Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಜವಾಹರಲಾಲ್ ನೆಹರೂ ಕುಂಭಮೇಳದಲ್ಲಿ ಸ್ನಾನ ಮಾಡಿದ್ದರು
Fact
ಜವಾಹರಲಾಲ್ ನೆಹರೂ ಕುಂಭಮೇಳದಲ್ಲಿ ಸ್ನಾನ ಮಾಡಿದ್ದನ್ನು ತೋರಿಸಿದ ಫೋಟೋ ಇದಲ್ಲ, ಅವರ ತಾಯಿ ಸ್ವರೂಪ ರಾಣಿ ನೆಹರೂ ಅವರ ಚಿತಾಭಸ್ಮವನ್ನು ಅಲಹಾಬಾದ್ನಲ್ಲಿ ವಿಸರ್ಜಿಸಿದ ಸಂದರ್ಭದ್ದಾಗಿತ್ತು.
ಜವಾಹರಲಾಲ್ ನೆಹರೂ ಅವರೂ ಕುಂಭಮೇಳದಲ್ಲಿ ಸ್ನಾನ ಮಾಡಿದ್ದರು ಎಂಬಂತೆ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಎಕ್ಸ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ನೆಹರೂ ಜೀ ಕುಂಭ ಮೇಳದಲ್ಲಿ ಸ್ನಾನ ಮಾಡಿದರು, ಆದರೆ ದೇಶದ ಬಡತನ ಕೊನೆಯಾಗಲಿಲ್ಲ“ ಎಂದು ಹೇಳಿಕೆಯಿದೆ.

ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ವೈರಲ್ ಆಗಿರುವ ಚಿತ್ರವು ನೆಹರೂ ಅವರು ಕುಂಭಮೇಳದಲ್ಲಿ ಸ್ನಾನ ಮಾಡಿದ ಫೋಟೊ ಅಲ್ಲ ಎಂದು ಗೊತ್ತು ಮಾಡಿದೆ.
Fact Check: ಮತ್ತೆ ಹರಿದಾಡುತ್ತಿದೆ ಸ್ಟ್ರಾಬೆರಿ ಕ್ವಿಕ್ ಎನ್ನುವ ಹಳೆ ವಂಚನೆ ಸಂದೇಶ!
ವೈರಲ್ ಆದ ಈ ಚಿತ್ರದ ಕುರಿತು ಗೂಗಲ್ ಲೆನ್ಸ್ನಲ್ಲಿ ಹುಡುಕಾಟ ನಡೆಸಿದಾಗ ರೆಕನ್ ಟಾಕ್ ವೆಬ್ಸೈಟ್ ಪ್ರಕಟಿಸಿದ ‘ ಅಲಹಾಬಾದ್ನ “ತ್ಯಾಗದ ಸ್ಥಳ”ದ 15 ಅಪರೂಪದ ಮತ್ತು ಹಳೆಯ ಫೋಟೋಗಳು’ ಎಂಬ ಲೇಖನ ಲಭ್ಯವಾಗಿದೆ. ವೆಬ್ಸೈಟ್ನಲ್ಲಿ “ಅಲಹಾಬಾದ್ನಲ್ಲಿ ನೆಹರೂ ತನ್ನ ತಾಯಿಯ ಚಿತಾಭಸ್ಮವನ್ನು ವಿಸರ್ಜಿಸಿದ ನಂತರ” ಎಂದು ಫೊಟೋದಲ್ಲಿತ್ತು.
“ಈ ಹೃದಯಸ್ಪರ್ಶಿ ಚಿತ್ರವು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ತಮ್ಮ ಸಾಂಸ್ಕೃತಿಕ ಬೇರುಗಳೊಂದಿಗೆ ಬಂಧಿಸುವ ಆಳವಾದ ವೈಯಕ್ತಿಕ ಆಚರಣೆ ನಡೆಸುತ್ತಿರುವುದನ್ನು ತೋರಿಸುತ್ತದೆ” ಎಂದು ಅದು ಹೇಳಿದೆ.

