Explainer: ಸೋನಿಯಾ ಗಾಂಧಿಯವರಿಗೆ ಒಂದು ಮನೆಯೂ ಇಲ್ಲ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಸತ್ಯವೇ?

ಸೋನಿಯಾ ಗಾಂಧಿ ಮನೆ ಇಲ್ಲ, ಡಿ.ಕೆ. ಶಿವಕುಮಾರ್ ಹೇಳಿಕೆ

Authors

ಸೋನಿಯಾ ಗಾಂಧಿಯವರು ಒಂದೇ ಒಂದು ಮನೆಯನ್ನು ಹೊಂದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳುತ್ತಿರುವ ವೀಡಿಯೋ ಒಂದು ವೈರಲ್‌ ಆಗಿದೆ. ಕಾಂಗ್ರೆಸ್‌ ಅಧ್ಯಕ್ಷರಾಗಿದ್ದವರು ಹಲವು ಬಾರಿ ಸಂಸದರಾಗಿ ಆಯ್ಕೆಗೊಂಡಿದ್ದರೂ, ಅವರ ಬಳಿ ಸ್ವಂತಕ್ಕೊಂದು ಸೂರಿಲ್ಲ ಎಂಬಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿರುವ ವೀಡಿಯೋ ಇದಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ವೈರಲ್‌ ಆಗುತ್ತಿರುವ ಡಿಕೆ. ಶಿವಕುಮಾರ್ ಹೇಳಿಕೆಯ ವೀಡಿಯೋ

ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಅದರ ಪರಾಮರ್ಶನೆಯನ್ನು ನ್ಯೂಸ್ ಚೆಕರ್ ನಡೆಸಿದೆ. ಜನಪ್ರತಿನಿಧಿಗಳಾದವರ ಆಸ್ತಿ ಪಾಸ್ತಿ ವಿವರ ಪ್ರತಿ ಬಾರಿ ಉಮೇದುವಾರಿಕೆ ಸಲ್ಲಿಕೆವೇಳೆ ಬಹಿರಂಗ ಪಡಿಸಬೇಕಾದ್ದು ಕಡ್ಡಾಯವಾಗಿದೆ. ಅಫಿಡವಿಟ್ ರೂಪದಲ್ಲಿ ಆಸ್ತಿ ಘೋಷಣೆ ಮಾಡಬೇಕಿದ್ದು, ಆ ವಿವರಗಳನ್ನು ಹೊಂದಿರುವ ಮೈ ನೇತಾ ವೆಬ್ ಸೈಟ್ ಅನ್ನು ಪರಿಶೀಲಿಸಲಾಗಿದೆ. 2004ರಿಂದ ರಾಯ್‌ ಬರೇಲಿಯಲ್ಲಿ ಸಂಸದರಾಗಿದ್ದ ಕಾಂಗ್ರೆಸ್‌ನ ಸೋನಿಯಾ ಗಾಂಧಿಯವರು 2004, 2009, 2014, 2019ರಲ್ಲಿ ಚುನಾವಣೆಗೆ ನಿಂತಿದ್ದಾರೆ. ಈ ವೇಳೆ ಅವರು ಅಫಿಡವಿಟ್ ಗಳನ್ನು ಸಲ್ಲಿಸಿದ್ದು, ಅದರಲ್ಲಿ ತಮ್ಮ ಬಳಿ ಇರುವ ಆಸ್ತಿಯ ವಿವರಗಳನ್ನು ನೀಡಿದ್ದಾರೆ.

ಸೋನಿಯಾ ಅವರು 2004ರಲ್ಲಿ ಸಲ್ಲಿಸಿದ ಅಫಿಡವಿಟ್ ನಲ್ಲಿ ತಮ್ಮ ಬಳಿ ಯಾವುದೇ ಮನೆ ಆಗಲಿ ಕಟ್ಟಡವಾಗಲಿ ಇಲ್ಲ ಎಂದು ಘೋಷಿಸಿ ಕೊಂಡಿದ್ದರು.

Fact Check: ಸೋನಿಯಾ ಗಾಂಧಿಯವರಿಗೆ ಒಂದು ಮನೆಯೂ ಇಲ್ಲ ಎನ್ನುವ ಹೇಳಿಕೆ ನಿಜವೇ?

