Fact Check: ರಾಹುಲ್‌ ಗಾಂಧಿ ಹೊಗಳಿದ ಎಲ್.ಕೆ.ಅಡ್ವಾಣಿ? ಇಲ್ಲ, ವೈರಲ್ ಹೇಳಿಕೆ ಸುಳ್ಳು

ರಾಹುಲ್‌ ಗಾಂಧಿ ಹೊಗಳಿದ ಅಡ್ವಾಣಿ

Claim

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭಾರತೀಯ ರಾಜಕೀಯದ ಹೀರೋ ಎಂಬಂತೆ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಹೊಗಳಿದ್ದಾರೆ ಎಂದು ಹೇಳಿಕೆಯೊಂದು ವೈರಲ್‌ ಆಗಿದೆ.

ಫೇಸ್‌ಬುಕ್‌ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಬಿಜೆಪಿಯ ಹಿರಿಯ ನಾಯಕರಾದ ಶ್ರೀ ಲಾಲ್ ಕೃಷ್ಣ ಅಡ್ವಾಣಿ ರವರು ಸಾಮಾಜಿಕ ಜಾಲ ತಾಣದಲ್ಲಿ. ಒಂದು ಪೋಸ್ಟ್ ಮುಖಾಂತರ ರಾಹುಲ್ ಗಾಂಧಿಯವರನ್ನು ಭಾರತ ರಾಷ್ಟ್ರವನ್ನು ಉತ್ತಮ ರಾಷ್ಟ್ರವನ್ನಾಗಿ ಮಾಡುವ ಏಕೈಕ ವ್ಯಕ್ತಿ ಎಂದು ಹಾಗೂ ನಾನು ನನ್ನ ಜೀವನದಲ್ಲಿ ರಾಹುಲ್ ಗಾಂಧಿ ಯಂತಹ ಪ್ರಭಾವಿ ನಾಯಕನನ್ನು ನೋಡಿಲ್ಲ ಎಂದು ಪೋಸ್ಟ್ ಮಾಡಿದ್ದಕ್ಕೆ ಕಾಂಗ್ರೆಸ್ ಪಕ್ಷದಿಂದ ಹೃದಯ ಪೂರ್ವಕ ನಮನಗಳು” ಎಂದಿದೆ.

Also Read: ದಾವಣಗೆರೆಯಲ್ಲಿ ಬಾಲಕ ತಿನಿಸೊಂದನ್ನು ತಿಂದು ಮೃಪಟ್ಟಿದ್ದಾನೆಯೇ, ನಿಜಾಂಶವೇನು?

Fact Check: ರಾಹುಲ್‌ ಗಾಂಧಿ ಹೊಗಳಿದ ಎಲ್.ಕೆ.ಅಡ್ವಾಣಿ? ಇಲ್ಲ, ವೈರಲ್ ಹೇಳಿಕೆ ಸುಳ್ಳು

ಇದೇ ರೀತಿಯ ವೈರಲ್‌ ಹೇಳಿಕೆಯಿರುವ ಆರ್ಕೈವ್‌ ಮಾಡಲಾದ ಟ್ವೀಟ್ ಇಲ್ಲಿದೆ, ಅದೇ ರೀತಿ ನ್ಯೂಸ್‌ಚೆಕರ್ ವಾಟ್ಸಾಪ್‌ ಟಿಪ್‌ ಲೈನ್ (+91-9999499044)  ಗೂ ಈ ಹೇಳಿಕೆ ಸತ್ಯಾಸತ್ಯತೆ ಪರಿಶೀಲಿಸುವಂತೆ ಮನವಿ ಬಂದಿದ್ದು, ಅದನ್ನು ಸತ್ಯಶೋಧನೆಗಾಗಿ ಸ್ವೀಕರಿಸಲಾಗಿದೆ.

Fact

ನ್ಯೂಸ್ಚೆಕರ್ ಮೊದಲು “Advani Rahul Gandhi praises” ಎಂದು ಕೀವರ್ಡ್ ಸರ್ಚ್ ನಡೆಸಿದೆ. ಆದರೆ ಈ ವೇಳೆ ಅಡ್ವಾಣಿ ಹೇಳಿಕೆ ಕುರಿತು ಯಾವುದೇ ಫಲಿತಾಂಶಗಳು ಲಭ್ಯವಾಗಿಲ್ಲ.

ಆದರೆ ಇಂತಹುದೇ ವೈರಲ್‌ ಕ್ಲೇಮ್‌ ನೊಂದಿಗೆ ಹಂಚಿಕೊಳ್ಳಲಾದ ಪೋಸ್ಟ್ ಒಂದರಲ್ಲಿ ಅವಧ್ ಭೂಮಿ ಎಂಬ ಮಾಧ್ಯಮ ಸಂಸ್ಥೆಯ ಲಿಂಕ್ ಅನ್ನು ಹಂಚಿಕೊಳ್ಳಲಾಗಿದೆ ಎಂದು ನಾವು ನೋಡಿದ್ದೇವೆ. ಅದರಂತೆ ವೆಬ್ಸೈಟ್ನಲ್ಲಿ ಲೇಖನವನ್ನು ಹುಡುಕಿದೆವು ಮತ್ತು ಅಂತಹ ಯಾವುದೇ ವರದಿ ಲಭ್ಯವಾಗಲಿಲ್ಲ. ಆದರೆ ಸಂಬಂಧಿತ ಲಿಂಕ್ ಯಾವುದೇ ಲೇಖನವಿಲ್ಲ ಎಂದು ಹೇಳಿದೆ.