ಮುಶಿರುಲ್ ಹಸನ್ ಮತ್ತು ಪ್ರಿಯಾ ಕಪೂರ್ ಅವರ ‘ದಿ ನೆಹರೂಸ್: ಪರ್ಸನಲ್ ಹಿಸ್ಟರೀಸ್’ ಪುಸ್ತಕದ ಕುರಿತು ಇಂಡಿಯಾ ಟುಡೇ ಲೇಖನವನ್ನೂ ನಾವು ಕಂಡುಕೊಂಡಿದ್ದೇವೆ . ಲೇಖನವು ಇದನ್ನು “ಭಾರತದ ಮೊದಲ ಕುಟುಂಬದ ಆತ್ಮೀಯ ಇತಿಹಾಸಗಳನ್ನು ಹೊರತರುವ ಅಪರೂಪದ ಚಿತ್ರಗಳ ಉತ್ತಮ ಸಂಶೋಧನ ಪುಸ್ತಕ…” ಎಂದು ಬಣ್ಣಿಸಿದೆ.
“ಸಹಿಸಲಾಗದ ದುರಂತ”: ಜವಾಹರಲಾಲ್ ನೆಹರೂ ಅವರು ಅಲಹಾಬಾದ್ನಲ್ಲಿ ತಮ್ಮ ತಾಯಿಯ ಚಿತಾಭಸ್ಮವನ್ನು ವಿಸರ್ಜಿಸುತ್ತಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ನೆಹರೂ ಅವರ ಅದೇ ವೈರಲ್ ಫೊಟೋವನ್ನು ಇದು ಒಳಗೊಂಡಿದೆ. ಜವಾಹರಲಾಲ್ ನೆಹರೂ ಅವರ ತಾಯಿ ಸ್ವರೂಪ ರಾಣಿ ನೆಹರೂ ಜನವರಿ 1938 ರಲ್ಲಿ ನಿಧನರಾಗಿದ್ದರು.

ಆ ನಂತರ ಶೋಧದ ವೇಳೆ 1954 ರ ಕುಂಭ ಮೇಳದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ದಿ ಕ್ವಿಂಟ್ ವರದಿಯನ್ನು ನಾವು ಕಂಡುಕೊಂಡಿದ್ದೇವೆ. “ಫೆಬ್ರವರಿ 4, 1954 ರಂದು ಪ್ರಕಟವಾದ ಅಮೃತ ಬಜಾರ್ ಪತ್ರಿಕಾ ವರದಿಯ ಪ್ರಕಾರ, ಸಂಗಮದಲ್ಲಿ ಸ್ನಾನ ಮಾಡುವ ಬಗ್ಗೆ ನೆಹರೂ ಅವರನ್ನು ಕೇಳಿದಾಗ, “ನಾನು ಪವಿತ್ರ ಸ್ನಾನ ಮಾಡಲಿಲ್ಲ, ಆದರೆ ಇತರ ಸ್ನಾನಗಳನ್ನು ಮಾಡಿದ್ದೇನೆ” ಎಂದು ನೆಹರು ಹೇಳಿದ್ದರು. ಆಗಿನ ಪ್ರಧಾನಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡದಿದ್ದರೂ, ದುರಂತ ಸಂಭವಿಸಿದಾಗ ಅವರು ಮಹಾಕುಂಭದಲ್ಲಿ ಹಾಜರಿದ್ದರು” ಎಂದು ವರದಿ ತಿಳಿಸಿದೆ .
1954 ರ ಕುಂಭಮೇಳದ ಸಮಯದಲ್ಲಿ ನೆಹರೂ ನಿಜವಾಗಿಯೂ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ವೈರಲ್ ಆಗಿರುವ ಛಾಯಾಚಿತ್ರವನ್ನು ತಪ್ಪಾದ ಸಂದರ್ಭದಲ್ಲಿ ಹಂಚಿಕೊಳ್ಳಲಾಗಿದೆ.
ಈ ಶೋಧನೆಯ ಪ್ರಕಾರ, 1954 ರ ಕುಂಭಮೇಳದ ಸಮಯದಲ್ಲಿ ಜವಾಹರಲಾಲ್ ನೆಹರು ಅವರು ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆಂದು ಹೇಳುವ ವೈರಲ್ ಪೋಸ್ಟ್ಗಳು ತಪ್ಪು ಎಂದು ಕಂಡುಬಂದಿದೆ.
Also Read: ಕುಂಭಮೇಳ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಪೊಲೀಸರು ಎಳೆದು ತಂದಿರುವುದು ನಿಜವೇ?
Our Sources
Article By Reckon Talk Website
Report By India Today, Dated March 6, 2006
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Vasudha Beri
March 4, 2025
Ishwarachandra B G
February 8, 2025
Ishwarachandra B G
February 3, 2025