Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ತಿರುಪತಿ ಕಾಲ್ತುಳಿತದ ಸಂದರ್ಭ ಮಗುವಿನ ಶವವನ್ನು ಬೈಕಿನಲ್ಲಿ ಸಾಗಿಸಲಾಯಿತು
Fact
ತಿರುಪತಿ ಕಾಲ್ತುಳಿತದ ಸಂದರ್ಭ ಮಗುವಿನ ಶವವನ್ನು ಬೈಕಿನಲ್ಲಿ ಸಾಗಿಸಲಾಯಿತು ಎನ್ನುವುದು ಸುಳ್ಳು. 2022ರಲ್ಲಿ ತಿರುಪತಿ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವೊಂದು ಮೃತಪಟ್ಟ ಬಳಿಕ ಊರಿಗೆ ಸಾಗಿಸಲು ಅಂಬ್ಯುಲೆನ್ಸ್ ಗೆ ಹೆಚ್ಚಿನ ಬಾಡಿಗೆ ಕೇಳಿದ್ದರಿಂದ ಮಗುವಿನ ತಂದೆ ಶವವನ್ನು ಬೈಕಿನಲ್ಲಿ ಸಾಗಿಸಿದ ಪ್ರಕರಣ ಇದಾಗಿದೆ
ಆಂಧ್ರಪ್ರದೇಶದ ತಿರುಪತಿಯಲ್ಲಿ ಜನವರಿ 8ರಂದು ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದ್ದು ಎಂದು ವ್ಯಕ್ತಿಯೊಬ್ಬರು ಮಗುವಿನ ಶವವನ್ನು ಆಸ್ಪತ್ರೆಯಿಂದ ಮೋಟಾರ್ ಸೈಕಲ್ನಲ್ಲಿ ಸಾಗಿಸುವ 43 ಸೆಕೆಂಡುಗಳ ವೀಡಿಯೋವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
“ಒಬ್ಬ ತಂದೆಗೆ ತನ್ನ ಮಗನ ಶವಕ್ಕಾಗಿ ಆಂಬ್ಯುಲೆನ್ಸ್ ಸಹ ಸಿಗಲಿಲ್ಲವೇ? ತಿರುಪತಿ ಅಪಘಡದಲ್ಲಿ ಮುಗ್ಧ ಮಗು ಪ್ರಾಣ ಕಳೆದುಕೊಂಡಿದೆ” ಎಂದು ಎಕ್ಸ್ ಪೋಸ್ಟ್ ನಲ್ಲಿ ಬರೆಯಲಾಗಿದೆ, “ತಿರುಪತಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ 12 ವರ್ಷದ ಮಗುವನ್ನು ಸಾಗಿಸಲು ಆಂಬ್ಯುಲೆನ್ಸ್ ಗಾಗಿ ಅವರು 20,000 ರೂ.ಗಳನ್ನು ಕೇಳಿದರು. ಹಣದ ಕೊರತೆಯಿಂದಾಗಿ ಮಗುವಿನ ತಂದೆ ತನ್ನ ಮಗನನ್ನು 90 ಕಿ.ಮೀ ಹೊತ್ತುಕೊಂಡು ಹೋಗಿದ್ದಾನೆ”. ಎಂದಿದೆ.
Also Read: ಆರ್ ಬಿಐ ಹೊಸದಾಗಿ ₹5000 ನೋಟು ಬಿಡುಗಡೆ ಮಾಡಿದೆಯೇ?
ಆಂಧ್ರಪ್ರದೇಶದ ತಿರುಪತಿಯ ವಿಷ್ಣು ನಿವಾಸಂ ಬಳಿ ಬುಧವಾರ ಸಂಜೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಆರು ಭಕ್ತರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ. ತಿರುಮಲ ಶ್ರೀವಾರಿ ವೈಕುಂಠ ದ್ವಾರದ ಟಿಕೆಟಿಂಗ್ ಕೌಂಟರ್ ಬಳಿ ‘ದರ್ಶನ’ ಟೋಕನ್ ವಿತರಣೆಯ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಜನವರಿ 10 ರಿಂದ ಪ್ರಾರಂಭವಾಗಲಿರುವ 10 ದಿನಗಳ ವೈಕುಂಠ ದ್ವಾರ ದರ್ಶನಂಗಾಗಿ ನೂರಾರು ಭಕ್ತರು ಟಿಕೆಟ್ ಗಾಗಿ ಮುಗಿಬಿದ್ದರು.
