ಮಹಾಕುಂಭ ಮೇಳ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ ಕುರಿತ ಸುಳ್ಳು ಪೋಸ್ಟ್ ಗಳೇ ಈ ವಾರವೂ ಹೆಚ್ಚು ಹರಿದಾಡಿವೆ. ಕುಂಭಮೇಳ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಪೊಲೀಸರು ಎಳೆದು ತಂದಿದ್ದಾರೆ, ಜವಾಹರಲಾಲ್ ನೆಹರೂ ಕುಂಭಮೇಳದಲ್ಲಿ ಸ್ನಾನ ಮಾಡಿದ್ದಾರೆ ಎಂಬ ಹೇಳಿಕೆಗಳು ಪ್ರಮುಖವಾಗಿದ್ದವು. ಇದರೊಂದಿಗೆ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸ್ಟ್ರಾಬೆರಿ ಕಿಕ್ ಸಂದೇಶ, ದಾಳಿಂಬೆ, ಬೀಟ್ರೂಟ್, ಕ್ಯಾರೆಟ್ ಮತ್ತು ಖರ್ಜೂರದ ಜ್ಯೂಸ್ ರಕ್ತಹೀನತೆ ಗುಣಪಡಿಸುತ್ತದೆ ಎಂಬ ಹೇಳಿಕೆಗಳು ಇದ್ದವು. ಇವುಗಳ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪು ಹೇಳಿಕೆಗಳು ಎಂದು ಕಂಡುಹಿಡಿದಿದೆ. ಈ ಕುರಿತ ಒಂದು ನೋಟ ಇಲ್ಲಿದೆ.

ಕುಂಭಮೇಳ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಪೊಲೀಸರು ಎಳೆದು ತಂದಿರುವುದು ನಿಜವೇ?
ಕುಂಭಮೇಳಕ್ಕೆ ಹೋಗುವ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಪೊಲೀಸರು ಎಳೆದು ತುಂದಿದ್ದಾರೆ ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ವೈರಲ್ ವೀಡಿಯೋ ಪಶ್ಚಿಮ ಬಂಗಾಳದ ಸೂರಿಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಆಸ್ತಿ ಕುರಿತ ಗಲಾಟೆಯದ್ದಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಜವಾಹರಲಾಲ್ ನೆಹರೂ ಕುಂಭಮೇಳದಲ್ಲಿ ಸ್ನಾನ ಮಾಡಿದ್ದರೇ?
ಜವಾಹರಲಾಲ್ ನೆಹರೂ ಅವರೂ ಕುಂಭಮೇಳದಲ್ಲಿ ಸ್ನಾನ ಮಾಡಿದ್ದರು ಎಂಬಂತೆ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ, ಜವಾಹರಲಾಲ್ ನೆಹರೂ ಕುಂಭಮೇಳದಲ್ಲಿ ಸ್ನಾನ ಮಾಡಿದ್ದನ್ನು ತೋರಿಸಿದ ಫೋಟೋ ಇದಲ್ಲ, ಅವರ ತಾಯಿ ಸ್ವರೂಪ ರಾಣಿ ನೆಹರೂ ಅವರ ಚಿತಾಭಸ್ಮವನ್ನು ಅಲಹಾಬಾದ್‌ನಲ್ಲಿ ವಿಸರ್ಜಿಸಿದ ಸಂದರ್ಭದ್ದಾಗಿತ್ತು ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಮತ್ತೆ ಹರಿದಾಡುತ್ತಿದೆ ಸ್ಟ್ರಾಬೆರಿ ಕ್ವಿಕ್ ಎನ್ನುವ ಹಳೆ ವಂಚನೆ ಸಂದೇಶ!
“ಸ್ಟ್ರಾಬೆರಿ ಕ್ವಿಕ್” ಎಂದು ಕರೆಯಲ್ಪಡುವ ಮಾದಕ ವಸ್ತು, ಭಾರತೀಯ ಶಾಲಾ ಮಕ್ಕಳಲ್ಲಿ ಜನಪ್ರಿಯವಾಗಿದೆ ಎಂಬ ಹೇಳಿಕೆಯೊಂದಿಗೆ ಸಣ್ಣ ಟೆಡ್ಡಿ ಬೇರ್ ಆಕಾರದ ಗುಲಾಬಿ ಕ್ಯಾಂಡಿಯಂತಿರುವ ಪ್ಯಾಕೆಟ್‌ನ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, 2007 ರಲ್ಲಿ ಅಮೆರಿಕದಲ್ಲಿ ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ವೈರಲ್ ಸಂದೇಶಗಳು ಒಂದು ವಂಚನೆಯಾಗಿದೆ; ವೈರಲ್ ಚಿತ್ರವು ಸಂಗ್ರಹ ಚಿತ್ರ ಎಂದು ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿದೆ

ದಾಳಿಂಬೆ, ಬೀಟ್ರೂಟ್, ಕ್ಯಾರೆಟ್ ಮತ್ತು ಖರ್ಜೂರದ ಜ್ಯೂಸ್ ರಕ್ತಹೀನತೆ ಗುಣಪಡಿಸುತ್ತದೆಯೇ?
ದಾಳಿಂಬೆ, ಬೀಟ್ರೂಟ್, ಕ್ಯಾರೆಟ್ ಮತ್ತು ಖರ್ಜೂರದ ಜ್ಯೂಸ್ ರಕ್ತಹೀನತೆಗೆ ಉಪಕಾರಿ ಎಂಬಂತೆ ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಸತ್ಯಶೋಧನೆಯಲ್ಲಿ ಕಂಡುಬಂದಂತೆ ದಾಳಿಂಬೆ, ಬೀಟ್ರೂಟ್, ಕ್ಯಾರೆಟ್ ಮತ್ತು ಖರ್ಜೂರದ ಜ್ಯೂಸ್ ರಕ್ತಹೀನತೆ ಗುಣಪಡಿಸುವ ಮಾಂತ್ರಿಕ ಜ್ಯೂಸ್ ಅಲ್ಲ. ಇದು ರಕ್ತಹೀನತೆಗೆ ಪರಿಹಾರವಲ್ಲ. ಆದರೆ ಉತ್ತಮ ಆಹಾರದ ಭಾಗವಾಗಿ ಸೇವಿಸಬಹುದು ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.