Claim
ಕರೂರಿನಲ್ಲಿ ಟಿವಿಕೆ ಪಕ್ಷದ ಮುಖಂಡ ವಿಜಯ್ ಅವರ ರಾಲಿ ವೇಳೆ ಕಾಲ್ತುಳಿತ ಸಂಭವಿಸಿ 40 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ವಿಜಯ್ ಅವರು ಚೆನ್ನೈಗೆ ಬಂದಿಳಿದಿದ್ದು ಅವರಿಗೆ ಘಟನೆಯ ಬಗ್ಗೆ ಚಿಂತೆಯೇ ಇರಲಿಲ್ಲ ಎನ್ನುವಂತೆ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಇದಕ್ಕೆ ಪೂರಕವಾಗಿ ಎಕ್ಸ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದ್ದು, ವಿಜಯ್ ಅವರು ನಗುತ್ತ ಚಾರ್ಟೆಡ್ ವಿಮಾನದಿಂದ ಇಳಿಯುತ್ತಿರುವ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಹೇಳಿಕೆಯಲ್ಲಿ ವಿಜಯ್ ನ ಉಗ್ರ ಮುಖ ಎಂದಿದೆ.

ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಈ ವೀಡಿಯೋ ಕರೂರಿನಲ್ಲಿ ಕಾಲ್ತುಳಿತ ಸಂಭವಿಸುವ ಮೊದಲಿನದ್ದು, ಒಂದು ವಾರದಷ್ಟು ಹಳೆಯದ್ದು ಎಂದು ಗೊತ್ತಾಗಿದೆ.
Also Read: ಬೇಲೂರಿನಲ್ಲಿ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಮತಾಂತರ ಮಾಫಿಯಾ ಕೈವಾಡ?
Fact
ಸತ್ಯಶೋಧನೆಗಾಗಿ ನಾವು ಕೀಫ್ರೇಮಗ ಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ವೀಡಿಯೋವನ್ನು ಶೋಧನೆಗೊಳಪಡಿಸಿದ್ದೇವೆ. ಈ ವೇಳೆ ಹಲವು ಪೋಸ್ಟ್ ಗಳು ಕಂಡುಬಂದಿದ್ದು ಇವುಗಳು ಸೆಪ್ಟೆಂಬರ್ 20 ಮತ್ತು ಸೆಪ್ಟೆಂಬರ್ 21ರಂದು ಹಂಚಿಕೊಂಡಿರುವುದು ಗೊತ್ತಾಗಿದೆ.
ಆಕ್ಟರ್ ವಿಜಯ್ ಟೀಮ್ ಹೆಸರಿನ ಎಕ್ಸ್ ಬಳಕೆದಾರರು ಸೆಪ್ಟೆಂಬರ್ 20, 2025ರಂದು ವೈರಲ್ ವೀಡಿಯೋವನ್ನು ಹೋಲುವ ವೀಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ತಲಪತಿ ಟಿವಿಕೆ ವಿಜಯ್ ಚೆನ್ನೈ ಏರ್ ಪೋರ್ಟ್ ನಲ್ಲಿ ಎಂದು ಬರೆದುಕೊಂಡಿದ್ದಾರೆ.
ರಾಜಲಕ್ಷ್ಮಿ ಟಿವಿಕೆ ವಾದಚೆನ್ನೈ ಎಂಬ ಇನ್‌ಸ್ಟಾಗ್ರಾಂ ಬಳಕೆದಾರರು ಸೆಪ್ಟೆಂಬರ್ 21, 2025 ರಂದು ವೀಡಿಯೋವನ್ನು ಪೋಸ್ಟ್ ಮಾಡಿದ್ದು ಅದು ವೈರಲ್ ವೀಡಿಯೋವನ್ನು ಹೋಲುತ್ತದೆ.

ಝೀ ತಮಿಳು ನ್ಯೂಸ್ ಸೆಪ್ಟೆಂಬರ್ 21, 2025 ರಂದು ಎಕ್ಸ್ ಪೋಸ್ಟ್ ನಲ್ಲಿ “ವಿಜಯ್ ತಮ್ಮ ಪ್ರಚಾರ ಪ್ರವಾಸ ಮುಗಿಸಿ ಚೆನ್ನೈಗೆ ಮರಳಿದರು” ಎಂಬ ಹೇಳಿಕೆಯೊಂದಿಗೆ ಅದೇ ವೀಡಿಯೋವನ್ನು ಪೋಸ್ಟ್ ಮಾಡಿದೆ.

ಝೀ ತಮಿಳು ನ್ಯೂಸ್ ಯೂಟ್ಯೂಬ್ ಶಾರ್ಟ್ಸ್ ನಲ್ಲಿಯೂ ಸೆಪ್ಟೆಂಬರ್ 21, 2025ರಂದು ಇದೇ ವೀಡಿಯೋ ಕಂಡುಬಂದಿದೆ.
ಆದ್ದರಿಂದ ಈ ವೀಡಿಯೋ ಕರೂರು ಕಾಲ್ತುಳಿತ ಘಟನೆಗಿಂತ ಹಿಂದಿನದ್ದು ಎಂದು ತಿಳಿಯಹುದು ಮತ್ತು ಈ ವೀಡಿಯೋ ದೊಂದಿಗೆ ತಪ್ಪು ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ.
Also Read: ಆರ್ ಜೆಡಿ ವಕ್ತಾರೆ ಕಾಂಚನಾ ಯಾದವ್ ಮೇಲೆ ಲಾಠಿ ಚಾರ್ಜ್ ಎಂದು ಮದ್ದೂರು ವೀಡಿಯೋ ವೈರಲ್!
Our Sources
X post by Actor Vijay Team, Dated: September 20, 2025
Instagram Post by rajalakshmi_tvk_vadachennai, Dated: September 21, 2025
X post by Zee tamil News, Dated: September 21, 2025