Fact Check: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಆಂಧ್ರ ವ್ಯಕ್ತಿಯ ಬಂಧನವಾಗಿದೆ ಎನ್ನುವುದು ಸುಳ್ಳು

ರಾಮೇಶ್ವರಂ ಕೆಫೆ ಎನ್‌ಐಎ ಆಂಧ್ರ, ಅಬ್ದುಲ್‌ ಸಲೀಂ

Authors

Claim
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಆಂಧ್ರ ವ್ಯಕ್ತಿಯ ಬಂಧನವಾಗಿದೆ

Fact
ನಿಜಾಮಾಬಾದ್‌ ಪಿಎಫ್‌ಐ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್‌ ಸಲೀಂ ಎಂಬಾತನನ್ನು ಎನ್‌ಐಎ ಆಂಧ್ರ ಪ್ರದೇಶದಲ್ಲಿ ಬಂಧಿಸಿದೆ. ಇದು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಿದ್ದಲ್ಲ

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಬಂಧನವಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಗಳು ಹರಿದಾಡಿವೆ.

ಟ್ವಿಟರ್ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ ಇಸ್ಲಾಮಿಸ್ಟ್ ಟೆರರಿಸ್ಟ್, ಪಿಎಫ್‌ಐ ಸದಸ್ಯ ಅಬ್ದುಲ್‌ ಸಲೀಂನನ್ನು ಕರ್ನಾಟಕದ ರಾಮೇಶ್ವರಂ ಕೆಫೆ ಐಇಡಿ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ಆಂಧ್ರ ಪ್ರದೇಶದಿಂದ ಬಂಧಿಸಿದೆ.” ಎಂದಿದೆ.

Also Read: ಇಂಡಿಯಾ ಮೈತ್ರಿಕೂಟದ ರಾಲಿಯಲ್ಲಿ ಜನ ಸಾಗರ ಎಂದು ಪಾಟ್ನಾದ ಹಳೆ ರಾಲಿಯ ಫೋಟೋ ವೈರಲ್

Fact Check: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಆಂಧ್ರ ವ್ಯಕ್ತಿಯ ಬಂಧನವಾಗಿದೆ ಎನ್ನುವುದು ಸುಳ್ಳು
ಟ್ವಿಟರ್ ನಲ್ಲಿ ಕಂಡುಬಂದ ಕ್ಲೇಮ್

ಈ ಕ್ಲೇಮ್ ಆರ್ಕೈವ್ ಮಾಡಲಾಗಿದ್ದು ಅದು ಇಲ್ಲಿದೆ.

ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು, ಅಬ್ದುಲ್‌ ಸಲೀಂ ಬಂಧನ ಬೇರೆ ಪ್ರಕರಣಕ್ಕೆ ಸಂಬಂಧಿಸಿದ್ದು ಎಂದು ಕಂಡುಕೊಂಡಿದೆ.

Fact check/ Verification

ಸತ್ಯಶೋಧನೆಗಾಗಿ ನಾವು ಗೂಗಲ್‌ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ವರದಿಗಳು ಲಭ್ಯವಾಗಿವೆ.

ಮಾರ್ಚ್ 3, 2024ರ ಟೈಮ್ಸ್ ಆಫ್‌ ಇಂಡಿಯಾ ವರದಿ ಪ್ರಕಾರ “ಎನ್ಐಎ ನಿಜಾಮಾಬಾದ್‌ ಪಿಎಫ್‌ಐ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿದೆ. ಪಿಎಫ್‌ಐ ಭಾರತ ವಿರೋಧಿ ಹುನ್ನಾರ ನಡೆಸಿದ ಪ್ರಕರಣದಲ್ಲಿ ಅಬ್ದುಲ್‌ ಸಲೀಂ ಎಂಬಾತನನ್ನು ಬಂಧಿಸಿದೆ. ಈಗ ಇಸ್ಲಾಮಿಕ್‌ ರಾಷ್ಟ್ರ ಸ್ಥಾಪನೆಗಾಗಿ ಮುಸ್ಲಿಂ ಯುವಕರನ್ನು ನೇಮಕಾತಿ ಮಾಡಿ ಉಗ್ರ ಕ್ಯಾಂಪ್‌ಗಳಿಗೆ ತರಬೇತಿಗೆ ಕಳುಹಿಸುತ್ತಿದ್ದ” ಎಂದು ಹೇಳಲಾಗಿದೆ.

Fact Check: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಆಂಧ್ರ ವ್ಯಕ್ತಿಯ ಬಂಧನವಾಗಿದೆ ಎನ್ನುವುದು ಸುಳ್ಳು
ಟೈಮ್ಸ್ ಆಫ್‌ ಇಂಡಿಯಾ ವರದಿ

ಮಾರ್ಚ್ 3, 2024ರ ದಿ ಹಿಂದೂ ವರದಿ ಪ್ರಕಾರ “ನಿಜಾಮಾಬಾದ್‌ ಪಿಎಫ್‌ಐ ಪ್ರಕರಣಕ್ಕೆ ಸಂಬಂಧಿಸದಿಂತೆ ಎನ್‌ಐಎ ಮೈದುಕುರ್ ನಿಂದ ವ್ಯಕ್ತಿಯನ್ನು ಬಂಧಿಸಿದೆ. ಬಂಧಿತದನನ್ನು ಅಬ್ದುಲ್‌ ಸಲೀಂ ಎಂದು ಗುರುತಿಸಲಾಗಿದ್ದು ಈತ ತೆಲಂಗಾಣ ಉತ್ತರದ ಕಾರ್ಯದರ್ಶಿಯಾಗಿದ್ದ” ಎಂದಿದೆ.

