Authors
Claim
ದಕ್ಷಿಣ ಕನ್ನಡದ ಬಂಟ್ವಾಳದ ನದಿಯಲ್ಲಿ ಕಂಡುಬಂದ ದೃಶ್ಯ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದು ಹರಿದಾಡುತ್ತಿದೆ.
1.53 ನಿಮಿಷದ ಈ ವೀಡಿಯೋದಲ್ಲಿ ಚಿರತೆ ರೀತಿಯ ಪ್ರಾಣಿಯೊಂದು ಮೊಸಳೆಯನ್ನು ಹಿಡಿಯುವ ದೃಶ್ಯವಿದೆ. ಈ ವೈರಲ್ ವೀಡಿಯೋ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು,ಇದು ಬಂಟ್ವಾಳದ ದೃಶ್ಯ ಅಲ್ಲ, ಬ್ರೆಜಿಲ್ ನದ್ದು ಎಂದು ಕಂಡುಬಂದಿದೆ.
Fact
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ಮೇ 29 2024ರಂದು Guainía Cultural ಫೇಸ್‌ಬುಕ್ ಪೇಜ್‌ನಲ್ಲಿ ವೈರಲ್ ವೀಡಿಯೋವನ್ನು ಹೋಲುವ ವೀಡಿಯೋ ಕಂಡುಬಂದಿದ್ದು, ಈ ವೀಡಿಯೋಕ್ಕೆ “ಅಮೆಜಾನ್ ಕಾಡಿನ ರಾಜ” ಎಂದು ಬರೆದಿರುವುದನ್ನು ಗಮನಿಸಿದ್ದೇವೆ.
ಜೂನ್ 9, 2024ರಂದು Gancet World ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ವೀಡಿಯೋ ಪೋಸ್ಟ್ ಮಾಡಲಾಗಿದ್ದು, “jaguar hunting caiman” ಎಂಬ ಶೀರ್ಷಿಕೆ ನೀಡಲಾಗಿದೆ.
ಇವುಗಳ ಆಧಾರದಲ್ಲಿ ನಾವು ಇನ್ನಷ್ಟು ಶೋಧ ನಡೆಸಿದ್ದು, ಪ್ರೀಮಿಯರ್ ಅಪಾಗಿನಾ ಹೆಸರಿನ ವೆಬ್‌ಸೈಟ್ ನಲ್ಲಿ ಮೇ 28, 2024ರಂದು ಮಾಡಿದ ಪೋಸ್ಟ್ ಲಭ್ಯವಾಗಿದ್ದು ಜಾಗ್ವಾರ್ ಕೂಯ್ಬಾ ನದಿಯಲ್ಲಿ ಮೊಸಳೆಯನ್ನು ಹಿಡಿದಿರುವುದು ಎಂದಿದೆ. (ಅನುವಾದಿಸಲಾಗಿದೆ) ಈ ಪೋಸ್ಟ್ ನಲ್ಲೂ ವೈರಲ್ ವೀಡಿಯೋವನ್ನು ಲಗತ್ತಿಸಿರುವುದನ್ನುನಾವು ಗಮನಿಸಿದ್ದೇವೆ. ಕೂಯ್ಬಾ ನದಿ ಎನ್ನುವುದು ದಕ್ಷಿಣ ಅಮೆರಿಕದ ಬ್ರೆಜಿಲ್ ನ ಒಂದು ನದಿ ಎಂದು ಕಂಡುಕೊಂಡಿದ್ದೇವೆ.
ಈ ಸಾಕ್ಷ್ಯಾಧಾರಗಳ ಪ್ರಕಾರ, ಚಿರತೆ ರೀತಿಯ ಪ್ರಾಣಿಯೊಂದು ಮೊಸಳೆಯನ್ನು ಹಿಡಿಯುವ ದೃಶ್ಯ ಬಂಟ್ವಾಳದ್ದಲ್ಲ, ಅದು ದಕ್ಷಿಣ ಅಮೆರಿಕ ಮೂಲದ್ದು ಎಂದು ಕಂಡುಕೊಂಡಿದ್ದೇವೆ.
Result False
Our Sources:
Facebook Post By Guainía Cultural, Dated: May 29, 2024
YouTube Video By Gancet World, Dated June 9, 2024
Report By primeirapagina.com, Dated: May 28, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.