2009ರಲ್ಲಿ ಸಲ್ಲಿಸಿದ ಅಫಿಡವಿಟ್ ನಲ್ಲಿ ಅವರು ಇಟಲಿಯಲ್ಲಿ ತಮ್ಮ ಪೂರ್ವಜರ ಮನೆ ಇರುವುದಾಗಿ ಹೇಳಿಕೊಂಡಿದ್ದರು. ಇದರ ಒಟ್ಟು ಮೌಲ್ಯ ಆಗ 18.05 ಲಕ್ಷ ಇರುವುದಾಗಿ ಹೇಳಿಕೊಂಡಿದ್ದರು. ಇದು ಹೊರತಾಗಿ ಭಾರತದಲ್ಲಿ ಯಾವುದೇ ಕಟ್ಟಡ, ಮನೆ ಇರುವ ಬಗ್ಗೆ ಅವರು ಹೇಳಿಕೊಂಡಿಲ್ಲ.

Fact Check: ಸೋನಿಯಾ ಗಾಂಧಿಯವರಿಗೆ ಒಂದು ಮನೆಯೂ ಇಲ್ಲ ಎನ್ನುವ ಹೇಳಿಕೆ ನಿಜವೇ?

2014ರ ಅಫಿಡವಿಟ್ ನಲ್ಲಿ ಇಟಲಿ ಮನೆ ನಮೂದು

2014ರ ಅಫಿಡವಿಟ್ ನಲ್ಲಿ ಇಟಲಿಯಲ್ಲಿ ತಮ್ಮ ಪೂರ್ವಜರಿಂದ ತಮಗೆ ಬಂದ ಮನೆಯನ್ನು ನಮೂದಿಸಿದ್ದಾರೆ. ಇದನ್ನು “ಇತರೆ” ಆಸ್ತಿಯಡಿ ಅವರು ನಮೂದಿಸಿದ್ದರು. ಮತ್ತು ಮನೆಯಲ್ಲಿ ಪಾಲು ಹೊಂದಿರುವುದಾಗಿ ಹೇಳಿಕೊಂಡಿದ್ದರು. ಆಗ ಇದರ ಮೌಲ್ಯವನ್ನು ಅವರು 19.90 ಲಕ್ಷ ರೂ. ಎಂದು ಹೇಳಿದ್ದರು. ಇದು ಹೊರತಾಗಿ ಅವರು ಬೇರಾವುದೇ ಮನೆ ಹೊಂದಿರುವ ಬಗ್ಗೆ ನಮೂದಿಸಿಲ್ಲ.

Fact Check: ಸೋನಿಯಾ ಗಾಂಧಿಯವರಿಗೆ ಒಂದು ಮನೆಯೂ ಇಲ್ಲ ಎನ್ನುವ ಹೇಳಿಕೆ ನಿಜವೇ?

2019ರ ಅಫಿಡವಿಟ್ ನಲ್ಲಿಯೂ ಸೋನಿಯಾ ಅವರು ಇಟಲಿಯ ಮನೆಯ ಆಸ್ತಿಯನ್ನು ನಮೂದಿಸಿದ್ದರು. ಆಗ ಅದರ ಒಟ್ಟು ಮೌಲ್ಯವನ್ನು 23.20 ಲಕ್ಷ ರೂ. ಎಂದು ಹೇಳಿಕೊಂಡಿದ್ದರು. ಈ ಅಫಿಡವಿಟ್ ನಲ್ಲಿ ಸೋನಿಯಾ ಅವರು “ಇತರೆ” ಆಸ್ತಿಯಡಿ ಇಟಲಿ ಮನೆಯನ್ನು ನಮೂದಿಸಿದ್ದಾರೆ. ಮತ್ತು ಮನೆಯಲ್ಲಿ ಪಾಲು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ

Fact Check: ಸೋನಿಯಾ ಗಾಂಧಿಯವರಿಗೆ ಒಂದು ಮನೆಯೂ ಇಲ್ಲ ಎನ್ನುವ ಹೇಳಿಕೆ ನಿಜವೇ?

