ಸಂಭವನೀಯತೆಯನ್ನು ತೋರಿಸಿದೆ.

ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಇರಾನ್ ಯುದ್ಧ ನಿಲ್ಲಿಸುವಂತೆ ಇಸ್ರೇಲ್ ಸೈನಿಕ ಬೇಡಿದ್ದಾನೆ ಎಂದ ವೀಡಿಯೋ ಎಐ ಕರಾಮತ್ತು, ಇದು ನಿಜವಲ್ಲ ಎಂದು ಕಂಡುಬಂದಿದೆ.
Also Read: ಅಮೆರಿಕ ಇರಾನ್ ನ ಫೊರ್ಡೋ ಪರಮಾಣು ಘಟಕದ ಮೇಲೆ ದಾಳಿ ನಡೆಸಿದ ದೃಶ್ಯ ಎಂದ ವೈರಲ್ ವೀಡಿಯೋ ಸಿರಿಯಾದ್ದು!
Our Sources
Hive Moderation tool
DAU’s analysis
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
Ishwarachandra B G
November 7, 2025
Vasudha Beri
October 15, 2025
Ishwarachandra B G
June 23, 2025