ಮೈಸೂರು ಸಿಎಫ್‌ಟಿಆರ್‌ಐನಲ್ಲಿ ಚಿರತೆ ಕಾಣಿಸಿಕೊಂಡಿದೆಯೇ? ಸುಳ್ಳು ಕ್ಲೇಮ್‌ ವೈರಲ್‌

ಮೈಸೂರು, ಚಿರತೆ, ಸಿಎಫ್‌ಟಿಆರ್‌ಐ

ಮೈಸೂರು ಸಿಎಫ್‌ಟಿಆರ್‌ಐ (ಕೇಂದ್ರೀಯ ಆಹಾರ ಸಂಶೋಧನಾ ಕೇಂದ್ರ) ದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಫ್ಯಾಕ್ಟರಿಯೊಂದರ ಒಳಭಾಗದಂತೆ ಕಂಡು ಬರುವ ಪ್ರದೇಶದಲ್ಲಿ ಚಿರತೆಯೊಂದು ಕಾಣುತ್ತಿದ್ದು ಅದು ಘರ್ಜಿಸುತ್ತ ಓಡಾಡುತ್ತಿರುವ ದೃಶ್ಯ ಇದಾಗಿದೆ. ವಾಟ್ಸಾಪ್‌ನಲ್ಲೂ ಈ ವೀಡಿಯೋ ಹರಿದಾಡುತ್ತಿದ್ದು, ಇದೇ ರೀತಿಯ ವೀಡಿಯೋ ಟ್ವಿಟರ್‌ನಲ್ಲೂ ಇದೆ. “ಮೈಸೂರಿನ ಸಿಎಫ್‌ಟಿಆರ್‌ಐ ಅಂತೆ” ಎಂದು ಹೇಳಿರುವ ಕ್ಲೇಮಿನಲ್ಲಿ ಈ ವೀಡಿಯೋವನ್ನು ಸೇರಿಸಿ ಪೋಸ್ಟ್‌ ಮಾಡಲಾಗಿದೆ. ಇದನ್ನು ಇಲ್ಲಿ ನೋಡಬಹುದು.

ಮೈಸೂರು, ಚಿರತೆ, ಸಿಎಫ್‌ಟಿಆರ್‌ಐ

ಈ ವೀಡಿಯೋದ ಸತ್ಯ ಪರಿಶೀಲನೆಯನ್ನು ನ್ಯೂಸ್‌ಚೆಕರ್‌ ನಡೆಸಿದ್ದು, ಚಿರತೆ ಕಂಡುಬಂದ ಸ್ಥಳ ಅದಲ್ಲ ಎಂದು ಕಂಡುಬಂದಿದೆ. ಇದರೊಂದಿಗೆ ಇದೇ ವೀಡಿಯೋವನ್ನು  ಶಬರಿಮಲೆ ಅರವಣ ಪಾಯಸ ತಯಾರಿ ಮಾಡುವ ಸ್ಥಳದಲ್ಲಿ ಎಂದೂ ಹೇಳಿರುವ ಕ್ಲೇಮ್‌ಗಳೂ ಪತ್ತೆಯಾಗಿವೆ.  

Fact Check/ Verification

ಈ ಕ್ಲೇಮಿನ ಕುರಿತಂತೆ ನಾವು ವೀಡಿಯೋದ ಕೀಫ್ರೇಂ ತೆಗೆದು ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್ ನಡೆಸಿದ್ದು, ಈ ವೇಳೆ ದಿ ನ್ಯೂಸ್‌ ಮಿನಿಟ್‌ ಡಿಸೆಂಬರ್‌ 17, 2022 ರಂದು ಅಪ್ಲೋಡ್‌ ಮಾಡಿದ ವೀಡಿಯೋ ಪತ್ತೆಯಾಗಿದೆ. ಇದರಲ್ಲಿ “ತೆಲಂಗಾಣದ ಹೆಟೊರೋ ಫಾರ್ಮಾ ಕೇಂದ್ರದಲ್ಲಿ ಪತ್ತೆಯಾದ ಚಿರತೆಯನ್ನು ಮೃಗಾಲಯ ಅಧಿಕಾರಿಗಳು ಸೆರೆ ಹಿಡಿದರು” ಎಂದು ಶೀರ್ಷಿಕೆ ಕೊಡಲಾಗಿದೆ. ಈ ವೀಡಿಯೋದ ವರದಿಯಲ್ಲಿ “ ಸಂಗಾರೆಡ್ಡಿ ಜಿಲ್ಲೆಯ ಗಡ್ಡಾ ಪೊತರಾಮ್‌ ಇಂಡಸ್ಟ್ರಿಯಲ್‌ ಪ್ರದೇಶದಲ್ಲಿರುವ ಹೆಟೆರೋ ಫಾರ್ಮಾಸ್ಯೂಟಿಕಲ್ಸ್‌ ಲಿಮಿಟೆಡ್‌ ಕೇಂದ್ರಕ್ಕೆ ಚಿರತೆಯೊಂದು ನುಗ್ಗಿದ್ದು ಅದನ್ನು ಮೃಗಾಲಯ ಅಧಿಕಾರಿಗಳು ಸೆರೆಹಿಡಿದಿದ್ದಾರೆ. ಈ ಚಿರತೆ, ಡಿಸೆಂಬರ್‌ 16ರ ಶುಕ್ರವಾರ ರಾತ್ರಿ ಔಷಧ ತಯಾರಿಕಾ ಕೇಂದ್ರಕ್ಕೆ ನುಗ್ಗಿದೆ. ಇದನ್ನು ಸೆಕ್ಯೂರಿಟಿ ಸಿಬ್ಬಂದಿ ಕಂಡಿದ್ದು, ಕೂಡಲೇ ಅವರು ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಗೆ ತಿಳಿಸಿದ್ದಾರೆ.” ಎಂದು ಹೇಳಲಾಗಿದೆ. 