ಈ ನಂತರ 2024ರ ಫೆಬ್ರವರಿಯಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ರಾಜಸ್ಥಾನದಿಂದ ಸೋನಿಯಾ ಅವರು ಆಯ್ಕೆಯಾಗಿದ್ದರು. ಈ ವೇಳೆ ಸಲ್ಲಿಸಿದ ಅಫಿಡವಿಟ್ ನಲ್ಲೂ ಇಟಲಿಯ ಪೂರ್ವಜರ ಮನೆಯನ್ನು ಹೊಂದಿರುವುದಾಗಿ ಅವರು ನಮೂದಿಸಿದ್ದಾರೆ. ಇದರ ಮಾರುಕಟ್ಟೆ ಮೌಲ್ಯವನ್ನು ಅವರು 26.83 ಲಕ್ಷ ರೂ. ಎಂದು ಅವರು ಹೇಳಿದ್ದಾರೆ. 

Fact Check: ಸೋನಿಯಾ ಗಾಂಧಿಯವರಿಗೆ ಒಂದು ಮನೆಯೂ ಇಲ್ಲ ಎನ್ನುವ ಹೇಳಿಕೆ ನಿಜವೇ?

ಈ ಕುರಿತ ಪತ್ರಿಕಾ ವರದಿಗಳನ್ನು ಇಲ್ಲಿ, ಇಲ್ಲಿ ಇಲ್ಲಿ ನೋಡಬಹುದು. ಈ ವರದಿಗಳ ಪ್ರಕಾರವೂ ಸೋನಿಯಾ ಅವರು ಭಾರತದಲ್ಲಿ ಯಾವುದೇ ಮನೆಯನ್ನು ಹೊಂದಿರುವುದರ ಬಗ್ಗೆ ಉಲ್ಲೇಖಿಸಿಲ್ಲ, ಇಟಲಿಯಲ್ಲಿ ಪೂರ್ವಜರಿಂದ ಬಂದ ಮನೆಯ ಬಗ್ಗೆಯಷ್ಟೇ ಅವರು ಹೇಳಿಕೊಂಡಿದ್ದಾರೆ.

ಇಟಲಿ ಮನೆಯಲ್ಲಿ ಸೋನಿಯಾಗೆ ಪಾಲು

ಗಮನಾರ್ಹ ಅಂಶವೆಂದರೆ, 2014ರ ಬಳಿಕ ಅವರು ಮನೆ ಆಸ್ತಿಯನ್ನು ಘೋಷಿಸಿಕೊಂಡಾಗ “ಇತರ” ಆಸ್ತಿ ಎಂಬಂತೆ ಘೋಷಿಸಿದ್ದಾರೆ ಮತ್ತು ತಮ್ಮ ಪೂರ್ವಜರ ಮನೆಯಲ್ಲಿ ತಮಗೂ ಒಂದು ಪಾಲು ಇರುವುದಾಗಿ ಹೇಳಿಕೊಂಡಿದ್ದಾರೆ. ಅಂದರೆ ಸೋನಿಯಾ ಗಾಂಧಿಯವರು ಈ ಮನೆಯಲ್ಲಿ ಸಂಪೂರ್ಣ ಒಡೆತನವನ್ನು ಹೊಂದಿಲ್ಲ ಎಂದು ಹೇಳಬಹುದು.

ಆದ್ದರಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೋನಿಯಾ ಗಾಂಧಿಯವರು ಯಾವುದೇ ಮನೆ ಹೊಂದಿಲ್ಲ ಎಂದು ಹೇಳಿರುವುದು ಒಂದರ್ಥದಲ್ಲಿ ನಿಜವೇ ಆಗಿದೆ. ಭಾರತದಲ್ಲಿ ಅವರು ಯಾವುದೇ ಸ್ವಂತ ಮನೆಯನ್ನು ಹೊಂದಿಲ್ಲ. ಇಟಲಿಯಲ್ಲಿ ಅವರ ಪೂರ್ವಜರಿಂದ ಬಂದ ಮನೆಯಲ್ಲಿ ಒಂದು ಪಾಲನ್ನು ಹೊಂದಿದ್ದಾರೆ.

Our Sources:
Sonia Gandhi Lokasabha 2004 election affidavit

Sonia Gandhi Lokasabha 2009 election affidavit

Sonia Gandhi Lokasabha 2014 election affidavit

Sonia Gandhi Lokasabha 2019 election affidavit

Sonia Gandhi Rajyasabha 2024 election affidavit


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors