Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ: ಪತ್ರಕರ್ತರೊಂದಿಗೆ ಮಾತನಾಡುವ ವೇಳೆ ಅಶ್ವಿನಿ ವೈಷ್ಣವ್ ಭಾವುಕ
2023 ರ ಒಡಿಶಾ ರೈಲು ಅಪಘಾತದ ಬಗ್ಗೆ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಭಾವುಕರಾದ ಹಳೆಯ ವೀಡಿಯೋವನ್ನು ಇತ್ತೀಚಿನ ನವದೆಹಲಿ ರೈಲು ನಿಲ್ದಾಣದ ಕಾಲ್ತುಳಿದ ಘಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ
ಫೆಬ್ರವರಿ 15, 2025 ರಂದು ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡರು . ಮಹಾಕುಂಭ ನಡೆಯುತ್ತಿರುವ ಪ್ರಯಾಗ್ರಾಜ್ಗೆ ರೈಲುಗಳನ್ನು ಹತ್ತಲು ಕಾಯುತ್ತಿದ್ದ ಪ್ರಯಾಣಿಕರ ಸಂಖ್ಯೆಯಲ್ಲಿ ಹಠಾತ್ ಏರಿಕೆಯೇ ಈ ದುರಂತಕ್ಕೆ ಕಾರಣ ಎಂದು ವರದಿಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ರೈಲ್ವೇ ಸಚಿವೆ ಅಶ್ವಿನಿ ವೈಷ್ಣವ್ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿದ್ದಂತೆ , ಅವರು ಪತ್ರಕರ್ತರ ಜೊತೆ ಮಾತನಾಡುವಾಗ ಭಾವುಕರಾದರು ಎನ್ನಲಾದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಬಳಕೆದಾರರು ಇದನ್ನು ನವದೆಹಲಿ ರೈಲು ನಿಲ್ದಾಣದ ಕಾಲ್ತುಳಿತಕ್ಕೆ ಲಿಂಕ್ ಮಾಡಿದ್ದಾರೆ.
ಇಂತಹ ಪೋಸ್ಟ್ ಗಳನ್ನು ಇಲ್ಲಿಮತ್ತು ಇಲ್ಲಿ.
10 ಸೆಕೆಂಡುಗಳ ಈ ವೀಡಿಯೊದಲ್ಲಿ, ವೈಷ್ಣವ್ ಅವರು, “…ಕಾಣೆಯಾದ ಸದಸ್ಯರು…ಅವರ ಕುಟುಂಬ ಸದಸ್ಯರು ಸಾಧ್ಯವಾದಷ್ಟು ಬೇಗ ಅವರನ್ನು ತಲುಪುತ್ತಾರೆ. ಇದು ನಮ್ಮ ಜವಾಬ್ದಾರಿ.” ಎಂದು ಹೇಳುತ್ತಿರುವುದು ಕಾಣಿಸುತ್ತದೆ.
ಗೂಗಲ್ನಲ್ಲಿ “Ashwini Vaishnaw” ಮತ್ತು “emotional” ಎಂಬ ಕೀವರ್ಡ್ ಹುಡುಕಾಟ ನಡೆಸಿದಾಗ ಜೂನ್ 5, 2023 ರ ಎಎನ್ಐ ಯೂಟ್ಯೂಬ್ ವೀಡಿಯೋ ಲಭ್ಯವಾಗಿದೆ. ವೈಷ್ಣವ್ ಅವರು ಮಾಧ್ಯಮಗಳೊಂದಿಗೆ ನಡೆಸಿದ ಸಂವಾದದ ಅದೇ ದೃಶ್ಯಾವಳಿಯನ್ನು ನಾವು ಅಲ್ಲಿ ಕಂಡಿದ್ದೇವೆ. ಅದರಲ್ಲಿ, “ಜೂನ್ 4 ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ರೈಲು ಪುನರ್ ಸಂಚಾರ ಪರಿಶೀಲಿಸಿದ ನಂತರ, ರೈಲ್ವೇ ಸಚಿವೆ ಅಶ್ವಿನಿ ವೈಷ್ಣವ್ ಭಾವುಕರಾದರು. ಕಾಣೆಯಾದವರ ಕುಟುಂಬ ಸದಸ್ಯರು ಸಾಧ್ಯವಾದಷ್ಟು ಬೇಗ ಪತ್ತೆಯಾಗುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ ಮತ್ತು ಆದ್ದರಿಂದ ಜವಾಬ್ದಾರಿ ಇನ್ನೂ ಮುಗಿದಿಲ್ಲ” ಎಂದು ಹೇಳಿದರು.