ನ್ಯೂಸ್‌ ಮಿನಿಟ್‌ ವೆರದಿಯ ಸ್ಕ್ರೀನ್‌ ಗ್ರ್ಯಾಬ್‌

ಈ ವರದಿಯನ್ನು ಮೂಲವಾಗಿ ಪರಿಗಣಿಸಿ, ನಾವು “Hetero pharma facility”, “Telangana”, & “leopard” ಎಂದು ಯೂಟ್ಯೂಬ್‌ನಲ್ಲಿ ಸರ್ಚ್‌ ನಡೆಸಿದ್ದು, ಟಿವಿ 9 ತೆಲುಗು ಲೈವ್‌ನಲ್ಲಿ ಈ ವೀಡಿಯೋ ಡಿಸೆಂಬರ್‌ 17, 2022 ರಂದು ಅಪ್ಲೋಡ್‌ ಆಗಿರುವುದು ಪತ್ತೆಯಾಗಿದೆ. ಜೊತೆಗೆ “ಹೆಟೆರೋ ಔಷಧ ಉತ್ಪಾದನಾ ಲ್ಯಾಬ್‌ ಒಳಗೆ ಪ್ರವೇಶಿಸಿದ ಚಿರತೆ ಎಂದಿದೆ. 

Also Read: ರಾಹುಲ್‌ ಗಾಂಧಿ ದೇಶದ ಜನಸಂಖ್ಯೆ 140 ಕೋಟಿ ರೂ. ಎಂದು ಹೇಳಿದ್ರಾ?

ಟಿವಿ9 ತೆಲುಗು ಚಾನೆಲ್‌ನ ಯೂಟ್ಯೂಬ್‌ನಿಂದ ಪಡೆದ ಸ್ಕ್ರೀನ್‌ ಗ್ರ್ಯಾಬ್‌

ವಿವಿಧ ಮಾಧ್ಯಮಗಳು ಈ ಘಟನೆ ಡಿಸೆಂಬರ್‌ 2022 ರ ಹೊತ್ತಿಗೆ ನಡೆದಿವೆ ಎಂದಿದೆ. ಇದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. 

Conclusion

ಸತ್ಯ ಶೋಧನೆಯಲ್ಲಿ ತಿಳಿದು ಬಂದಂತೆ ಕ್ಲೇಮಿನಲ್ಲಿ ಹೇಳಿದ ರೀತಿ ಇದು ಮೈಸೂರು ಸಿಎಫ್‌ಟಿಆರ್‌ಐ ಘಟನೆಯಲ್ಲ. ಇದು ತೆಲಂಗಾಣದ ಔಷಧ ತಯಾರಿಕಾ ಘಟಕ ಹೆಟೆರೋ ಫಾರ್ಮಾ ಪ್ರದೇಶಕ್ಕೆ ಚಿರತೆ ಪ್ರವೇಶಿಸಿದ ವಿದ್ಯಮಾನ ಎಂಬುದು ಸ್ಪಷ್ಟವಾಗಿದೆ. 

Result: False

(ಈ ವರದಿಯ ಮೂಲರೂಪ Newschecker Tamil ನಲ್ಲಿ ಪ್ರಕಟಿಸಲಾಗಿದೆ.)

Our Sources
Report By The News Minute, Dated December 17, 2022
YouTube Video By TV9 Telugu Live, Dated December 17, 2022

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.