Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ರಾಹುಲ್ ಗಾಂಧಿ ದೇಶದ ಜನಸಂಖ್ಯೆಯನ್ನು ಕೋಟಿ ರೂಪಾಯಿಯಲ್ಲಿ ಹೇಳಿದ್ರು ಅನ್ನೋ ಕುರಿತ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಭಾರತ್ ಜೋಡೋ ಯಾತ್ರೆ ಹರಿಯಾಣಕ್ಕೆ ತಲುಪುತ್ತಿದ್ದಂತೆ, ಕಾಂಗ್ರೆಸ್ ನಾಯಕ, ರಾಹುಲ್ ಗಾಂಧಿ ದೇಶದ ಜನಸಂಖ್ಯೆಯನ್ನು ರೂಪಾಯಿಗಳಲ್ಲಿ ಹೇಳಿದರು ಎಂದು ಸಾಮಾಜಿಕ ಜಾಲತಾಣಗಳ ವಿವಿಧ ಪೋಸ್ಟ್‌ಗಳು ಕಂಡುಬಂದಿವೆ. ಈ ಬಗ್ಗೆ ವೀಡಿಯೋ ಕೂಡ ವೈರಲ್ ಆಗಿದೆ.
ಈ ವಿದ್ಯಮಾನಕ್ಕೆ ಸಂಬಂಧಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ ಕ್ಲೇಮ್ ಒಂದು ಹೀಗಿದೆ “ದೇಶದ ಜನಸಂಖ್ಯೆ 140 ಕೋಟಿ ರೂಪಾಯಿಗಳ ಹೀಗೆ ಯಾರು ಹೇಳಿರಬಹುದು? ಎನಿ ಗೆಸ್, ಇನ್ಯಾರು ಹುಟ್ಟನ್ನು ಲೀಟರ್‌ನಲ್ಲಿ ಕೊಟ್ರಲ್ಲ ಅವರೇ..” ಎಂದಿದೆ.
ಈ ಕ್ಲೇಮಿನ ಹಿನ್ನೆಲೆಯಲ್ಲಿ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದೊಂದು ತಪ್ಪಾದ ಸಂದರ್ಭವಾಗಿದೆ ಎಂಬುದು ತಿಳಿದುಬಂದಿದೆ.
ಈ ಕ್ಲೇಮ್ ಕುರಿತಂತೆ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಲಾಗಿದ್ದು, ವೀಡಿಯೋ ಒಂದು ಅಪ್‌ಲೋಡ್ ಆಗಿರುವುದು ಕಂಡುಬಂದಿದೆ. ಅದು ಜನವರಿ 6ರಂದು ಎಬಿಪಿ ನ್ಯೂಸ್ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಆದ ವೀಡಿಯೋವಾಗಿದ್ದು, ಅದರಲ್ಲಿ ಈ ಕ್ಲೇಮ್‌ಗೆ ಕಾರಣವಾದ ವೈರಲ್ ವೀಡಿಯೋವನ್ನು ಕಾಣಬಹುದು. ಈ ವೀಡಿಯೋದಲ್ಲಿ ರಾಹುಲ್ ಗಾಂಧಿಯವರು ಹರಿಯಾಣಾದ ಪಾಣಿಪತ್‌ನಲ್ಲಿ ಜನರನ್ನುದ್ದೇಶಿಸಿ ಮಾತನಾಡುವುದನ್ನು ನೋಡಬಹುದು.
32 ನಿಮಿಷ 06 ಸೆಕೆಂಡ್‌ನ ಈ ವೀಡಿಯೋದಲ್ಲಿ ರಾಹುಲ್ ಗಾಂಧಿಯವರು, “ಸಹೋದರ ಸಹೋದರಿಯರೇ, ನಾನು ಮಾತು ಶುರು ಮಾಡುವ ಮೊದಲು ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ ಭಾರತದಲ್ಲಿ ಜನಸಂಖ್ಯೆ ಎಷ್ಟು? ಜನ ಸಂಖ್ಯೆ ಎಷ್ಟು? ಎಷ್ಟು ಮಂದಿ ಈ ದೇಶದಲ್ಲಿ ವಾಸಿಸುತ್ತಿದ್ದಾರೆ” ಎಂದು ಕೇಳುತ್ತಾರೆ.
ಈ ಬಗ್ಗೆ ಜನರಿಂದ ಉತ್ತರವನ್ನು ಪಡೆದ ನಂತರ ರಾಹುಲ್ ಅವರು “ನೂರ ನಲವತ್ತು ಕೋಟಿ ಅಂದರೆ ಎಷ್ಟು? ನೂರ ನಲವತ್ತು ಕೋಟಿ. ಈ ವೇದಿಕೆಯಲ್ಲಿ ಎಷ್ಟು ಮಂದಿ ನೆರೆದಿದ್ದಾರೆ? ಇಲ್ಲಿ ಸುಮಾರು 100 ಮಂದಿ ಇದ್ದಾರೆ. ಅವರೂ ಇದ್ದಾರಲ್ಲ.. ಈ ನಾನು ಈ ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಹೇಳಲು ಇಚ್ಛಿಸುತ್ತೇನೆ. ದೇಶದ ಜನಸಂಖ್ಯೆ 140 ಕೋಟಿ” ಎಂದು ಹೇಳುತ್ತಾರೆ. ಕೂಡಲೇ ರಾಹುಲ್ ಗಾಂಧಿಯವರು, ತಮ್ಮ ಪದಗಳನ್ನು ಸರಿಪಡಿಸುತ್ತಾರೆ “140 ಕೋಟಿ ಮಂದಿ ಸರಿಯಷ್ಟೇ?” ಎಂದು ಕೇಳುತ್ತಾರೆ.
Also Read: ವೈರಲ್ ವೀಡಿಯೋದಲ್ಲಿ ದೇವಿ ಸರಸ್ವತಿ ಫೋಟೋ ಒದ್ದವನು ಮುಸ್ಲಿಂ ವ್ಯಕ್ತಿ ಅಲ್ಲ!
ಆ ನಂತರ, ಅವರು ತಮ್ಮ ಭಾಷಣದಲ್ಲಿ “ಇಂದಿನ ಭಾರತದಲ್ಲಿ ಹಣದ ಮೊತ್ತ ದೇಶದ ಅರ್ಧದಷ್ಟು ಮಂದಿಯಲ್ಲಿದೆ. ಅಷ್ಟೇ ಸಂಪತ್ತು ಭಾರತದ 100 ಶ್ರೀಮಂತ ಮಂದಿಯ ಬಳಿ ಇದೆ. “ಇದು ಸರಿ ಎಂದು ನೀವು ಭಾವಿಸುತ್ತೀರಾ?”
ಈ ಕುರಿತ ಸತ್ಯಶೋಧನೆಯಲ್ಲಿ ರಾಹುಲ್ ಗಾಂಧಿಯವರ ಭಾಷಣವನ್ನು ದಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಚಾನೆಲ್‌ನಲ್ಲಿ ಕೂಡ ಗಮನಿಸಿದ್ದೇವೆ. ಇದರಲ್ಲಿ ರಾಹುಲ್ ಅವರು ದೇಶದ ಜನಸಂಖ್ಯೆ 140 ಕೋಟಿ ರೂಪಾಯಿ ಎಂದು ಹೇಳಿದ ಅವರು, ಮರುಕ್ಷಣದಲ್ಲೇ 140 ಕೋಟಿ ಎಂದು ಹೇಳುತ್ತಿರುವುದು ಕಾಣುತ್ತದೆ.
ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ, ದೇಶದ ಜನಸಂಖ್ಯೆ 140 ಕೋಟಿ ರೂ. ಎಂದು ಹೇಳಿದ ರಾಹುಲ್ ಗಾಂಧಿ ಮರು ಕ್ಷಣದಲ್ಲೇ 140 ಕೋಟಿ ಎಂದು ಹೇಳುವುದು ಕಂಡುಬಂದಿದೆ. ಆದ್ದರಿಂದ ಕ್ಲೇಮಿನಲ್ಲಿ ಹೇಳಿರುವಂತೆ ದೇಶದ ಜನಂಸಂಖ್ಯೆಯನ್ನು 140 ಕೋಟಿ ರೂ. ಎಂದು ಹೇಳಿದ್ದಾರೆ ಎನ್ನುವುದು ತಪ್ಪಾಗುತ್ತದೆ.
Our Sources
Youtube Video by ABP News, Dated January 6, 2023
Youtube Video by Indian National Congress, Dated January 6, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Komal Singh
May 29, 2025
Sabloo Thomas
May 27, 2025
Ishwarachandra B G
January 21, 2025