ಒಡಿಶಾ ರೈಲು ಅಪಘಾತದ ಬಗ್ಗೆ ಮಾತನಾಡುವಾಗ ವೈಷ್ಣವ್ ಭಾವುಕರಾಗುವುದನ್ನು ತೋರಿಸಲು ಜೂನ್ 2023 ರಲ್ಲಿ ಇಂಡಿಯಾ ಟುಡೇ ಯೂಟ್ಯೂಬ್ನಲ್ಲಿ ಈ ದೃಶ್ಯಗಳನ್ನು ಹಂಚಿಕೊಂಡಿದೆ.
ಇದೇ ರೀತಿ ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಅವುಗಳನ್ನು
ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
2023 ರ ಒಡಿಶಾ ರೈಲು ಅಪಘಾತವು ಭಾರತದ ಅತ್ಯಂತ ಭೀಕರ ರೈಲು ಅಪಘಾತಗಳಲ್ಲಿ ಒಂದಾಗಿದೆ. ಇದರಲ್ಲಿ ಬೆಂಗಳೂರು-ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ರೈಲುಗಳನ್ನು ಒಳಗೊಂಡ ತ್ರಿವಳಿ ರೈಲುಗಳು ಡಿಕ್ಕಿಯಾಗಿದ್ದವು. ಜೂನ್ 2023 ರಲ್ಲಿ ಒಡಿಶಾದ ಬಾಲಸೋರ್ನಲ್ಲಿ ಈ ಅಪಘಾತ ಸಂಭವಿಸಿದ್ದು, ಸುಮಾರು 300 ಜನರು ಸಾವನ್ನಪ್ಪಿದ್ದರು ಮತ್ತು 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅದೇ ದುರಂತದ ಬಗ್ಗೆ ಮಾಧ್ಯಮಗಳೊಂದಿಗೆ ಸಂವಹನ ನಡೆಸುವಾಗ ವೈಷ್ಣವ್ ಭಾವುಕರಾಗಿರುವುದನ್ನು ವೀಡಿಯೋ ತೋರಿಸಿದೆ.
ಇತ್ತೀಚಿಗೆ ನವದೆಹಲಿ ರೈಲು ನಿಲ್ದಾಣದ ಕಾಲ್ತುಳಿತದ ಬಗ್ಗೆ ಪ್ರತಿಕ್ರಿಯಿಸಿದ ವೈಷ್ಣವ್ , “ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ದುರದೃಷ್ಟಕರ ಕಾಲ್ತುಳಿತದಿಂದ ತೀವ್ರ ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗೆ ನನ್ನ ಪ್ರಾರ್ಥನೆಗಳು. ಈ ದುರಂತ ಘಟನೆಯಿಂದ ಬಾಧಿತರಾದ ಎಲ್ಲರಿಗೂ ಸಹಾಯ ಮಾಡಲು ಇಡೀ ತಂಡ ಕೆಲಸ ಮಾಡುತ್ತಿದೆ” ಎಂದು X ನಲ್ಲಿ ಬರೆದುಕೊಂಡಿದ್ದಾರೆ.
2023 ರ ಒಡಿಶಾ ರೈಲು ಅಪಘಾತದ ಬಗ್ಗೆ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಭಾವುಕರಾದ ಹಳೆಯ ವೀಡಿಯೋವನ್ನು ಇತ್ತೀಚಿನ ನವದೆಹಲಿ ರೈಲು ನಿಲ್ದಾಣದ ಕಾಲ್ತುಳಿದ ಘಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.
Our Sources
YouTube Video By ANI, Dated: June 5, 2023
YouTube Video By India Today, Dated: June 5, 2023
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
Ishwarachandra B G
February 15, 2025
Ishwarachandra B G
January 9, 2025
Ishwarachandra B G
November 5, 2024