ನಿಜಾಮಾಬಾದ್‌ ವರದಿ

ಏನಿದು ನಿಜಾಮಾಬಾದ್‌ ಪಿಎಫ್‌ಐ ಪ್ರಕರಣ?

ಭಾರತವನ್ನು 2047ರೊಳಗೆ ಇಸ್ಲಾಮಿಕ್‌ ರಾಷ್ಟ್ರವನ್ನಾಗಿಸಬೇಕೆಂಬ ಗುರಿಯೊಂದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹೂಡಿದ ಸಂಚಿನ ಭಾಗವಾಗಿ ಅಬ್ದುಲ್‌ ಸಲೀಂ ಮುಸ್ಲಿಂ ಯುವಕರನ್ನು ಭಯೋತ್ಪಾದನೆ ಕೃತ್ಯಕ್ಕೆ ನೇಮಕ ಮಾಡಿಕೊಳ್ಳುತ್ತಿದ್ದ, ಬಳಿಕ ಅವರನ್ನು ಉಗ್ರ ತರಬೇತಿಗೆ ಕಳಿಸುತ್ತಿದ್ದ ಎಂಬ ಆರೋಪವಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಜುಲೈ 2022ರಲ್ಲಿ ನಿಜಾಮಾಬಾದ್‌ ನಲ್ಲಿ ಪ್ರಕರಣ ದಾಖಲಾಗಿದ್ದು, ಆತನ ಸುಳಿವು ನೀಡಿದವರಿಗೆ ₹2 ಲಕ್ಷ ಬಹುಮಾನದ ಘೋಷಣೆಯೂ ಆಗಿತ್ತು. ಪ್ರಕರಣದಲ್ಲಿ ಅಬ್ದುಲ್‌ ಸಲೀಂ 15ನೇ ಆರೋಪಿಯಾಗಿದ್ದಾನೆ.

ಹೆಚ್ಚಿನ ಮಾಹಿತಿಗೆ ಬೆಂಗಳೂರು ಪೊಲೀಸ್‌ ಕಮಿಷನರ್ ಎಸ್‌ಪಿ ದಯಾನಂದ ಅವರನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್‌ಚೆಕರ್ ನೊಂದಿಗೆ ಮಾತನಾಡಿ, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟು, ಆಂಧ್ರದಲ್ಲಿ ಎನ್‌ಐಎ ವ್ಯಕ್ತಿಯೊಬ್ಬನನ್ನು ಎನ್‌ಐಎ  ಬಂಧಿಸಿದೆ ಎನ್ನುವುದು ಸತ್ಯವಲ್ಲ ಎಂದು ತಿಳಿಸಿದ್ದಾರೆ.

ಆ ಬಳಿಕ ನಾವು ಕನ್ನಡದ ಪ್ರಭದ ಕ್ರೈಂ ವರದಿಗಾರ, ಗಿರೀಶ್‌ ಮಾದೇನಹಳ್ಳಿಯವರನ್ನು ಸಂಪರ್ಕಸಿದ್ದೇವೆ. ಈ ವೇಳೆ ಅವರು ಹಳೆಯ, ಬೇರೆ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಆಂಧ್ರ ಪ್ರದೇಶದಿಂದ ವ್ಯಕ್ತಿಯನ್ನು ಬಂಧಿಸಿದೆ, ಬೆಂಗಳೂರಿನ ಪ್ರಕರಣಕ್ಕೆ ಸಂಬಂಧಪಟ್ಟಿದ್ದು ಇದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಕ್ರೈಂ ವರದಿಗಾರ ಸಂತೋಷ್‌ ಜಿಗಳಿಕೊಪ್ಪ ಅವರನ್ನೂ ಸಂಪರ್ಕಿಸಿದ್ದು ಅವರೂ, ಇದು ಬೇರೆ ಪ್ರಕರಣಕ್ಕೆ ಸಂಬಂಧಿಸಿದ ಬಂಧನ ಎಂದು ಹೇಳಿದ್ದಾರೆ.

Conclusion

ಈ ಸತ್ಯಶೋಧನೆಯ ಪ್ರಕಾರ, ಆಂಧ್ರಪ್ರದೇಶದಲ್ಲಿ ಎನ್‌ಐಎ ವ್ಯಕ್ತಿಯನ್ನು ಬಂಧಿಸಿದ ವಿಚಾರ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ ಎನ್ನುವುದು ಸ್ಪಷ್ಟವಾಗಿದೆ.

Also Read: ಪ.ಬಂಗಾಳದಲ್ಲಿ ಹಿಂದೂ ದಂಪತಿ ಹೊಲಗದ್ದೆ ಕಡೆ ಹೋದಾಗ ಮುಸ್ಲಿಮರಿಂದ ಕಿರುಕುಳಕ್ಕೆ ಈಡಾಗುತ್ತಿದ್ದಾರೆಯೇ?

Result: False

Our Sources:

Report By Times of India, Dated: March 3, 2024

Report By The Hindu, Dated: March 3, 2024

Conversation with S.P. Dayanand, Bangalore city Police commissioner

Conversation with Girish Madenahalli, Crime Reporter Kannadaprabha Daily

Conversation with Santhosh Jigalikoppa, Crime Reporter Prajavani Daily


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors