Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಮಹಾಕುಂಭ ಮೇಳದ ಕೊನೆಯಲ್ಲಿ ವಾಯುಪಡೆ ವಿಮಾನಗಳು ತ್ರಿಶೂಲದ ಚಿತ್ತಾರ ಬಿಡಿಸಿವೆ
ಮಹಾಕುಂಭ ಮೇಳದ ಕೊನೆಯಲ್ಲಿ ವಾಯುಪಡೆ ವಿಮಾನಗಳು ತ್ರಿಶೂಲದ ಚಿತ್ತಾರ ಬಿಡಿಸಿವೆ ಎನ್ನುವುದು ನಿಜವಲ್ಲ,. ಈ ತ್ರಿಶೂಲದ ಚಿತ್ತಾರದ ಫೊಟೋ 2019ರಿಂದಲೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ
ಮಹಾಕುಂಭ ಮೇಳದ ಕೊನೆಯಲ್ಲಿ ವಾಯುಪಡೆ ವಿಮಾನಗಳು ತ್ರಿಶೂಲದ ಚಿತ್ತಾರ ಬಿಡಿಸಿವೆ ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಮಹಾಕುಂಭಮೇಳದ ಸಮಾರೋಪ ಸಮಾರಂಭದಲ್ಲಿ ಸುಖೋಯ್ ಯುದ್ಧ ವಿಮಾನಗಳಿಂದ ಆಕಾಶದಲ್ಲಿ ಮಹಾ ತ್ರಿಶೂಲದ ಅದ್ಭುತ ಚಿತ್ರ ನಿರ್ಮಾಣ” ಎಂದಿದೆ.
ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ಸುಳ್ಳು ಎಂದು ಕಂಡುಬಂದಿದೆ.
Also Read: ನಿರ್ಮಲಾ ಸೀತಾರಾಮನ್ ಹೂಡಿಕೆ ಯೋಜನೆಗೆ ಅನುಮೋದನೆ ನೀಡಿರುವ ಡೀಪ್ಫೇಕ್ ವೀಡಿಯೋ ವೈರಲ್
ವೈರಲ್ ಆದ ಈ ಚಿತ್ರದ ಕುರಿತು ಗೂಗಲ್ ಲೆನ್ಸ್ ಮೂಲಕ ಹುಡುಕಾಟ ನಡೆಸಿದಾಗ ಮಾರ್ಚ್ 9, 2019 ರಂದು @shivchela ಎಂಬ ಫೇಸ್ಬುಕ್ ಪೋಸ್ಟ್ ನಮಗೆ ಸಿಕ್ಕಿತು . ಇದು ವಾಯುಪಡೆ ತ್ರಿಶೂಲ್ ಚಿತ್ತಾರ ಬಿಡಿಸಿದೆ ಎಂಬ ಅದೇ ಫೊಟೋವನ್ನು ಹೊಂದಿತ್ತು.
ಮಾರ್ಚ್ 2019 ರ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಇದೇ ರೀತಿಯ ಫೋಟೋವನ್ನು ಪೋಸ್ಟ್ ಮಾಡಿದ್ದವು. ಮಾರ್ಚ್ 4, 2019 ರಂದು @KOELElectricPumps ನಿಂದ ಮಾಡಲಾದ ಬಂದ ಒಂದು ಪೋಸ್ಟ್ನಲ್ಲಿ “ಮಹಾಶಿವರಾತ್ರಿಯ ಈ ವಿಶೇಷ ಸಂದರ್ಭದಲ್ಲಿ ನಮ್ಮ “ಮಹಾ” ಪಡೆಗೆ ಹ್ಯಾಟ್ಸ್ ಆಫ್..!!! ನಮ್ಮ ಭಾರತೀಯ ವಾಯುಪಡೆಯ ಶಕ್ತಿ ಮತ್ತು ಧೈರ್ಯಕ್ಕಾಗಿ ಸಮರ್ಪಿತವಾಗಿದೆ” ಎಂದು ಹೇಳಲಾಗಿದೆ.
ಅನಂತರ ನಾವು ವಾಯುಪಡೆಯ ಪೈಲಟ್ಗಳು ‘ತ್ರಿಶೂಲ್’ ಮಾದರಿಯನ್ನು ಪ್ರದರ್ಶಿಸುವ ಹಲವಾರು ವೀಡಿಯೋಗಳನ್ನು ಪರಿಶೀಲಿಸಿದ್ದೇವೆ ಮತ್ತು ವೈರಲ್ ಚಿತ್ರದಲ್ಲಿ ಕಂಡುಬರುವ ರಚನೆಗಿಂತ ಇವು ಭಿನ್ನವಾಗಿದೆ ಎಂದು ಕಂಡುಕೊಂಡೆವು. ಅಂತಹ ವೀಡಿಯೋಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು .
ವಾಯುಪಡೆ ಕುಂಭಮೇಳದ ಕೊನೆಯ ದಿನಂದು (ಫೆಬ್ರವರಿ 26, 2025) ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ ನಡೆಯುವ ಜಾಗದಲ್ಲಿ ವೈಮಾನಿಕ ಪ್ರದರ್ಶನವನ್ನು ನಡೆಸಿತು. ಅದರ ನಿಜವಾದ ದೃಶ್ಯಗಳನ್ನು ಇಲ್ಲಿ , ಇಲ್ಲಿ ಮತ್ತು ಇಲ್ಲಿ ನೋಡಬಹುದು .
ವೈರಲ್ ಆದ ಚಿತ್ರ ನಿಜವೋ ಅಲ್ಲವೋ ಎಂದು ನಮಗೆ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಇದು ಇತ್ತೀಚೆಗೆ ಮಹಾಕುಂಭದಲ್ಲಿ ನಡೆದ ವಾಯುಪಡೆಯ ವೈಮಾನಿಕ ಪ್ರದರ್ಶನಕ್ಕೆ ಸಂಬಂಧಿಸಿಲ್ಲ.
ಈ ಸತ್ಯಶೋಧನೆಯ ಪ್ರಕಾರ, ಮಹಾಕುಂಭಮೇಳದ ಮುಕ್ತಾಯದ ವೇಳೆ ವಾಯುಪಡೆ ಸುಖೋಯ್ ಯುದ್ಧ ವಿಮಾನಗಳು ತ್ರಿಶೂಲ್ ಚಿತ್ತಾರವನ್ನು ಮಾಡಿ ತೋರಿಸಿದೆ ಎಂಬ ಹೇಳಿಕೆಗಳು ಸುಳ್ಳು ಎಂದು ಕಂಡುಬಂದಿದೆ.
Also Read:ಭಜನೆಯಿಂದ ಅಪೌಷ್ಠಿಕತೆ ಕಡಿಮೆ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆಯೇ?
Our Sources
Facebook Post By @shivchela, Dated March 9, 2019
Facebook Post By @KOELElectricPumps, Dated March 4, 2019
YouTube Video By DD News, Dated January 26, 2025
ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ
Ishwarachandra B G
February 8, 2025
Vasudha Beri
February 6, 2025
Ishwarachandra B G
February 3, 2025