ನ್ಯೂಸ್ಚೆಕರ್ ಮೊದಲು ” Tirupati stampede father son body ambulance” ಪದಗಳೊಂದಿಗೆ ಕೀವರ್ಡ್ ಸರ್ಚ್ ನಡೆಸಿತು. ಆದರೆ ಅಂತಹ ಘಟನೆ ನಡೆದ ಬಗ್ಗೆ ಯಾವುದೇ ವರದಿಗಳು ಲಭ್ಯವಾಗಿಲ್ಲ.
ಆದಾಗ್ಯೂ, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಆಂಧ್ರಪ್ರದೇಶದ ಅಧಿಕೃತ ಖಾತೆಯಿಂದ ಏಪ್ರಿಲ್ 26, 2022 ರಂದು ಮಾಡಲಾದ ಈ ಎಕ್ಸ್ ಪೋಸ್ಟ್ ಅನ್ನು ನಾವು ನೋಡಿದ್ದೇವೆ, ಅದೇ ವೀಡಿಯೋವನ್ನು ಇದರಲ್ಲಿ ಹಂಚಿಕೊಳ್ಳಲಾಗಿದೆ. “#kidney ವೈಫಲ್ಯದಿಂದ ಸಾವನ್ನಪ್ಪಿದ ತನ್ನ ಮಗನ ಶವವನ್ನು ಮಂಗಳವಾರ ಮುಂಜಾನೆ #Tirupati 90 ಕಿ.ಮೀ ದೂರದಲ್ಲಿರುವ ತನ್ನ ಗ್ರಾಮಕ್ಕೆ ಮೋಟಾರ್ ಸೈಕಲ್ ನಲ್ಲಿ ಕೊಂಡಯ್ಯಬೇಕಾಯಿತು. #Ruia ಸರ್ಕಾರಿ ಆಸ್ಪತ್ರೆಯ ಖಾಸಗಿ ಆಂಬ್ಯುಲೆನ್ಸ್ ಆಪರೇಟರ್ ಬಾಡಿಗೆ ಬೆಲೆಯನ್ನು ಕಡಿಮೆ ಮಾಡಲು ನಿರಾಕರಿಸಿದ್ದರಿಂದ ಹೀಗಾಗಿದೆ” ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ. ಇದೇ ರೀತಿಯ ಟ್ವೀಟ್ ಅನ್ನು ಇಲ್ಲಿ ನೋಡಬಹುದು.
ಹಿಂದಿನ ವೈಎಸ್ ಜಗನ್ ಮೋಹನ್ ರೆಡ್ಡಿ ಆಡಳಿತದಲ್ಲಿ ಆರೋಗ್ಯ ಮೂಲಸೌಕರ್ಯಗಳ ಕುಸಿಯುತ್ತಿರುವ ಸ್ಥಿತಿಯನ್ನು ಟೀಕಿಸಿ ಆಂಧ್ರಪ್ರದೇಶದ ಪ್ರಸ್ತುತ ಮುಖ್ಯಮಂತ್ರಿ ಮತ್ತು ಆಗಿನ ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ಏಪ್ರಿಲ್ 26, 2022 ರಂದು ಈ ವೀಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಗಮನಿಸಿದ್ದೇವೆ.
“ಆಂಧ್ರಪ್ರದೇಶದ ತಿರುಪತಿಯ ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಾ ಸರ್ಕಾರಿ ಜನರಲ್ (RUIA) ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಚಾಲಕರು ಭಾರಿ ಮೊತ್ತದ ಹಣವನ್ನು ಕೇಳಿದ ನಂತರ ತಿರುಪತಿಯ ವ್ಯಕ್ತಿಯೊಬ್ಬರು ತಮ್ಮ ಮಗನ ಮೃತ ದೇಹವನ್ನು ದ್ವಿಚಕ್ರ ವಾಹನದಲ್ಲಿ ಸಾಗಿಸಬೇಕಾಯಿತು. ತಿರುಪತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಅನ್ನಮಯ್ಯ ಜಿಲ್ಲೆಯ ಚಿಟ್ವೆಲ್ ಮಂಡಲ್ ಗ್ರಾಮದ 10 ವರ್ಷದ ಬಾಲಕ ಚಿಕಿತ್ಸೆಯ ನಂತರ ಸಾವನ್ನಪ್ಪಿದ್ದಾನೆ” ಎಂದು ಏಪ್ರಿಲ್ 26, 2022 ರ ಇಂಡಿಯಾ ಟುಡೇ ವರದಿಯಲ್ಲಿದೆ ಜೊತೆಗೆ ವೈರಲ್ ವೀಡಿಯೊದ ಸ್ಕ್ರೀನ್ಶಾಟ್ ಹಂಚಿಕೊಂಡಿದೆ.