Also Read: ತಮಿಳುನಾಡಿನ ತೆಂಕಾಸಿಯಲ್ಲಿ ಹಿಂದೂ ದೇಗುಲವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆಯೇ?

Fact Check: ರಾಹುಲ್‌ ಗಾಂಧಿ ಹೊಗಳಿದ ಎಲ್.ಕೆ.ಅಡ್ವಾಣಿ? ಇಲ್ಲ, ವೈರಲ್ ಹೇಳಿಕೆ ಸುಳ್ಳು

ಈ ಬಗ್ಗೆ ಮತ್ತಷ್ಟು ಹುಡುಕಾಟ ನಡೆಸಿದಾಗ ಮೇ 9, 2024 ರ onlyfact.in ರ ಈ ಹಿಂದಿ ಫ್ಯಾಕ್ಟ್ ಚೆಕ್ ವರದಿ ನಮಗೆ ಲಭ್ಯವಾಗಿದೆ. ಅವರು ಅಡ್ವಾಣಿ ಅಂತಹ ಹೇಳಿಕೆ ನೀಡಿದ್ದಾರೆ ಎಂದ ಆ ಮಾಧ್ಯಮ ಸಂಸ್ಥೆಯನ್ನು ಸಂಪರ್ಕಿಸಿದ್ದು,  ಈ ವೇಳೆ ಅವರಲ್ಲಿ ಅಡ್ವಾಣಿ ಹೇಳಿಕೆಯ ಮೂಲದ ಬಗ್ಗೆ Onlyfact.in ಅವರು ಕೇಳಿದಾಗ, ಅವರು ಲೇಖನವನ್ನು ತೆಗೆದು ಹಾಕುವುದಾಗಿ ಹೇಳಿದ್ದಾರೆ ಎಂದು ಹೇಳಲಾಗಿದೆ.  

Fact Check: ರಾಹುಲ್‌ ಗಾಂಧಿ ಹೊಗಳಿದ ಎಲ್.ಕೆ.ಅಡ್ವಾಣಿ? ಇಲ್ಲ, ವೈರಲ್ ಹೇಳಿಕೆ ಸುಳ್ಳು

ಇನ್ನು, ಅವಧ್ ಭೂಮಿ ವೆಬ್ಸೈಟ್ನಲ್ಲಿ ಪ್ರಕಟವಾದ ಹಕ್ಕು ನಿರಾಕರಣೆಯ ಪ್ರಕಾರ, “ಈ ವೆಬ್ಸೈಟ್ನಲ್ಲಿರುವ ಎಲ್ಲಾ ಮಾಹಿತಿಯನ್ನು – https://avadhbhumi.com/ – ಉತ್ತಮ ನಂಬಿಕೆಯಿಂದ ಮತ್ತು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ. ಈ ಮಾಹಿತಿಯ ಸಂಪೂರ್ಣತೆ, ವಿಶ್ವಾಸಾರ್ಹತೆ ಮತ್ತು ನಿಖರತೆಯ ಬಗ್ಗೆ avadhbhumi.com ಯಾವುದೇ ಖಾತರಿ ನೀಡುವುದಿಲ್ಲ ಎಂದಿರುವುದನ್ನು ನಾವು ಗಮನಿಸಿದ್ದೇವೆ.

Fact Check: ರಾಹುಲ್‌ ಗಾಂಧಿ ಹೊಗಳಿದ ಎಲ್.ಕೆ.ಅಡ್ವಾಣಿ? ಇಲ್ಲ, ವೈರಲ್ ಹೇಳಿಕೆ ಸುಳ್ಳು

ಸತ್ಯಶೋಧನೆಯ ಪ್ರಕಾರ ರಾಹುಲ್ ಗಾಂಧಿಯವರನ್ನು ಹೊಗಳಿ ಎಲ್‌.ಕೆ.ಅಡ್ವಾಣಿ ಅವರು ಹೇಳಿಕೆ ನೀಡಿದ್ದಾರೆ ಎನ್ನುವ ಲೇಖನ ಈಗ ಲಭ್ಯವಿಲ್ಲದೇ ಇದ್ದು, ಅದನ್ನು ಅಳಿಸಲಾಗಿದೆ. ಮತ್ತು ಅಡ್ವಾಣಿ ಅವರ ಹೇಳಿಕೆ ಶ್ರುತಪಟ್ಟಿಲ್ಲ ಆದ್ದರಿಂದ ಈ ಹೇಳಿಕೆ ಸುಳ್ಳಾಗಿದೆ.

Also Read: ಮಕ್ಕಳನ್ನು ಲ್ಯಾಬ್‌ ನಲ್ಲಿ ತಯಾರಿಸುವ ಟೆಕ್ನಾಲಜಿ ಬಂದಿದೆಯೇ, ವೈರಲ್ ವೀಡಿಯೋ ಹಿಂದಿನ ಅಸಲಿಯತ್ತೇನು?

Result: False

Our Sources:
Archived link by archive.today

Fact Check published by hindi.onlyfact.in Dated: May 9, 2024

Analysis of avadhbhumi.com

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್‌ ಮರಾಠಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.