“ಅತ್ಯಂತ ಅಮಾನವೀಯ ಘಟನೆಯೊಂದರಲ್ಲಿ, ತಿರುಪತಿಯ ಸರ್ಕಾರಿ ರುಯಾ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕರ ಸಿಂಡಿಕೇಟ್ ಮೃತ ಮಗುವಿನ ಶವವನ್ನು ಕೇವಲ 90 ಕಿ.ಮೀ ದೂರದಲ್ಲಿರುವ ತಮ್ಮ ಗ್ರಾಮಕ್ಕೆ ಸಾಗಿಸಲು ಕೃಷಿ ಕಾರ್ಮಿಕನಿಂದ 10,000 ರೂ.ಗಿಂತ ಹೆಚ್ಚು ಬೇಡಿಕೆ ಇಟ್ಟಿದೆ. ನೆರೆಯ ಅನ್ನಮಯ್ಯ ಜಿಲ್ಲೆಯ ಚಿಟ್ವೇಲ್ನ 10 ವರ್ಷದ ಬಾಲಕನನ್ನು ಮೂತ್ರಪಿಂಡ ಮತ್ತು ಯಕೃತ್ತಿನ ಕಾಯಿಲೆಗಳ ಚಿಕಿತ್ಸೆಗಾಗಿ ಕೆಲವು ದಿನಗಳ ಹಿಂದೆ ಶ್ರೀ ವೆಂಕಟೇಶ್ವರ ರಾಮನಾರಾಯಣ್ ರುಯಾ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕ ಸೋಮವಾರ ರಾತ್ರಿ ನಿಧನನಾಗಿದ್ದಾನೆ” ಎಂದು ಏಪ್ರಿಲ್ 26, 2022 ರ ಡೆಕ್ಕನ್ ಹೆರಾಲ್ಡ್ ವರದಿಯಲ್ಲಿದೆ.
ಇದೇ ರೀತಿಯ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು, ಆದ್ದರಿಂದ ವೈರಲ್ ವೀಡಿಯೋ 2024 ರ ತಿರುಪತಿ ದೇವಾಲಯದ ಕಾಲ್ತುಳಿತಕ್ಕೆ ಸಂಬಂಧಿಸಿಲ್ಲ ಎಂದು ದೃಢಪಡಿಸುತ್ತದೆ.
ಆಂಧ್ರಪ್ರದೇಶ ಪೊಲೀಸರು ಸಹ ಜನವರಿ 9, 2024 ರಂದು ಟ್ವೀಟ್ ಮಾಡಿ, ವೈರಲ್ ವೀಡಿಯೋ ಬಗ್ಗೆ ಹೇಳಿಕೆ ನೀಡಿದ್ದು ಇದು 2022 ರಲ್ಲಿ ತಿರುಪತಿಯಲ್ಲಿ ಸಂಭವಿಸಿದ ಘಟನೆಯದ್ದಾಗಿದೆ. ಜನವರಿ 8ರ ಕಾಲ್ತುಳಿದ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವೈರಲ್ ವೀಡಿಯೋ 2022 ರ ಜನವರಿಯಲ್ಲಿ ಅಂಬ್ಯುಲೆನ್ಸ್ ಗೆ ಹೆಚ್ಚಿಗೆ ಬಾಡಿಗೆ ಕೇಳಿದ್ದರಿಂದ ತಂದೆಯೊಬ್ಬ ಆಸ್ಪತ್ರೆಯಿಂದ ತನ್ನ ಮಗನ ಶವವನ್ನು ಮೋಟಾರ್ ಸೈಕಲ್ ನಲ್ಲಿ ಸಾಗಿಸಿದ್ದ ಪ್ರಸಂಗ ಇದಾಗಿದೆ. ಇದು 2025ರ ತಿರುಪತಿ ದೇಗುಲದಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ.
Also Read: 3000 ವರ್ಷಗಳಷ್ಟು ಹಳೆಯದಾದ ಅನಂತ ಪದ್ಮನಾಭಸ್ವಾಮಿ ವಿಗ್ರಹ ಎಂದ ವೀಡಿಯೋದ ಅಸಲಿಯತ್ತೇನು?
Our Sources
X post, By TNIE, Dated: April 26, 2022
X post, By N Chandrababu Naidu, Dated: April 26, 2022
Report By India Today report, Dated: April 26, 2022
Report By Deccan Herald, Dated: April 26, 2022
X post, Andhra Pradesh Police, January 9, 2025
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.